AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pooja Room Vasthu: ದೇವರ ಕೋಣೆಯಲ್ಲಿ ಯಾವಾಗಲೂ ನೀರಿನಿಂದ ತುಂಬಿರುವ ಚೆಂಬು ಇರಲೇಬೇಕು , ಯಾಕೆ ಗೊತ್ತಾ?

ಮನೆಯಲ್ಲಿ ನಿತ್ಯವೂ ಭಗವಂತನ ಪೂರ್ಣಾನುಗ್ರಹವಿರಲು ಒಂದು ಸಣ್ಣ ತಂತ್ರವಿದೆ. ದೇವರ ಮನೆಯ ಈಶಾನ್ಯ ದಿಕ್ಕಿನಲ್ಲಿ ತಾಮ್ರದ ಚೆಂಬಿನಲ್ಲಿ ಶುದ್ಧ ನೀರಿಡಿ. ಇದರಿಂದ ಸುಖ, ಶಾಂತಿ, ನೆಮ್ಮದಿ, ಯಶಸ್ಸು ಲಭಿಸಿ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಮೂರು ದಿನಕ್ಕೊಮ್ಮೆ ನೀರನ್ನು ಬದಲಿಸಿ, ಅದೃಷ್ಟ ಮತ್ತು ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಿ.

Pooja Room Vasthu: ದೇವರ ಕೋಣೆಯಲ್ಲಿ ಯಾವಾಗಲೂ ನೀರಿನಿಂದ ತುಂಬಿರುವ ಚೆಂಬು ಇರಲೇಬೇಕು , ಯಾಕೆ ಗೊತ್ತಾ?
ತಾಮ್ರದ ಚೆಂಬು
ಅಕ್ಷತಾ ವರ್ಕಾಡಿ
|

Updated on:Jan 04, 2026 | 10:08 AM

Share

ದೇವರ ಕೋಣೆಯಲ್ಲಿ ಪುಟ್ಟ ತಾಮ್ರದ ಚೆಂಬನ್ನು ಇಡುವುದರಿಂದ ಆಗುವ ಲಾಭಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಈಶಾನ್ಯ ದಿಕ್ಕಿನಲ್ಲಿ ಒಂದು ಪುಟ್ಟ ತಾಮ್ರದ ಚೆಂಬನ್ನು ಇಡಬೇಕು. ಇದನ್ನು ಶುದ್ಧ ನೀರಿನಿಂದ ತುಂಬಿಸಬೇಕು ಮತ್ತು ಯಾವುದೇ ಕಾರಣಕ್ಕೂ ತಟ್ಟೆಯಿಂದ ಮುಚ್ಚಬಾರದು. ಈ ಚೆಂಬನ್ನು ದೇವರ ಮನೆಯ ಈಶಾನ್ಯ ಭಾಗದಲ್ಲಿ ಇರಿಸಿ. ಪ್ರತಿ ಮೂರು ದಿನಕ್ಕೊಮ್ಮೆ ಈ ನೀರನ್ನು ಬದಲಾಯಿಸಬೇಕು. ಬದಲಿಸಿದ ನೀರನ್ನು ಮನೆಯಾದ್ಯಂತ ಪ್ರೋಕ್ಷಿಸಬಹುದು, ಸ್ನಾನಕ್ಕೆ ಬಳಸಬಹುದು ಅಥವಾ ತೀರ್ಥದ ರೂಪದಲ್ಲಿ ಸೇವಿಸಬಹುದು. ಈ ಅಭ್ಯಾಸದಿಂದ ಮನೆಗೆ ಅದೃಷ್ಟ, ಯಶಸ್ಸು ಮತ್ತು ಒಳಿತಾಗುತ್ತದೆ. ನಕಾರಾತ್ಮಕ ಶಕ್ತಿಗಳು ದೂರವಾಗಿ ಇಷ್ಟಾರ್ಥಗಳು ಈಡೇರುತ್ತವೆ.

