Solar Eclipse 2022: ಜಗತ್ತನ್ನೇ ಬೆಳಗುವ ಸೂರ್ಯನಿಗೆ ಗ್ರಹಣ: ಕೇತುಗ್ರಸ್ತ ಸೂರ್ಯ ಗ್ರಹಣ ಎಲ್ಲೆಲ್ಲಿ, ಯಾವಾಗ ಸಂಭವಿಸುತ್ತೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಕೇತುಗ್ರಸ್ತ ಸೂರ್ಯ ಗ್ರಹಣವು, ಸ್ವಾತಿ ನಕ್ಷತ್ರ ತುಲಾ ರಾಶಿಯಲ್ಲಿ ಸಂಭವಿಸುತ್ತಿದೆ. ಈ ಗ್ರಹಣದ ವೇಳೆ ಕೇತುವಿನ ಪ್ರಭಾವ ಸೂರ್ಯನ ಮೇಲೆ ಹೆಚ್ಚಾಗಿ ಬೀಳೋದ್ರಿಂದ ಇದನ್ನ ಕೇತುಗ್ರಸ್ತ ಸೂರ್ಯಗ್ರಹಣ ಅಂತಾ ಕರೆಯಲಾಗುತ್ತೆ.

Solar Eclipse 2022: ಜಗತ್ತನ್ನೇ ಬೆಳಗುವ ಸೂರ್ಯನಿಗೆ ಗ್ರಹಣ: ಕೇತುಗ್ರಸ್ತ ಸೂರ್ಯ ಗ್ರಹಣ ಎಲ್ಲೆಲ್ಲಿ, ಯಾವಾಗ ಸಂಭವಿಸುತ್ತೆ
ಸೂರ್ಯ ಗ್ರಹಣ
Follow us
TV9 Web
| Updated By: ಆಯೇಷಾ ಬಾನು

Updated on:Oct 25, 2022 | 7:55 AM

ದೀಪಾವಳಿ(Deepavali 2022) ಹೊತ್ತಲ್ಲೇ, ಅಕ್ಟೋಬರ್ 25ರಂದು ಅಂದ್ರೆ ಇಂದು ಈ ವರ್ಷದ ಕೊನೆಯ ಹಾಗೂ 27 ವರ್ಷಗಳ ಬಳಿಕ ಕೇತುಗ್ರಸ್ತ ಸೂರ್ಯ ಗ್ರಹಣ(Solar Eclipse 2022) ಸಂಭವಿಸುತ್ತಿದೆ. ಇಪ್ಪತ್ತೇಳು ವರ್ಷಗಳ ಹಿಂದೆ ದೀಪಾವಳಿ ಹಬ್ಬದಂದು ಕೇತುಗ್ರಸ್ತ ಸೂರ್ಯಗ್ರಹಣವು ಸಂಭವಿಸಿತ್ತು. ಇದೀಗ ಮತ್ತೆ ಆ ಸಮಯ ಬಂದಿದ್ದು, ಬಾನಂಗಳದಲ್ಲಿ ಸೂರ್ಯ ಬಳೆ ತೊಟ್ಟಂತೆ ಗೋಚರಿಸಲಿದ್ದಾನೆ. ಸೌರಮಂಡಲದ ವಿಸ್ಮಯಕಾರಿ ಪ್ರಕ್ರಿಯೆ ಕಣ್ತುಂಬಿಕೊಳ್ಳಲು ಜನ ಕಾತುರದಿಂದ ಕಾಯುತ್ತಿದ್ದಾರೆ.

ಸೂರ್ಯ ಗ್ರಹಣ ಸಮಯ

  • ಗ್ರಹಣ ಸ್ಪರ್ಶಕಾಲ – ಮಧ್ಯಾಹ್ನ 2:15
  • ಗ್ರಹಣ ಮಧ್ಯಕಾಲ – ಮಧ್ಯಾಹ್ನ 4:18
  • ಗ್ರಹಣ ಮೋಕ್ಷಕಾಲ – ಸಂಜೆ 6:30

ದೀಪಾವಳಿ ಅಮಾವಾಸ್ಯೆಯಾದ ಇಂದು ಮಧ್ಯಾಹ್ನ 2:15 ಕ್ಕೆ ಆರಂಭವಾಗುವ ಸೂರ್ಯಗ್ರಹಣ, 4 ಗಂಟೆ 18 ನಿಮಿಷಕ್ಕೆ ಬಹಳಷ್ಟು ತೀವ್ರತೆಯನ್ನ ಪಡೆದುಕೊಳ್ಳುತ್ತೆ. ಸಂಜೆ 6.30ಕ್ಕೆ ಗ್ರಹಣವು ಮುಕ್ತಾಯವಾಗುತ್ತೆ.

