AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hindu Devotion: ದೇವಸ್ಥಾನಕ್ಕೆ ಯಾವ ಹಣ್ಣು ತೆಗೆದುಕೊಂಡು ಹೋಗುವುದು ಶುಭ?

ಹಿಂದೂ ಸಂಪ್ರದಾಯದಲ್ಲಿ ದೇವರಿಗೆ ಹಣ್ಣುಗಳನ್ನು ಅರ್ಪಿಸುವುದು ಸಾಮಾನ್ಯ. ಆದರೆ, ಯಾವ ಹಣ್ಣನ್ನು ಅರ್ಪಿಸಿದರೆ ಏನು ಫಲ ಸಿಗುತ್ತದೆ ಎಂಬುದು ಹಲವರಿಗೆ ತಿಳಿದಿಲ್ಲ. ಬಾಳೆಹಣ್ಣು ಸ್ಥಗಿತಗೊಂಡ ಕೆಲಸಗಳನ್ನು ಪೂರ್ಣಗೊಳಿಸಿದರೆ, ತೆಂಗಿನಕಾಯಿ ಯೋಜನೆಗಳಿಗೆ ಯಶಸ್ಸು ನೀಡುತ್ತದೆ. ಸೇಬು ರೋಗಗಳನ್ನು ನಿವಾರಿಸಿ ದಾರಿದ್ರ್ಯವನ್ನು ದೂರಮಾಡುತ್ತದೆ ಎಂದು ನಂಬಲಾಗಿದೆ.

Hindu Devotion: ದೇವಸ್ಥಾನಕ್ಕೆ ಯಾವ ಹಣ್ಣು ತೆಗೆದುಕೊಂಡು ಹೋಗುವುದು ಶುಭ?
ಹಣ್ಣು
ಅಕ್ಷತಾ ವರ್ಕಾಡಿ
|

Updated on: Jan 17, 2026 | 10:27 AM

Share

ಹಿಂದೂ ಧರ್ಮದಲ್ಲಿ ದೇವಸ್ಥಾನಗಳಿಗೆ ತೆರಳಿದಾಗ, ಗುರುಗಳನ್ನು, ಪುಟ್ಟ ಮಕ್ಕಳನ್ನು, ಬಂಧುಗಳನ್ನು, ವೃದ್ಧರನ್ನು ಅಥವಾ ಅನಾರೋಗ್ಯ ಪೀಡಿತರನ್ನು ನೋಡಲು ಹೋದಾಗ ಕೈಯಲ್ಲಿ ಹಣ್ಣು ಅಥವಾ ಇತರ ಆಹಾರ ಪದಾರ್ಥಗಳನ್ನು ಕೊಂಡೊಯ್ಯುವ ಸಂಪ್ರದಾಯವಿದೆ. ಇದು ನಮ್ಮ ಸಂಸ್ಕೃತಿಯ ಪರಂಪರೆಯಾಗಿದೆ. ದೇವಸ್ಥಾನಗಳಿಗೆ ಭೇಟಿ ನೀಡಿದಾಗ, ನಿಮ್ಮ ಇಷ್ಟ ದೈವರು ಅಥವಾ ಕುಲದೈವರೇ ಆಗಿರಲಿ, ಅಲ್ಲಿ ಭಕ್ತಿ ಮತ್ತು ಭಾವನೆ ಪ್ರಮುಖವಾಗಿದೆ. ದೇವರು ಸರ್ವಾಂತರಯಾಮಿ, ಸರ್ವವ್ಯಾಪಿ ಮತ್ತು ಸರ್ವಶಕ್ತನಾಗಿದ್ದಾನೆ. ಆದರೆ, ನಿರ್ದಿಷ್ಟ ಹಣ್ಣುಗಳನ್ನು ದೇವರಿಗೆ ಅರ್ಪಿಸುವುದರಿಂದ ನಿರ್ದಿಷ್ಟ ಫಲಗಳು ದೊರೆಯುತ್ತವೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

