ಆಯುಧ ಪೂಜೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದ ಶಾಸಕ ಕೆ.ವೈ.ನಂಜೇಗೌಡ ವಿರುದ್ಧ ಪ್ರಕರಣ ದಾಖಲು

ಸಾರ್ವಜನಿಕ ಸ್ಥಳದಲ್ಲಿ ಗುಂಡು ಹಾರಿಸಿದ್ದು ಹಾಗೂ ಬೇರೆಯವರ ಹೆಸರಿನಲ್ಲಿದ್ದ ಬಂದೂಕು ಬಳಕೆ ಮಾಡಿದ ಹಿನ್ನೆಲೆ ಮಾಸ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆ ಆಯುಧ ಪೂಜೆ ಮುಗಿದ ಬಳಿಕ ಶಾಸಕ ಕೆ.ವೈ.ನಂಜೇಗೌಡ ತಮ್ಮ ಸಹೋದರ ಈರೇಗೌಡನ ಹೆಸರಿನಲ್ಲಿರುವ ಬಂದೂಕು ಬಳಸಿ ಗುಂಡು ಹಾರಿಸಿದ್ದರು.

ಆಯುಧ ಪೂಜೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದ ಶಾಸಕ ಕೆ.ವೈ.ನಂಜೇಗೌಡ ವಿರುದ್ಧ ಪ್ರಕರಣ ದಾಖಲು
ಗಾಳಿಯಲ್ಲಿ ಗುಂಡು ಹಾರಿಸಿದ ಕೋಲಾರ ಜಿಲ್ಲೆಯ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ

ಕೋಲಾರ: ಆಯುಧ ಪೂಜೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದ ಕೇಸ್ಗೆ ಸಂಬಂಧಿಸಿ ಕೋಲಾರ ಜಿಲ್ಲೆಯ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ವಿರುದ್ಧ ಮಾಸ್ತಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಗುಂಡು ಹಾರಿಸಿದ್ದು ಹಾಗೂ ಬೇರೆಯವರ ಹೆಸರಿನಲ್ಲಿದ್ದ ಬಂದೂಕು ಬಳಕೆ ಮಾಡಿದ ಹಿನ್ನೆಲೆ ಮಾಸ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆ ಆಯುಧ ಪೂಜೆ ಮುಗಿದ ಬಳಿಕ ಶಾಸಕ ಕೆ.ವೈ.ನಂಜೇಗೌಡ ತಮ್ಮ ಸಹೋದರ ಈರೇಗೌಡನ ಹೆಸರಿನಲ್ಲಿರುವ ಬಂದೂಕು ಬಳಸಿ ಗುಂಡು ಹಾರಿಸಿದ್ದರು. ಸದ್ಯ ಈಗ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ತಲ್ವಾರ್ ಹಿಡಿದು ಹಿಂದೂ ಪರ ಸಂಘಟನೆ ಕಾರ್ಯಕರ್ತರ ಸಂಭ್ರಮ
ಬೆಳಗಾವಿಯ ಬ್ರಹ್ಮನಗರದ ಹನುಮಾನ ದೇವಸ್ಥಾನದ ಬಳಿ ತಲ್ವಾರ್ ಹಿಡಿದು ನೂರಾರು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ದಸರಾ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಆಯುಧ ಪೂಜಾ ಕಾರ್ಯಕ್ರಮದಲ್ಲಿ ನಡುಬೀದಿಯಲ್ಲಿ ತಲ್ವಾರ್ ಹಿಡಿದು ಕಾರ್ಯಕರ್ತರು ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಮಾರಕಾಸ್ತ್ರ ಹಿಡಿದು ಸಂಭ್ರಮಿಸುತ್ತಿದ್ದರೂ ಪೊಲೀಸರು ಕೈಕಟ್ಟಿ ಕುಳಿತಿದ್ದರು. ಸದ್ಯ ಕಾರ್ಯಕರ್ತರ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆಲಸದ ಮಧ್ಯೆ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಡ್ಯಾನ್ಸ್
ದಸರಾ ಪೂಜೆ ನಂತರ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ನಲ್ಲಿ ಸಿಬ್ಬಂದಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಟಿಕೆಟ್ ಕೊಡುವ ಮಧ್ಯೆಯೇ ಬಸ್ ಕಂಡಕ್ಟರ್ ಡ್ಯಾನ್ಸ್ ಮಾಡಿ ಪ್ರಯಾಣಿಕರಿಗೆ ಮನರಂಜನೆ ನೀಡಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: 3 ಲೀಟರ್ ಪೆಟ್ರೋಲ್ ಗಿಫ್ಟ್ ನೀಡಿ ವಧು- ವರರಿಗೆ ಶಾಕ್ ಕೊಟ್ಟ ಸ್ನೇಹಿತರು!

Click on your DTH Provider to Add TV9 Kannada