Mangala Gowri Vratha 2021: ಶ್ರಾವಣ ಮಾಸದ ಮಂಗಳ ಗೌರಿ ವ್ರತದಿಂದ ನಿಮ್ಮ ಬಾಳು ಹಸನಾಗುತ್ತೆ

| Updated By: preethi shettigar

Updated on: Aug 10, 2021 | 6:54 AM

Shravana Masa: ಮಂಗಳ ಗೌರಿ ವ್ರತವನ್ನು ಗಂಡನ ದೀರ್ಘಾಯುಷ್ಯ, ಸಂತೋಷದಾಯಕ ದಾಂಪತ್ಯ ಜೀವನಕ್ಕಾಗಿ ಆಚರಿಸಲಾಗುತ್ತೆ. ಅಷ್ಟೇ ಅಲ್ಲದೆ ಈ ದಿನ ಗೌರಿಯನ್ನು ಪೂಜಿಸುವುದರಿಂದ ಕುಟುಂಬದಲ್ಲಿ ಸಮೃದ್ಧಿ, ಸಂತೋಷ, ಆರೋಗ್ಯ ವೃದ್ಧಿಯಾಗುತ್ತೆ.

Mangala Gowri Vratha 2021: ಶ್ರಾವಣ ಮಾಸದ ಮಂಗಳ ಗೌರಿ ವ್ರತದಿಂದ ನಿಮ್ಮ ಬಾಳು ಹಸನಾಗುತ್ತೆ
ಮಂಗಳ ಗೌರಿ ವ್ರತ
Follow us on

ಶ್ರಾವಣ ಮಾಸ(Shravana Masa) ಬಂತೆಂದರೆ ಒಂದರ ಮೇಲೊಂದು ಹಬ್ಬಗಳು ಶುರುವಾಗುತ್ತವೆ. ಸೋಮವಾರದಂದು ಶಿವನಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರಾವಣ ಸೋಮವಾರ ಮುಗಿಸಿದ ನಂತರ ಮಂಗಳವಾರ ಮಂಗಳ ಗೌರಿ ವ್ರತ(Mangala Gowri Vratha) ಮಾಡಲಾಗುತ್ತೆ. ಶ್ರಾವಣ ಮಾಸದ ಪ್ರತಿ ಮಂಗಳವಾರ ಮಂಗಳ ಗೌರಿ ವ್ರತ ಆಚರಿಸಲಾಗುತ್ತೆ. ಮದುವೆಯಾದ ಹೊಸ ಮದುಮಗಳು ಈ ವ್ರತ ಮಾಡುವುದರಿಂದ ಅನೇಕ ಫಲಗಳಿವೆ.

ಮಂಗಳ ಗೌರಿ ವ್ರತವನ್ನು ಗಂಡನ ದೀರ್ಘಾಯುಷ್ಯ, ಸಂತೋಷದಾಯಕ ದಾಂಪತ್ಯ ಜೀವನಕ್ಕಾಗಿ ಆಚರಿಸಲಾಗುತ್ತೆ. ಅಷ್ಟೇ ಅಲ್ಲದೆ ಈ ದಿನ ಗೌರಿಯನ್ನು ಪೂಜಿಸುವುದರಿಂದ ಕುಟುಂಬದಲ್ಲಿ ಸಮೃದ್ಧಿ, ಸಂತೋಷ, ಆರೋಗ್ಯ ವೃದ್ಧಿಯಾಗುತ್ತೆ. ಮಂಗಲ್ಯ ದೋಷ ನಿವಾರಣೆಗೂ ಈ ವ್ರತ ಮಾಡುವುದರಿಂದ ಉತ್ತಮ ಫಲಿತಾಂಶವಿದೆ. ಮದುವೆಯಾದ ಮೊದಲ 5 ವರ್ಷಗಳವರೆಗೆ ಮಹಿಳೆಯರು ಈ ವ್ರತವನ್ನು ಆಚರಿಸುತ್ತಾರೆ. ಈ ವರ್ಷ ಆಗಸ್ಟ್ 10, 17, 24 ಹಾಗೂ 31ರಂದು ಶ್ರಾವಣ ಮಂಗಳವಾರ ಬಂದಿದೆ.