ದೇವಸ್ಥಾನಕ್ಕೆ ಬಾಳೆಹಣ್ಣು, ತೆಂಗಿನಕಾಯಿ ಮತ್ತು ಇತರ ಹಣ್ಣುಗಳನ್ನು ತೆಗೆದುಕೊಂಡು ಹೋಗುವುದು ಸಾಮಾನ್ಯ. ಈ ಹಣ್ಣುಗಳ ಅರ್ಪಣೆಯಿಂದ ದೊರೆಯುವ ಫಲಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ಬಾಳೆಹಣ್ಣು:

ಬಾಳೆಹಣ್ಣನ್ನು ದೇವರಿಗೆ ಅರ್ಪಿಸುವುದರಿಂದ ದೀರ್ಘಕಾಲದಿಂದ ಬಾಕಿ ಉಳಿದಿರುವ ಮತ್ತು ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಕಾರ್ಯಗಳಲ್ಲಿ ಆಸಕ್ತಿ ಮೂಡುತ್ತದೆ. ಬಾಳೆಹಣ್ಣು ಗುರುಗಳಿಷ್ಟವಾದ ಹಣ್ಣು ಎಂದು ಸಹ ಹೇಳಲಾಗುತ್ತದೆ.

ತೆಂಗಿನಕಾಯಿ:

ತೆಂಗಿನಕಾಯಿಗೆ ಹಲವು ವ್ಯಾಖ್ಯಾನಗಳಿವೆ. ಇದನ್ನು ನಮ್ಮ ಅಹಂ ಅನ್ನು ಭಗವಂತನಿಗೆ ಅರ್ಪಿಸುವುದರ ಸಂಕೇತವೆಂದು ಪರಿಗಣಿಸಲಾಗುತ್ತದೆ. ತೆಂಗಿನಕಾಯಿ ಕಲ್ಪವೃಕ್ಷವಿದ್ದಂತೆ. ಇದನ್ನು ಅರ್ಪಿಸುವುದರಿಂದ ಹೊಸ ಯೋಜನೆಗಳಿಗೆ ಸ್ಪಷ್ಟ ಆಲೋಚನೆಗಳು ದೊರೆಯುತ್ತವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಶುಭವಾಗುತ್ತದೆ, ವೃತ್ತಿಯಲ್ಲಿ ಪ್ರಗತಿ ಕಂಡುಬರುತ್ತದೆ. ಅಲ್ಲದೆ, ಅಧಿಕಾರಿಗಳೊಂದಿಗಿನ ಸಂಬಂಧಗಳು ಉತ್ತಮಗೊಳ್ಳುತ್ತವೆ ಮತ್ತು ನಿಮ್ಮ ಯೋಜನೆಗಳಿಗೆ ಮನ್ನಣೆ ಸಿಗುತ್ತದೆ.

ಸೇಬು:

ಸೇಬನ್ನು ದೇವರಿಗೆ ಅರ್ಪಿಸುವುದರಿಂದ ದೇಹದ ರೋಗಗಳು ನಿವಾರಣೆಯಾಗಿ ಆರೋಗ್ಯ ವೃದ್ಧಿಸುತ್ತದೆ. ರೋಗಗಳಿಂದ ಮುಕ್ತಿ ಸಿಗುತ್ತದೆ. ಅಲ್ಲದೆ, ಇದು ದಾರಿದ್ರ್ಯ ನಿರ್ಮೂಲನೆಗೂ ಸಹಕಾರಿಯಾಗಿದೆ. ಸಾಲ ಬಾಕಿ ಇರುವ ಹಣ ವಸೂಲಾಗಲು ಸಹ ಸಹಾಯ ಮಾಡುತ್ತದೆ.

ದ್ರಾಕ್ಷಿ:

ಹಸಿ ದ್ರಾಕ್ಷಿ, ಒಣ ದ್ರಾಕ್ಷಿ, ಕಪ್ಪು ದ್ರಾಕ್ಷಿ ಹೀಗೆ ಯಾವುದೇ ವಿಧದ ದ್ರಾಕ್ಷಿಯನ್ನು ಅರ್ಪಿಸುವುದರಿಂದ ಸುಖ, ಸಂತೋಷ, ನೆಮ್ಮದಿ ಮತ್ತು ಮಾನಸಿಕ ತೃಪ್ತಿ ದೊರೆಯುತ್ತದೆ. ಉತ್ತಮ ಆಲೋಚನೆಗಳು ಮನಸ್ಸಿನಲ್ಲಿ ಮೂಡುತ್ತವೆ.

