Shravana Masa 2022: ಶ್ರಾವಣ ಸೋಮವಾರದ ಮಹತ್ವವೇನು? ಯಾವ ಮಂತ್ರ ಪಠಣೆಯಿಂದ ಶಿವನ ಪೂಜೆ ಮಾಡಬೇಕು?

ಸೋಮವಾರ ಶಿವನಿಗೆ ಪ್ರಸಕ್ತವಾದ ದಿನ. ಹಾಗೂ ಶ್ರಾವಣ ಮಾಸವನ್ನು ಶಿವ-ಪಾರ್ವತಿಗೆ ಅರ್ಪಿಸಲಾಗಿದೆ. ಅದರಲ್ಲೂ ಸೋಮವಾರ ಶಿವನಿಗೆ ವಿಶೇಷ ದಿನ. ಹೀಗಾಗಿ ಶ್ರಾವಣ ಸೋಮವಾರ ಶಿವ ಪೂಜೆಗೆ ಒಳ್ಳೆಯ ದಿನ ಎನ್ನಲಾಗಿದೆ.

Shravana Masa 2022: ಶ್ರಾವಣ ಸೋಮವಾರದ ಮಹತ್ವವೇನು? ಯಾವ ಮಂತ್ರ ಪಠಣೆಯಿಂದ ಶಿವನ ಪೂಜೆ ಮಾಡಬೇಕು?
ಭಗವಾನ್ ಶಿವ
TV9kannada Web Team

| Edited By: Ayesha Banu

Jul 25, 2022 | 6:30 AM

ಶ್ರಾವಣ ಮಾಸವನ್ನು(Shravana Masa) ಹಿಂದೂಗಳ ಪವಿತ್ರ ಮಾಸವೆಂದು ಪರಿಗಣಿಸಲಾಗಿದೆ. ಹಿಂದೂ ಪಂಚಾಂಗದ 5ನೇ ಮಾಸವಾದ ಶ್ರಾವಣ ಮಾಸವು ಜುಲೈ 29ರಿಂದ ಆರಂಭವಾಗಿ ಆಗಸ್ಟ್ 27ಕ್ಕೆ ಮುಕ್ತವಾಗುತ್ತದೆ. ಈ ತಿಂಗಳಲ್ಲಿ ಬರುವ ಹಬ್ಬ ಹಾಗೂ ವ್ರತಗಳು ಬಹುತೇಕವಾಗಿ ಶಿವ-ಪಾರ್ವತಿಗೆ ಮೀಸಲು. ಅದರಲ್ಲೂ ಶ್ರಾವಣ ಸೋಮವಾರಕ್ಕೆ ಅದರದೇ ಆದ ಕಥೆ, ಮಹತ್ವವಿದೆ. ಬನ್ನಿ ಈ ಆರ್ಟಿಕಲ್ನಲ್ಲಿ ಶ್ರಾವಣ ಸೋಮವಾರದ ಕಥೆ, ಮಹತ್ವ ಮತ್ತು ಮಂತ್ರಗಳ ಬಗ್ಗೆ ತಿಳಿಯಿರಿ.

ಶ್ರಾವಣ ಸೋಮವಾರದ ಮಹತ್ವವೇನು?

ಸೋಮವಾರ ಶಿವನಿಗೆ ಪ್ರಸಕ್ತವಾದ ದಿನ. ಹಾಗೂ ಶ್ರಾವಣ ಮಾಸವನ್ನು ಶಿವ-ಪಾರ್ವತಿಗೆ ಅರ್ಪಿಸಲಾಗಿದೆ. ಅದರಲ್ಲೂ ಸೋಮವಾರ ಶಿವನಿಗೆ ವಿಶೇಷ ದಿನ. ಹೀಗಾಗಿ ಶ್ರಾವಣ ಸೋಮವಾರ ಶಿವ ಪೂಜೆಗೆ ಒಳ್ಳೆಯ ದಿನ ಎನ್ನಲಾಗಿದೆ. ಶಿವನು ಭಕ್ತಿ ಪ್ರಿಯ. ಅವನಿಗೆ ಹಿಡಿಸುವಂತೆ ಶ್ರದ್ಧೆ, ಭಕ್ತಿಯಿಂದ ಪೂಜಿಸಿದರೆ ಎಲ್ಲವನ್ನೂ ನೀಡುವನು. ಈ ದಿನ ಶಿವನನ್ನು ಪೂಜಿಸಿದರೆ ಶಿವನ ಕೃಪೆಗೆ ಪಾತ್ರರಾಗುತ್ತೀರ. ಶ್ರಾವಣ ಸೋಮವಾರದಂದು ಉಪವಾಸ ಆಚರಿಸಿದರೆ ಸಂಕಟ ಹರ ಶಂಕರ ಮತ್ತು ಮಾತಾ ಪಾರ್ವತಿಯ ಆಶೀರ್ವಾದವು ಭಕ್ತರ ಹಾಗೂ ಅವರ ಕುಟುಂಬದ ಮೇಲಿರುತ್ತದೆ. ಜೀವನದಲ್ಲಿ ಕಷ್ಟಗಳು ದೂರವಾಗುತ್ತವೆ. ಸಂತೋಷ ನೆಲೆಸುತ್ತದೆ. ಹೀಗಾಗಿ ಹಿಂದೂ ಧರ್ಮದಲ್ಲಿ ಈ ಮಾಸಕ್ಕೆ ವಿಶೇಷ ಪ್ರಮುಖ್ಯತೆ ನೀಡಲಾಗಿದೆ. ಇನ್ನು ಶ್ರಾವಣ ಸೋಮವಾರದಂದು ಶಿವನಿಗೆ ಅಭಿಷೇಕ ಮಾಡುವುದರಿಂದ ನವಗ್ರಹಗಳ ದೋಷ ನಿವಾರಣೆಯಾಗುತ್ತದೆ. ಮದುವೆ ಸಮಸ್ಯೆಗಳು ದೂರವಾಗುತ್ತವೆ. ಹಾಗೂ ಬೇಯಿಸಿದ ಅನ್ನದಿಂದ ಶಿವಲಿಂಗ ಮಾಡಿ ಪೂಜೆ ಮಾಡುವುದು ಹೆಚ್ಚಿನ ಫಲ ನೀಡುತ್ತದೆ.

ಶ್ರಾವಣ 2022 ರಲ್ಲಿ ಬರುವ ಸೋಮವಾರಗಳಾವುವು?

2022 ರ ಜುಲೈ 29 ರಂದು ಶುಕ್ರವಾರದಿಂದ ಶ್ರಾವಣ ಆರಂಭವಾಗುತ್ತದೆ. ಮೊದಲ ಶ್ರಾವಣ ಸೋಮವಾರ ವ್ರತ: 2022 ಆಗಸ್ಟ್‌ 1 ಎರಡನೇ ಶ್ರಾವಣ ಸೋಮವಾರ ವ್ರತ: 2022 ಆಗಸ್ಟ್‌ 8 ಮೂರನೇ ಶ್ರಾವಣ ಸೋಮವಾರ ವ್ರತ: 2022 ಆಗಸ್ಟ್‌ 15 ಶ್ರಾವಣ ಕೊನೆಯ ಸೋಮವಾರ ವ್ರತ: 2022 ಆಗಸ್ಟ್‌ 22

ಶ್ರಾವಣ ಸೋಮವಾರದ ವ್ರತ ಕಥೆ

ಸ್ಕಂದ ಪುರಾಣದ ಪ್ರಕಾರ, ಒಮ್ಮೆ, ಸತಿ ದೇವಿಯು ತನ್ನ ತಂದೆ ಪ್ರಜಾಪತಿ ದಕ್ಷನ ವಿರುದ್ಧವಾಗಿ ಶಿವನನ್ನು ಮದುವೆಯಾಗಲು ನಿರ್ಧಾರವನ್ನು ಮಾಡಿದ್ದಳು. ಅದರಂತೆಯೇ ಸತಿ ಶಿವನನ್ನು ಮದುವೆಯಾದಳು. ಆದರೆ ತನ್ನ ಪತಿ ಶಿವನನ್ನು ತನ್ನ ತಂದೆಯ ಸ್ಥಳದಲ್ಲಿ ಅವಮಾನಿಸುವುದನ್ನು ಕಂಡಾಗ ಅವಳು ತನ್ನ ಜೀವನವನ್ನು ತ್ಯಜಿಸಿದಳು. ನಂತರ ಅವರು ಪರ್ವತ ರಾಜ ಹಿಮಾಲಯ ಮತ್ತು ನೈನಾ ಅವರ ಪುತ್ರಿ ಪಾರ್ವತಿ ದೇವಿಯಾಗಿ ಪುನರ್ಜನ್ಮ ಪಡೆದಳು. ಶಿವನನ್ನು ತನ್ನ ಪತಿಯನ್ನಾಗಿ ಮಾಡಿಕೊಳ್ಳಲು ಒಂದು ತಿಂಗಳ ಕಾಲ ಕಠಿಣ ತಪಸ್ಸನ್ನು ಮಾಡಿದಳು. ಈ ಪರಿಣಾಮವಾಗಿ, ಅವಳು ತನ್ನ ಗುರಿಗಳನ್ನು ಸಾಧಿಸಿದಳು ಮತ್ತು ಶಿವನ ಮೆಚ್ಚುಗೆಗೆ ಪಾತ್ರಳಾದಳು. ಅದಕ್ಕಾಗಿಯೇ ಇನ್ನೂ ಅನೇಕ ಜನರು ಈ ಅಭ್ಯಾಸವನ್ನು ಅನುಸರಿಸುತ್ತಾರೆ ಮತ್ತು ಶಿವನಂತಹ ಸಂಗಾತಿಯನ್ನು ಪಡೆಯಲು ಕನ್ಯೆಯರು ಸತತ ಹದಿನಾರು ಸೋಮವಾರಗಳ (ಸೋಲಾಹ ಸೋಮವಾರ) ಉಪವಾಸವನ್ನು ಆಚರಿಸುತ್ತಾರೆ.

