ಈ ಮೂರು ರಾಶಿಯ ಜನ ಬರೀ ‘ಮಧು‘ರ ಮಾತುಗಳನ್ನೇ ಆಡುತ್ತಾರೆ, ಎಚ್ಚರಾ! ನಿಮ್ಮ ರಾಶಿ ಯಾವುದು?

| Updated By: shruti hegde

Updated on: Oct 13, 2021 | 9:38 AM

ಈ ರಾಶಿಯ ಜನ ಎಂದಿಗೂ ತಮ್ಮ ಮನದ ಭಾವನೆಗಳನ್ನು ನಿಮಗೆ ಅರ್ಥ ಮಾಡಿಕೊಳ್ಳಲು ಬಿಡುವುದಿಲ್ಲ. ಅಂತರ್ಗತವಾಗಿ, ಮೇಲ್ನೋಟಕ್ಕಷ್ಟೇ ಇವರು ಮಧುರವಾಗಿರುತ್ತಾರೆ.

ಈ ಮೂರು ರಾಶಿಯ ಜನ ಬರೀ ‘ಮಧು‘ರ ಮಾತುಗಳನ್ನೇ ಆಡುತ್ತಾರೆ, ಎಚ್ಚರಾ! ನಿಮ್ಮ ರಾಶಿ ಯಾವುದು?
ಈ 3 ರಾಶಿಯ ಜನ ಭಾವನಾತ್ಮಕ ಜೀವಿಗಳು! ಯಾರವರು ತಿಳಿಯಿರಿ
Follow us on

ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯ ಜನ ಇತರೆ ರಾಶಿಯ ಜನರ ಜೊತೆ ಅತ್ಯಂತ ಮಧುರವಾಗಿ ಸಿಹಿ ಜೇನಿನಲ್ಲಿ ಅದ್ದಿ ತೀಡಿದಂತೆ ಮಾತನಾಡುತ್ತಾರೆ. ಈ ರಾಶಿಯ ಜನ ಎಂದಿಗೂ ತಮ್ಮ ಮನದ ಭಾವನೆಗಳನ್ನು ನಿಮಗೆ ಅರ್ಥ ಮಾಡಿಕೊಳ್ಳಲು ಬಿಡುವುದಿಲ್ಲ. ಅಂತರ್ಗತವಾಗಿ, ಮೇಲ್ನೋಟಕ್ಕಷ್ಟೇ ಇವರು ಮಧುರವಾಗಿರುತ್ತಾರೆ. ಆದರೆ ಆಂತರ್ಯದಲ್ಲಿ ಬೂಟಾಟಿಕೆಯ ಜನ ಆಗಿರುತ್ತಾರೆ.

ಒಂದು ಸಾಧಾರಣವಾದ ಮಾತು – ಹಾಯ್, ಆಮ್ ವೆರಿ ಸಾರಿ, ಕೆಲಸದಲ್ಲಿ ಬ್ಯುಸಿಯಾಗಿಬಿಟ್ಟಿದ್ದೆ ಅಂದುಬಿಡುತ್ತಾರೆ. ಇದರಿಂದ ನೀವು ಅವರ ಬಗ್ಗೆ ಎಷ್ಟೇ ಬೇಸರಗೊಂಡಿದ್ದರೂ ಅವರೆಡೆಗಿನ ಕೋಪತಾಪ ಕ್ಷಣಾರ್ಧದಲ್ಲಿ ಮಂಜಿನಂತೆ ಕರಗಿಬಿಡುತ್ತದೆ. ನಿಮಗೂ ಇಂತಹ ಅನುಭವಗಳು ಆಗಿವೆಯಾ? ಜ್ಯೋತಿಷ್ಯದ ಪ್ರಕಾರ ಅಂತರ್ಗತವಾಗಿ, ಮೇಲ್ನೋಟಕ್ಕೆ ಯಾರು ಈ ಮಧುರಭಾಷಿಗಳು? ಅವರ ರಾಶಿ ಯಾವುದು? ತಿಳಿದುಕೊಳ್ಳೋಣ ಬನ್ನೀ.

ಮೀನ ರಾಶಿ Pisces: ಮೀನ ರಾಶಿಯ ಜನ ಉನ್ನತ ಶ್ರೇಣಿಯವರಾಗಿರುತ್ತಾರೆ. ತಮ್ಮ ಮಸ್ತಿಷ್ಕದಲ್ಲಿ ಏನಿದೆ ಎಂಬುದರ ಮೇಲೆ ಹಿಡಿತ ಸಾಧಿಸಿರುತ್ತಾರೆ. ತಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಆಸ್ಪದವನ್ನೇ ನೀಡುವುದಿಲ್ಲ. ಸದಾ ಮೋಸ ಮಾಡುವುದು ಬಗ್ಗೆಯೇ ಆಲೋಚಿಸುತ್ತಿರುತ್ತಾರೆ. ಅವರ ತಮ್ಮ ಕೃತ್ರಿಮ ಲೋಕದಲ್ಲಿ ನಿಮ್ಮನ್ನು ಸೆಳೆದುಕೊಂಡುಹೋಗುತ್ತಾರೆ. ಹೆಚ್ಚಾಗಿ ನಿಮಗೆ ಮೋಸ ಮಾಡುವುದಕ್ಕೆ ಹೊಂಚು ಹಾಕುತ್ತಿರುತ್ತಾರೆ. ಆದರೆ ಅದು ನಿಮ್ಮ ಅರಿವಿಗೆ ಬರುವುದೇ ಇಲ್ಲ.

ಆಕಾಶಕ್ಕೆ ಏಣು ಹಾಕುವ ಮಾನ ಮನಃಶಾಸ್ತ್ರಜ್ಞರು:
ಇಂತಹ ಮೀನ ರಾಶಿಯವರ ಎದುರು ಯಾರಿಗಾದರೂ ತಮ್ಮ ಬುದ್ಧಿಮತ್ತೆಯನ್ನು ಪ್ರಕಟಿಸಬೇಕು ಅಂತಾದರೆ ಅವಕಾಶವನ್ನೇ ನೀಡುವುದಿಲ್ಲ. ಕಣ್ಣುಮುಚ್ಚಿಕೊಂಡು ಮಧುರಭಾಷಿಗಳಾದ ಈ ಮೀನ ರಾಶಿಯವರ ಹಿಂದೆ ಹೋಗುತ್ತೀರಿ.

ವೃಶ್ಚಿಕ ರಾಶಿ Scorpio: ವೃಶ್ಚಿಕ ರಾಶಿಯ ಜನ ಯಾವಾಗಲೂ ಚಾಲಾಕಿ ಆಗಿರುತ್ತಾರೆ. ಗುಂಪಿನಲ್ಲಿದ್ದಾಗ ತುಂಬಾ ಪ್ರಾಮಾಣಿಕ ಜನ ಎಂಬಂತೆ ವರ್ತಿಸುತ್ತಾರೆ. ಆದರೆ ಆಂತರ್ಯದಲ್ಲಿ ಮೋಸಗಾರರರಾಗಿರುತ್ತಾರೆ. ಇಂತಹವರು ನಿಮ್ಮ ಜೊತೆ ವ್ಯವಹರಿಸುವಾಗ ಅತ್ಯಂತ ಆಪ್ತರಂತೆ ಸಿಹಿಸಿಹಿ ಮಾತುಗಳನ್ನಾಡುತ್ತಾರೆ. ಅದು ನಿಮಗೂ ಪ್ರಿಯವೆನಿಸುತ್ತದೆ. ಆದರೆ ಅವಶ್ಯಕತೆ ಬಿದ್ದಾಗ ಕೈಯೆತ್ತಿಬಿಡುತ್ತಾರೆ. ಬೆನ್ನಿಗೆ ಚೂರಿ ಇರಿಯುತ್ತಾರೆ.

ಕನ್ಯಾ ರಾಶಿ Virgo: ಕನ್ಯಾ ರಾಶಿಯವರು ಸಹ ಚೆನ್ನಾಗಿ ಕೈಕೊಡುವುದರಲ್ಲಿ ಕರತಲಾಮಲಕವಾಗಿರುತ್ತಾರೆ. ಜಾದೂ ರೀತಿಯಲ್ಲಿ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸಿಬಿಡುತ್ತಾರೆ. ಯಾವುದಕ್ಕೂ ನಿಮ್ಮ ಬಳಿ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ ಜನ ಇಂತಹವರಿಗೆ ಬೀಳುತ್ತಾರೆ.

ನೀವು ಜೀವನದಲ್ಲಿ ಇಂತಹ ಕನ್ಯಾ ರಾಶಿಯವರ ಇರುವುದೇ ಆದರೆ ಇದೆಲ್ಲ ನಿಮ್ಮ ಅನುಭವಕ್ಕೆ ಬರುತ್ತದೆ. ಆದರೂ ಕನ್ಯಾ ರಾಶಿಯವರ ಜೊತೆ ವಿಶ್ವಾಸವಿಡುತ್ತೀರಿ