ಸೋಮಶೇಖರ್ ಮತ್ತು ಹೆಬ್ಬಾರ್ ಬಿಜೆಪಿಯಿಂದ ಚುನಾಯಿತರಾದರೂ ಕಾಂಗ್ರೆಸ್ನೊಂದಿಗೆ ಗುರುತಿಸಿಕೊಂಡಿದ್ದರು: ಡಾ ಎಂಸಿ ಸುಧಾಕರ್
ಸೋಮಶೇಖರ್ ಮತ್ತು ಹೆಬ್ಬಾರ್ ಕಾಂಗ್ರೆಸ್ ಪಕ್ಷ ಸೇರುತ್ತಾರಾ ಎಂದು ಕೇಳಿದ ಪ್ರಶ್ನೆಗೆ ಡಾ ಸುಧಾಕರ್, ವಿಷಯಕ್ಕೆ ಸಂಬಂಧಿಸಿದತೆ ತನ್ನಲ್ಲಿ ಮಾಹಿತಿ ಕೊರತೆಯಿದೆ, ಆವರು ಬಿಜೆಪಿ ಚುನಾಯಿತ ಶಾಸಕರಾಗಿದ್ದುಕೊಂಡೇ ಕಾಂಗ್ರೆಸ್ ಸೇರಬಹುದೇ ಅನ್ನೋದು ತಾಂತ್ರಿಕ ಅಂಶ, ಅದರ ಬಗ್ಗೆ ತನಗೇನೂ ಗೊತ್ತಿಲ್ಲ, ಅದರೆ ಸರ್ಕಾರಕ್ಕೆ ಬೆಂಬಲ ನೀಡುವುದನ್ನು ಅವರಿಬ್ಬರೂ ಮುಂದುವರಿಸುತ್ತಾರೆ ಎಂದರು.
ಚಿಕ್ಕಬಳ್ಳಾಪುರ, ಮೇ 27: ಉನ್ನತ ಶಿಕ್ಷಣ ಸಚಿವ ಡಾ ಎಂಸಿ ಸುಧಾಕರ್ ಇಂದು ಬಿಜೆಪಿಯ ಉಚ್ಚಾಟಿತ ಶಾಸಕರಾದ ಎಸ್ಟಿ ಸೋಮಶೇಖರ್ (ST Somashekhar) ಮತ್ತು ಶಿವರಾಂ ಹೆಬ್ಬಾರ್ ಬಗ್ಗೆ ಮಾತಾಡುತ್ತಾ ಹೆಬ್ಬಾರ್ ಅವರೊಂದಿಗೆ ಹೆಚ್ಚಿನ ಪರಿಚಯವಿಲ್ಲ, ಆದರೆ ಸೋಮಶೇಖರ್ ಜೊತೆ ಉತ್ತಮ ಒಡನಾಟವಿದೆ, ಜೊತೆಯಾಗಿ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇವೆ, ಜೊತೆಯಾಗಿ ಕೆಲಸ ಮಾಡಿದ್ದೇವೆ, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅವರು ಮಂತ್ರಿಯಾಗಿದ್ದರು, ಈ ಬಾರಿಯ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಗೆದ್ದರೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು, ಎಲ್ಲ ಸರ್ಕಾರೀ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು, ಕಾಂಗ್ರೆಸ್ ಪಕ್ಷದೊಂದಿಗೆ ಅವರು ಇಟ್ಟುಕೊಂಡಿರುವ ಸಂಬಂಧ ನೋಡಿಯೇ ಬಿಜೆಪಿ ಇಬ್ಬರನ್ನೂ ಉಚ್ಚಾಟಿಸಿದಂತಿದೆ ಎಂದು ಹೇಳಿದರು.
ಇದನ್ನೂ ಓದಿ: ಎಐಸಿಸಿ ನೂತನ ಉದ್ಘಾಟನೆ ಸಮಾರಂಭಕ್ಕೆ ತೆರಳುವ ಮೊದಲು ದೆಹಲಿಯಲ್ಲಿ ಪೊಲೀಸರಿಂದ ಗೌರವ ರಕ್ಷೆ ಸ್ವೀಕರಿಸಿದ ಸಿದ್ದರಾಮಯ್ಯ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

