ನವರಾತ್ರಿ ಸಂಭ್ರಮ: ಕೋಲಾರದ ಬಂಗಾರಪೇಟೆಯಲ್ಲಿ ಗಮನ ಸೆಳೆಯುತ್ತಿದೆ ಗುಜರಾತಿ ಸಮುದಾಯದ ದಾಂಡಿಯಾ ನೃತ್ಯ ವೈಭವ

ಗುಜರಾತಿನಿಂದ ಕರ್ನಾಟಕಕ್ಕೆ ವಲಸೆ ಬಂದು ತಮ್ಮ ಜೀವನ ಕಟ್ಟಿಕೊಂಡಿರುವ ಪಾಟೀದಾರ್ ಸಮುದಾಯದವರು ಇಂದಿಗೂ ಇಲ್ಲೇ ಕರ್ನಾಟಕದಲ್ಲೇ ಕನ್ನಡಿಗರಾಗಿ ಬದುಕುತ್ತಾ ಇಂದಿಗೂ ತಮ್ಮ ಸಂಪ್ರದಾಯವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿದ್ದಾರೆ.

ನವರಾತ್ರಿ ಸಂಭ್ರಮ: ಕೋಲಾರದ ಬಂಗಾರಪೇಟೆಯಲ್ಲಿ ಗಮನ ಸೆಳೆಯುತ್ತಿದೆ ಗುಜರಾತಿ ಸಮುದಾಯದ ದಾಂಡಿಯಾ ನೃತ್ಯ ವೈಭವ
ನವರಾತ್ರಿ ಸಂಭ್ರಮ: ಕೋಲಾರದ ಬಂಗಾರಪೇಟೆಯಲ್ಲಿ ಗುಜರಾತಿ ಸಮುದಾಯದ ದಾಂಡಿಯಾ ನೃತ್ಯ ವೈಭವ
Follow us
TV9 Web
| Updated By: ಆಯೇಷಾ ಬಾನು

Updated on: Oct 13, 2021 | 8:21 PM

ಕೋಲಾರ: ಒಂದೊಂದು ಸಮುದಾಯದಲ್ಲಿ ಒಂದೊಂದು ಪದ್ಧತಿ ಇರುತ್ತೆ. ದಸರಾ ಹಬ್ಬವನ್ನ ಗುಜರಾತಿನ ಪಟೇಲ್ ಅಥವಾ ಪಾಟೀದಾರ್ ಸಮುದಾಯದವರು ವಿಶಿಷ್ಟವಾಗಿ ಆಚರಣೆ ಮಾಡ್ತಾರೆ. ಅದೇ ರೀತಿ ನಮ್ಮ ರಾಜ್ಯದ ವಲಸಿಗ ಪಟೀದಾರ್ ಸಮುದಾಯದವರು ಗಡಿನಾಡು ಕೋಲಾರದಲ್ಲಿ ಒಂಬತ್ತು ದಿನಗಳ ಕಾಲ ಮಾಡುವ ವಿಶೇಷ ಪೂಜಾ, ವಿಧಿ-ವಿಧಾನ ಹಾಗೂ ಮನರಂಜನೆ ಗಮನಸೆಳೆಯುತ್ತದೆ.

ಕೋಲಾರದಲ್ಲೂ ಕಳೆಗಟ್ಟುತ್ತದೆ ಗುಜರಾತಿಯರ ನವರಾತ್ರಿ ಸಂಭ್ರಮ ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದಲ್ಲಿ ಗುಜರಾತಿ ಮೂಲದ ಕುಟುಂಬಗಳು ಹತ್ತಾರು ವರ್ಷಗಳಿಂದ ನೆಲೆಸಿವೆ ಅದರಲ್ಲೂ ಗುಜರಾತ್ ಮೂಲದ ಕಚ್, ಕಡವಾ, ಹಾಗೂ ಪಾಟೀದಾರ್ ಸಮುದಾಯ ಇಲ್ಲಿ ದಸರಾ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡ್ತಾರೆ. ದುರ್ಗಾ ಮಾತೆಯ ಒಂಬತ್ತು ಅವತಾರಗಳನ್ನು ಒಂಬತ್ತು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿ ವಿಶಿಷ್ಟವಾಗಿ ಆಚರಣೆ ಮಾಡ್ತಾರೆ.

