AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Garuda Purana: ಈ 5 ಕೆಲಸ ಮಾಡಿದರೆ ಜೀವನದಲ್ಲಿ ಕಷ್ಟದಿಂದ ಮುಕ್ತಿ ಸಿಗುತ್ತದೆ; ಪೀಡೆಗಳು ದೂರವಾಗಿ ಕಲ್ಯಾಣವಾಗುತ್ತದೆ!

ನಮ್ಮ ಮನದಲ್ಲಿನ ವಿಚಾರಗಳನ್ನು ಶುದ್ಧವಾಗಿಟ್ಟುಕೊಳ್ಳಲು ಮತ್ತು ಪರಮಾತ್ಮನೊಂದಿಗೆ ಮಿಳಿತಗೊಳ್ಳಲು ನಿಯಮಿತವಾಗಿ ಧ್ಯಾನ ಮಾಡುವ ಜರೂರತ್ತು ಇರುತ್ತದೆ. ಪರಿವಾರದಲ್ಲಿ ಸುಖ, ಶಾಂತಿ ನೆಮ್ಮದಿ ಕಾಪಾಡಿಕೊಳ್ಳಲು ಪ್ರಾಮಾಣಿಕತೆ ಮತ್ತು ಪರಿಶ್ರಮದಿಂದ ಜೀವನಾಧಾರಕ್ಕೆ ಹಣ ಗಳಿಸಬೇಕು. ಇದರಲ್ಲೇ ಎಲ್ರ ಕಲ್ಯಾಣವೂ ಆಡಗಿದೆ.

Garuda Purana: ಈ 5 ಕೆಲಸ ಮಾಡಿದರೆ ಜೀವನದಲ್ಲಿ ಕಷ್ಟದಿಂದ ಮುಕ್ತಿ ಸಿಗುತ್ತದೆ; ಪೀಡೆಗಳು ದೂರವಾಗಿ ಕಲ್ಯಾಣವಾಗುತ್ತದೆ!
ಈ ಐದು ಕೆಲಸ ಮಾಡಿದರೆ ಜೀವನದಲ್ಲಿ ಕಷ್ಟದಿಂದ ಮುಕ್ತಿ ಸಿಗುತ್ತದೆ; ಪೀಡೆಗಳು ದೂರವಾಗಿ ಕಲ್ಯಾಣವಾಗುತ್ತದೆ!
TV9 Web
| Edited By: |

Updated on: Oct 14, 2021 | 9:32 AM

Share

ಗರುಡ ಪುರಾಣದಲ್ಲಿ ಕೆಲವು ಕೆಲಸಗಳ ಬಗ್ಗೆ ತಿಳಿಯಹೇಳಲಾಗಿದ್ದು, ಜನ ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಕಷ್ಟಗಳಿಂದ ಮುಕ್ತಿ ಸಿಗುತ್ತದೆ; ಜೊತೆಗೆ ಏಳೇಳು ಜನುಮದ ಪೀಡೆಗಳು ದೂರವಾಗಿ ಕಲ್ಯಾಣವಾಗುತ್ತದೆ! ಹಾಗಾದರೆ ಆ ಐದು ಕೆಸಲ ಕಾರ್ಯಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನೀ, ಅವುಗಳನ್ನು ತಪ್ಪದೇ ಜೀವನದಲ್ಲಿ ಅಳವಡಿಸಿಕೊಳ್ಳಿ.

ಜೀವನ ಅಂದರೆ ಅದು ಸುಖ ದುಃಖಗಳ ಸಮ್ಮಿಲನವಾಗಿರುತ್ತದೆ. ಆದರೆ ಧರ್ಮಶಾಸ್ತ್ರವನ್ನು ಅನುಸರಿಸುವುದೇ ಆದರೆ ಜೀವನದಲ್ಲಿ ಕಷ್ಟಗಳನ್ನು ದೂರ ಮಾಡಿಕೊಂಡು ಆನಂದಮಯಗೊಳಿಸಬಹುದು. ಒಳ್ಳೆಯ ಕರ್ಮಗಳನ್ನು ಮಾಡಿದರೆ ಜೀವನ ಉತ್ತಮವಾಗಿರುತ್ತದೆ; ಅದೇ ಕೆಟ್ಟ ಕರ್ಮಗಳಲ್ಲಿ ತೊಡಗಿಸಿಕೊಂಡರೆ ಜೀವನ ದುಃಖಮಯವಾಗಿರುತ್ತದೆ ಮತ್ತು ಸಮಸ್ಯೆಗಳಲ್ಲಿ ಮುಳುಗಿಬಿಡುತ್ತದೆ.

ಗರುಡ ಪುರಾಣದಲ್ಲಿ ವ್ಯಕ್ತಿಯ ಕರ್ಮಗಳನ್ನು ಅನುಸರಿಸಿ ಸಿಗುವ ಫಲಗಳ ಬಗ್ಗೆ ತಿಳಿಯಹೇಳಲಾಗಿದೆ. ಜನ ತಮ್ಮ ಕರ್ಮಗಳ ಅನುಸಾರ ಜೀವಿತಾವಧಿಯನ್ನು ಅನುಭವಿಸುತ್ತಾರೆ. ಮೃತ್ಯುವಿನ ಬಳಿಕ ಮತ್ತು ಪುನರ್ಜನ್ಮದ ವರೆಗೂ ಎಲ್ಲವನ್ನೂ ಇಂಚಿಂಚೂ ಹೇಳಲಾಗಿದೆ. ಹಾಗಾದರೆ ನಮ್ಮ ಜೀವಿತಾವಧಿಯ ಕರ್ಮಗಳ ಬಗ್ಗೆ ತಿಳಿಯೋಣ ಬನ್ನೀ.

ಪ್ರತಿ ದಿನ 5 ಜೀವಿಗಳಿಗೆ ಊಟ ಹಾಕಿ: ಭೋಜನ ಮಾಡುವಾಗ ಪ್ರತಿ ದಿನ ಮೊದಲ ತುತ್ತನ್ನು ಹಸುವಿಗೆ ಎತ್ತಿಡಿ. ಕೊನೆಯ ತುತ್ತನ್ನು ನಾಯಿಗೆ ಎತ್ತಿಡಿ. ಇದರ ಹೊರತಾಗಿ ಪಕ್ಷಿಗಳಿಗೆ ಧವಸ ಧಾನ್ಯ ಕಾಳು ಹಾಕಿ. ಇರುವೆಗಳಿಗೆ ಸಕ್ಕರೆ ಹಾಕಿ. ಮೀನುಗಳು ಸಿಗುವಂತಿದ್ದರೆ ಚಿಕ್ಕ ಚಿಕ್ಕ ಹಿಟ್ಟಿನ ಉಂಡೆಗಳನ್ನು ಮಾಡಿ ಹಾಕಿ. ಹೀಗೆ ಎಲ್ಲ ಜೀವಿಗಳಿಗೂ ಉಣಬಡಿಸಲು ಸಾಧ್ಯವಾಗದಿದ್ದಲ್ಲಿ ಒಬ್ಬ ವ್ಯಕ್ತಿಗೆ ಊಟ ಹಾಕಿ.

ಅನ್ನದಾನ ಮಾಡುತ್ತಿರಿ: ಅನ್ನದಾನ ಮಹಾದಾನ ಎಂವುದು ಎಲ್ಲರಿಗೂ ತಿಳಿದೇ ಇದೆ. ಬಡವರು ಮತ್ತು ಅಗತ್ಯವಿರುವವರಿಗೆ ಅನ್ನ ಕೊಡುವುದರಿಂದ ಜೀವನ ಸುಧಾರಿಸುವುಷ್ಟೇ ಅಲ್ಲ; ಅವರ ಏಳೇಳು ಜನ್ಮಗಳ ಪೀಡೆಗಳೂ ನಿವಾರಣೆಯಾಗುತ್ತವೆ. ಇದರೊಟ್ಟಿಗೆ ಸಂಸಾರದ ಮೇಲೆ ಬೀಳುವ ಕಷ್ಟಗಳ ನಿವಾರಣೆಯೂ ಆಗುತ್ತದೆ.

ಧ್ಯಾನ ಮಾಡುತ್ತಿರಿ: ನಮ್ಮ ಮನದಲ್ಲಿನ ವಿಚಾರಗಳನ್ನು ಶುದ್ಧವಾಗಿಟ್ಟುಕೊಳ್ಳಲು ಮತ್ತು ಪರಮಾತ್ಮನೊಂದಿಗೆ ಮಿಳಿತಗೊಳ್ಳಲು ನಿಯಮಿತವಾಗಿ ಧ್ಯಾನ ಮಾಡುವ ಜರೂರತ್ತು ಇರುತ್ತದೆ. ಪರಿವಾರದಲ್ಲಿ ಸುಖ, ಶಾಂತಿ ನೆಮ್ಮದಿ ಕಾಪಾಡಿಕೊಳ್ಳಲು ಪ್ರಾಮಾಣಿಕತೆ ಮತ್ತು ಪರಿಶ್ರಮದಿಂದ ಜೀವನಾಧಾರಕ್ಕೆ ಹಣ ಗಳಿಸಬೇಕು. ಇದರಲ್ಲೇ ಎಲ್ರ ಕಲ್ಯಾಣವೂ ಆಡಗಿದೆ.

ಕುಲದೇವರ ಪೂಜೆ ಮಾಡಬೇಕು: ಪ್ರತಿಯೊಂದು ಕುಟುಂಬಕ್ಕೂ ಒಂದೊಂದು ಕುಲದೇವ ಅಥವಾ ಕುಲದೇವತೆ ಇರುತ್ತಾರೆ. ಆ ಕುಲದೇವರನ್ನು ಎಂದಿಗೂ ಮರೆಯಬೇಡಿ. ಕುಲದೇವರ ಆಶೀರ್ವಾದ ಲಭಿಸಿದರೆ ಏಳು ಜನುಮಗಳ ಪೀಡೆಗಳೆಲ್ಲಾ ನಿವಾರಣೆಯಾದೀತು. ಜೊತೆಗೆ, ಹಿರಿಯರನ್ನು ಗೌರವಿಸಬೇಕು. ಮೃತಪಟ್ಟ ಹಿರಿಯರಿಗೆ ಶ್ರದ್ಧೆಯಿಂದ ಶ್ರಾದ್ಧ ಕಾರ್ಯ ಮಾಡುತ್ತಿರಿ.

ಭಗವಂತನನ್ನು ಸದಾ ಸಂತುಷ್ಟವಾಗಿಡಿ: ಸಂಸಾರದಲ್ಲಿ ನಿಮಗೆ ಏನು ಸಿಕ್ಕಿದೆಯೋ ಅದಷ್ಟೂ ಆ ಭಗವಂತನ ಮಹಾ ಪ್ರಸಾದ ಎಂದು ಭಾವಿಸಬೇಕು. ಇದಕ್ಕೆ ಹೇಗೆ ಧನ್ಯವಾದ ಅರ್ಪಿಸಬೇಕು ಎಂದರೆ ನಿಮಗೆ ಏನು ಪ್ರಾಪ್ತಿಯಾಗಿದೆಯೋ ಮೊದಲು ಅದರಲ್ಲಿ ಒಂದು ಭಾಗವನ್ನು ಭಗವಂತನಿಗೆ ಅರ್ಪಿಸಿ. ಇದರಿಂದ ನೀವು ಮತ್ತು ನಿಮ್ಮ ಕುಟುಂಬ ಸದಾ ನಗುನಗುತಾ ಇರಬಹುದು.

(garuda purana these 5 works make your life and your seven generations life trouble free)

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