ಶ್ರಾವಣ ಸೋಮವಾರದ ಪೂಜೆ ವಿಧಾನ

ಶ್ರಾವಣ ಸೋಮವಾರದಂದು ಸೂರ್ಯೋದಯಕ್ಕೂ ಮುಂಚೆ ಎದ್ದು ಸ್ನಾನ ಮಾಡಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಪೂಜೆಗೂ ಮುನ್ನ ಮೊದಲು ಮನೆಯಲ್ಲಿ ಗಂಗಾಜಲವನ್ನು ಸಿಂಪಡಿಸಿ ಮನೆಯನ್ನು ಶುದ್ಧೀಕರಿಸಬೇಕು. ಸುರ್ಯೋದಯದೊಂದಿಗೆ, ಮೊದಲು ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ ನಂತರ ಪೂಜೆಯನ್ನು ಆರಂಭಿಸಬೇಕು. ಮಣ್ಣಿನ ಶಿವಲಿಂಗವನ್ನು ಮಾಡಿ ಮತ್ತು ಅದನ್ನು ಶಮಿಯೊಂದಿಗೆ ಪಾತ್ರೆಯಲ್ಲಿ ಇರಿಸಿ ಅದರ ನಂತರ ನೀರನ್ನು ಅರ್ಪಿಸಬೇಕು. ಗಮನದಲ್ಲಿಡಿ.. ಶಿವಲಿಂಗವು ಹೆಬ್ಬೆರಳಿನ ತುದಿಗೆ ಸಮನಾಗಿರಬೇಕು ಅದಕ್ಕಿಂತ ದೊಡ್ಡದಾಗಿರಬಾರದು.

ಶಿವ ಮಂತ್ರ ಜಪಿಸಿ ಶಿವಲಿಂಗಕ್ಕೆ ನೀರನ್ನು ಅರ್ಪಿಸಿದ ನಂತರ, ಮನೆಯ ದೇವರ ಕೋಣೆಯಲ್ಲಿ ಶಿವ-ಪಾರ್ವತಿ ವಿಗ್ರಹ ಅಥವಾ ಫೋಟೋದ ಮುಂದೆ ಕುಳಿತು ಉಪವಾಸ ಪ್ರತಿಜ್ಞೆ ತೆಗೆದುಕೊಳ್ಳುವ ಮೂಲಕ ಪೂಜೆಯನ್ನು ಪ್ರಾರಂಭಿಸಬೇಕು. ಇದಾದ ಬಳಿಕ “ಮಮ ಮಸ್ತೈರ್ಯವಿಜಯಾರೋಗ್ಯೈಶ್ವಯಾರ್ಭಿಧ್ಯರ್ಥಂ ಸೋಮವ್ರತಂ ಕರೀಷ್ಯೇ” ಮಂತ್ರವನ್ನು ಪಠಿಸಬೇಕು.

ಇದರ ನಂತರ “ಧ್ಯಾಯೇನ್ನಿತ್ಯಂಮಹೇಶ್ವರಂ ರಜತಗಿರಿನಿಭಂ ಚಾರೂಚಂದ್ರಾವತಂಸಂ ರತ್ನಾಕಲ್ಪೋಜ್ವಲಾಂಗಾ ಪರಶುಮೃಗವರಾಭೀತಿಹಸ್ತಂ ಪ್ರಸನ್ನಂ|ಪದ್ಮಾಸೀನಂ ಸಮಂತಾಸ್ತುತಮಮರಗಣೈವ್ಯೂಘ್ರಕೃತಿಂ ವಸಾನಂ ವಿಶ್ವಾಘ್ಯಂ ವಿಶ್ವವಂಧ್ಯಂ ನಿಖಿಲಭಯಹರಂ ಪಂಚವಕ್ತ್ರಂ ತ್ರಿನೇತ್ರಂ|| ಇದನ್ನು ಧ್ಯಾನ ಮಾಡಿದ ನಂತರ ಶಿವನನ್ನು ಮತ್ತು ಪಾರ್ವತಿಯನ್ನು ”ಓಂ ನಮಃ ಶಿವಾಯ” ಮಂತ್ರದಿಂದ ಹೂವುಗಳನ್ನು, ಧೂಪ ದೀಪಗಳನ್ನು, ಹಣ್ಣುಗಳನ್ನು, ಪ್ರಸಾದವನ್ನು ದೇವರಿಗೆ ಅರ್ಪಿಸಿ ಪೂಜಿಸಬೇಕು. ಅಥವಾ ಮಹಾಮೃತ್ಯುಂಜಯ ಮಂತ್ರ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ|| ಊರ್ವಾವರ್ಕಮೀವ ಬಂಧನಂ ಮೃತ್ಯೂರ್ ಮೋಕ್ಷಂ ಅಮೃತಃ ಪಠಿಸಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada