Pavitra Ekadashi 2021: ಇಂದು ಪುತ್ರ ಏಕಾದಶಿ, ಸಂತಾನ ಸುಖ ಪ್ರಾಪ್ತಿಯ ದಿನ; ಏನು ಮಾಡಬಾರದು, ಏನನ್ನು ಆಚರಿಸಬೇಕು?

| Updated By: ಆಯೇಷಾ ಬಾನು

Updated on: Aug 18, 2021 | 7:24 AM

Shravan Pavitra Ekadashi 2021 : ಇಂದು ಶ್ರಾವಣ ಪವಿತ್ರ ಏಕಾದಶಿ 2021. ಏನಿದರ ಮಹತ್ವ, ಏನು ಮಾಡಬಾರದು, ಏನನ್ನು ಆಚರಿಸಬೇಕು? ತಿಳಿದುಕೊಳ್ಳೋಣ ಬನ್ನೀ. 

Pavitra Ekadashi 2021: ಇಂದು ಪುತ್ರ ಏಕಾದಶಿ, ಸಂತಾನ ಸುಖ ಪ್ರಾಪ್ತಿಯ ದಿನ; ಏನು ಮಾಡಬಾರದು, ಏನನ್ನು ಆಚರಿಸಬೇಕು?
ಇಂದು ಪುತ್ರ ಏಕಾದಶಿ, ಸಂತಾನ ಸುಖ ಪ್ರಾಪ್ತಿಯ ದಿನ- ಏನು ಮಾಡಬಾರದು, ಏನನ್ನು ಆಚರಿಸಬೇಕು?
Follow us on

Shravan Pavitra Ekadashi 2021 : ಇಂದು ಶ್ರಾವಣ ಪವಿತ್ರ ಏಕಾದಶಿ 2021. ಏನಿದರ ಮಹತ್ವ, ಏನು ಮಾಡಬಾರದು, ಏನನ್ನು ಆಚರಿಸಬೇಕು? ತಿಳಿದುಕೊಳ್ಳೋಣ ಬನ್ನೀ. ಇಂದು ಆಗಸ್ಟ್​ 18 ಬುಧವಾರ ಶ್ರಾವಣ ಮಾಸದ ಪವಿತ್ರ ಏಕಾದಶಿ ದಿನ. ಏನಿದರ ಮಹತ್ವ, ಏನು ಮಾಡಬಾರದು, ಏನನ್ನು ಆಚರಿಸಬೇಕು? ತಿಳಿದುಕೊಳ್ಳೋಣ ಬನ್ನೀ. ಚಂದ್ರನ ಕೆಟ್ಟ ಪ್ರಭಾವದಿಂದ ಶ್ರಾವಣ ಮಾಸದ ಪವಿತ್ರ ಏಕಾದಶಿ ದಿನ ಬರುತ್ತದೆ.

ಪ್ರತಿ ತಿಂಗಳೂ ಏಕಾದಶಿ ಎರಡು ಬಾರಿ ಬರುತ್ತದೆ. ವರ್ಷದಲ್ಲಿ 12 ಏಕಾದಶಿಗಳು ಇರುತ್ತವೆ. ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯನ್ನು ಶ್ರಾವಣ ಪವಿತ್ರ ಏಕಾದಶಿ ಎಂದು ಕರೆಯುತ್ತಾರೆ. ಈ ದಿನದ ಮಹತ್ವವನ್ನು ಈಗ ಆರಿಯೋಣ. ಶಾಸ್ತ್ರಗಳಲ್ಲಿ ಏಕಾದಶಿ ಆಚರಣೆಯನ್ನು ಸರ್ವಶ್ರೇಷ್ಟ ಎನ್ನುತ್ತಾರೆ. ಏಕಾದಶಿ ಆಚರಣೆ ಮಾಡುವವರಿಗೆ ಅವರನ್ನು ಮೋಕ್ಷದತ್ತ ಕೊಂಡೊಯ್ಯುತ್ತದೆ ಎಂಬ ನಂಬಿಕೆಯಿದೆ.

