Lunar Eclipse 2023: ಮೇ 5ರಂದು ಸಂಭವಿಸಲಿದೆ ಚಂದ್ರಗ್ರಹಣ: ಈ ಮೂರು ರಾಶಿಚಕ್ರದವರಿಗೆ ಒಲಿಯಲಿದೆ ಅದೃಷ್ಟ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 26, 2023 | 10:23 AM

2023ರ ಮೊದಲ ಚಂದ್ರಗ್ರಹಣ ಮೇ 5ರಂದು ಬುದ್ಧ ಪೂರ್ಣಿಮೆಯಂದು ಸಂಭವಿಸಲಿದೆ. ಈ ದಿನ ಗ್ರಹಗಳ ಬದಲಾವಣೆಗಳು 12 ರಾಶಿ ಚಕ್ರಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಕೆಲವು ರಾಶಿಗಳಿಗೆ ಋಣಾತ್ಮಕ ಅಥವಾ ಮಧ್ಯಮ ಪರಿಣಾಮವನ್ನು ಬೀರಿದರೆ ಇನ್ನೂ ಕೆಲವು ರಾಶಿ ಚಕ್ರದವರ ಮೇಲೆ ಈ ಚಂದ್ರಗ್ರಹಣ ಧನಾತ್ಮಕ ಪರಿಣಾಮವನ್ನ ಬೀರಲಿದೆ.

Lunar Eclipse 2023: ಮೇ 5ರಂದು ಸಂಭವಿಸಲಿದೆ ಚಂದ್ರಗ್ರಹಣ: ಈ ಮೂರು ರಾಶಿಚಕ್ರದವರಿಗೆ ಒಲಿಯಲಿದೆ ಅದೃಷ್ಟ
ಸಾಂದರ್ಭಿಕ ಚಿತ್ರ
Follow us on

ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಗ್ರಹಣವನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಗ್ರಹಣದ ಸಮಯದಲ್ಲಿ ಎಲ್ಲೆಡೆ ಅಸುರ ಶಕ್ತಿಗಳ ಪ್ರಭಾವವು ಹೆಚ್ಚಾಗುತ್ತದೆ, ಎಲ್ಲೆಡೆ ನಕಾರಾತ್ಮಕತೆ ಇರುತ್ತದೆ ಎಂದು ಹೇಳಲಾಗುತ್ತದೆ. ಈ ನಕರಾತ್ಮಕತೆಯ ಪರಿಣಾಮವು ಗ್ರಹಣದ ಅವಧಿ ಪ್ರಾರಂಭವಾಗುವ ಮೊದಲೇ ಉಂಟಾಗುತ್ತದೆ. ಇದನ್ನು ಸೂತಕದ ಕಾಲ ಎಂದು ಕರೆಯುತ್ತಾರೆ. ಸೂತಕ ಉಂಟಾದ ಕೂಡಲೇ ದೇವಾಲಯಗಳಲ್ಲಿ ಪೂಜೆಯನ್ನು ನಿಲ್ಲಿಸಲಾಗುತ್ತದೆ ಮತ್ತು ಗ್ರಹಣ ಸಮಯ ಮುಗಿಯುವವರೆಗೆ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಈ ಸಮಯದಲ್ಲಿ ಧಾರ್ಮಿಕ ಕಾರ್ಯಗಳು, ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ. ವರ್ಷಂಪ್ರತಿ ಚಂದ್ರಗ್ರಹಣ ಮತ್ತು ಸೂರ್ಯಗ್ರಹಣ ನಭೋಮಂಡಲದಲ್ಲಿ ಸಂಭವಿಸುತ್ತವೆ. 2023ರ ಮೊದಲ ಚಂದ್ರಗ್ರಹಣವು ಮೇ 5ರ ಬುದ್ಧ ಪೂರ್ಣಿಮೆಯ ದಿನದಂದು ಸಂಭವಿಸಲಿದೆ.

ಈ ವರ್ಷದ ಮೊದಲನೆಯ ಚಂದ್ರಗ್ರಹಣವು ಪೆನೆಂಬ್ರಾಲ್ (ಭಾಗಶಃ) ಚಂದ್ರಗ್ರಹಣವಾಗಿರುತ್ತದೆ. ಭೂಮಿಯ ನೆರಳು ಅಡ್ಡವಾಗಿ ಚಂದ್ರನ ಮೇಲೆ ಬಿದ್ದಾಗ ಈ ಪೆನೆಂಬ್ರಾಲ್ (ಭಾಗಶಃ) ಚಂದ್ರಗ್ರಹಣ ಉಂಟಾಗುತ್ತದೆ. ಮೇ 5ರ ಬುದ್ಧ ಪೂರ್ಣಿಮೆಯ ದಿನದಂದು ಚಂದ್ರಗ್ರಹಣವು ರಾತ್ರಿ 8.45 ಕ್ಕೆ ಪ್ರಾರಂಭವಾಗಲಿದೆ ಮತ್ತು ಮಧ್ಯರಾತ್ರಿ 1.00 ಗಂಟೆಗೆ ಕೊನೆಗೊಳ್ಳಲಿದೆ. ಆದರೆ ಈ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಗ್ರಹಣದ ಮೊದಲು ಅಶುದ್ಧ ಅವಧಿಯು ಆರಂಭವಾಗಲಿದೆ. ಆದರೆ ಈ ಗ್ರಹಣ ಭಾರತದಲ್ಲಿ ಗೋಚರಿಸದ ಕಾರಣ ಅಶುದ್ಧ ಅವಧಿಯನ್ನು ಪರಿಗಣಿಸಲಾಗುವುದಿಲ್ಲ. ಈ ಚಂದ್ರಗ್ರಹಣದ ಪರಿಣಾಮ 12 ರಾಶಿ ಚಕ್ರಗಳ ಮೇಲೂ ಬೀರಲಿದೆ. ಕೆಲವು ರಾಶಿಗಳಿಗೆ ಋಣಾತ್ಮಕ ಅಥವಾ ಮಧ್ಯಮ ಪರಿಣಾಮವನ್ನು ಬೀರಿದರೆ ಇನ್ನೂ ಕೆಲವು ರಾಶಿ ಚಕ್ರದವರ ಮೇಲೆ ಈ ಚಂದ್ರಗ್ರಣ ಧನಾತ್ಮಕ ಪರಿಣಾಮವನ್ನ ಬೀರಲಿದೆ.

ಇದನ್ನೂ ಓದಿ:Lunar Eclipse 2023: ಚಂದ್ರ ಗ್ರಹಣ ಯಾವಾಗ? ಯಾವ ಸಮಯದಲ್ಲಿ ಆರಂಭವಾಗಲಿದೆ? ಭಾರತದಲ್ಲಿ ಗೋಚರಿಸುತ್ತದೆಯೇ? ಇಲ್ಲಿದೆ ಮಾಹಿತಿ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ವರ್ಷದ ಮೊದಲ ಚಂದ್ರಗ್ರಹಣವು ಈ ಮೂರು ರಾಶಿಚಕ್ರದವರಿಗೆ ಧನಾತ್ಮಕ ಪರಿಣಾಮವನ್ನು ಬೀರಲಿದೆ. ಅವುಗಳೆಂದರೆ,

