ಈ 3 ಗುಣಗಳನ್ನು ಹೊಂದಿದ ಸ್ತ್ರೀ ಕಡೆಗೆ ಮೋಹಿತರಾದರೆ ಪುರುಷರು ಅವನತಿ ಹೊಂದುತ್ತಾರೆ
ಒಂದು ಮನೆ ಲವಲವಿಕೆಯಿಂದ ಇರಬೇಕು ಎಂದರೆ ಸಂಸ್ಕಾರ ಅತ್ಯಂತ ಮುಖ್ಯ. ಒಂದು ವೇಳೆ ಮಹಿಳೆ ಸಂಸ್ಕಾರವಂತಳಾಗಿದ್ದು ಪುರುಷ ಅಡ್ಡದಾರಿ ಹಿಡಿದರೆ ಆತನನ್ನು ಸರಿ ಮಾಡುವ ತಾಕತ್ತು ಮಹಿಳೆಗೆ ಇರುತ್ತದೆ. ಆದರೆ, ಆಕೆಯೇ ಸಂಸ್ಕಾರ ಹೊಂದಿರದಿದ್ದರೆ ಅದು ಮನಸ್ಸು, ಮನೆ ಎರಡನ್ನೂ ಹಾಳು ಮಾಡುತ್ತದೆ.
ಧರ್ಮ, ರಾಜಕಾರಣ, ನೈತಿಕತೆ, ಆರ್ಥಿಕತೆ, ಸಾಮಾಜಿಕ ಬದುಕು ಹೀಗೆ ಎಲ್ಲಾ ವಿಚಾರಗಳ ಬಗ್ಗೆಯೂ ಅಪಾರ ಜ್ಞಾನ ಹೊಂದಿದ್ದ ಆಚಾರ್ಯ ಚಾಣಕ್ಯ ಅವರ ಮಾತುಗಳು ಇಂದಿಗೂ ಪ್ರಸ್ತುತ. ಚಾಣಕ್ಯ ಎಂದೇ ಹೆಸರು ಗಳಿಸಿದ ಕೌಟಿಲ್ಯರ ಚಾಣಕ್ಯ ನೀತಿ ಎಂಬ ಜ್ಞಾನಭಂಡಾರ ಎಲ್ಲರಿಗೂ ಮಾರ್ಗದರ್ಶಿ ಇದ್ದಂತೆ. ಕೃತಿಗಳ ಮೂಲಕ ತಮ್ಮ ಅನುಭವಗಳನ್ನು ತಲೆಮಾರುಗಳಿಗೆ ಧಾರೆಯೆರೆದ ಚಾಣಕ್ಯರ ಬಹುತೇಕ ಮಾತುಗಳು ಇಂದಿಗೂ ಪ್ರಸ್ತುತ. ಚಾಣಕ್ಯ ನೀತಿಯಲ್ಲಿನ ಅಂಶಗಳು ಬದುಕಿನಲ್ಲಿ ನಾವು ಹೇಗಿರಬೇಕು, ತೊಂದರೆಗಳು ಬಂದಾಗ ಹೇಗೆ ಎದುರಿಸಬೇಕು ಎಂದು ತಿಳಿಸುವ ಜತೆಗೆ ಯಶಸ್ವಿ ಬದುಕಿಗೆ ಸೂತ್ರದಂತೆ ಕಾಣುತ್ತವೆ. ಇಂದಿನ ಈ ಲೇಖನದಲ್ಲಿ ಆಚಾರ್ಯ ಚಾಣಕ್ಯ ಮಹಿಳೆಯರ ಗುಣ ಹಾಗೂ ಅವುಗಳು ಪುರುಷರ ಮೇಲೆ ಬೀರುವ ಪರಿಣಾಮದ ಬಗ್ಗೆ ಏನು ಹೇಳಿದ್ದಾರೆ ಎಂದು ನೋಡೋಣ.
