ನವ ಮದುಮಗಳು ಅಕ್ಕಿ ಸೇರನ್ನು ಒದ್ದು ಗಂಡನ ಮನೆಯೊಳಗೆ ಕಾಲಿಡುವುದು ಏಕೆ? ಈ ಸಂಪ್ರದಾಯದ ಹಿಂದಿನ ಕತೆಯೇನು?

| Updated By: ಸಾಧು ಶ್ರೀನಾಥ್​

Updated on: Jan 24, 2022 | 6:06 AM

ವೈವಾಹಿಕ ಜೀವನದಲ್ಲಿ ಏನೇ ಅಡೆತಡೆ ಬಂದರೂ ತಾಳ್ಮೆಗೆಡದೆ ನಿವಾರಿಸಿ ಕೊಂಡು ಪರಸ್ಪರ ಆಕರ್ಷಣೆಯಿಂದ ಶುದ್ಧ ಮನಸ್ಸಿನ ಉತ್ತಮ ವೈವಾಹಿಕ ಜೀವನ ನಡೆಸಬೇಕು ಎನ್ನುವ ಸಂಕೇತವೆ ಈ ಸೇರು ಒದೆಯಿಸುವುದು ಹಾಗೂ ಮನೆ ತುಂಬಿಸಿಕೊಳ್ಳುವುದರ ಹಿಂದಿನ ಸದುದ್ದೇಶವಾಗಿದೆ

ನವ ಮದುಮಗಳು ಅಕ್ಕಿ ಸೇರನ್ನು ಒದ್ದು ಗಂಡನ ಮನೆಯೊಳಗೆ ಕಾಲಿಡುವುದು ಏಕೆ? ಈ ಸಂಪ್ರದಾಯದ ಹಿಂದಿನ ಕತೆಯೇನು?
ನವ ಮದುಮಗಳು ಅಕ್ಕಿ ಸೇರನ್ನು ಒದ್ದು ಗಂಡನ ಮನೆಯೊಳಗೆ ಕಾಲಿಡುವುದು ಏಕೆ? ಈ ಸಂಪ್ರದಾಯದ ಹಿಂದಿನ ಕತೆಯೇನು?
Follow us on

ಭಾಗ್ಯದ ಲಕ್ಷ್ಮಿ ಬಾರಮ್ಮ ಎಂದು ಸಂಬೋಧಿಸುವ ನವ ವಧು (bride) ಸೇರು ಅಕ್ಕಿ, ಬೆಲ್ಲ ಒದ್ದು ಒಳಗೆ ಕಾಲಿಡುತ್ತಾಳೆ. ಮದುಮಗಳು ಹೀಗೆ ಮನೆ ತುಂಬಿಸಿ ಕೊಳ್ಳುತ್ತಾರೆ ಯಾಕೆ? ಈ ಸಂಪ್ರದಾಯದ ಹಿಂದಿನ ಕತಯೇನು? ಸೇರಲ್ಲಿ ಅಕ್ಕಿ ಹಾಕಿ, ಮೇಲೆ ಬೆಲ್ಲದ ಅಚ್ಚು ಇಟ್ಟು, ಅದನ್ನು ಹೊಸ್ತಿಲ ಮೇಲೆ ಇಟ್ಟು ಯಾವ ಕಾರಣಕ್ಕೆ ನವ ವಧು ಅದನ್ನು ಒದ್ದು ಗೃಹ ಪ್ರವೇಶ ಮಾಡುತ್ತಾಳೆ? ( kick a pot filled with rice) ಈ ಶಾಸ್ತ್ರವನ್ನು ಯಾಕೆ ಈ ರೀತಿಯಾಗಿ ಮಾಡಿದ್ದಾರೆ? ಇದರ ಅರ್ಥವಾದರು ಏನು ಇರಬಹುದು ಎಂದು ಆಲೋಚಿಸಿ ನೋಡಿದಾಗ..

ಸೇರಿಗೆ ಕಾರಕ = ಶನಿ
ಅಕ್ಕಿಗೆ ಕಾರಕ = ಚಂದ್ರ
ಬೆಲ್ಲಕ್ಕೆ ಕಾರಕ = ಗುರು

ಬೆಲ್ಲ ಅಂದ್ರೆ ಮೃತ್ಯುಂಜಯ ನವವಧು ಮನೆಗೆ ಬಂದ ಮೇಲೆ ಯಾವುದೇ ಸಾವು ನೋವು ಸಂಭವಿಸದೆ ಇರಲಿ ಎಂದು ಒಂದು ಕಡೆಯಾದರೆ ಎಲ್ಲರ ಮನಸ್ಸು ಸಿಹಿಯಾಗಿರಲಿ ಎಂಬುದು ಮತ್ತೊಂದು ಭಾವ.