ಮಿಥುನ: 2023ರ ಮೊದಲ ಚಂದ್ರಗ್ರಹಣವು ಮಿಥುನ ರಾಶಿಯವರ ಅದೃಷ್ಟವನ್ನು ಉಜ್ವಲಗೊಳಿಸುತ್ತದೆ. ಉದ್ಯೋಗವನ್ನು ಹುಡುಕುತ್ತಿರುವವರು ಅಥವಾ ಉದ್ಯೋಗವನ್ನು ಬದಲಾಯಿಸಲು ಬಯಸುತ್ತಿರುವವರಿಗೆ ಧನಾತ್ಮಕ ಫಲಿತಾಂಶ ಲಭಿಸಲಿದೆ. ಈಗಾಗಲೇ ಉದ್ಯೋಗಲ್ಲಿರುವವರು ತಮ್ಮ ಉದ್ಯೋಗದಲ್ಲಿ ಬಡ್ತಿ ಮತ್ತು ಸಂಬಳದಲ್ಲಿ ಹೆಚ್ಚಳವನ್ನು ಪಡೆಯುವ ಸಾಧ್ಯತೆಯಿದೆ. ವ್ಯಾಪಾರದಲ್ಲಿರುವವರು ಉತ್ತಮ ಲಾಭವನ್ನು ಗಳಿಸುವ ಸಾಧ್ಯತೆ ಇದೆ. ಇದು ಸ್ವಾಭಾವಿಕವಾಗಿ ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ.ನೀವು ವಿದೇಶಕ್ಕೆ ಪ್ರಯಾಣಿಸಲು ಅವಕಾಶವನ್ನು ಪಡೆಯುವ ಸಾಧ್ಯತೆ ಇದೆ.

ಸಿಂಹ ರಾಶಿ: ಸಿಂಹ ರಾಶಿ ಚಿಹ್ನೆಯವರಿಗೆ ಈ ಬಾರಿಯ ಚಂದ್ರಗ್ರಹಣವು ಸಕಾರಾತ್ಮಕ ಫಲಿತಾಂಶವನ್ನು ನೀಡುತ್ತದೆ. ನೀವು ಹೊಸ ಯೋಜನೆಗಳನ್ನು ಪ್ರಾರಂಭಿಸಲು ಬಯಸಿದರೆ, ಅದು ಯಶಸ್ವಿಯಾಗುವ ಸಾಧ್ಯತೆ ಇದೆ. ಆದ್ದರಿಂದ ನಿಮ್ಮ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರಲು ಇದು ಉತ್ತಮ ಸಮಯ. ನೀವು ಆಸ್ತಿ ವಿಷಯ ಅಥವಾ ಇನ್ನಾವುದೇ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೊಕದ್ದಮೆಯನ್ನು ಎದುರಿಸುತ್ತಿದ್ದರೆ, ನ್ಯಾಯಾಲಯದ ತೀರ್ಪುಗಳು ನಿಮ್ಮ ಕಡೆ ಆಗುವ ಸಾಧ್ಯತೆ ಇದೆ. ಸರ್ಕಾರಿ ಉದ್ಯೋಗ ಅಥವಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಯಶಸ್ಸನ್ನು ಪಡೆಯಲು ಹೆಚ್ಚು ಶ್ರಮಿಸಬೇಕು.

ಮಕರ: ಚಂದ್ರಗ್ರಹಣವು ನಿಮ್ಮ ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೊಸ ವಾಹನ ಅಥವಾ ಹೊಸ ಮನೆಯನ್ನು ಖರೀದಿಸಲು ಇದು ಉತ್ತಮ ಸಮಯ. ಹೊಸ ವ್ಯವಹಾರಗಳನ್ನು ಪ್ರಾರಂಭಿಸಲು ಇದು ಉತ್ತಮ ಸಮಯವಾಗಿದ್ದು, ಆ ಕಾರ್ಯ ನಿಮಗೆ ಯಶಸ್ಸು ಮತ್ತು ಸಂಪತ್ತನ್ನು ತಂದುಕೊಡುತ್ತದೆ. ವೃತ್ತಿಪರರಿಗೆ ಅವರ ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸುವ ಪ್ರಚಾರವನ್ನು ಪಡೆಯುವ ಅವಕಾಶಗಳಿವೆ.

ಮತ್ತಷ್ಟು ಆಧ್ಯಾತ್ಮ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:21 am, Wed, 26 April 23