Somvati Amavasya Daan: ಸೋಮವತಿ ಅಮಾವಾಸ್ಯೆಯಂದು ಈ 5 ವಸ್ತುಗಳನ್ನು ದಾನ ಮಾಡಿ!

| Updated By: Ganapathi Sharma

Updated on: Apr 02, 2024 | 6:00 AM

ಸೋಮವತಿ ಅಮಾವಾಸ್ಯೆಯ ದಿನದಂದು ಶಿವ ಮತ್ತು ವಿಷ್ಣುವನ್ನು ಪೂಜಿಸುವ ಸಂಪ್ರದಾಯವಿದೆ. ಈ ದಿನ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ಮೂಲಕ ಅಗತ್ಯ ಇರುವವರಿಗೆ ದಾನ ಮಾಡುವುದರಿಂದ ವ್ಯಕ್ತಿಯು ಎಲ್ಲಾ ರೀತಿಯ ಪಾಪಗಳಿಂದ ಮುಕ್ತಿ ಪಡೆಯುತ್ತಾನೆ ಎಂದು ನಂಬಲಾಗಿದೆ. ಹಾಗಾದರೆ ಸೋಮವತಿ ಅಮಾವಾಸ್ಯೆಯ ದಿನದಂದು ಯಾವ ವಸ್ತುಗಳನ್ನು ದಾನ ಮಾಡಬೇಕು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Somvati Amavasya Daan: ಸೋಮವತಿ ಅಮಾವಾಸ್ಯೆಯಂದು ಈ 5 ವಸ್ತುಗಳನ್ನು ದಾನ ಮಾಡಿ!
ಸಾಂದರ್ಭಿಕ ಚಿತ್ರ
Follow us on

ಹಿಂದೂ ಧರ್ಮದಲ್ಲಿ ಅಮಾವಾಸ್ಯೆ ದಿನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅದರಲ್ಲಿಯೂ ಸೋಮವಾರ ಬರುವ ಅಮಾವಾಸ್ಯೆಯನ್ನು ಸೋಮವತಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಇದು ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಬರುತ್ತದೆ. ಮುಖ್ಯವಾಗಿ ಈ ಉಪವಾಸವನ್ನು ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಆಚರಿಸುತ್ತಾರೆ. ಜೊತೆಗೆ ಈ ದಿನ ದಾನ ಮಾಡುವುದು ಹಿಂದೂ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಅಮಾವಾಸ್ಯೆಯ ದಿನದಂದು ಅಗತ್ಯ ಇರುವವರಿಗೆ ದಾನ ಮಾಡಿದರೆ, ಪೂರ್ವಜರ ಶಾಪ ಅಥವಾ ದೋಷಗಳು ಇದ್ದಲ್ಲಿ ಪರಿಹಾರ ಸಿಗುತ್ತದೆ ಅಲ್ಲದೆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಎಲ್ಲವೂ ನೆಲೆಸಿರುತ್ತದೆ.

ಸೋಮವತಿ ಅಮಾವಾಸ್ಯೆ ವ್ರತವನ್ನು ಧರ್ಮ ಗ್ರಂಥಗಳಲ್ಲಿ ‘ಅಶ್ವತ್ಥ ಪ್ರದಕ್ಷಿಣೆ ವ್ರತ’ ಎಂದೂ ಕರೆಯಲಾಗುತ್ತದೆ. ಅಶ್ವತ್ಥ ಎಂದರೆ ಅರಳಿ ಮರ ಎಂದರ್ಥ. ಭಗವಾನ್ ವಿಷ್ಣು ಮತ್ತು ಶಿವ ಇಬ್ಬರೂ ಅರಳಿ ಮರದಲ್ಲಿ ವಾಸಿಸುತ್ತಾರೆ ಎಂಬ ನಂಬಿಕೆ ಇದೆ. ಆದ್ದರಿಂದ, ಸೋಮವತಿ ಅಮಾವಾಸ್ಯೆಯ ದಿನದಂದು ಶಿವ ಮತ್ತು ವಿಷ್ಣುವನ್ನು ಪೂಜಿಸುವ ಸಂಪ್ರದಾಯವಿದೆ. ಈ ದಿನ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ಮೂಲಕ ಅಗತ್ಯ ಇರುವವರಿಗೆ ದಾನ ಮಾಡುವುದರಿಂದ ವ್ಯಕ್ತಿಯು ಎಲ್ಲಾ ರೀತಿಯ ಪಾಪಗಳಿಂದ ಮುಕ್ತಿ ಪಡೆಯುತ್ತಾನೆ ಎಂದು ನಂಬಲಾಗಿದೆ. ಹಾಗಾದರೆ ಸೋಮವತಿ ಅಮಾವಾಸ್ಯೆಯ ದಿನದಂದು ಯಾವ ವಸ್ತುಗಳನ್ನು ದಾನ ಮಾಡಬೇಕು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಸೋಮವತಿ ಅಮಾವಾಸ್ಯೆಯ ಶುಭ ಸಮಯ

ಈ ವರ್ಷ ಸೋಮವತಿ ಅಮಾವಾಸ್ಯೆಯು ಎ. 8 ರಂದು ಸೋಮವಾರ ಮುಂಜಾನೆ 3.21 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಅದೇ ದಿನ ರಾತ್ರಿ 11.50 ಕ್ಕೆ ಕೊನೆಗೊಳ್ಳುತ್ತದೆ. ಈ ದಿನ, ಪವಿತ್ರ ನದಿಗಳಲ್ಲಿ ಸ್ನಾನ ಮತ್ತು ದಾನ ಮಾಡುವುದಕ್ಕೆ ಶುಭ ಸಮಯ ಎನ್ನಬಹುದು. ಬೆಳಿಗ್ಗೆ 4:32 ರಿಂದ 05:18 ರವರೆಗೆ ಪೂಜಾ ಸಮಯವಿರುತ್ತದೆ.

ಸೋಮವತಿ ಅಮಾವಾಸ್ಯೆಯಂದು ಏನನ್ನು ದಾನ ಮಾಡಬೇಕು?

ಬಟ್ಟೆ ದಾನ

ಮಾನವರಿಗೆ ಋತುಮಾನಕ್ಕೆ ಅನುಗುಣವಾಗಿ ಬಟ್ಟೆಗಳು ಬೇಕಾಗುತ್ತವೆ. ಹಾಗಾಗಿ ಪಿತೃ ದೋಷ ಮತ್ತು ಶಾಪಗಳ ನಿವಾರಣೆಗೆ ಸೋಮವತಿ ಅಮಾವಾಸ್ಯೆಯಂದು ಬಟ್ಟೆಗಳನ್ನು ದಾನ ಮಾಡಿ. ಈ ಬಗ್ಗೆ ಗರುಡ ಪುರಾಣದಲ್ಲಿಯೂ ವಿವರಣೆ ನೀಡಲಾಗಿದೆ. ಇನ್ನು ಧರ್ಮ ಗ್ರಂಥಗಳ ಪ್ರಕಾರ, ಈ ದಿನ ಧೋತಿ ಮತ್ತು ಟವೆಲ್ ದಾನ ಮಾಡುವುದು ತುಂಬಾ ಶ್ರೇಷ್ಠ ಎನ್ನಲಾಗುತ್ತದೆ.

ಬೆಳ್ಳಿ ವಸ್ತುಗಳು

ಪೌರಾಣಿಕ ನಂಬಿಕೆಯ ಪ್ರಕಾರ, ಪೂರ್ವಜರಿಂದ ಬಂದಂತಹ ಶಾಪ ಅಥವಾ ಪಾಪದ ವಿಮೋಚನೆ ಮಾಡಿಕೊಳ್ಳಲು ಬೆಳ್ಳಿಯಿಂದ ಮಾಡಿದ ವಸ್ತುಗಳನ್ನು ದಾನ ಮಾಡಲು ಹೇಳಲಾಗುತ್ತದೆ. ಇದರಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ ಮತ್ತು ಸಂತೋಷ, ಸಮೃದ್ಧಿ ದೇವರ ಆಶೀರ್ವಾದ ಎಲ್ಲವೂ ಪ್ರಾಪ್ತವಾಗುತ್ತದೆ.

