ದೇವಸ್ಥಾನಗಳಿಗೆ ಹೋದಾಗ ದೇವರಿಗೆ ಪ್ರದಕ್ಷಿಣೆ ಹಾಕುವುದು ಸಾಮಾನ್ಯ. ಕೆಲವು ದೇವಸ್ಥಾನಗಳಲ್ಲಿ ಅಂದರೆ ಶಿವನ ದೇವಸ್ಥಾನಗಳಲ್ಲಿ ಬಸವನಿಂದ ಪ್ರದಕ್ಷಿಣೆ ಶುರು ಮಾಡಬೇಕು. ಹಾಗೆಯೇ ಇನ್ನೂ ಕೆಲವು ದೇವಸ್ಥಾನಗಳಲ್ಲಿ ಧ್ವಜಸ್ತಂಭದಿಂದ ಪ್ರದಕ್ಷಿಣೆ ಹಾಕುವುದನ್ನು ಪ್ರಾರಂಭಿಸಬೇಕು. ಧ್ವಜಸ್ತಂಭಕ್ಕೆ ನಮಸ್ಕಾರ ಹಾಕಿ ಎಡಭಾಗದಿಂದ ಪ್ರದಕ್ಷಿಣೆ ಹಾಕಲು ಪ್ರಾರಂಭಿಸಬೇಕು ಎಂದು ಖ್ಯಾತ ಜ್ಯೋತಿಷಿಗಳಾದ ಬಸವರಾಜ ಗುರೂಜಿ ಹೇಳುತ್ತಾರೆ.
ಭಗವಂತನಿಗೆ ಪ್ರದಕ್ಷಿಣೆ ಹಾಕುವುದರಿಂದ ಪಾಪಗಳು ನಾಶವಾಗುತ್ತದೆ ಎನ್ನುವ ನಂಬಿಕೆಯೂ ಇದೆ. ದೇವಸ್ಥಾನದಲ್ಲಿ ಎಡಗಡೆಯಿಂದ ಪ್ರದಕ್ಷಿಣೆ ಹಾಕುವುದರ ಮಹತ್ವವೇನು? ಎಡಗಡೆಯಿಂದ ಪ್ರದಕ್ಷಿಣೆ ಯಾಕೆ ಹಾಕಬೇಕು? ಇದರಿಂದ ಆಗುವ ಲಾಭವೇನು? ಜೊತೆಗೆ ಈ ಪದ್ದತಿಯ ಹಿಂದಿನ ಪೌರಾಣಿಕ ಕಥೆಗಳ ಬಗ್ಗೆ ಬಸವರಾಜ ಗುರೂಜಿಯವರು ಈ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.
ಶಾಸ್ತ್ರಗಳ ಪ್ರಕಾರ ಭಗವಂತನನ್ನು ಭೂಮಿ ಎಂದು ಭಾವಿಸಿ ಎಡಗಡೆಯಿಂದ ಬಲಗಡೆಗೆ ಪ್ರದಕ್ಷಿಣೆ ಹಾಕಬೇಕು. ಇದು ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಒಳ್ಳೆಯದು ವಿಶೇಷವಾಗಿ ನಿಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಯಾವಾಗಲೂ ಪ್ರದಕ್ಷಿಣೆಯನ್ನು ಎಡಭಾಗದಿಂದಲೇ ಪ್ರಾರಂಭಿಸಿ. ದೇವರ ಪ್ರದಕ್ಷಿಣೆಯ ಹೊರತಾಗಿ ಮನೆಯಲ್ಲಿ ದೀಪವನ್ನೂ ಕೂಡ ಹಚ್ಚುವಾಗ ಮೊದಲು ಎಡಗಡೆಯಿಂದ ದೀಪ ಹಚ್ಚಲು ಪ್ರಾರಂಭಿಸಿ ಎಂದು ಬಸವರಾಜ ಗುರೂಜಿ ಸಲಹೆ ನೀಡುತ್ತಾರೆ.
ಮತ್ತಷ್ಟು ಅಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:54 am, Wed, 5 March 25