
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಆಹಾರ ಸೇವನೆಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ವಿವರಿಸಿದ್ದಾರೆ. ಪ್ರಾಚೀನ ಕಾಲದಿಂದಲೂ ಅನ್ನವನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಊಟವನ್ನು ಒಂದು ಪೂಜೆಯಂತೆ ಪರಿಗಣಿಸಿ, ತಾಳ್ಮೆ ಮತ್ತು ಭಕ್ತಿಯಿಂದ ಸೇವಿಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಂಪ್ರದಾಯಗಳು ಮರೆಯಾಗುತ್ತಿವೆ. ಹೆಚ್ಚಿನ ಜನರು ನಿಂತುಕೊಂಡು ಅಥವಾ ಆತುರದಲ್ಲಿ ಊಟ ಮಾಡುತ್ತಾರೆ ಎಂದು ಗುರೂಜಿ ವಿವರಿಸಿದ್ದಾರೆ.
ಗುರೂಜಿಯವರು ಅನ್ನವನ್ನು ಪರಬ್ರಹ್ಮದ ಸ್ವರೂಪವೆಂದು ಪರಿಗಣಿಸಿ, ಗೌರವದಿಂದ ಸ್ವೀಕರಿಸಬೇಕು ಎಂದು ಹೇಳಿದ್ದಾರೆ. ಊಟ ಮಾಡುವಾಗ ಮಾತನಾಡುವುದು, ಫೋನ್ ಬಳಸುವುದು, ಅಥವಾ ಬೇರೆ ಯಾವುದೇ ಕೆಲಸಗಳಲ್ಲಿ ತೊಡಗುವುದು ಸರಿಯಲ್ಲ. ಆಹಾರದ ಕಡೆಗೆ ಸಂಪೂರ್ಣ ಗಮನವಿರಬೇಕು. “ಅನ್ನಪೂರ್ಣಾಯೇ ನಮಃ” ಎಂಬ ಶ್ಲೋಕದ ಮಹತ್ವ ಮತ್ತು ಹರಿರ್ದಾತ ಹರಿರ್ಭೋಕ್ತ ಹರಿರನ್ನಂ ಪ್ರಜಾಪತಯೇ ಎಂಬ ಶ್ಲೋಕದ ಮೂಲಕ ಆಹಾರದ ಪವಿತ್ರತೆಯನ್ನು ಇಲ್ಲಿ ಒತ್ತಿ ಹೇಳಲಾಗಿದೆ.
ಇದನ್ನೂ ಓದಿ: ಶಾಸ್ತ್ರಗಳ ಪ್ರಕಾರ ಪ್ರಾಣಿಗಳಿಗೆ ಆಹಾರ ನೀಡುವುದರಿಂದ ಸಿಗುತ್ತೆ ಅಪಾರ ಪ್ರಯೋಜನ
ರಾತ್ರಿಯ ಊಟದಲ್ಲಿ ಮೊಸರು ಮತ್ತು ಎಳ್ಳಿನ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದಲ್ಲ. ಎಡಗೈಯಿಂದ ತಟ್ಟೆಯನ್ನು ಹಿಡಿಯುವುದನ್ನು ತಪ್ಪಿಸಬೇಕು ಎಂದು ಹೇಳಿದ್ದಾರೆ. ಸಾಧ್ಯವಾದಷ್ಟು ಪೂರ್ವಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿ ಕುಳಿತು ಆಹಾರ ಸೇವಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