AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Temple Visit: ದೇವಸ್ಥಾನಗಳಿಗೆ ಹೋಗುವಾಗ ತಲೆಗೆ ಎಣ್ಣೆ ಹಚ್ಚಬಾರದು ಯಾಕೆ? ತಜ್ಞರ ಸಲಹೆ ಇಲ್ಲಿದೆ

ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ್ ಗುರೂಜಿ ದೇವಾಲಯ ಭೇಟಿಯ ಆಚಾರ-ವಿಚಾರಗಳನ್ನು ವಿವರಿಸಿದ್ದಾರೆ. ಸ್ನಾನ ಮಾಡಿದ ನಂತರ ದೇವಾಲಯಕ್ಕೆ ಹೋಗುವ ಮುನ್ನ ತಲೆಗೆ ಎಣ್ಣೆ ಹಚ್ಚುವುದರಿಂದ ಸಂಕಲ್ಪಗಳು ಸಂಪೂರ್ಣವಾಗಿ ಈಡೇರುವುದಿಲ್ಲ ಎಂದು ತಿಳಿಸಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಎಣ್ಣೆ ಹಚ್ಚುವುದು ಸೂಕ್ತ ಎಂದು ತಿಳಿಸಿದ್ದಾರೆ.

Temple Visit: ದೇವಸ್ಥಾನಗಳಿಗೆ ಹೋಗುವಾಗ ತಲೆಗೆ ಎಣ್ಣೆ ಹಚ್ಚಬಾರದು ಯಾಕೆ? ತಜ್ಞರ ಸಲಹೆ ಇಲ್ಲಿದೆ
ತಲೆಗೆ ಎಣ್ಣೆ
ಅಕ್ಷತಾ ವರ್ಕಾಡಿ
|

Updated on: Oct 29, 2025 | 11:25 AM

Share

ದೇವಸ್ಥಾನಗಳಿಗೆ ಹೋಗುವಾಗ ನಮ್ಮಲ್ಲಿ ಹಲವರು ಸ್ನಾನ ಮಾಡಿ, ಮನೆಯಲ್ಲಿ ಪೂಜೆ ಸಲ್ಲಿಸಿ ನಂತರ ದೇವಸ್ಥಾನಕ್ಕೆ ತೆರಳುತ್ತೇವೆ. ಕೆಲವರು ಸ್ನಾನ ಮಾಡಿ ನೇರವಾಗಿ ದೇವಸ್ಥಾನಕ್ಕೆ ಹೋಗಿ ಅಲ್ಲಿ ಜಪ ಮಾಡುವುದು ಅಥವಾ ಪ್ರಾರ್ಥನೆ ಸಲ್ಲಿಸುವುದು ಕೂಡ ರೂಢಿಯಲ್ಲಿದೆ. “ಯದ್ಭಾವಂ ತದ್ಭವತಿ” ಎಂಬ ನಾಣ್ಣುಡಿಯಂತೆ, ಭಗವಂತನ ಕೃಪೆಯು ನಮ್ಮ ಭಾವನೆಗಳಿಗೆ ಅನುಗುಣವಾಗಿ ಇರುತ್ತದೆ. ಆದಾಗ್ಯೂ, ಕೆಲವು ವಿಷಯಗಳಲ್ಲಿ ಜಾಗೃತಿ ವಹಿಸುವುದು ಅತ್ಯವಶ್ಯಕ. ಡಾ. ಬಸವರಾಜ್ ಗುರೂಜಿ ಅವರು ದೇವಾಲಯಗಳಿಗೆ ಭೇಟಿ ನೀಡುವಾಗ ಗಮನಿಸಬೇಕಾದ ಕೆಲವು ಪ್ರಮುಖ ಅಂಶಗಳ ಕುರಿತು ಮಾರ್ಗದರ್ಶನ ನೀಡಿದ್ದಾರೆ.