klr navratri celebration

ಗುಜರಾತಿ ಸಮುದಾಯದ ನೃತ್ಯ

ದಸರಾ ಸಂಭ್ರಮದಲ್ಲಿ ಗಮನ ಸೆಳೆಯುತ್ತದೆ ದಾಂಡಿಯಾ ಡ್ಯಾನ್ಸ್ ದಸರಾ ಹಬ್ಬದ ಮೊದಲ ದಿನದಿಂದಲೇ ಗರ್ಬಾ ರಾಸ್ ಮತ್ತು ದಾಂಡಿಯಾ ಡ್ಯಾನ್ಸ್ ಶುರುವಾಗುತ್ತೆ. ಮನೆ ದೇವರ ಫೋಟೋ ಇರಿಸಿ ಒಂಬತ್ತು ದಿನಗಳ ಕಾಲ ಪೂಜೆ ಮಾಡುವ ದೀಪವನ್ನು ಪ್ರತಿ ದಿನದ ದಾಂಡಿಯಾ ಡ್ಯಾನ್ಸ್, ಅಂದರೆ ಕೋಲಾಟವನ್ನು ಶುರು ಮಾಡುವ ಮುನ್ನ ಪೂಜಿಸಿ ಭಜನೆ ಮಾಡಲಾಗುತ್ತೆ. ಈ ಒಂಬತ್ತು ದಿನಗಳ ಕಾಲವು ಮನೆಯ ಗೃಹಿಣಿಯರು ಒಂದು ಹೊತ್ತು ಉಪವಾಸವನ್ನು ಮಾಡ್ತಾರೆ. ಒಂಬತ್ತನೆ ದಿನದಂದು ಗರ್ಬಾದ ದೀಪವನ್ನ ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ಗುಜರಾತಿನಿಂದ ಕರ್ನಾಟಕಕ್ಕೆ ವಲಸೆ ಬಂದು ತಮ್ಮ ಜೀವನ ಕಟ್ಟಿಕೊಂಡಿರುವ ಪಾಟೀದಾರ್ ಸಮುದಾಯದವರು ಇಂದಿಗೂ ಇಲ್ಲೇ ಕರ್ನಾಟಕದಲ್ಲೇ ಕನ್ನಡಿಗರಾಗಿ ಬದುಕುತ್ತಾ ಇಂದಿಗೂ ತಮ್ಮ ಸಂಪ್ರದಾಯವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿದ್ದಾರೆ. ಹಬ್ಬದ ಸಮಯದಲ್ಲಿ ಎಲ್ಲರೂ ಒಂದಾಗಿ ಹಬ್ಬ ಆಚರಣೆ ಮಾಡಿ ತಮ್ಮ ಒಗ್ಗಟ್ಟು ಪ್ರದರ್ಶನ ಮಾಡುತ್ತಾರೆ. ದಸರಾ ಹಬ್ಬದ ಸಮಯದಲ್ಲಿ ಮಾತ್ರ ಕೋಲಾರ ಜಿಲ್ಲೆಯಲ್ಲಿರುವ ಗುಜರಾತಿ ಕುಟುಂಬಗಳು ಒಂದು ಕಡೆ ಸೇರ್ತಾರೆ.

klr navratri celebration

ಗುಜರಾತಿ ಸಮುದಾಯದ ನೃತ್ಯ ವೈಭವ

ಇಡೀ ಜಿಲ್ಲೆಯಲ್ಲಿನ 47 ಕುಟುಂಬಗಳ ಸುಮಾರು 300 ಕ್ಕೂ ಹೆಚ್ಚು ಮಂದಿ ಬಂಗಾರಪೇಟೆಯಲ್ಲಿನ ಕೋಲಾರ್ ಕಛ್ ಕಡ್ವಾ ಪಟೀದಾರ್ ಸಮಾಜದವರು ಏರ್ಪಾಡು ಮಾಡೋ ಈ ಎಲ್ಲ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸ್ತಾರೆ. ರಾತ್ರಿ ಎಂಟು ಗಂಟೆಯಿಂದ ಹತ್ತು ಗಂಟೆಯವರೆಗೆ ವಯಸ್ಸು ಮತ್ತು ಲಿಂಗಬೇಧವನ್ನ ಮರೆತು ದಾಂಡ್ಯಾ ನೃತ್ಯ ಮಾಡುತ್ತಾ ದೇವತೆಯ ಸ್ತುತಿ ಮಾಡ್ತಾರೆ. ಕೊನೆಯ ದಿನದಂದು ಅನ್ನ ಸಂತರ್ಪಣೆ ಮತ್ತು ತಮ್ಮದೇ ಸಮುದಾಯದಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರವನ್ನ ಮಾಡುವ ಮೂಲಕ ನವರಾತ್ರಿ ಹಬ್ಬ ಕೊನೆಗೊಳ್ಳುತ್ತದೆ ಅನ್ನೋದು ಸಮುದಾಯದ ಮುಖಂಡ ಕಿಶೋರ್ ಅವರ ಮಾತು.

ಒಟ್ಟಾರೆ ವ್ಯವಹಾರಿಕವಾಗಿ ಇಲ್ಲಿನ ಜನರನ್ನು ಮತ್ತು ಬದುಕನ್ನು ಆಶ್ರಯಿಸಿದ್ರೂ ಕೂಡಾ ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನ ಆಚರಿಸ್ತಾಯಿರೋ ಗುಜರಾತಿಗಳ ಪದ್ಧತಿಯು ವಿಶೇಷ ಹಾಗೂ ವಿಭಿನ್ನ. ಅದರಲ್ಲೂ ಇದು ಈ ಭಾಗದ ಜನರಿಗಂತೂ ನೋಡದಕ್ಕೇ ಖುಷಿ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ವರದಿ: ರಾಜೇಂದ್ರಸಿಂಹ

ಇದನ್ನೂ ಓದಿ: ದಿನಗೂಲಿ ಮಾಡಿ ಬದುಕುವವರು ನಾವು, ಇನ್ನು ದೇವರು ನಡೆಸಿದಂತೆ ನಮ್ಮ ಬದುಕು ಎನ್ನುತ್ತಾರೆ ಕಮಲಾನಗರದ ನತದೃಷ್ಟ ಮಹಿಳೆಯರು!

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