ಸೂರ್ಯಗ್ರಹಣ ಎಲ್ಲೆಲ್ಲಿ ಗೋಚರಿಸುತ್ತೆ? ಸೂರ್ಯಗ್ರಹಣ ದೆಹಲಿ, ಬೆಂಗಳೂರು, ಕೋಲ್ಕತ್ತಾ, ಚೆನ್ನೈ, ಉಜ್ಜಯಿನಿ, ವಾರಾಣಸಿ ಮತ್ತು ಮಥುರಾದಲ್ಲಿ ಗೋಚರವಾಗಲಿದೆ. ಬೆಂಗಳೂರಲ್ಲಿ ಸಂಜೆ 5.12 ರಿಂದ 5.55 ರವರೆಗೆ ಗ್ರಹಣ ಗೋಚರವಾಗಲಿದೆ. ಇನ್ನು, ಯುರೋಪ್, ಆಫ್ರಿಕಾ, ಏಷ್ಯಾ ಖಂಡದಲ್ಲಿ ಗ್ರಹಣ ಗೋಚರವಾಗುತ್ತೆ.

ರಾಜ್ಯದ ವಿವಿಧ ಭಾಗಗಳಲ್ಲಿ ಸೂರ್ಯ ಗ್ರಹಣ ಗೋಚರದ ವಿವರ

  • ಬೆಂಗಳೂರು 10.09% – ಸಂಜೆ 5:12 ಗಂಟೆಗೆ ಗ್ರಹಣ ಪ್ರಾರಂಭ
  • ಮೈಸೂರು 9.5%- ಸಂಜೆ 5:13 ಗಂಟೆಗೆ ಪ್ರಾರಂಭ
  • ಧಾರವಾಡ 16.09%- ಸಂಜೆ 5:01 ಗಂಟೆಗೆ ಪ್ರಾರಂಭ
  • ರಾಯಚೂರು 16.67%- ಸಂಜೆ 5:01 ಗಂಟೆಗೆ ಪ್ರಾರಂಭ
  • ಬಳ್ಳಾರಿ 14.64%- ಸಂಜೆ 5:04 ಗಂಟೆಗೆ ಪ್ರಾರಂಭ
  • ಬಾಗಲಕೋಟೆ 17.33%- ಸಂಜೆ 5:00 ಗಂಟೆಗೆ ಪ್ರಾರಂಭ
  • ಮಂಗಳೂರು 10.91%- ಸಂಜೆ 5:10 ಗಂಟೆಗೆ ಪ್ರಾರಂಭ
  • ಕಾರವಾರ 15.15%- ಸಂಜೆ 5:03 ಗಂಟೆಗೆ ಪ್ರಾರಂಭ

ದೇಶದ ಇತರೆ ಭಾಗದಲ್ಲಿ

  • ದೆಹಲಿ ಸಂಜೆ 4:29ಕ್ಕೆ
  • ಮುಂಬೈ ಸಂಜೆ 4:49ಕ್ಕೆ
  • ಕೊಲ್ಕತ್ತಾ ಸಂಜೆ 4:52ಕ್ಕೆ
  • ಚೆನ್ನೈ ಸಂಜೆ 5:14ಕ್ಕೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಕೇತುಗ್ರಸ್ತ ಸೂರ್ಯ ಗ್ರಹಣವು, ಸ್ವಾತಿ ನಕ್ಷತ್ರ ತುಲಾ ರಾಶಿಯಲ್ಲಿ ಸಂಭವಿಸುತ್ತಿದೆ. ಈ ಗ್ರಹಣದ ವೇಳೆ ಕೇತುವಿನ ಪ್ರಭಾವ ಸೂರ್ಯನ ಮೇಲೆ ಹೆಚ್ಚಾಗಿ ಬೀಳೋದ್ರಿಂದ ಇದನ್ನ ಕೇತುಗ್ರಸ್ತ ಸೂರ್ಯಗ್ರಹಣ ಅಂತಾ ಕರೆಯಲಾಗುತ್ತೆ.

