AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shravana 2025: ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ಬೆಳ್ಳಿ ನಾಗ ಅರ್ಪಿಸುವುದರಿಂದಾಗುವ ಪ್ರಯೋಜನಗಳಿವು

ಶ್ರಾವಣ ಮಾಸದಲ್ಲಿ ಅದರಲ್ಲೂ ವಿಶೇಷವಾಗಿ ಶ್ರಾವಣ ಸೋಮವಾರ, ಶಿವರಾತ್ರಿ ಅಥವಾ ನಾಗ ಪಂಚಮಿಯಂದು ಶಿವನಿಗೆ ಬೆಳ್ಳಿ ನಾಗ ಅರ್ಪಿಸುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇದು ಕಾಳಸರ್ಪ ದೋಷ ಮತ್ತು ಗ್ರಹ ದೋಷಗಳ ನಿವಾರಣೆಗೆ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಶಿವಲಿಂಗಕ್ಕೆ ಅಭಿಷೇಕ ಮಾಡಿ, ನಂತರ ಬೆಳ್ಳಿ ನಾಗವನ್ನು ಅರ್ಪಿಸಿ ಮತ್ತು ಮಂತ್ರಗಳನ್ನು ಜಪಿಸಿ.

Shravana 2025: ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ಬೆಳ್ಳಿ ನಾಗ ಅರ್ಪಿಸುವುದರಿಂದಾಗುವ ಪ್ರಯೋಜನಗಳಿವು
ಬೆಳ್ಳಿಯ ನಾಗ
ಅಕ್ಷತಾ ವರ್ಕಾಡಿ
|

Updated on: Jul 29, 2025 | 11:36 AM

Share

ಶ್ರಾವಣ ಮಾಸದಲ್ಲಿ ಶಿವನನ್ನು ಪೂಜಿಸುವುದರಿಂದ ಅಂದುಕೊಂಡಿದ್ದೆಲ್ಲಾ ಈಡೇರುವುದು ಎನ್ನುವ ನಂಬಿಕೆಯಿದೆ. ಆದ್ದರಿಂದಲೇ ಶಿವ ಭಕ್ತರು ಶಿವನ ಆರಾಧನೆಯಲ್ಲಿ ಮಗ್ನರಾಗಿರುತ್ತಾರೆ. ಇದಲ್ಲದೇ ಈ ಮಾಸದಲ್ಲಿ ಬೆಳ್ಳಿ ನಾಗ ಖರೀದಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ಮತ್ತು ಜ್ಯೋತಿಷ್ಯ ನಂಬಿಕೆಗಳು ಇದರೊಂದಿಗೆ ಸಂಬಂಧ ಹೊಂದಿವೆ. ಆದ್ದರಿಂದ ಬೆಳ್ಳಿ ನಾಗ ಅರ್ಪಿಸುವುದರಿಂದಾಗುವ ಪ್ರಯೋಜನಗಳು ಮತ್ತು ಮಹತ್ವವನ್ನು ಇಲ್ಲಿ ತಿಳಿದುಕೊಳ್ಳಿ.

ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ಬೆಳ್ಳಿ ನಾಗ ಅರ್ಪಿಸುವುದು ಬಹಳ ಶುಭ, ಜ್ಯೋತಿಷ್ಯದ ಪ್ರಕಾರ, ಇದು ದೈವಿಕ ಆಶೀರ್ವಾದ, ರಕ್ಷಣೆ ಮತ್ತು ತೊಂದರೆಗಳಿಂದ ಮುಕ್ತಿಯನ್ನು ತರುತ್ತದೆ ಎಂದು ಪರಿಗಣಿಸಲಾಗಿದೆ. ಜ್ಯೋತಿಷಿ ಅನೀಶ್ ವ್ಯಾಸ್ ಅವರ ಪ್ರಕಾರ, ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ಬೆಳ್ಳಿ ಹಾವುಗಳನ್ನು ಅರ್ಪಿಸುವುದರಿಂದ ಕಾಳಸರ್ಪ ದೋಷದಿಂದ ಮುಕ್ತಿ ದೊರೆಯುತ್ತದೆ. ಇದರ ಜೊತೆಗೆ, ಈ ಪರಿಹಾರದಿಂದ ಗ್ರಹ ದೋಷಗಳು ಸಹ ನಿವಾರಣೆಯಾಗುತ್ತವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೈಯಲ್ಲಿ ದುಡ್ಡು ನಿಲ್ತಿಲ್ವಾ; ನಾಗಪಂಚಮಿಯಂದು ಶಿವಲಿಂಗಕ್ಕೆ ಈ ವಸ್ತು ಅರ್ಪಿಸಿ

ಶ್ರಾವಣ ಮಾಸದ ಯಾವುದೇ ದಿನದಂದು ನೀವು ಶಿವಲಿಂಗದ ಮೇಲೆ ಬೆಳ್ಳಿಯ ನಾಗ ಅರ್ಪಿಸಬಹುದು. ಆದರೆ ವಿಶೇಷವಾಗಿ ಶ್ರಾವಣ ಸೋಮವಾರ, ಶಿವರಾತ್ರಿ ಅಥವಾ ನಾಗ ಪಂಚಮಿಯಂತಹ ವಿಶೇಷ ದಿನಗಳಲ್ಲಿ ಇದನ್ನು ಅರ್ಪಿಸುವುದು ಹೆಚ್ಚು ಮಂಗಳಕರವಾಗಿದೆ. ಮೊದಲು ಶಿವಲಿಂಗಕ್ಕೆ ನೀರು, ಹಾಲು, ಮೊಸರು, ತುಪ್ಪ ಅಥವಾ ಜೇನುತುಪ್ಪದಿಂದ ಅಭಿಷೇಕ ಮಾಡಿ. ನಂತರ ನಿಧಾನವಾಗಿ ಬೆಳ್ಳಿಯ ನಾಗವನ್ನು ಶಿವಲಿಂಗದ ಮೇಲೆ ಇರಿಸಿ.

ಶಿವಲಿಂಗದ ಮೇಲೆ ಬೆಳ್ಳಿ ಹಾವುಗಳನ್ನು ಅರ್ಪಿಸುವಾಗ, ನೀವು “ಓಂ ನಮಃ ಶಿವಾಯ” ಅಥವಾ “ಓಂ ನಾಗೇಂದ್ರಹರಾಯ ನಮಃ” ಎಂಬ ಮಂತ್ರವನ್ನು ಕನಿಷ್ಠ 11 ಬಾರಿ ಅಥವಾ ಒಂದು ಜಪಮಾಲೆ ಬಳಸಿ ಪಠಿಸಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