ಹೆಚ್ಚುವರಿ ಶುಭವನ್ನು ಪಡೆಯಲು, ನೀರಿಗೆ ಸ್ವಲ್ಪ ಬೆಲ್ಲ ಅಥವಾ ತುಳಸಿ ಎಲೆಯನ್ನು ಸೇರಿಸಬಹುದು. ಇದು ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ಸಹಾಯ ಮಾಡುತ್ತದೆ. ಪೂಜೆಯಲ್ಲಿ ನೀರಿಗೆ ಪ್ರಥಮ ಆದ್ಯತೆ ಇದೆ. ಹಣ್ಣುಗಳು, ಸಿಹಿ ತಿಂಡಿಗಳು ಅಥವಾ ಪಂಚಾಮೃತ ಇತ್ಯಾದಿಗಳನ್ನು ದೇವರಿಗೆ ಅರ್ಪಿಸಿದರೂ, ನೀರು ಇಲ್ಲದೆ ಯಾವುದೇ ಪೂಜೆ ಅಪೂರ್ಣ. ಮನೆಯ ಅತಿಥಿಗಳಿಗೆ ನೀರು ನೀಡದಿದ್ದರೆ ಹೇಗೆ ಬೇಸರವಾಗುತ್ತದೆಯೋ, ಹಾಗೆಯೇ ಭಗವಂತನನ್ನು ಅತಿಥಿಯೆಂದೇ ಭಾವಿಸಿ ನೀರಿಡಬೇಕು. ರಾತ್ರಿ ಹೊತ್ತು ಭಗವಂತನು ಮನೆಗೆ ಆವಾಹನೆಯಾದಾಗ, ನೀರು ಕುಡಿದು ತೃಪ್ತನಾಗಿ ಹೋಗುತ್ತಾನೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ಪ್ರಪಂಚದ ಏಕೈಕ ಜಲಾಧಿವಾಸ ಗಣಪ; ಗುಡ್ಡಟ್ಟು ವಿನಾಯಕ ದೇವಸ್ಥಾನದ ಇಂಟರೆಸ್ಟಿಂಗ್​ ಸಂಗತಿ ಇಲ್ಲಿದೆ

ಇದಲ್ಲದೆ, ಉಂಗುರದ ರವಿ ಬೆರಳಿನಿಂದ ನೀರಿನ ಮೇಲೆ ಓಂ ಎಂದು ಬರೆಯುವುದರಿಂದ ನೀರು ಮತ್ತಷ್ಟು ಶುದ್ಧವಾಗುತ್ತದೆ. ಪೂಜೆಯ ಮೊದಲು “ಅಪವಿತ್ರೋ ಪವಿತ್ರೋ ವಾ ಸರ್ವಾವಸ್ಥಾಂಗತೋಪಿವಾ ಯಸ್ಮರೇತ್ ಪುಂಡರೀಕಾಕ್ಷಂ ಸಬಾಹ್ಯಾಭ್ಯಂತರಃ ಶುಚಿಃ” ಎಂಬ ಮಂತ್ರವನ್ನು ಹೇಳಿ ನೀರನ್ನು ಪ್ರೋಕ್ಷಿಸಲಾಗುತ್ತದೆ. ನೀರಿನಲ್ಲಿ ಓಂ ಬರೆಯುವುದು ಇದೇ ರೀತಿಯ ಶುದ್ಧತೆಯನ್ನು ನೀಡುತ್ತದೆ. ವರುಣ ದೇವನು ಈ ಅಭ್ಯಾಸದಿಂದ ಕೃಪೆಯನ್ನು ತೋರುತ್ತಾನೆ. ನೀರು ಜೀವನಕ್ಕೆ ಅತ್ಯಗತ್ಯ. ದೇಹದಲ್ಲಿ ನೀರಿನ ಅಂಶ ಹೆಚ್ಚಾದಾಗ ತಾಳ್ಮೆ, ಸಹನೆ ಮತ್ತು ಶುದ್ಧತೆ ಹೆಚ್ಚುತ್ತದೆ. ಇದು ವರುಣ ದೇವನ ಆಶೀರ್ವಾದಕ್ಕೆ ಸಮಾನ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:08 am, Sun, 4 January 26