ಮಂಗಳ ಗೌರಿ ಪೂಜಾ ವಿಧಿ
ಮಹಿಳೆಯರು ಗೌರಿ ಆವಾಹನ ಮಂತ್ರ, ಗಣಪತಿ ಆವಾಹನ ಮಂತ್ರ ಮತ್ತು ಇನ್ನು ಹಲವು ದೇವರುಗಳ ಆವಾಹನ ಮಂತ್ರ ಪಠಿಸಬೇಕು. ಮಹಿಳೆಯರು ಸಾಂಪ್ರಧಾಯಿಕ ಉಡುಗೆ ತೊಟ್ಟು, ಹೆಣೆಗೆ ಕುಂಕುಮ, ಕೆನ್ನೆಗೆ ಅರಶಿಣ, ಕಪ್ಪು ಬಳೆ ಹಾಗೂ ತಲೆಗೆ ಹೂ ಮುಡಿದು ದೇವರಿಗೆ ಮೆಚ್ಚಿಗೆಯಾಗುವಂತೆ ಅಲಂಕೃತರಾಗಬೇಕು. ದೇವರಿಗೆ ಅರಶಿಣ, ಕುಂಕುಮ, ಫುಲ, ಪುಷ್ಪ, ಬಳೆ, ರವಿಕೆ ಬಟ್ಟೆಯನ್ನು ಅರ್ಪಿಸಿ ಪೂಜಿಸಬೇಕು.

ಪಂಚಾಮೃತ ಮಂತ್ರ
ಪಂಚಾಮೃತ ಸ್ನಾನಾಭಿಷೇಕಂ ಕ್ಷೀರಾಭಿಷೇಕಂ
ಆಪ್ಯಾ’ಯಸ್ವ ಸಮೇ’ತು ತೇ ವಿಶ್ವತ’ಸ್ಸೋಮವೃಷ್ಣಿ’ಯಮ್ | ಭವಾವಾಜ’ಸ್ಯ ಸಂಗಧೇ ||
ಕ್ಷೀರೇಣ ಸ್ನಪಯಾಮಿ ||

ದಧ್ಯಾಭಿಷೇಕಂ
ದಧಿಕ್ರಾವಣ್ಣೋ ’ಅಕಾರಿಷಂ ಜಿಷ್ಣೋರಶ್ವ’ಸ್ಯ ವಾಜಿನಃ’ | ಸುರಭಿನೋ ಮುಖಾ’ಕರತ್ಪ್ರಣ ಆಯೂಗ್’ಮ್ಷಿತಾರಿಷತ್ || ದಧ್ನ ಸ್ನಪಯಾಮಿ ||

ಆಜ್ಯಾಭಿಷೇಕಂ
ಶುಕ್ರಮ’ಸಿ ಜ್ಯೋತಿ’ರಸಿ ತೇಜೋ’ಉ ಸಿ ದೇವೋವಸ್ಸ’ವಿತೋತ್ಪು’ನಾ ತ್ವಚ್ಛಿ’ದ್ರೇಣ ಪವಿತ್ರೇಣ ವಸೋ ಸ್ಸೂರ್ಯ’ಸ್ಯ ರಶ್ಮಿಭಿಯನ್ನು ’|| ಆಜ್ಯೇನ ಸ್ನಪಯಾಮಿ ||

ಮಧು ಅಭಿಷೇಕಂ
ಮಧುವಾತಾ ’ಋತಾಯತೇ ಮಧುಕ್ಷರಂತಿ ಸಿಂಧ’ವಃ | ಮಾಧ್ವೀ ”ರ್ನಸ್ಸಂತ್ವೋಷ’ಧೀ | ಮಧುನಕ್ತ ’ಮುತೋಷಸಿ ಮಧು’ಮತ್ಪಾರ್ಥಿ’ವಗ್ಂ ರಜಃ’ | ಮಧುದ್ಯೌರ’ಸ್ತುಃ ಪಿತಾ | ಮಧು’ಮಾನ್ನೋ ವನಸ್ಪತಿರ್ಮಧು’ಮಾಗ್ಮ್ ಅಸ್ತು ಸೂರ್ಯಃ ’| ಮಾಧ್ವೀರ್ಗಾವೋ ’ಭವಂತು ನಃ || ಮಧುನಾ ಸ್ನಪಯಾಮಿ ||

ಶರ್ಕರಾಭಿಷೇಕಂ
ಸ್ವಾದುಃ ಪ’ವಸ್ವ ದಿವ್ಯಾಯ ಜನ್ಮ’ನೇ ಸ್ವಾದುರಿಂದ್ರಾ ”ಯ ಸುಹವೀ” ತು ನಾಮ್ನೇ ”| ಸ್ವಾದುರ್ಮಿತ್ರಾಯ ವರು’ಣಾಯ ವಾಯವೇ ಬೃಹಸ್ಪತ’ಯೇ ಮಧು’ಮಾಗ್ಮ್ ಅದಾ ”ಭ್ಯಃ || ಶರ್ಕರಾಯ ಸ್ನಪಯಾಮಿ ||

ಯಾಃ ಫಲಿನೀರ್ಯಾ ಅ’ಫಲಾ ಅ’ಪುಷ್ಪಾಯಾಶ್ಚ ’ಪುಷ್ಪಿಣೀ” | ಬೃಹಸ್ಪತಿ ’ಪ್ರಸೂತಾಸ್ತಾನೋ ಮುಂಚಸ್ತ್ವಗ್’ಮ ಹಸಃ || ಫಲೋದಕೇನ ಸ್ನಪಯಾಮಿ ||

ಶುದ್ಧೋದಕ ಅಭಿಷೇಕಂ
ಓಂ ಆಪೋ ಹಿಷ್ಠಾ ಮಯೋಭುವಃ ’| ತಾ ನ ’ಊರ್ಜೇ ದ’ಧಾತನ | ಮಹೇರಣಾ ಚಕ್ಷ’ಸೇ | ಯೋ ವಃ ’ಶಿವತಮೋ ರಸಃ’ | ತಸ್ಯ ’ಭಜಯತೇ ಹ ಃ | ಉಷತೀರಿ’ವ ಮಾತಃ’| ತಸ್ಮಾ ಅರ’ಂಗ ಮಾಮ ವಃ | ಯಸ್ಯ ಕ್ಷಯಾ’ಯ ಜಿ’ನ್ವಥ | ಆಪೋ ’ಜನಯಥಾ ಚ ನಃ || ಇತಿ ಪಂಚಾಮೃತೇನ ಸ್ನಾಪಯಿತ್ವಾ ||

ಅಥವಾ ಸರಲವಾಗಿ ಸರ್ವ ಮಂಗಳ ಮಾಂಗಲ್ಯ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರಯಂಬಕೆ ದೇವಿ ನಾರಾಯಣೀ ನಮೋಸ್ತುತೆ ಮಂತ್ರ ಪಠಿಸಬಹುದು.

ಮಂಗಳ ಗೌರಿ ವ್ರತದ ಕಥೆ
ಹಿಂದೆ ಧರಂಪಾಲ್ ಎಂಬ ಶ್ರೀಮಂತ ವ್ಯಾಪಾರಿ ಇದ್ದ. ಆತ ಅತ್ಯಂತ ಶ್ರೀಮಂತನಾಗಿದ್ದ ಹಾಗೂ ಆತನಿಗೆ ಸುಂದರ ಹೆಂಡತಿ ಇದ್ದಳು. ಆದರೆ ಆತನಿಗೆ ಮಕ್ಕಳಿರಲಿಲ್ಲವೆನ್ನುವುದೇ ದೊಡ್ಡ ಕೊರಗಾಗಿತ್ತು. ಹೀಗಾಗಿ ಆತನು ಹಲವಾರು ಪೂಜೆ, ವ್ರತದ ನಂತರ ಒಂದು ಪುತ್ರನನ್ನು ಪಡೆಯುತ್ತಾನೆ. ಆದರೆ ದುರಾದೃಷ್ಟವೆಂದರೆ ಆ ಮಗನೂ ಕೇವಲ 16 ವರ್ಷಗಳವರೆಗೆ ಮಾತ್ರ ಬದುಕುವ ಅರ್ಹತೆಯನ್ನು ಹೊಂದಿದ್ದನು. ಆತನ ಮಗ 16 ವರ್ಷ ಪೂರೈಸುವುದರೊಳಗೆ ವಿವಾಹವಾಗುತ್ತಾನೆ. ಆತನ ಪತ್ನಿಯಿಂದ ಅವನ ಆಯಸ್ಸು ಹೆಚ್ಚಾಗುತ್ತದೆ. ಆತನ ಪತ್ನಿಯ ತಾಯಿ ಮಂಗಳಗೌರಿ ವ್ರತವನ್ನು ಆಚರಿಸಿ ಮಗಳನ್ನು ಸುಮಂಗಲಿಯಾಗಿ ಬಾಳುವಂತೆ ಮಾಡುತ್ತಾಳೆ. ಅಂದಿನಿಂದ ವಿವಾಹಿತ ಮಹಿಳೆಯರು ತನ್ನ ಪತಿಯ ದೀರ್ಘಾಯುಷ್ಯಕ್ಕಾಗಿ ಈ ವ್ರತವನ್ನು ಆಚರಿಸುತ್ತಾರೆ.

ಇದನ್ನೂ ಓದಿ: Shravan Somwar 2021: ಶ್ರಾವಣ ಸೋಮವಾರದಂದು ಶಿವನ ಪೂಜೆ ಹೇಗಿರಬೇಕು? ಇಲ್ಲಿದೆ ಶಿವನನ್ನು ಒಳಿಸಿಕೊಳ್ಳುವ ಮಂತ್ರ