AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಬಹುತೇಕ ಕೆರೆಗಳ ನೀರಲ್ಲಿ ಯುರೇನಿಯಂ ಪತ್ತೆ: ಆತಂಕಕಾರಿ ಸತ್ಯ ಬಿಚ್ಚಿಟ್ಟ ಐಐಎಸ್ಸಿ ವರದಿ

ಸಿಲಿಕಾನ್​​ ಸಿಟಿ ಬೆಂಗಳೂರಿನ ನಿವಾಸಿಗಳಿಗೆ ಗಂಭೀರ ಎಚ್ಚರಿಕೆಯೊಂದನ್ನು ತಜ್ಞರು ನೀಡಿದ್ದು, ನಗರದ ಬಹುತೇಕ ಕೆರೆಗಳ ನೀರು ಕಲುಷಿತವಾಗಿರುವ ಕಾರಣ ಅವುಗಳ ಅಕ್ಕಪಕ್ಕವಿರುವ ಇತರ ಜಲಮೂಲಗಳೂ ಮಲಿನಗೊಳ್ಳುತ್ತಿವೆ ಎಂದು ತಿಳಿಸಿದ್ದಾರೆ. ಸಾವಿರಾರು ಮೀನುಗಳು ಇತ್ತೀಚೆಗೆ ಮೃತಪಟ್ಟಿದ್ದ ಹಿನ್ನೆಲೆ ಪ್ರಮುಖ ಕೆರೆಗಳ ನೀರನ್ನು ಪರೀಕ್ಷಿಸಿದಾಗ ಅವುಗಳಲ್ಲಿ ಯುರೇನಿಯಂ ಪತ್ತೆಯಾಗಿದೆಯಂತೆ. ಅಷ್ಟಕ್ಕೂ ಯಾವೆಲ್ಲ ಕೆರೆಗಳ ನೀರನ್ನು ಪರೀಕ್ಷಿಸಲಾಗಿದೆ ಎಂಬ ಕಂಪ್ಲೀಟ್​​​​ ಮಾಹಿತಿ ಇಲ್ಲಿದೆ.

ಬೆಂಗಳೂರಿನ ಬಹುತೇಕ ಕೆರೆಗಳ ನೀರಲ್ಲಿ ಯುರೇನಿಯಂ ಪತ್ತೆ: ಆತಂಕಕಾರಿ ಸತ್ಯ ಬಿಚ್ಚಿಟ್ಟ ಐಐಎಸ್ಸಿ ವರದಿ
ಸಾಂದರ್ಭಿಕ ಚಿತ್ರImage Credit source: Google
ಕಿರಣ್​ ಸೂರ್ಯ
| Edited By: |

Updated on: May 31, 2026 | 7:27 AM

Share

ಬೆಂಗಳೂರು, ಮೇ 31: ನಗರದ ಬಹುತೇಕ ಕೆರೆಗಳಲ್ಲಿ ಇತ್ತೀಚೆಗೆ ಸಾವಿರಾರು ಮೀನುಗಳು ನಿಗೂಢವಾಗಿ ಮೃತಪಟ್ಟಿದ್ದವು. ಈ ಹಿನ್ನೆಲೆ ಐಐಎಸ್ಸಿ ತಜ್ಞರು ಕೆರೆಗಳ ನೀರನ್ನು ಪರೀಕ್ಷೆ ಮಾಡಿದ್ದು, ಆಘಾತಕಾರಿ ಸತ್ಯವೊಂದನ್ನು ಬಯಲು ಮಾಡಿದ್ದಾರೆ.  ಬೆಂಗಳೂರಿನ (Bengaluru) ಅಂತರ್ಜಲ ಕಲುಷಿತಗೊಂಡಿರುವ ಬಗ್ಗೆ ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ನಗರದ ಬಹುತೇಕ ಕೆರೆಗಳ ನೀರಲ್ಲಿ ಯುರೇನಿಯಂ ಪತ್ತೆಯಾಗಿದೆಯಂತೆ. ಈ ಕೆರಗಳ ನೀರು ಇತರ ಜಲ ಮೂಲಗಳಿಗೂ ಸೇರುತ್ತಿರುವ ಕಾರಣ ಜನರು ಕುಡಿಯುತ್ತಿರೋದು ನೀರಲ್ಲ ವಿಷ ಎಂಬುದೀಗ ಬಹಿರಂಗಗೊಂಡಿದೆ.