ಶ್ರಾವಣ ಮಾಸದ ಈ ಪವಿತ್ರ ಏಕಾದಶಿ ಆಚರಣೆ ಮಾಡುವುದರಿಂದ ಚಂದ್ರನ ದೋಷ ಪ್ರಭಾವಗಳನ್ನು ದೂರ ಮಾಡುತ್ತದೆ ಎನ್ನಲಾಗುತ್ತದೆ. ಜೊತೆಗೆ ಇತರೆ ಗ್ರಹಗಳ ಪ್ರಭಾವದಿಂದಲೂ ನಮ್ಮನ್ನು ರಕ್ಷಣೆ ಮಾಡುತ್ತದೆ. ಆದರೆ ಇಂದು ಈ ಏಕಾದಶಿಯನ್ನು ಕಟ್ಟುನಿಟ್ಟಿನ ನಿಯಮಗಳ ಮೂಲಕ ಆಚರಿಸಬೇಕು.

ಇಂದು ಆಗಸ್ಟ್​ 18 ಬುಧವಾರ ಶ್ರಾವಣ ಮಾಸದ ಪವಿತ್ರ ಏಕಾದಶಿ ದಿನ. ಇದನ್ನು ಪುತ್ರ ಏಕಾದಶಿ ಅಥವಾ ಪವಿತ್ರ ಏಕಾದಶಿ ಎಂದು ಕರೆಯುತ್ತಾರೆ. ಸಂತಾನವನ್ನು ಬಯಸಿ ದಂಪತಿ ಈ ದಿನ ಪವಿತ್ರ ಏಕಾದಶಿ ವ್ರತ ಆಚರಿಸಿದರೆ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.

ಶ್ರಾವಣ ಮಾಸದ ಪವಿತ್ರ ಏಕಾದಶಿ ಆಚರಣೆ ಮುಹೂರ್ತ, ಫಲಗಳು

ಶಾಸ್ತ್ರಗಳಲ್ಲಿ ಈ ಪವಿತ್ರ ಏಕಾದಶಿ ಆಚರಣೆಯನ್ನು ಪುತ್ರಕಾಮೇಷ್ಠಿ ವ್ರತ ಎಂದೂ ಕರೆಯುತ್ತಾರೆ. ಪುತ್ರ ಏಕಾದಶಿಯಿಂದ ಸಂತಾನ ಸುಖ ಪ್ರಾಪ್ತಿಯಾಗುತ್ತದೆ. 24 ಏಕಾದಶಿಗಳ ಆಚರಣೆಯಿಂದ ಒಂದೊಂದು ಫಲ ಪ್ರಭಾವ ದೊರಕುತ್ತದೆ. ಅದು ತನು-ಮನದ ಮೇಲೆ ಪ್ರಭಾವ ಹೊಂದಿರುತ್ತದೆ. ಇದನ್ನು ಆಚರಿಸುವುದರಿಂದ ಧನ ಸಂಪತ್ತು ಆರೋಗ್ಯ ವೃದ್ಧಿ ಪ್ರಾಪ್ತಿಯಾಗುತ್ತದೆ. ಮನೋವಿಕಲ್ಪಗಳು ದೂರವಾಗಿ ದೇಹವನ್ನು ಸುಸ್ಥಿತಿಯಲ್ಲಿ ಇಡುತ್ತದೆ. ಮನುಷ್ಯನ ಅನೇಕ ಪಾಪಗಳು ದೂರವಾಗಿ ಮುಕ್ತಿ ಪಥದತ್ತ ಕರೆದೊಯ್ಯುತ್ತದೆ. ಹಾಗಾಗಿ ಇದನ್ನುಪವಿತ್ರ ಏಕಾದಶಿ ಎಂದೂ ಕರೆಯುತ್ತಾರೆ.

ಏಕಾದಶಿ ಆಚರಣೆ ಸಪ್ತ ನಿಯಮಗಳು ಏನೇನು?

1. ಏಕಾದಶಿ ವ್ರತಾಚರಣೆಯು ದಶಮಿಯ ದಿನ ಸಂಜೆಯಿಂದ ದ್ವಾದಶಿ ದಿನದವರೆಗೂ ಜಾರಿಯಲ್ಲಿರುತ್ತದೆ. ದಶಮಿ ದಿನದ ಸಂಜೆ ಸೂರ್ಯಾಸ್ತಮಾನಕ್ಕೂ ಮುನ್ನ ಊಟ ಮಾಡಬೇಕು. ಇದಾದ ಬಳಿಕ ರಾತ್ರಿ ವೇಳೆ ಭಗವಂತನ ಸ್ಮರಣೆ ಮಾಡುತ್ತಾ, ನೆಲದ ಮೇಲೆ ಮಲಗಬೇಕು.