ಬಿಳಿ ವಸ್ತುಗಳ ದಾನ

ನೀವು ಸೋಮವತಿ ಅಮಾವಾಸ್ಯೆಯಂದು ಹಾಲು ಮತ್ತು ಅಕ್ಕಿಯಂತಹ ಚಂದ್ರನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬಹುದು. ಇದನ್ನು ಮಾಡುವುದರಿಂದ ಎಲ್ಲಾ ರೀತಿಯ ಪಾಪಗಳಿಂದ ಮುಕ್ತಿ ದೊರೆಯುತ್ತದೆ. ಜೊತೆಗೆ ದೇವರ ಆಶೀರ್ವಾದವು ಸಿಗುತ್ತದೆ. ಮಕ್ಕಳಾಗದ ದಂಪತಿಗಳು ಬಿಳಿ ವಸ್ತುಗಳ ದಾನ ಮಾಡುವುದರಿಂದ ಸಂತಾನ ದೋಷ ಇದ್ದಲ್ಲಿ ನಿವಾರಣೆಯಾಗಿ ವಂಶ ವೃದ್ಧಿಯಾಗುತ್ತದೆ.

ಕಪ್ಪು ಎಳ್ಳಿನ ದಾನ

ಕಪ್ಪು ಎಳ್ಳನ್ನು ದಾನ ಮಾಡುವುದು ಧರ್ಮಗ್ರಂಥಗಳಲ್ಲಿ ಬಹಳ ಮುಖ್ಯ ಮತ್ತು ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಅಮಾವಾಸ್ಯೆಯ ದಿನದಂದು ಸ್ನಾನ ಮಾಡಿದ ನಂತರ, ನಿಮ್ಮ ಪೂರ್ವಜರನ್ನು ಧ್ಯಾನಿಸಿ ಕಪ್ಪು ಎಳ್ಳಿನ ಬೀಜಗಳನ್ನು ದಾನ ಮಾಡಿ. ಅಥವಾ ನೀವು ಇತರ ಯಾವುದೇ ವಸ್ತುಗಳನ್ನು ದಾನ ಮಾಡುವುದಾದರೂ ಕೂಡ ಅವುಗಳ ಜೊತೆಯಲ್ಲಿ ಕಪ್ಪು ಎಳ್ಳಿನ ಬೀಜಗಳನ್ನಿಟ್ಟು ದಾನ ಮಾಡಿ. ಧಾರ್ಮಿಕ ನಂಬಿಕೆಯ ಪ್ರಕಾರ, ಇದನ್ನು ಮಾಡುವುದರಿಂದ ಪೂರ್ವಜರಿಗೆ ಸಂತೋಷ ಸಿಗುತ್ತದೆ ಎನ್ನುವ ನಂಬಿಕೆ ಇದೆ.

ಭೂಮಿ ದಾನ

ವು ಸಮರ್ಥ ಮತ್ತು ಸಮೃದ್ಧರಾಗಿದ್ದರೆ, ಪಿತೃ ದೋಷ ನಿವಾರಣೆ ಮಾಡಿಕೊಳ್ಳಲು ಈ ಅಮಾವಾಸ್ಯೆಯಂದು ನೀವು ಭೂಮಿಯನ್ನು ದಾನ ಮಾಡಬಹುದು. ಧರ್ಮಗ್ರಂಥಗಳಲ್ಲಿ ಭೂಮಿ ದಾನವು ದೊಡ್ಡ ದಾನವೆಂದು ಪರಿಗಣಿಸಲಾಗಿದೆ. ದೊಡ್ಡ ದೊಡ್ಡ ಪಾಪಗಳಿಗೆ ಪ್ರಾಯಶ್ಚಿತ ಮಾಡಿಕೊಳ್ಳಲು ಭೂಮಿಯನ್ನು ದಾನ ಮಾಡಲಾಗುತ್ತದೆ.

ಸೋಮವತಿ ಅಮಾವಾಸ್ಯೆಯಂದು ಪಿಂಡ ದಾನ ಮಾಡಿ

ಹಿಂದೂ ಧರ್ಮದಲ್ಲಿ ಪಿಂಡ ದಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ತಮ್ಮ ಪೂರ್ವಜರಿಗೆ ಪಿಂಡ ದಾನ ಮಾಡದವರು, ಸೋಮವತಿ ಅಮಾವಾಸ್ಯೆಯ ದಿನದಂದು ಮಾಡಬೇಕು. ಅಮಾವಾಸ್ಯೆಯಂದು ಪಿಂಡ ದಾನ ಮಾಡುವುದರಿಂದ ಪಿತೃ ದೋಷದಿಂದ ಮುಕ್ತಿ ಸಿಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