ಚಂದ್ರ + ಗುರು = ಗಜಕೇಸರಿ ಯೋಗ
ಅಂದರೆ ಇವರ ಮನೆಯಲ್ಲಿ ಯಾವಾಗಲೂ ಗಜಕೇಸರಿ ಯೋಗ ತುಂಬಿರಲಿ ಎಂದು ಮದುಮಗಳ ಕಾಲಿನಿಂದ ಸೇರು ಒದೆಯಿಸುವ ಶಾಸ್ತ್ರವಿದೆ.

ನವವಧು = ಶುಕ್ರ
ಸೇರಿಗೆ ಕಾರಕ = ಶನಿ
ಅಕ್ಕಿ = ಚಂದ್ರ
ಬೆಲ್ಲ= ಗುರು

ಒದೆಯುವ ಕಾಲಿನ ಪಾದ = ಶನಿ
ಒದೆಯುವ ಕಾಲಿನ ಬೆರಳು = ಗುರು
ಸೇರು ಅಂದರೆ ಶನಿ = ಮಾವನಿಗೆ ಕಾರಕ

ಸೇರಿನೊಳಗೆ ಇರುವ ಅಕ್ಕಿ, ಬೆಲ್ಲ ಅಂದರೆ = ಚಂದ್ರ, ಗುರು ಅತ್ತೆಗೆ ಹಾಗೂ ಉತ್ತಮ ಬಾಂಧವ್ಯಕ್ಕೆ ಕಾರಕ
ಅತ್ತೆ ಮಾವನೊಂದಿಗೆ ನವವಧು ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು ಎನ್ನುವ ಸಂಕೇತ

ಶನಿ = ಎಂದರೆ ಋಣ, ರೋಗ, ದಾರಿದ್ರ್ಯ
ಗುರು = ಎಂದರೆ ಪರಿಹಾರ ಹಾಗೂ ಅಭಿವೃದ್ಧಿ
ಶುಕ್ರ = ಎಂದರೆ ಲಕ್ಷ್ಮೀ ಹಾಗೂ ಗೃಹ

ಋಣ, ರೋಗ, ದಾರಿದ್ರ್ಯಗಳನ್ನೂ ಪರಿಹಾರ ಎನ್ನುವ ಬೆರಳಿನಿಂದ ಒದ್ದು ಆ ಗೃಹದಲ್ಲಿ ಸಮೃದ್ಧಿ, ಪ್ರೀತಿ, ಉತ್ತಮ ಬಾಂಧವ್ಯ, ಅಭಿವೃದ್ಧಿ ಬೆಳಸಬೇಕು ಎನ್ನುವುದರ ಸಂಕೇತ.
ಶನಿ + ಚಂದ್ರ = ಅತ್ತೆ, ಮಾವ ಹಾಗೂ ಗುರು ಹಿರಿಯರ ಸಲಹೆ ಹಾಗೂ ಆಶೀರ್ವಾದ ಇವು ಉತ್ತಮ ಬಾಂಧವ್ಯಕ್ಕೆ ಅಗತ್ಯ.

ಶನಿ = ಕರ್ಮ
ಗುರು = ಬೆರಳು, ಅಭಿವೃದ್ಧಿ
ಶುಕ್ರ = ವಧು
ಈ ಹೆಣ್ಣು ಮಾಡುವ ಪ್ರತಿ ಕೆಲಸವು ಗಂಡನ ಮನೆಗೆ ಅಭಿವೃದ್ಧಿಯನ್ನು ತರಲಿ ಎಂಬ ಸಂಕೇತ.

ಶುಕ್ರ = ಹೆಣ್ಣು, ವೈವಾಹಿಕ ಜೀವನ
ಶನಿ = ಅಡೆತಡೆ
ಗುರು = ನಿವಾರಣೆ ಹಾಗೂ ತಾಳ್ಮೆ
ಚಂದ್ರ = ಶುದ್ಧ ಮನಸ್ಸು ಹಾಗೂ ಆಕರ್ಷಣೆ

ವೈವಾಹಿಕ ಜೀವನದಲ್ಲಿ ಏನೇ ಅಡೆತಡೆ ಬಂದರೂ ತಾಳ್ಮೆಗೆಡದೆ ನಿವಾರಿಸಿ ಕೊಂಡು ಪರಸ್ಪರ ಆಕರ್ಷಣೆಯಿಂದ ಶುದ್ಧ ಮನಸ್ಸಿನ ಉತ್ತಮ ವೈವಾಹಿಕ ಜೀವನ ನಡೆಸಬೇಕು ಎನ್ನುವ ಸಂಕೇತವೆ ಈ ಸೇರು ಒದೆಯಿಸುವುದು ಹಾಗೂ ಮನೆ ತುಂಬಿಸಿಕೊಳ್ಳುವುದರ ಹಿಂದಿನ ಸದುದ್ದೇಶವಾಗಿದೆ. (ನಿತ್ಯಸತ್ಯ ಸತ್ಸಂಗ್ -ಸಂಗ್ರಹ)