AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವರಾತ್ರಿ 2021 ಎಂಟನೇ ದಿನ: ಈ ದಿನ ಸಾಕ್ಷಾತ್ ಪರಮೇಶ್ವರನಿಗೆೇ ಶಕ್ತಿ ನೀಡಿದ ಮಹಾನ್ ತಾಯಿಯನ್ನು ಆರಾಧಿಸಲಾಗುತ್ತೆ

Navratri 2021: ಚತುರ್ಭುಜಗಳುಳ್ಳ ಮಹಾಗೌರಿ ಅಭಯಮುದ್ರೆ, ತ್ರಿಶೂಲ, ಡಮರುಗ, ವರಮುದ್ರೆ ಸ್ವರೂಪಿ. ನೋಡಲು ಸುಂದರರೂಪಿಯಾಗಿ ಕಾಣ್ತಾಳೆ. ಮಹಾಗೌರಿ ಶುಂಭ-ನಿಶುಂಭರ ವಧೆ ಮಾಡಿ, ದೇವಾನುದೇವತೆಗಳನ್ನು ರಕ್ಷಿಸ್ತಾಳೆ.

ನವರಾತ್ರಿ 2021 ಎಂಟನೇ ದಿನ: ಈ ದಿನ ಸಾಕ್ಷಾತ್ ಪರಮೇಶ್ವರನಿಗೆೇ ಶಕ್ತಿ ನೀಡಿದ ಮಹಾನ್ ತಾಯಿಯನ್ನು ಆರಾಧಿಸಲಾಗುತ್ತೆ
ಮಹಾಗೌರಿ
TV9 Web
| Edited By: ಆಯೇಷಾ ಬಾನು|

Updated on: Oct 14, 2021 | 7:23 AM

Share

ನವದುರ್ಗೆಯರಲ್ಲಿ ಮಹಾಗೌರಿಯದ್ದು ಎಂಟನೇ ರೂಪ. ಈಕೆ ಸಾಕ್ಷಾತ್ ಪರಮೇಶ್ವರನಿಗೆೇ ಶಕ್ತಿ ನೀಡಿದ ಮಹಾನ್ ತಾಯಿ. ಪಾರ್ವತಿಯ ರೂಪದಲ್ಲಿ ಶಿವನನ್ನು ಪತಿಯಾಗಿ ಪಡೆಯಲು ತಪಸ್ಸು ಮಾಡಿದ್ದಳು. ಮಹಾಗೌರಿಯನ್ನು ಆದಿಶಕ್ತಿಯ ಪ್ರತಿರೂಪ ಎನ್ನಲಾಗುತ್ತೆ.

ಈ ದೇವಿಯ ರೂಪ ಅತ್ಯಂತ ವಿಶೇಷ. ಶಾಂತ ಸ್ವರೂಪಿಯಾದ ಈಕೆ ವೃಷಭವಾಹನೆ. ಶ್ವೇತವರ್ಣೆಯಾಗಿ ಕಂಗೊಳಿಸೋ ಈ ದೇವಿ ಬಿಳಿಯ ವಸ್ತ್ರಾಭರಣಗಳನ್ನು ತೊಟ್ಟಿರ್ತಾಳೆ. ಚತುರ್ಭುಜಗಳುಳ್ಳ ಮಹಾಗೌರಿ ಅಭಯಮುದ್ರೆ, ತ್ರಿಶೂಲ, ಡಮರುಗ, ವರಮುದ್ರೆ ಸ್ವರೂಪಿ. ನೋಡಲು ಸುಂದರರೂಪಿಯಾಗಿ ಕಾಣ್ತಾಳೆ. ಮಹಾಗೌರಿ ಶುಂಭ-ನಿಶುಂಭರ ವಧೆ ಮಾಡಿ, ದೇವಾನುದೇವತೆಗಳನ್ನು ರಕ್ಷಿಸ್ತಾಳೆ. ನವರಾತ್ರಿಯ ಎಂಟನೇ ದಿನ ಅಂದ್ರೆ ದುರ್ಗಾಷ್ಟಮಿಯಂದು ಮಹಾಗೌರಿ ಪೂಜೆಗೆ ವಿಶೇಷ ಮಹತ್ವ ಇದೆ. ಈ ದಿನ ಮಹಾಗೌರಿಯನ್ನು ಮಂತ್ರಸಹಿತವಾಗಿ ಪೂಜಿಸಿದ್ರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತವೆ ಅನ್ನೋ ನಂಬಿಕೆ ಧರ್ಮಶಾಸ್ತ್ರದಲ್ಲಿದೆ.

ಮಹಾಗೌರಿ ಮಂತ್ರ ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರ ಧರಾ ಶುಚಿಃ ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ ದುರ್ಗಾಷ್ಟಮಿಯ ದಿನ ಮಹಾಗೌರಿಯನ್ನು ಉಪಾಸನೆ ಮಾಡುವ ಪರಂಪರೆ ಅನಾದಿಕಾಲದಿಂದಲೂ ಇದೆ. ಈ ದೇವಿಯ ಆರಾಧನೆ, ಕೃಪೆಯಿಂದ ಲೌಕಿಕ ಮತ್ತು ಅಲೌಕಿಕ ಸುಖ ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆ ಇದೆ.

ಮಹಾಗೌರಿ ಪೂಜೆ ಮಾಡುವುದು ಹೇಗೆ? ದುರ್ಗಾಷ್ಟಮಿಯ ದಿನದಂದು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಮರದ ಹಲಗೆಯ ಮೇಲೆ ಮಹಾಗೌರಿ ದೇವಿಯ ಪ್ರತಿಮೆ ಅಥವಾ ಫೋಟೋವನ್ನು ಸ್ಥಾಪಿಸಿ ಗಂಗಾಜಲವನ್ನು ಸಿಂಪಡಿಸ ಬೇಕು. ಬಳಿಕ ಬೆಳ್ಳಿ, ತಾಮ್ರ ಅಥವಾ ಮಣ್ಣಿನ ಹೂಜಿಯಲ್ಲಿ ನೀರು ತುಂಬಿದ ಬಳಿಕ, ಅದರ ಮೇಲೆ ತೆಂಗಿನಕಾಯಿಯನ್ನು ಇರಿಸಿ ಮತ್ತು ಕಲಶವನ್ನು ಸ್ಥಾಪಿಸ ಬೇಕು. ಇದಾದ ನಂತರ ಗಣೇಶ, ವರುಣ, ನವಗ್ರಹ, ಷೋಡಶ ಮಾತೃಕಾ (16 ದೇವತೆಗಳು), ಸಪ್ತ ಘೃತ ಮಾತೃಕಾ ಇತ್ಯಾದಿಗಳನ್ನು ಮರದ ಹಲಗೆಯ ಮೇಲೆ ಇರಿಸಿ. ಮಹಾಷ್ಟಮಿ ಅಥವಾ ದುರ್ಗಾಷ್ಟಮಿ ವ್ರತದ ಪ್ರತಿಜ್ಞೆಯನ್ನು ತೆಗೆದುಕೊಳ್ಳ ಬೇಕು. ಮತ್ತು ಮಂತ್ರಗಳನ್ನು ಪಠಿಸುವಾಗ, ಮಹಾಗೌರಿ ಸೇರಿದಂತೆ ಎಲ್ಲಾ ದೇವತೆಗಳನ್ನು ಧ್ಯಾನಿಸ ಬೇಕು.

ಮಹಾಗೌರಿಗೆ ಆಸನ, ಅಧ್ಯಾ, ಆಚಮನ, ಸ್ನಾನ, ಬಟ್ಟೆ, ಅದೃಷ್ಟ ಸೂತ್ರ, ಶ್ರೀಗಂಧ, ಕುಂಕುಮ, ಅರಿಶಿನ, ಸಿಂಧೂರ, ದುರ್ವಾ, ಆಭರಣ, ಹೂಗಳು, ಧೂಪ-ದೀಪ, ಹಣ್ಣು, ಪಾನ್, ದಕ್ಷಿಣೆ, ಆರತಿ, ಮಂತ್ರ ಇತ್ಯಾದಿಗಳ ನಂತರ ಪ್ರಸಾದವನ್ನು ವಿತರಿಸ ಬೇಕು. ಮಹಾ ಅಷ್ಟಮಿಯ ಪೂಜೆಯ ನಂತರ ಹೆಣ್ಣು ಮಕ್ಕಳಿಗೆ ಆಹಾರ ನೀಡುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಇದನ್ನು ಮಾಡುವುದರಿಂದ, ಮಹಾಗೌರಿಯು ಶುಭ ಫಲಿತಾಂಶಗಳನ್ನು ನೀಡುತ್ತಾಳೆ ಎಂದು ಹೇಳಲಾಗುತ್ತದೆ.

ಮಹಾಗೌರಿ ಪೂಜೆಯ ಫಲಗಳು * ಈಕೆ ಶೀಘ್ರ ಫಲದಾಯಿನಿ * ದುಃಖ ದೂರ ಮಾಡ್ತಾಳೆ * ಭಕ್ತರಲ್ಲಿರುವ ಕೆಟ್ಟ ಬುದ್ಧಿಯನ್ನು ಹೋಗಲಾಡಿಸ್ತಾಳೆ * ಪೂರ್ವಜನ್ಮದ ಪಾಪ ಪರಿಹರಿಸ್ತಾಳೆ * ಭಕ್ತರ ಕಷ್ಟ ದೂರ ಮಾಡ್ತಾಳೆ * ಇವಳ ಕೃಪೆಯಿಂದ ಸಾಧ್ಯವಿಲ್ಲದ ಕಾರ್ಯಗಳು ನೆರವೇರುತ್ತವೆ * ದುಷ್ಟಶಕ್ತಿಗಳನ್ನು ನಾಶಮಾಡ್ತಾಳೆ ದುರ್ಗಾಷ್ಟಮಿ ಜಗಜ್ಜನನಿಯಾದ ಮಹಾಗೌರಿಗೆ ವಿಶೇಷ ದಿನ. ಇಂದು ಮಹಾಗೌರಿಯ ಧ್ಯಾನ, ಸ್ಮರಣೆ, ಪೂಜೆ-ಆರಾಧನೆ ಮಾಡುವುದು ಅತ್ಯಂತ ಶ್ರೇಯಸ್ಕರ. ಇವಳ ಮಹಿಮೆಯನ್ನು ಪುರಾಣಗಳಲ್ಲಿ ಹಾಡಿ ಹೊಗಳಿದ್ದಾರೆ. ಯಾರು ಮಹಾಗೌರಿಯನ್ನು ಪೂಜಿಸ್ತಾರೋ ಅವರು ಸಕಲ ಸುಖ-ಸಂಪತ್ತನ್ನು ಪಡೆಯಬಹುದು ಎಂಬ ಉಲ್ಲೇಖ ಪುರಾಣಗಳಲ್ಲಿ ಇದೆ.

ಇದನ್ನೂ ಓದಿ: ನವರಾತ್ರಿ ಸಂಭ್ರಮ: ಕೋಲಾರದ ಬಂಗಾರಪೇಟೆಯಲ್ಲಿ ಗಮನ ಸೆಳೆಯುತ್ತಿದೆ ಗುಜರಾತಿ ಸಮುದಾಯದ ದಾಂಡಿಯಾ ನೃತ್ಯ ವೈಭವ

Follow Us
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು