ಮಹಾಭಾರತದಲ್ಲಿ ನೀವು ಮಹಾನ್ ಬಿಲ್ವಿದ್ಯೆಗಾರ, ಶಬ್ಧವೇದಿ ವಿದ್ಯೆಯ ಪರಿಣಿತ, ಮಹಾ ಪರಾಕ್ರಮಿ ಏಕಲವ್ಯನ ಕುರಿತು ಕೇಳಿರಬಹುದು. ಆದರೆ ಆತನ ಕುರಿತ ಕಥೆಯಲ್ಲಿ ಹಲವಾರು ಕಟ್ಟು ಕಥೆಗಳು ಸೇರಿಕೊಂಡು ಜನರು ಅದನ್ನೇ ನಂಬುವಂತಾಗಿದೆ. ಈ ವಿಷಯವಾಗಿ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷರಾಗಿದ್ದ ಅರ್ಥಶಾಸ್ತ್ರಜ್ಞ ಮತ್ತು ಸಂಸ್ಕೃತ ವಿದ್ವಾಂಸ ದಿ. ಬಿಬೇಕ್ ಡೆಬ್ರಾಯ್ ತಮ್ಮ ಹಳೆಯ ಸಂದರ್ಶವೊಂದರಲ್ಲಿ ನೀಡಿರುವ ಮಾಹಿತಿಯನ್ನು ನಿವೃತ್ತ ಐಪಿಎಸ್ ಅಧಿಕಾರಿ ಎಂ. ನಾಗೇಶ್ವರ ರಾವ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪ್ರತಿಯೊಬ್ಬರೂ ಇದನ್ನು ತಿಳಿದುಕೊಳ್ಳಬೇಕಾಗಿದೆ, ಏಕಲವ್ಯನು ಶೂದ್ರ ಕುಲಕ್ಕೆ ಸೇರಿದವರನಾಗಿದ್ದರಿಂದ ದ್ರೋಣಾಚಾರ್ಯರು ಅವನಿಗೆ ಬಿಲ್ವದ್ಯೆ ಕಲಿಸಲು ನಿರಾಕರಿಸಿದರು ಎನ್ನುವ ಮಾತಿದೆ ಆದರೆ ಇದು ಸತ್ಯವೇ? ಈ ರೀತಿಯ ಜಾತಿ ದಬ್ಬಾಳಿಕೆಯ ನಿರೂಪಣೆ ಸರಿಯೇ? ಯಾವ ಕಾರಣಕ್ಕಾಗಿ ದ್ರೋಣಾಚಾರ್ಯರು ಬಿಲ್ವಿದ್ಯೆ ಕಲಿಸಲು ನಿರಾಕರಿಸಿದ್ರಾ? ನಿಜವಾದ ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಏಕಲವ್ಯನು ಭಗವಾನ್ ಕೃಷ್ಣನ ಪಿತ್ರಿವ್ಯ (ಚಿಕ್ಕಪ್ಪ) ನ ಮಗ ಎಂದು ಹೇಳಲಾಗುತ್ತದೆ. ಏಕಲವ್ಯನ ತಂದೆ ದೇವಶ್ರವನು ಕುಂತಿಯ ಸಹೋದರ ಹಾಗಾಗಿ ಏಕಲವ್ಯ ಅವಳ ಸೋದರಳಿಯ. ಮಹಾಭಾರತದ ಕೆಲವೆಡೆ ಏಕಲವ್ಯನನ್ನು ನಿಷಾದ ಪಂಗಡದ ರಾಜನ ದತ್ತು ಪುತ್ರನೆಂದು ಉಲ್ಲೇಖಿಸಲಾಗಿದೆ. ಕಂಸನ ಮರಣದ ನಂತರ ಜರಾಸಂಧನ ದಾಳಿಯಿಂದಾಗಿ ಏಕಲವ್ಯನು ತನ್ನ ಕುಟುಂಬದಿಂದ ಬೇರ್ಪಟ್ಟು ನಿಷಾದ ರಾಜಕುಮಾರನಾಗಿ ಬೆಳೆದನು ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಏಕಲವ್ಯನ ಕಥೆಯನ್ನು ಹಲವಾರು ಮಂದಿ ತಮಗೆ ಬೇಕಾದಂತೆ ತಿರುಚಿ ಬೇರೆಯವರ ಮನಸ್ಸಿನಲ್ಲಿ ತಪ್ಪು ಅಭಿಪ್ರಾಯಗಳ ಹುಟ್ಟಿಗೆ ಕಾರಣವಾಗಿದ್ದಾರೆ.
