AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shravan Somwar 2021: ಶ್ರಾವಣ ಸೋಮವಾರದಂದು ಶಿವನ ಪೂಜೆ ಹೇಗಿರಬೇಕು? ಇಲ್ಲಿದೆ ಶಿವನನ್ನು ಒಳಿಸಿಕೊಳ್ಳುವ ಮಂತ್ರ

ಸೋಮವಾರ ಶಿವನಿಗೆ ಪ್ರಸಕ್ತವಾದ ದಿನ. ಹಾಗೂ ಶ್ರಾವಣ ಮಾಸ ಶಿವ-ಪಾರ್ವತಿಗೆ ಅರ್ಪಿತವಾದ ತಿಂಗಳು. ಹೀಗಾಗಿ ಶ್ರಾವಣ ಸೋಮವಾರ ಶಿವ ಪೂಜೆಗೆ ಒಳ್ಳೆಯ ದಿನ. ಶಿವ ಭಕ್ತಿ ಪ್ರಿಯ. ಅವನಿಗೆ ಹಿಡಿಸುವಂತೆ ಭಕ್ತಿಯಿಂದ ಪೂಜಿಸಿದರೆ ಎಲ್ಲವನ್ನೂ ನೀಡುವನು. ಈ ದಿನ ಶಿವನನ್ನು ಪೂಜಿಸಿದರೆ ಶಿವನ ಕೃಪೆಗೆ ಪಾತ್ರರಾಗುತ್ತೀರ.

Shravan Somwar 2021: ಶ್ರಾವಣ ಸೋಮವಾರದಂದು ಶಿವನ ಪೂಜೆ ಹೇಗಿರಬೇಕು? ಇಲ್ಲಿದೆ ಶಿವನನ್ನು ಒಳಿಸಿಕೊಳ್ಳುವ ಮಂತ್ರ
ಮುರುಡೇಶ್ವರ ದೇವಾಲಯ
TV9 Web
| Edited By: |

Updated on: Aug 09, 2021 | 6:49 AM

Share

ಶ್ರಾವಣ ಮಾಸ ಬಂದಾಗ ಆನಂದ ತಂದಾಗ ಎಂಬಂತೆ ಶ್ರಾವಣ ಮಾಸ ಜನರಲ್ಲಿ ಭಕ್ತಿ, ಆನಂದ, ಶ್ರದ್ಧೆಯನ್ನು ಹೊತ್ತು ತರುತ್ತೆ. ಶ್ರಾವಣ ಮಾಸ ಸಾಲು ಸಾಲು ಹಬ್ಬಗಲನ್ನು ತರುತ್ತೆ. ಈ ಮಾಸದಲ್ಲಿ ಬರುವ ಪ್ರತಿ ಹಬ್ಬವೂ ಅದರದೇ ಆದ ಮಹತ್ವ ಹೊಂದಿದೆ. ಹಿಂದೂ ಪಂಚಾಂಗದ ಪ್ರಕಾರ 5ನೇ ತಿಂಗಳಾದ ಶ್ರಾವಣ ಮಾಸ ತ್ರಿನೇತ್ರ, ಭೋಲೆನಾಥನಿಗೆ ಸರ್ಪಿತವಾಗಿದೆ. ಈ ತಿಂಗಳು ಶಿವ ಭಕ್ತರಿಗೆ ವಿಶೇಷ ಮಾಸ. ಈ ಮಾಸದಲ್ಲಿ ಸರಿಯಾದ ವಿಧಿ-ವಿಧಾನದಿಂದ ಶಿವ-ಪಾರ್ವತಿಯನ್ನು ಪೂಜಿಸಿದ್ದರೆ ಮಹಾದೇವ ಸಂತೋಷಗೊಂಡು ಭಕ್ತರ ಆಸೆಗಳನ್ನು ಈಡೇರಿಸುತ್ತಾನೆ. ಹಾಗೂ ಅವರ ಕಷ್ಟಗಳನ್ನು ನಿವಾರಿಸುತ್ತಾನೆ ಎಂದು ನಂಬಲಾಗಿದೆ. ಹಾಗಾದ್ರೆ ಬನ್ನಿ ನಿಮ್ಮ ಪೂಜೆ ಸಾಕ್ಷಾತ್ ಶಂಕರನ ಕೃಪೆಗೆ ಪಾತ್ರವಾಗಲು ಈ ವಿಧಿ-ವಿಧಾನ ಹಾಗೂ ಶ್ರಾವಣ ಸೋಮವಾರದ ಮಹತ್ವ ತಿಳಿಯಿರಿ.

