ಕ್ಯಾಪ್ಟನ್ಸಿ ನಂಗೇ ಕೊಡಿ ಎಂದು ಬಿಗ್ ಬಾಸ್ ಬಳಿ ಹಠ ಹಿಡಿದ ಅಶ್ವಿನಿ; ಇದೆಂಥಾ ಲಾಜಿಕ್?
ಬಿಗ್ ಬಾಸ್ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಅಶ್ವಿನಿ ಗೌಡ ಅವರ ನಡೆ ಈಗ ಚರ್ಚೆ ಹುಟ್ಟುಹಾಕಿದೆ. ಧನುಶ್ ಎದುರು ಸೋತ ಬಳಿಕ, ನಿಯಮ ಪಾಲನೆಯಲ್ಲಿ ಉಂಟಾದ ದೋಷವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಅಶ್ವಿನಿ ಪ್ರಯತ್ನಿಸಿದರು. ಧನುಶ್ ಬಳಿ ಕ್ಯಾಪ್ಟನ್ಸಿಗಾಗಿ ಮನವಿ ಮಾಡಿದ್ದು, 'ಸಂತ್ರಸ್ತೆ ಕಾರ್ಡ್' ಆಡಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ.

ಬಿಗ್ ಬಾಸ್ (Bigg Boss) ಮನೆಯಲ್ಲಿ ಅಶ್ವಿನಿ ಗೌಡ ಅವರು ಈ ವಾರ ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆ ಆಗಿದ್ದರು. ಆದರೆ, ಧನುಷ್ ಎದುರು ಗೆಲ್ಲಲು ಅವರಿಗೆ ಸಾಧ್ಯವಾಗಲೇ ಇಲ್ಲ. ಈಗ ಅಶ್ವಿನಿ ಗೌಡ ಅವರು ನಡೆದುಕೊಂಡ ರೀತಿ ಚರ್ಚೆಗೆ ಕಾರಣವಾಗಿದೆ. ಅವರು ಆಟದಲ್ಲಿ ಉಂಟಾದ ತೊಂದರೆಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದ್ದರು. ಅವರು ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದಿತ್ತು ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯಪಟ್ಟಿದ್ದಾರೆ..
ಈ ವಾರ ಅಶ್ವಿನಿ ಗೌಡಗೆ ಅದೃಷ್ಟ ಒಲಿದಿತ್ತು. ಅವರು ಗಿಲ್ಲಿ ಸಹಾಯದಿಂದ ನೇರವಾಗಿ ಕ್ಯಾಪ್ಟನ್ಸಿ ರೇಸ್ಗೆ ಆಯ್ಕೆ ಆದರು. ಗಿಲ್ಲಿ ಕ್ಯಾಪ್ಟನ್ ಆಗಿದ್ದರಿಂದ ಅವರಿಗೂ ಈ ಅವಕಾಶ ಸಿಕ್ಕಿತು. ನಂತರ ಆಟ ಆಡಿ ರಾಶಿಕಾ ಹಾಗೂ ಧನುಶ್ ಕ್ಯಾಪ್ಟನ್ಸಿ ರೇಸ್ಗೆ ಅರ್ಹತೆ ಪಡೆದರು. ಆ ಬಳಿಕ ಜೋಡಿ ಮಾಡಿ ಆಟ ಆಡಿಸಲಾಯಿತು.