ಎಲ್ಲ ತಿಳಿದವರಂತೆ ಮಾತನಾಡುವ ಎಡಪಂಥಿಯರು, ಏಕಲವ್ಯನು ಕುಲವೆಂಬ ಕೊಡಲಿಗೆ ಸಿಕ್ಕಿ ದ್ರೋಣಾಚಾರ್ಯರಿಂದ ಬಿಲ್ವಿದ್ಯೆ ಕಲಿಯುವುದರಲ್ಲಿ ವಂಚಿತನಾದ ಎಂದು ತಮ್ಮ ವಾದವನ್ನು ಬಹು ಬಣ್ಣಗಳಿಂದ ವರ್ಣಿಸುತ್ತಾರೆ. ಆದರೆ ಇವರ ಸುಳ್ಳಿಗೆ ವಿದ್ವಾಂಸರಾದ ಬಿಬೇಕ್ ಡೆಬ್ರಾಯ್ ನೀಡಿರುವ ಸ್ಪಷ್ಟನೆಯನ್ನು ಎಲ್ಲರೂ ತಿಳಿಯುವುದು ಅವಶ್ಯವಾಗಿದೆ. ಅವರು ವಿಡಿಯೋ ದಲ್ಲಿ ಹೇಳಿರುವ ಪ್ರಕಾರ, ಏಕಲವ್ಯ ದ್ರೋಣಾಚಾರ್ಯರ ಬಳಿ ಬಂದು ತನಗೂ ಬಿಲ್ವಿದ್ಯೆ ಹೇಳಿಕೊಡಿ ಎಂದು ಕೇಳಿಕೊಂಡಾಗ ಅವರು ನಿರಾಕರಿಸಿದ್ದರು. ಆದರೆ ಏಕಲವ್ಯನಿಗೆ ಬಿಲ್ವಿದ್ಯೆ ಕಲಿಸಲು ನಿರಾಕರಿಸುವುದರ ಹಿಂದೆ ಬೇರೇಯೇ ಕಾರಣವಿದೆ. ದ್ರೋಣಾಚಾರ್ಯರು ಭೀಷ್ಮನಿಗೆ ನಿಮ್ಮ ರಾಜ್ಯದಲ್ಲಿರುವ ರಾಜಕುಮಾರರಿಗೆ ಮಾತ್ರ ವಿದ್ಯೆಯನ್ನು ಕಲಿಸುವುದಾಗಿ ಭರವಸೆಯನ್ನು ನೀಡಿದ್ದರು. ಕೊಟ್ಟ ಮಾತಿಗೆ ತಪ್ಪಬಾರದು ಎನ್ನುವ ಕಾರಣಕ್ಕಾಗಿ ಮಾತ್ರ ಆತನಿಗೆ ವಿದ್ಯೆ ಕಲಿಸುವುದಕ್ಕೆ ನಿರಾಕರಿಸುತ್ತಾರೆ.
Late Bibek Debroy elaborates and contextualises with important nuance the story of Ekalavya in the Mahabharata, and how the caste oppression narrative is disingenuous. Watch
Untimely death of @bibekdebroy is indeed a great loss to Hindu society. pic.twitter.com/2J61HgMlw4
— M. Nageswara Rao IPS (Retired) (@MNageswarRaoIPS) November 10, 2024
ಏಕಲವ್ಯ ದ್ರೋಣಾಚಾರ್ಯರು ತನ್ನ ಗುರುಗಳು ಎಂದುಕೊಂಡು ಬಿಲ್ವಿದ್ಯೆ ಕಲಿತ ವಿಚಾರ ಕೃಷ್ಣನಿಗೆ ತಿಳಿದು ದ್ರೋಣಾಚಾರ್ಯರ ಬಳಿ ಬಂದು “ನೀವು ಮಾಡಿದ್ದು ದ್ರೋಹ ಅಲ್ಲವೇ? ಭೀಷ್ಮನ ರಾಜ್ಯದಲ್ಲಿರುವ ರಾಜಕುಮಾರರಿಗೆ ಮಾತ್ರ ವಿದ್ಯೆ ಹೇಳಿಕೊಡುತ್ತೇನೆ ಎಂದು ಭಾಷೆ ಕೊಟ್ಟು ಅದನ್ನು ತಪ್ಪಿದ್ದು ಸರಿಯೇ?” ಎಂದು