ಸಪೋಟ (ಚಿಕ್ಕು):

ಸಪೋಟ ಹಣ್ಣನ್ನು ದೇವರಿಗೆ ಅರ್ಪಿಸುವುದರಿಂದ ಶೀಘ್ರ ವಿವಾಹ ಯೋಗ ಕೂಡಿಬರುತ್ತದೆ. ಶತ್ರುಗಳು ದಮನಗೊಳ್ಳುತ್ತಾರೆ ಮತ್ತು ಸಂಬಂಧಗಳಲ್ಲಿ ಸ್ಥಿರತೆ ಉಂಟಾಗುತ್ತದೆ. ಉತ್ತಮ ಸಂಬಂಧಗಳು ಗಟ್ಟಿಯಾಗುತ್ತವೆ.

ಮಾವಿನ ಹಣ್ಣು:

ಇದು ಕಾಲೋಚಿತ ಹಣ್ಣಾದರೂ, ಈಗ ಎಲ್ಲಾ ಕಾಲದಲ್ಲೂ ಲಭ್ಯ. ಮಾವಿನ ಹಣ್ಣನ್ನು ದೇವರಿಗೆ ಅರ್ಪಿಸುವುದರಿಂದ ಗೃಹ ನಿರ್ಮಾಣ ಯೋಗ, ಮನೆ ಅಥವಾ ನಿವೇಶನ ಖರೀದಿಸುವ ಯೋಗ ಕೂಡಿಬರುತ್ತದೆ. ಸಾಲ ಬಾದೆಯಿಂದ ಮುಕ್ತಿ ದೊರೆತು ಇಎಂಐಗಳ ತೊಂದರೆ ಕಡಿಮೆಯಾಗಿ ಒಂದೇ ಬಾರಿಗೆ ಸಾಲ ತೀರಿಸುವ ಸಾಧ್ಯತೆ ಹೆಚ್ಚುತ್ತದೆ. ಬಾಕಿಗಳು ಸಹ ವಸೂಲಿಯಾಗುತ್ತವೆ.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ನೇರಳೆ ಹಣ್ಣು:

ನೇರಳೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಆಯುರ್ವೇದ ಹೇಳುತ್ತದೆ. ಜ್ಯೋತಿಷ್ಯದ ಪ್ರಕಾರ, ಇದನ್ನು ಅರ್ಪಿಸುವುದರಿಂದ ಶನಿ ದೇವ ಸಂತುಷ್ಟನಾಗುತ್ತಾನೆ ಮತ್ತು ಅವನ ಕೃಪೆ ದೊರೆಯುತ್ತದೆ. ಸಾಡೇಸಾತಿ, ಪಂಚಮ ಶನಿ, ಅರ್ಧಾಷ್ಟಮ ಶನಿ ಮುಂತಾದ ಶನಿ ದೋಷಗಳು ಕಡಿಮೆಯಾಗುತ್ತವೆ. ಕೋರ್ಟ್ ಕೇಸ್‌ಗಳಿಂದ ಮುಕ್ತಿ ದೊರೆಯುತ್ತದೆ, ದಾರಿದ್ರ್ಯ ನಾಶವಾಗಿ ರೋಗಗಳು ಕಡಿಮೆಯಾಗುತ್ತವೆ.

ಡ್ರೈ ಫ್ರೂಟ್ಸ್:

ಒಣ ಹಣ್ಣುಗಳನ್ನು ದೇವರಿಗೆ ಪೂರ್ಣವಾಗಿ ಅರ್ಪಿಸುವುದರಿಂದ ದೇವರ ದೃಷ್ಟಿ ನಿಮ್ಮ ಕಡೆಗೆ ತಿರುಗುತ್ತದೆ ಎಂದು ಹೇಳಲಾಗುತ್ತದೆ. ಒಣ ಹಣ್ಣುಗಳನ್ನು ನೀಡುವುದರಿಂದ ಬಾಂಧವ್ಯಗಳು ಗಟ್ಟಿಯಾಗುತ್ತವೆ ಎಂದು ಸಹ ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