ಧನುಶ್ ಹಾಗೂ ಅಶ್ವಿನಿ ಒಂದು ಜೋಡಿ, ರಾಶಿಕಾ ಹಾಗೂ ಗಿಲ್ಲಿ ಒಂದು ಜೋಡಿ. ಅಶ್ವಿನಿ ತಂಡದಲ್ಲಿ ಇದ್ದ ಧನುಶ್ ಉತ್ತಮವಾಗಿ ಆಡಿದ್ದರಿಂದ ಅವರ ತಂಡ ಗೆದ್ದಿತು. ಧನುಶ್ ಹಾಗೂ ಅಶ್ವಿನಿ ಅಂತಿಮವಾಗಿ ಕೊನೆಯ ಹಂತದ ಕ್ಯಾಪ್ಟನ್ಸಿ ರೇಸ್ಗೆ ಆಯ್ಕೆ ಆದರು. ಇಬ್ಬರ ಮಧ್ಯೆ ಪಜಲ್ ಟಾಸ್ಕ್ ನಡೆಯುವಾಗ ಉಸ್ತುವಾರಿ ಮಾಡಿದ ತಪ್ಪಿನಿಂದ ನಿಯಮ ಪಾಲನೆ ಆಗಿಲ್ಲ. ಇದನ್ನು ಗಮನಿಸಿದ ಬಿಗ್ ಬಾಸ್ ಆಟ ರದ್ದು ಮಾಡಿ, ವೋಟಿಂಗ್ಗೆ ಅವಕಾಶ ಕೊಟ್ಟರು. ಧನುಶ್ಗೆ ಬಹುಮತದ ವೋಟ್ ಬಂದು ವಿನ್ ಆದರು.
She has entered into the Captaincy task without playing any task. Not once but twice.
Even in the captaincy task she didn’t play individual games. It was a Jodi task and Dhanush played most of the part.
Now, she is asking to select her directly. Have some shame Ashwini#BBK12 pic.twitter.com/44LN2JrO34
— ಅಲ್ಪಸಂಖ್ಯಾತ (@alpasankhyata) January 2, 2026
ಆ ಬಳಿಕ ಅಲ್ಲಿ ನಡೆದಿದ್ದೇ ಬೇರೆ. ಅಶ್ವಿನಿ ಅವರು ಧನುಶ್ ಬಳಿ ಬಂದು ಒಂದಷ್ಟು ವಿಷಯಗಳನ್ನು ಹೇಳಿದರು. ‘ನೀವು ನನ್ನಿಂದ ಕ್ಯಾಪ್ಟನ್ಸಿ ಕಿತ್ತುಕೊಂಡ್ರಿ, ನಂಗೆ ಅನ್ಯಾಯ ಆಗಿದೆ, ನೀವು ನನಗೆ ಕ್ಯಾಪ್ಟನ್ಸಿ ಕೊಡ್ತೀನಿ ಎಂದು ಹೇಳಬಹುದಿತ್ತು’ ಎಂದೆಲ್ಲ ಹೇಳಿದ್ದಾರೆ. ಶತಾಯ ಗತಾಯ ಕ್ಯಾಪ್ಟನ್ ಆಗಲೇಬೇಕು ಎಂದು ಅವರು ತಾವು ಸಂತ್ರಸ್ತೆ ಎಂಬ ಕಾರ್ಡ್ ಪ್ಲೇ ಮಾಡಿದ್ದಾರೆ. ಬಿಗ್ ಬಾಸ್ ಬಳಿ ಕ್ಯಾಪ್ಟನ್ಸಿ ಟಾಸ್ಕ್ ನನಗೆ ಕೊಡಿ ಎಂದು ಹಠ ಹಿಡಿದರು.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ‘ಅಶ್ವಿನಿ ಗೌಡ ಸೋಲಬೇಕು ಅಂತ ಬಯಸುವವರೇ ಜಾಸ್ತಿ ಜನ ಇದ್ದಾರೆ’
ಧನುಶ್ ಉದ್ದೇಶ ಪೂರ್ವಕವಾಗಿ ಮಾಡಿದ ತಪ್ಪು ಇದಲ್ಲ. ಹಾಗಿದ್ದಿದ್ದರೆ ಬಿಗ್ ಬಾಸ್ ಈ ಬಗ್ಗೆ ಘೋಷಣೆ ಮಾಡುತ್ತಿದ್ದರು. ಉಸ್ತುವಾರಿಗಳ ಕಣ್ತಪ್ಪಿನಿಂದ ಆದ ಮಿಸ್ಟೇಕ್ ಇದು. ಹೀಗಿರುವಾಗ ಕ್ಯಾಪ್ಟನ್ಸಿ ತಮಗೆ ಬೇಕು ಎಂದು ಕೇಳೋದು ಎಷ್ಟು ಸರಿ ಎಂಬುದು ಅನೇಕರ ಪ್ರಶ್ನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:25 am, Sat, 3 January 26