ಇನ್ನು, ವೈಜ್ಞಾನಿಕ ಲೋಕದ ಪ್ರಕಾರ, ಖಗೋಳ ಶಾಸ್ತ್ರಜ್ಞರ ಪ್ರಕಾರ ಇದು ಬಾನಲ್ಲಿ ನಡೆಯುವ ಒಂದು ಪ್ರಕ್ರಿಯೆ ಅಷ್ಟೆ. ಆದ್ರೆ ಇದು ಬಹಳಷ್ಟು ವಿಚಿತ್ರವಾದ, ಅಪಾಯಕಾರಿಯಾದ, ಪ್ರಮಾಧವನ್ನ ಸೃಷ್ಟಿಸುವಂತಹ ಸೂರ್ಯಗ್ರಹಣವೆಂಬ ಮಾತು ಇಡೀ ಜಗತ್ತಿನ ನಾನಾ ಧರ್ಮಗಳ ಜ್ಯೋತಿಷ್ಯ ವಲಯದ್ದಾಗಿದೆ.

ಗ್ರಹಣ ಕಾಲದಲ್ಲಿ ಪಾಲಿಸಬೇಕಾದ ನಿಯಮಗಳೇನು?

  • ಗ್ರಹಣ ಸ್ಪರ್ಶವಾದ ತಕ್ಷಣ ಸ್ನಾನ ಮಾಡಬೇಕು
  • ಗ್ರಹಣ ಸ್ಪರ್ಶವಾದಾಗಿನಿಂದ ಮುಗಿಯುವವರೆಗೂ ಏನನ್ನೂ ತಿನ್ನಬಾರದು
  • ಗ್ರಹಣ ಮೋಕ್ಷದ ನಂತರ ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಬೇಕು, ಅಡುಗೆ ಮಾಡಿ ದೇವರಿಗೆ ನೈವೇದ್ಯ ಅರ್ಪಿಸಬೇಕು.
  • ಪೂಜೆಯ ನಂತರ ಆಹಾರ ಸೇವಿಸಬೇಕು
  • ಸ್ನಾನ ಆದ ತಕ್ಷಣ ಏನನ್ನಾದರೂ ದಾನ ಮಾಡಬೇಕು, ದಾನ ಮಾಡಲು ಆಗದವರು ದೇವರ ಮಂತ್ರಗಳನ್ನ ಪಠಿಸಬೇಕು
  • ಗ್ರಹಣ ಕಾಲ ಆರಂಭದಿಂದ ಮಧ್ಯಕಾಲದವರೆಗೂ ಪಿತೃಗಳನ್ನು ನೆನೆದು ತರ್ಪಣ ನೀಡಬೇಕು
  •  ಗ್ರಹಣ ಕಾಲದಲ್ಲಿ ನಿದ್ದೆ ಮಾಡಬಾರದು
  • ಗ್ರಹಣ ಸಂಭವಿಸುವ ಮುನ್ನಾ ಹಬ್ಬದಾಚರಣೆ ಮುಗಿಸಬೇಕು
  • ಅಮಾವಾಸ್ಯೆ ಗ್ರಹಣ ಕಾಲದಲ್ಲಿ ನದಿ ನೀರಿನಲ್ಲಿ ತಪಸ್ಸು ಸೂಕ್ತ
  • ಅಮಾವಾಸ್ಯೆ ಗ್ರಹಣ ಕಾಲದಲ್ಲಿ ಜಪ-ತಪ ಸೂಕ್ತ
  • ಗ್ರಹಣ ಸಮಯದಲ್ಲಿ ದೇವತಾ ಪಾರ್ಥನೆಯಿಂದ ಸಿದ್ಧಿ ಪ್ರಾಪ್ತಿ
  • ಗ್ರಹಣ ಕಾಲದಲ್ಲಿ ದೇವರ ನಾಮಸ್ಮರಣೆಯಿಂದ ಸಕಲ ದೋಷ ನಿವಾರಣೆ
  • ಗರ್ಭಿಣಿಯರು ಎಚ್ಚರದಿಂದಿರಬೇಕು
  • ಮಕ್ಕಳು-ವೃದ್ಧರು ಮನೆಯೊಳಗಿರುವುದು ಸೂಕ್ತ
  • ದೈವ ಸ್ಮರಣೆಯಿಂದ ಧನಾತ್ಮಕ ಶಕ್ತಿ ವೃದ್ಧಿ
  • ಹಬ್ಬದ ತಿನಿಸು ಪದಾರ್ಥಗಳ ಮೇಲೆ ದರ್ಬೆ ಹುಲ್ಲನ್ನು ಹಾಕುವುದು ಒಳ್ಳೆಯದು
  • ಸೂರ್ಯಗ್ರಹಣವನ್ನ ಬರಿಗಣ್ಣಿನಿಂದ ನೋಡುವುದು ಒಳಿತಲ್ಲಾ

Published On - 6:30 am, Tue, 25 October 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