AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವರಾತ್ರಿ 2021: ಸಿದ್ಧಿದಾತ್ರಿ ದೇವಿಯ ಆರಾಧನೆ, ಪೂಜೆಗೆ ಇಲ್ಲಿದೆ ಮಂತ್ರ

Navratri 2021: ಇವಳು ಕಮಲದ ಮೇಲೆ ಕುಳಿತಿದ್ದಾಳೆ, ಸಿದ್ಧಿದಾತ್ರಿಗೆ ಚತುರ್ಭುಜಗಳಿವೆ, ಮೇಲಿನ ಬಲಗೈಯಲ್ಲಿ ಚಕ್ರ, ಎಡಗೈಯಲ್ಲಿ ಶಂಖ ಹಿಡಿದಿದ್ದಾಳೆ, ಕೆಳಗಿನ ಬಲಗೈಯಲ್ಲಿ ಗದೆ, ಎಡಗೈಯಲ್ಲಿ ಕಮಲವಿದೆ. ಸಿದ್ಧಿದಾತ್ರಿ ಮಹಾಲಕ್ಷ್ಮೀಯ ಸ್ವರೂಪ.

ನವರಾತ್ರಿ 2021: ಸಿದ್ಧಿದಾತ್ರಿ ದೇವಿಯ ಆರಾಧನೆ, ಪೂಜೆಗೆ ಇಲ್ಲಿದೆ ಮಂತ್ರ
ಸಿದ್ಧಿದಾತ್ರಿ
TV9 Web
| Edited By: |

Updated on:Oct 15, 2021 | 7:32 AM

Share

ನವರಾತ್ರಿಯ ಕೊನೆಯ ದಿನ ಸಿದ್ಧಿದಾತ್ರಿ ಆರಾಧನೆಗೆ ಪ್ರಶಸ್ತವಾದ ದಿನ. ನವದುರ್ಗೆಯರಲ್ಲಿ ಸಿದ್ಧಿದಾತ್ರಿ ಕೊನೆಯವಳು. ಮಾರ್ಕಂಡೇಯ ಪುರಾಣದ ಪ್ರಕಾರ, ಸಿದ್ಧಿದಾತ್ರಿ ಎಲ್ಲ ರೀತಿಯ ಸಿದ್ಧಿಗಳನ್ನು ಕರುಣಿಸುವವಳು. ಆದ್ದರಿಂದಲೇ ಇವಳನ್ನು ಸಿದ್ಧಿದಾತ್ರಿ ಎನ್ನಲಾಗುತ್ತೆ. ನವಮಿ ದಿನವು ನವರಾತ್ರಿ ಹಬ್ಬದ ಕೊನೆಯ ದಿನವಾಗಿದೆ. ಈ ದಿನ ಸಿದ್ಧಿದಾತ್ರಿ ದೇವಿಯ ಆರಾಧನೆ ಮೂಲಕ ನವರಾತ್ರಿ ಮುಕ್ತಾಯವಾಗುತ್ತೆ.

ಇವಳು ಕಮಲದ ಮೇಲೆ ಕುಳಿತಿದ್ದಾಳೆ, ಸಿದ್ಧಿದಾತ್ರಿಗೆ ಚತುರ್ಭುಜಗಳಿವೆ, ಮೇಲಿನ ಬಲಗೈಯಲ್ಲಿ ಚಕ್ರ, ಎಡಗೈಯಲ್ಲಿ ಶಂಖ ಹಿಡಿದಿದ್ದಾಳೆ, ಕೆಳಗಿನ ಬಲಗೈಯಲ್ಲಿ ಗದೆ, ಎಡಗೈಯಲ್ಲಿ ಕಮಲವಿದೆ. ಸಿದ್ಧಿದಾತ್ರಿ ಮಹಾಲಕ್ಷ್ಮೀಯ ಸ್ವರೂಪ. ಭಕ್ತಿಯಿಂದ ಈ ದೇವಿಯ ಬಳಿ ಬೇಡಿದ್ರೆ ಪ್ರಸನ್ನಳಾಗಿ ವರ ಕೊಡ್ತಾಳೆ ಎಂಬ ನಂಬಿಕೆ ಇದೆ. ನವರಾತ್ರಿಯ ಒಂಬತ್ತನೇ ದಿನ ಸಿದ್ಧಿದಾತ್ರಿಯನ್ನು ಮಂತ್ರ ಸಹಿತವಾಗಿ ಪೂಜಿಸುವುದು ಶ್ರೇಯಸ್ಕರ ಎನ್ನಲಾಗುತ್ತೆ.

ಸಿದ್ಧಿದಾತ್ರಿ ಮಂತ್ರ ಸಿದ್ಧಗಂಧರ್ವ ಯಕ್ಷಾದ್ಯೈಹಸುರೈಹಮರೈಹಪಿ ಸೇವ್ಯಮಾನಾ ಸದಾ ಭೂಯಾತ್‌ ಸಿದ್ಧಿದಾ ಸಿದ್ಧಿದಾಯಿನೀ ಪ್ರತಿಯೊಬ್ಬ ಮನುಷ್ಯನೂ ತಾಯಿ ಸಿದ್ಧಿದಾತ್ರಿಯ ಕೃಪೆ ಪಡೆಯಲು ನಿರಂತರ ಪ್ರಯತ್ನ ಮಾಡಬೇಕು. ಈ ದೇವಿಯ ಉಪಾಸನೆಯಿಂದ ಭಕ್ತರ, ಸಾಧಕರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

ಸಿದ್ಧಿದಾತ್ರಿ ಪೂಜೆ ವಿಧಾನ ಈ ದಿನದಂದು ಭಕ್ತರು ಬೇಗ ಎದ್ದು ಸ್ನಾನ ಮಾಡಿ ಶುದ್ಧ ಬಟ್ಟೆಗಳನ್ನು ಧರಿಸಿ ದೇವಿಯ ವಿಗ್ರಹವನ್ನು ಕಲಶದ ಬಳಿ ಇರಿಸಬೇಕು. ದೇವಿಗೆ ಎಲೆ ಅಡಿಕೆ ಅರ್ಪಿಸಬೇಕು. ಹೂವುಗಳು ಅದರಲ್ಲೂ ಗುಲಾಬಿ ಹೂವು ತಾಯಿಗೆ ಇಷ್ಟ. ವಿಗ್ರಹದ ಮುಂದೆ ತುಪ್ಪದ ದೀಪ ಬೆಳಗಿಸಿ ಶ್ರೀ ದುರ್ಗಾ ಸಪ್ತಶತಿ, ಸಿದ್ಧಿದಾತ್ರಿ ದೇವಿಯ ಮಂತ್ರಗಳನ್ನು ಪಠಿಸಬೇಕು. ತಾಯಿಗೆ ಆರತಿ ಮಾಡಿ ಪೂಜೆ ಪೂರ್ಣಗೊಳಿಸಿ. ಬೆಳಿಗ್ಗೆ ಹಾಗೂ ಸಂಜೆ ದೇವಿಗೆ ಭೋಗವನ್ನು ನೀಡಲಾಗುತ್ತದೆ. ಅನೇಕ ಭಕ್ತರು ಈ ದಿನ ಹವನ ಮಾಡುತ್ತಾರೆ. ಕೆಲವರು ಉಪವಾಸ ಮಾಡುತ್ತಾರೆ. ಇನ್ನು ಈ ದಿನ ಕನ್ಯಾ ಪೂಜೆಯನ್ನು ಕೂಡ ಮಾಡಲಾಗುತ್ತದೆ.

ಸಿದ್ಧಿದಾತ್ರಿ ಪೂಜೆಯ ಫಲಗಳು * ಈಕೆ ಸರ್ವಸಿದ್ಧಿಗಳನ್ನು ಕೊಡುವ ದೇವಿ * ಇವಳ ಆರಾಧನೆಯಿಂದ ಅಷ್ಟಸಿದ್ಧಿಗಳು ಪ್ರಾಪ್ತಿ * ಇವಳ ಪೂಜೆ ಮಾಡಿದ್ರೆ ರಕ್ಷಣೆ ಸಿಗುತ್ತೆ * ಸರ್ವಕಾರ್ಯಗಳಲ್ಲೂ ವಿಜಯ ಪ್ರಾಪ್ತಿಯಾಗುತ್ತೆ * ದುಃಖವನ್ನು ದೂರ ಮಾಡ್ತಾಳೆ * ಸುಖ ಭೋಗಗಳನ್ನು ಕರುಣಿಸ್ತಾಳೆ * ಮೋಕ್ಷ ದಯ ಪಾಲಿಸ್ತಾಳೆ ನವರಾತ್ರಿಯಲ್ಲಿ ನವದುರ್ಗೆಯರನ್ನು ಪೂಜಿಸುವ ಪದ್ಧತಿ ಅತ್ಯಂತ ವಿಶೇಷ. ಒಂಬತ್ತು ದಿನಗಳ ಕಾಲ ಒಂಬತ್ತು ದೇವಿಯರ ಪೂಜೆಯನ್ನು ನಿಷ್ಟೆಯಿಂದ ಮಾಡಿದ್ರೆ ಯಶಸ್ಸು ಸಿಗೋದು ಖಚಿತ ಅಂತಾ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಮಹಾನ್ ಶಕ್ತಿ ಸ್ವರೂಪಿಣಿಯರ ಆಶೀರ್ವಾದ ನಮ್ಮ ಮೇಲಿದ್ರೆ ಜೀವನದಲ್ಲಿ ಕಷ್ಟಗಳು ಎದುರಾಗಲ್ಲ, ಶತ್ರುಗಳ ಭಯವಿರಲ್ಲ, ಸಾಧನೆಗೆ ಬೇಕಾದ ಶಕ್ತಿ ದೊರೆಯುತ್ತೆ ಅನ್ನೋ ನಂಬಿಕೆ ಅನಾದಿಕಾಲದಿಂದಲೂ ಇದೆ.

ಇದನ್ನೂ ಓದಿ: ನವರಾತ್ರಿ 2021 ಎಂಟನೇ ದಿನ: ಈ ದಿನ ಸಾಕ್ಷಾತ್ ಪರಮೇಶ್ವರನಿಗೆೇ ಶಕ್ತಿ ನೀಡಿದ ಮಹಾನ್ ತಾಯಿಯನ್ನು ಆರಾಧಿಸಲಾಗುತ್ತೆ

Published On - 7:23 am, Fri, 15 October 21

ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