ಆಚಾರ್ಯ ಚಾಣಕ್ಯ ಹೇಳುವಂತೆ ಹಲವರ ಬದುಕಿನಲ್ಲಿ ಮಹಿಳೆಯರು ಮಹತ್ತರ ಪಾತ್ರ ವಹಿಸುತ್ತಾರೆ. ಹೀಗಾಗಿ ಪುರುಷರು ಮಹಿಳೆಯರ ಸೌಂದರ್ಯ ನೋಡಿ ಮಾರುಹೋಗುವ ಮೊದಲು ಅನೇಕ ಸಂಗತಿಗಳ ಬಗ್ಗೆ ಅವಲೋಕಿಸಬೇಕಾಗುತ್ತದೆ. ವಿಶ್ವದಲ್ಲಿ ಪುರುಷರಿಗೆ ಇರುವ ಅತಿದೊಡ್ಡ ಶಕ್ತಿ ವಿವೇಕ ಮತ್ತು ಮಹಿಳೆಯರಿಗೆ ಸೌಂದರ್ಯ ಎನ್ನುವುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದ್ದು, ಕೆಲ ಗುಣಗಳನ್ನು ಹೊಂದಿದ ಮಹಿಳೆಯರಿಂದ ದೂರವಿರುವುದು ಮುಖ್ಯವಾಗಿದೆ. ಚಾಣಕ್ಯ ಹೇಳುವ ಪ್ರಕಾರ, ಒಬ್ಬ ಪುರುಷ ಈ ಗುಣವಿರುವ ಮಹಿಳೆಯರಿಂದ ದೂರವಿರುವುದು ಅವಶ್ಯ:
ಹೊಟ್ಟೆಕಿಚ್ಚು ಪಡುವ ಮಹಿಳೆ ಹೊಟ್ಟೆಕಿಚ್ಚು ಅಥವಾ ಅಸೂಯೆ ಸ್ವಭಾವವನ್ನು ಹೊಂದಿರುವ ಮಹಿಳೆಯರ ಸಹವಾಸ ಮಾಡುವ ಪುರುಷ ತನ್ನ ಜೀವನದಲ್ಲಿ ಸಾಕಷ್ಟು ನಷ್ಟವನ್ನು ಎದುರಿಸಬೇಕಾಗುತ್ತದೆ. ಅಂತಹ ಮಹಿಳೆಯರಿಗಾಗಿ ಹಣ ಸುರಿದು ಖರ್ಚು ಮಾಡುತ್ತಿದ್ದರೆ ಅದು ಖಂಡಿತಾ ಅವನತಿಗೆ ಹಾದಿಯಾಗುತ್ತದೆ. ಈ ಕಾರಣದಿಂದ ಪುರುಷರು ಅಂತಹ ಸ್ವಭಾವದ ಮಹಿಳೆಯಿಂದ ದೂರವಿರುವುದು ಉತ್ತಮ ಎನ್ನುವುದು ಚಾಣಕ್ಯ ನೀಡಿರುವ ಸಲಹೆ.
ಸ್ವಾರ್ಥ ಸ್ವಭಾವದ ಮಹಿಳೆ ತನ್ನ ಸ್ವಾರ್ಥಕ್ಕಾಗಿ, ತನ್ನ ಸುಖಕ್ಕಾಗಿ ಮಾತ್ರ ಪುರುಷರ ಸಖ್ಯ ಬೆಳೆಸುವ ಮಹಿಳೆ ಒಂದಲ್ಲಾ ಒಂದು ದಿನ ಅಪಾಯವನ್ನು ತಂದೊಡುತ್ತಾರಂತೆ. ಅವರ ಆಸೆ, ಸ್ವಾರ್ಥ ಈಡೇರುವವರೆಗೆ ಪುರುಷರೊಂದಿಗೆ ಇದ್ದು ನಂತರ ಬೆನ್ನು ಹಾಕಿ ಹೋಗುವ ಅವರನ್ನು ನಂಬುವುದು ಒಳಿತಲ್ಲ. ಒಬ್ಬ ವ್ಯಕ್ತಿ ಎಲ್ಲವನ್ನೂ ಕಳೆದುಕೊಂಡು ಕಷ್ಟಕ್ಕೆ ಸಿಲುಕುತ್ತಿದ್ದಾನೆ ಎಂದು ಗೊತ್ತಾಗುತ್ತಿದ್ದಂತೆಯೇ ಸಹಾಯಕ್ಕೆ ನಿಲ್ಲುವ ಬದಲು ಈ ಸ್ವಭಾವದ ಮಹಿಳೆಯರು ಬಿಟ್ಟು ಹೋಗುತ್ತಾರೆ. ಆದ್ದರಿಂದ ಪುರುಷರು ಇಂತಹ ಮಹಿಳೆಯರ ಸಹವಾಸ ಮಾಡಬಾರದು ಎಂದು ಚಾಣಕ್ಯ ಹೇಳುತ್ತಾರೆ.