ಶ್ರಾವಣ ಸೋಮವಾರದ ಮಹತ್ವ ಸೋಮವಾರ ಶಿವನಿಗೆ ಪ್ರಸಕ್ತವಾದ ದಿನ. ಹಾಗೂ ಶ್ರಾವಣ ಮಾಸ ಶಿವ-ಪಾರ್ವತಿಗೆ ಅರ್ಪಿತವಾದ ತಿಂಗಳು. ಹೀಗಾಗಿ ಶ್ರಾವಣ ಸೋಮವಾರ ಶಿವ ಪೂಜೆಗೆ ಒಳ್ಳೆಯ ದಿನ. ಶಿವ ಭಕ್ತಿ ಪ್ರಿಯ. ಅವನಿಗೆ ಹಿಡಿಸುವಂತೆ ಭಕ್ತಿಯಿಂದ ಪೂಜಿಸಿದರೆ ಎಲ್ಲವನ್ನೂ ನೀಡುವನು. ಈ ದಿನ ಶಿವನನ್ನು ಪೂಜಿಸಿದರೆ ಶಿವನ ಕೃಪೆಗೆ ಪಾತ್ರರಾಗುತ್ತೀರ. ಶ್ರಾವಣ ಸೋಮವಾರದಂದು ಉಪವಾಸ ಆಚರಿಸಿದರೆ ಸಂಕಟ ಹರ ಶಂಕರ ಮತ್ತು ಮಾತಾ ಪಾರ್ವತಿಯ ಆಶೀರ್ವಾದವು ಭಕ್ತರ ಹಾಗೂ ಅವರ ಕುಟುಂಬದ ಮೇಲಿರುತ್ತದೆ. ಜೀವನದಲ್ಲಿ ಕಷ್ಟಗಳು ದೂರವಾಗುತ್ತವೆ. ಸಂತೋಷ ನೆಲೆಸುತ್ತದೆ. ಹೀಗಾಗಿ ಹಿಂದೂ ಧರ್ಮದಲ್ಲಿ ಈ ಮಾಸಕ್ಕೆ ವಿಶೇಷ ಪ್ರಮುಖ್ಯತೆ ನೀಡಲಾಗಿದೆ. ಇನ್ನು ಶ್ರಾವಣ ಸೋಮವಾರದಂದು ಶಿವನಿಗೆ ಅಭಿಷೇಕ ಮಾಡುವುದರಿಂದ ನವಗ್ರಹಗಳ ದೋಷ ನಿವಾರಣೆಯಾಗುತ್ತದೆ. ಮದುವೆ ಸಮಸ್ಯೆಗಳು ದೂರವಾಗುತ್ತವೆ. ಹಾಗೂ ಬೇಯಿಸಿದ ಅನ್ನದಿಂದ ಶಿವಲಿಂಗ ಮಾಡಿ ಪೂಜೆ ಮಾಡುವುದು ಹೆಚ್ಚಿನ ಫಲ ನೀಡುತ್ತದೆ.

ಈ ಬಾರಿ ಶ್ರಾವಣದಲ್ಲಿ 4 ಸೋಮವಾರಗಳಿವೆ. ಶ್ರಾವಣ ಸೋಮವಾರದ ಮೊದಲ ಸೋಮವಾರ ಆಗಸ್ಟ್ 9ರಂದು. 2ನೇ ಶ್ರಾವಣ ಸೋಮವಾರ ಆಗಸ್ಟ್ 16. 3ನೇ ಶ್ರಾವಣ ಸೋಮವಾರ ಆಗಸ್ಟ್ 23. ಹಾಗೂ 4ನೇ ಮತ್ತು ಕೊನೆಯ ಶ್ರಾವಣ ಸೋಮವಾರ ಆಗಸ್ಟ್ 30ರಂದು ಬಂದಿದೆ.

ಅಭಿಷೇಕ ಪ್ರಿಯ ಶಿವ

ಶ್ರಾವಣ ಸೋಮವಾರದ ಪೂಜೆ ವಿಧಾನ ಶ್ರಾವಣ ಸೋಮವಾರದಂದು ಸೂರ್ಯೋದಯಕ್ಕೂ ಮುಂಚೆ ಎದ್ದು ಸ್ನಾನ ಮಾಡಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಪೂಜೆಗೂ ಮುನ್ನ ಮೊದಲು ಮನೆಯಲ್ಲಿ ಗಂಗಾಜಲವನ್ನು ಸಿಂಪಡಿಸಿ ಮನೆಯನ್ನು ಶುದ್ಧೀಕರಿಸಬೇಕು. ಸುರ್ಯೋದಯದೊಂದಿಗೆ, ಮೊದಲು ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ ನಂತರ ಪೂಜೆಯನ್ನು ಆರಂಭಿಸಬೇಕು. ಮಣ್ಣಿನ ಶಿವಲಿಂಗವನ್ನು ಮಾಡಿ ಮತ್ತು ಅದನ್ನು ಶಮಿಯೊಂದಿಗೆ ಪಾತ್ರೆಯಲ್ಲಿ ಇರಿಸಿ ಅದರ ನಂತರ ನೀರನ್ನು ಅರ್ಪಿಸಬೇಕು. ಗಮನದಲ್ಲಿಡಿ.. ಶಿವಲಿಂಗವು ಹೆಬ್ಬೆರಳಿನ ತುದಿಗೆ ಸಮನಾಗಿರಬೇಕು ಅದಕ್ಕಿಂತ ದೊಡ್ಡದಾಗಿರಬಾರದು.

ಶಿವ ಮಂತ್ರ ಜಪಿಸಿ ಶಿವಲಿಂಗಕ್ಕೆ ನೀರನ್ನು ಅರ್ಪಿಸಿದ ನಂತರ, ಮನೆಯ ದೇವರ ಕೋಣೆಯಲ್ಲಿ ಶಿವ-ಪಾರ್ವತಿ ವಿಗ್ರಹ ಅಥವಾ ಫೋಟೋದ ಮುಂದೆ ಕುಳಿತು ಉಪವಾಸ ಪ್ರತಿಜ್ಞೆ ತೆಗೆದುಕೊಳ್ಳುವ ಮೂಲಕ ಪೂಜೆಯನ್ನು ಪ್ರಾರಂಭಿಸಬೇಕು. ಇದಾದ ಬಳಿಕ “ಮಮ ಕ್ಷೇಮಸ್ತೈರ್ಯವಿಜಯಾರೋಗ್ಯೈಶ್ವಯಾರ್ಭಿಧ್ಯರ್ಥಂ ಸೋಮವ್ರತಂ ಕರೀಷ್ಯೇ” ಮಂತ್ರವನ್ನು ಪಠಿಸಬೇಕು.

ಇದರ ನಂತರ “ಧ್ಯಾಯೇನ್ನಿತ್ಯಂಮಹೇಶ್ವರಂ ರಜತಗಿರಿನಿಭಂ ಚಾರೂಚಂದ್ರಾವತಂಸಂ ರತ್ನಾಕಲ್ಪೋಜ್ವಲಾಂಗಾ ಪರಶುಮೃಗವರಾಭೀತಿಹಸ್ತಂ ಪ್ರಸನ್ನಂ|ಪದ್ಮಾಸೀನಂ ಸಮಂತಾಸ್ತುತಮಮರಗಣೈವ್ಯೂಘ್ರಕೃತಿಂ ವಸಾನಂ ವಿಶ್ವಾಘ್ಯಂ ವಿಶ್ವವಂಧ್ಯಂ ನಿಖಿಲಭಯಹರಂ ಪಂಚವಕ್ತ್ರಂ ತ್ರಿನೇತ್ರಂ|| ಇದನ್ನು ಧ್ಯಾನ ಮಾಡಿದ ನಂತರ ಶಿವನನ್ನು ಮತ್ತು ಪಾರ್ವತಿಯನ್ನು ”ಓಂ ನಮಃ ಶಿವಾಯ” ಮಂತ್ರದಿಂದ ಹೂವುಗಳನ್ನು, ಧೂಪ – ದೀಪಗಳನ್ನು, ಹಣ್ಣುಗಳನ್ನು, ಪ್ರಸಾದವನ್ನು ದೇವರಿಗೆ ಅರ್ಪಿಸಿ ಪೂಜಿಸಬೇಕು.

ಅಥವಾ ಶ್ರಾವಣ ಸೋಮವಾರದಂದು ಉತ್ತರಕ್ಕೆ ಮುಖ ಮಾಡಿ ಶಿವ ಆರಾಧನೆ ಮಾಡಬೇಕು. ಶ್ರಾವಣದ ಪ್ರತಿ ಸೋಮವಾರದಂದು ರುದ್ರಾಕ್ಷಿ ಮಾಲೆಯನ್ನು ಹಿಡಿದು ಶಿವ ಮಂತ್ರ ಜಪಿಸಬೇಕು. 11, 21, 51 ಅಥವಾ 108 ಬಾರಿ ”ಓಂ ನಮಃ ಶಿವಾಯ” ಮಂತ್ರವನ್ನು ಜಪಿಸಿ ಶಿವನ ಆರಾಧನೆ ಮಾಡಬಹುದು. ಬೆಳಗ್ಗೆ ಅಥವಾ ಸಂಜೆ ಮಂತ್ರಗಳ ಪಠಿಸಬೇಕು. ಹೀಗೆ ಮಾಡುವುದರಿಂದ ಅವನಿಗೆ ಬೇಗ ಸಂತೋಷವಾಗಿ ನಿಮ್ಮ ಭಕ್ತಿಗೆ ಮೆಚ್ಚಿಕೊಳ್ಳುತ್ತಾನೆ.

ಮಹಾಮೃತ್ಯುಂಜಯ ಮಂತ್ರ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ|| ಊರ್ವಾವರ್ಕಮೀವ ಬಂಧನಂ ಮೃತ್ಯೂರ್ ಮೋಕ್ಷಂ ಅಮೃತಃ

ಇದನ್ನೂ ಓದಿ: ಕಾಲಿಗೆ ಕಪ್ಪು ದಾರ ಯಾಕೆ ಕಟ್ತಾರೆ ಗೊತ್ತಾ? ಕಾರಣಗಳು ಹೀಗಿವೆ

Shravan Month: ಶ್ರಾವಣ ತಿಂಗಳು ಶಿವನಿಗೇಕೆ ಅರ್ಪಿತ? ಶ್ರಾವಣದಲ್ಲಿ ಆಚರಿಸುವ ವ್ರತಗಳಾವುವು?

ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