2. ದಶಮಿ ಮತ್ತು ಏಕಾದಶಿ ದಿನದಂದು ಬಹ್ಮಚರ್ಯೆ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜೇನು, ಮೂಲಿಕೆ, ಕಡಲೆಕಾಳು, ಮಸೂರಿ ಬೇಳೆ, ಮಾಂಸ ಮತ್ತು ಮದ್ಯ ಸೇವನೆಯನ್ನು ವರ್ಜಿಸಬೇಕು.

3. ಏಕಾದಶಿ ವ್ರತಾಚರಣೆಯ ವೇಳೆ ಬೇರೊಬ್ಬರ ಬಗ್ಗೆ ಕೆಟ್ಟದ್ದನ್ನು ಮಾತನಾಡುವುದು, ಕೆಟ್ಟದ್ದು ಬಯಸುವುದನ್ನು ಮಾಡಬಾರದು. ಕೇವಲ ಭಗವಂತನ ನಾಮಸ್ಮರಣೆಯಲ್ಲಿ ಸಮಯ ಕಳೆಯಬೇಕು.

4. ದಶಮಿ ಮತ್ತು ಏಕಾದಶಿ ದಿನದಂದು ಎಲೆ ಅಡಿಕೆ ಜಗಿಯಬಾರದು. ಹುಳಿ ಹಿಂಡುವ ಮಾತುಗಳನ್ನು ಆಡಬಾರದು. ಸುಳ್ಳು ಹೇಳಬಾರದು.

5. ಏಕಾದಶಿ ಜಾಗರಣೆ ಮಾಡಬೇಕು. ಭಗವಂತನ ಭಜನೆ ಕೀರ್ತನೆಗಳನ್ನು ಹೇಳಿಕೊಳ್ಳುತ್ತಾ ಸಯ ಕಳೆಯಬೇಕು.

6. ಏಕಾದಶಿ ವ್ರತ ಆಚರಿಸುವವರು ತುಳಸಿ ಎಲೆ, ಕುಡಿಗಳನ್ನು ಕೀಳಬಾರದು. ಏಕಾದಶಿಯ ಸಂಜೆಯಾಗುತ್ತಿದ್ದಂತೆ ತುಳಸಿ ಕಟ್ಟೆ ಮುಂದೆ ದೀಪ ಹಚ್ಚಬೇಕು.

7. ಏಕಾದಶಿ ವ್ರತ ಆಚರಿಸುವವರು ಅನ್ನ ಅಥವಾ ಅನ್ನದಿಂದ ಮಾಡಿದ ಯಾವುದೇ ಖಾದ್ಯವನ್ನು ಸೇವಿಸಬಾರದು. ಇನ್ನು, ಏಕಾದಶಿ ದಿನ ಬ್ರಾಹ್ಮಣರಿಗೆ ಭೋಜನ ಹಾಕಿಸಬೇಕು. ಸಾಮರ್ಥ್ಯಕ್ಕೆ ಅನುಗುಣವಾಗಿ ಅವರಿಗೆ ದಕ್ಷಿಣೆ ನೀಡಬೇಕು. ಅದಾದ ಬಳಿಕ ವ್ರತ ಮುಗಿಯುತ್ತದೆ.

ಪುತ್ರ ಏಕಾದಶಿ ಅಥವಾ ಪವಿತ್ರ ಏಕಾದಶಿ ಆಚರಣೆಯ ಮುಹೂರ್ತ:

ಶ್ರಾವಣ ಮಾಸದ ಪವಿತ್ರ ಏಕಾದಶಿ ದಿನ: ಆಗಸ್ಟ್​ 18 ಬುಧವಾರ ಬೆಳಗ್ಗೆ 3.20 ನಿಮಿಷಕ್ಕೆ ಆರಂಭ.
ಶ್ರಾವಣ ಮಾಸದ ಪವಿತ್ರ ಏಕಾದಶಿ ದಿನ: ಆಗಸ್ಟ್​ 19 ಗುರುವಾರ ಬೆಳಗ್ಗೆ 1.05 ನಿಮಿಷಕ್ಕೆ ಮುಕ್ತಾಯ.
ಶ್ರಾವಣದ ಪವಿತ್ರ ಏಕಾದಶಿ ಪಾರಣೆ: ಆ.​ 19 ಗುರುವಾರ ಬೆಳಗ್ಗೆ 6.32 ನಿಮಿಷದಿಂದ 8.29 ನಿಮಿಷಕ್ಕೆ ಮುಕ್ತಾಯ.

(Shravan Pavitra ekadashi 2021 ekadashi vrat Everything you need to know)