ಮುಖ್ಯಾಂಶಗಳು

  • ತೀವ್ರ ಕಲುಷಿತಗೊಂಡಿರುವ ಬೆಂಗಳೂರು ನಗರದ ಅಂತರ್ಜಲ
  • ನಗರದ ಬಹುತೇಕ ಕೆರೆಗಳ ನೀರಲ್ಲಿ ವಿಷಕಾರಿ ಅಂಶ ಪತ್ತೆ
  • ಐಐಎಸ್ಸಿ ತಜ್ಞರ ವರದಿಯಲ್ಲಿ ಶಾಕಿಂಗ್​​ ವಿಚಾರ ಬಹಿರಂಗ

ಯಾವೆಲ್ಲ ಕೆರೆಗಳ ನೀರು ಪರೀಕ್ಷೆ?

ನಗರದ ಸಾಕಷ್ಟು ಕೆರೆಗಳಲ್ಲಿ ನೀರು ಬಹಳ ಕಲುಷಿತವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದ ಹಿನ್ನೆಲೆ ಜಕ್ಕೂರು, ಯಲಹಂಕ, ಲಕ್ಷ್ಮೀಪುರ, ರಾಮಸಂದ್ರ, ಹೆಸರಘಟ್ಟ, ಹಲಸೂರು, ಮಡಿವಾಳ, ವರ್ತೂರು, ಘಟ್ಟಹಳ್ಳಿ ಕೆರೆಯ ನೀರನ್ನು ಐಐಎಸ್ಸಿ ತಜ್ಞರು ಪರೀಕ್ಷಿಸಿದ್ದರು. ಈ ವರದಿಯಲ್ಲಿ ನಗರದ ಕೆರೆಗಳ ನೀರು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದ್ದು, ಹೆವಿ ಮೆಟಲ್‌ ಯುರೇನಿಯಂ ನೀರಲ್ಲಿ ಸೇರಿಕೊಂಡಿವೆ ಎಂಬುದು ದೃಢವಾಗಿದೆಯಂತೆ.

ಇದನ್ನೂ ಓದಿ: ಬೆಂಗಳೂರು ಹೃದಯ ಭಾಗದಲ್ಲೇ ಕಾರಾಗೃಹ ಇಲಾಖೆಯ 50 ಕೋಟಿ ರೂ. ಮೌಲ್ಯದ ಜಾಗ ಕಬ್ಜಾ; ಅಲೋಕ್ ಕುಮಾರ್ ಎಂಟ್ರಿ ಬೆನ್ನಲ್ಲೇ ಎಫ್‌ಐಆರ್

ನೀರು ಮಲಿನಗೊಳ್ಳಲು ಕಾರಣ ಏನು?

ಕೊಳಚೆ ನೀರರನ್ನು ಸಂಸ್ಕರಣೆ ಮಾಡದೆ ನೇರವಾಗಿ ಕೆರೆಗಳಿಗೆ ಬಿಡುತ್ತಿರುವುದೇ ವಿಷಕಾರಿ ಅಂಶಗಳ ಪತ್ತೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಹೀಗಾಗಿ ಕೆರೆಗಳ ನೀರಲ್ಲಿದ್ದ ಸಾವಿರಾರು ಮೀನುಗಳು ಪ್ರಾಣ ಕಳೆದುಕೊಂಡಿವೆ. ಇನ್ನು ತಜ್ಞರು ನೀರಿನ ಪರೀಕ್ಷೆ ನಡೆಸಿರುವ ಕೆರೆಗಳ ಪೈಕಿ ವರ್ತೂರು ಕೆರೆ ಅತಿಹೆಚ್ಚು ಕಲುಷಿತಗೊಂಡಿದೆಯಂತೆ. ಕೆರೆಗಳ ನೀರು ಮಲಿನಗೊಂಡ ಪರಿಣಾಮ ಇವುಗಳ ಅಕ್ಕಪಕ್ಕದ ಬೋರ್ವೆಲ್​​ಗಳ ನೀರಲ್ಲಿಯೂ ವಿಷಕಾರಿ ಅಂಶಗಳು ಪತ್ತೆಯಾಗುತ್ತಿವೆ ಎನ್ನಲಾಗಿದೆ. ಈ ನೀರು ಬಳಕೆ ಮಾಡುವುದರಿಂದ ಅನಾರೋಗ್ಯದ ಸಮಸ್ಯೆ ಎದುರಾಗುವ ಸಾಧ್ಯತೆ ಬಗ್ಗೆಯೂ ಎಚ್ಚರಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