ದೇವಸ್ಥಾನಕ್ಕೆ ಹೊರಡುವ ಮುನ್ನ ಸಂಪೂರ್ಣ ತಯಾರಿಯನ್ನು ಮಾಡಿಕೊಳ್ಳುತ್ತೇವೆ. ಶುದ್ಧ ಮನಸ್ಸಿನಿಂದ, ಮಡಿ ಬಟ್ಟೆಗಳನ್ನು ಧರಿಸಿ, ಹಣ್ಣು, ಹೂವು, ದೀಪಕ್ಕೆ ಎಣ್ಣೆ ಮುಂತಾದ ಪೂಜಾ ಸಾಮಗ್ರಿಗಳನ್ನು ಒಯ್ಯುತ್ತೇವೆ. ಇವೆಲ್ಲವೂ ಭಕ್ತಿಯ ಭಾಗ. ಆದರೆ, ಸ್ನಾನ ಮಾಡಿದ ನಂತರ, ದೇವಸ್ಥಾನಕ್ಕೆ ಹೋಗುವ ಮುಂಚೆ ತಲೆಗೆ ಯಾವುದೇ ರೀತಿಯ ಎಣ್ಣೆಯನ್ನು ಹಚ್ಚುವುದನ್ನು ಗುರೂಜಿ ನಿಷಿದ್ಧವೆಂದು ಪರಿಗಣಿಸಿದ್ದಾರೆ. ಇದು ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಅನ್ವಯಿಸುತ್ತದೆ. ಹೇರ್ ಆಯಿಲ್, ಕೊಬ್ಬರಿ ಎಣ್ಣೆ, ಹರಳೆಣ್ಣೆ ಹೀಗೆ ಯಾವುದೇ ರೀತಿಯ ತಲೆಗೆ ಹಚ್ಚುವ ಎಣ್ಣೆಯನ್ನು ಸ್ನಾನ ಮಾಡಿದ ನಂತರ ದೇವಸ್ಥಾನಕ್ಕೆ ಹೋಗುವ ಮುನ್ನ ಹಚ್ಚಬಾರದು.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಹಳೆಯ ಬಟ್ಟೆಗಳನ್ನು ನೆಲ ಒರೆಸಲು ಬಳಸುತ್ತಿದ್ದೀರಾ? ಈ ಸಮಸ್ಯೆ ತಪ್ಪಿದ್ದಲ್ಲ!

ಈ ರೀತಿ ಎಣ್ಣೆ ಹಚ್ಚಿ ದೇವಸ್ಥಾನಕ್ಕೆ ಹೋಗುವುದರಿಂದ ಭಕ್ತರು ಇಟ್ಟುಕೊಂಡ ಸಂಕಲ್ಪಗಳು ಅಥವಾ ಬಯಕೆಗಳು ಸಂಪೂರ್ಣವಾಗಿ ಈಡೇರುವುದಿಲ್ಲ ಎಂದು ಗುರೂಜಿ ಸ್ಪಷ್ಟಪಡಿಸಿದ್ದಾರೆ. ತಲೆಗೆ ಎಣ್ಣೆ ಹಚ್ಚಿಕೊಂಡು ದೇವಸ್ಥಾನಕ್ಕೆ ಹೋಗುವುದು ಅಷ್ಟು ಶ್ರೇಯಸ್ಕರವಲ್ಲ. ದೇವಸ್ಥಾನಕ್ಕೆ ಹೋಗಿ ಬಂದ ನಂತರ ತಲೆಗೆ ಎಣ್ಣೆ ಹಚ್ಚಿಕೊಳ್ಳುವುದು ಹೆಚ್ಚು ಸೂಕ್ತ.

ನಮ್ಮ ನಂಬಿಕೆಗಳಿಗೆ ಅನುಗುಣವಾಗಿ, ಸನಾತನ ಧರ್ಮದ ಆಚರಣೆಗಳನ್ನು ಪಾಲಿಸುವುದು ಮುಖ್ಯ. “ಸನಾತನೋ ನಿತ್ಯ ನೂತನ” ಎಂಬ ತತ್ವದಂತೆ, ನಮ್ಮ ಸನಾತನ ಸಂಸ್ಕೃತಿಯು ಯಾವಾಗಲೂ ಪ್ರಸ್ತುತ ಮತ್ತು ನೂತನವಾಗಿರುತ್ತದೆ. ಈ ಆಚಾರ-ವಿಚಾರಗಳನ್ನು ಪಾಲಿಸುವುದರಿಂದ ಸನ್ಮಂಗಳಗಳು ದೊರೆಯುತ್ತವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