ಸಂಸ್ಕಾರ ಹೊಂದಿರದ ಮಹಿಳೆ ಒಂದು ಮನೆ ಲವಲವಿಕೆಯಿಂದ ಇರಬೇಕು ಎಂದರೆ ಸಂಸ್ಕಾರ ಅತ್ಯಂತ ಮುಖ್ಯ. ಒಂದು ವೇಳೆ ಮಹಿಳೆ ಸಂಸ್ಕಾರವಂತಳಾಗಿದ್ದು ಪುರುಷ ಅಡ್ಡದಾರಿ ಹಿಡಿದರೆ ಆತನನ್ನು ಸರಿ ಮಾಡುವ ತಾಕತ್ತು ಮಹಿಳೆಗೆ ಇರುತ್ತದೆ. ಆದರೆ, ಆಕೆಯೇ ಸಂಸ್ಕಾರ ಹೊಂದಿರದಿದ್ದರೆ ಅದು ಮನಸ್ಸು, ಮನೆ ಎರಡನ್ನೂ ಹಾಳು ಮಾಡುತ್ತದೆ ಎನ್ನುವುದು ಚಾಣಕ್ಯನ ಅಭಿಪ್ರಾಯ. ಹೀಗಾಗಿ ಅಂತಹ ಮಹಿಳೆಯರು ಎಷ್ಟೇ ಸುಂದರವಾಗಿದ್ದರೂ, ಅವರಿಂದ ದೂರವಿರಬೇಕು. ನೋಡಲು ಸುಂದರವಾಗಿಲ್ಲದೇ ಸುಸಂಸ್ಕೃತರಾಗಿದ್ದರೆ ಅಂತಹವರನ್ನೇ ಸಂಗಾತಿಯನ್ನಾಗಿಸಿಕೊಳ್ಳಬೇಕು. ಏಕೆಂದರೆ ಬದುಕು ನಡೆಸಲು ಸೌಂದರ್ಯಕ್ಕಿಂತ ಸಂಸ್ಕಾರ ಮುಖ್ಯ ಎನ್ನುವುದು ಚಾಣಕ್ಯರ ನೀತಿ.
ಇದನ್ನೂ ಓದಿ: Chanakya Niti: ಗಂಡ-ಹೆಂಡತಿ ಬಾಂಧವ್ಯದಲ್ಲಿ ಈ ಕೊರತೆಗಳು ಸಂಬಂಧವನ್ನು ಹದಗೆಡಿಸುತ್ತವೆ; ಚಾಣಕ್ಯ ನೀತಿ
ಸಂಗಾತಿ ಮೋಸ ಮಾಡುತ್ತಿದ್ದಾರೆ ಎಂಬ ಅನುಮಾನವೇ? ಸಂಬಂಧ ಸರಿಪಡಿಸಿಕೊಳ್ಳಲು ಸರಳ ಸಲಹೆಗಳು ಇಲ್ಲಿವೆ
(According to Chanakya Niti men should stay away from these 3 types of women otherwise they will destroy their life)