ಪ್ರಶ್ನಿಸುತ್ತಾನೆ. ಆಗ ಅವರು ತಾನು ಹೇಳಿಕೊಟ್ಟಿಲ್ಲ ಆತನೇ ಕಲಿತಿದ್ದಾನೆ ಎಂದಾಗ, ನೀವು ಕಲಿತ ವಿದ್ಯೆಗೆ ಗುರುದಕ್ಷಿಣೆಯನ್ನು ಕೇಳಿ ಎಂದು ಕೃಷ್ಣ ಹೇಳುತ್ತಾನೆ. ಹಾಗಾಗಿ ದ್ರೋಣಾಚಾರ್ಯರು ಹೆಬ್ಬೆರಳನ್ನು ನನಗೆ ಗುರುದಕ್ಷಿಣೆಯಾಗಿ ನೀಡಬೇಕೆಂದು ಕೇಳುತ್ತಾರೆ. ಗುರುವಿನ ಮೇಲಿನ ಅಪಾರ ಗೌರವದಿಂದ ಏಕಲವ್ಯನು ತನ್ನ ಹೆಬ್ಬೆರಳನ್ನು ಕತ್ತರಿಸಿ ಗುರುದಕ್ಷಿಣೆಯಾಗಿ ನೀಡುತ್ತಾನೆ. ಇದು ಮುಂದೆ ಧರ್ಮವನ್ನು ಉಳಿಸಿ ಸತ್ಯದ ವಿಜಯಕ್ಕೆ ಬುನಾದಿಯಾಗಿತ್ತೇ ಹೊರತಾಗಿ ಕುಲಗಳ ನಡುವಿನ ತಾರತಮ್ಯವಾಗಿರಲಿಲ್ಲ ಎಂದು ಅವರು ಹೇಳುತ್ತಾರೆ. ಅದಲ್ಲದೆ ಅವರು, ಕಥೆಯನ್ನು ತಿರುಚಿ ನಿಮಗೆ ಬೇಕಾದಂತೆ ಮಾಡಿಕೊಳ್ಳಬೇಡಿ ನಿಮಗೆ ತಿಳಿಯದ ಕಥೆಗೆ ನೀವು ಲೇಖಕರಾಗಬೇಡಿ ಎಂದಿದ್ದಾರೆ.
ಇದನ್ನೂ ಓದಿ: ಅದ್ಭುತ ಜಾಹೀರಾತಿನ ಮೂಲಕ ರಾಮಾಯಣದ ನೈಜ ಸ್ಥಳಗಳನ್ನು ತೋರಿಸಿದ ಶ್ರೀಲಂಕಾದ ಏರ್‌ಲೈನ್ಸ್
ಪ್ರಧಾನ ಮಂತ್ರಿ ಮೋದಿ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ, ಅರ್ಥಶಾಸ್ತ್ರಜ್ಞ ಮತ್ತು ಸಂಸ್ಕೃತ ವಿದ್ವಾಂಸರಾಗಿದ್ದವರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಬಿಬೇಕ್ ಡೆಬ್ರಾಯ್ ಅವರು ಈ ಹಿಂದೆ ಪುಣೆಯ ಗೋಖಲೆ ಇನ್‌ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಅಂಡ್ ಎಕನಾಮಿಕ್ಸ್ (GIPE) ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ಡಾ. ಬಿಬೇಕ್ ಡೆಬ್ರಾಯ್ ಒಬ್ಬ ಅದ್ಭುತ ವಿದ್ವಾಂಸರಾಗಿದ್ದರು, ಅರ್ಥಶಾಸ್ತ್ರ, ಇತಿಹಾಸ, ಸಂಸ್ಕೃತಿ, ರಾಜಕೀಯ, ಆಧ್ಯಾತ್ಮಿಕತೆ ಮತ್ತು ಇತರ ವೈವಿಧ್ಯಮಯ ಕ್ಷೇತ್ರಗಳಲ್ಲಿ ಚೆನ್ನಾಗಿ ಪಾರಂಗತರಾಗಿದ್ದರು. ಆದರೆ ಅವರ ಅಕಾಲಿಕ ಮರಣ ಹಿಂದೂ ಸಮಾಜಕ್ಕೆ ನಿಜವಾಗಿಯೂ ದೊಡ್ಡ ನಷ್ಟವಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:14 am, Tue, 12 November 24