ಬಿಗ್ ಬಾಸ್: ಈ ಮಹಿಳಾ ಸ್ಪರ್ಧಿಗೆ 150 ಬಾಡಿಗಾರ್ಡ್ಸ್? ಬಯಲಾಯ್ತು ಅಸಲಿ ವಿಷಯ
ಇವರು ಫ್ಯಾಕ್ಟರಿ ಹೊಂದಿದ್ದಾರೆ. ನೂರಾರು ಮಂದಿಗೆ ಕೆಲಸ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಇವರು ಫೇಮಸ್. ಇವರಿಗೆ ಬರೋಬ್ಬರಿ 150 ಮಂದಿ ಬಾಡಿಗಾರ್ಡ್ಸ್ ಇದ್ದಾರೆ ಎಂದು ಸುದ್ದಿ ಹಬ್ಬಿತ್ತು. ಆ ವದಂತಿಗೆ ಈಗ ಸ್ಪಷ್ಟನೆ ನೀಡಲಾಗಿದೆ. ಅಂದಹಾಗೆ, ಇದು ತಾನ್ಯಾ ಮಿತ್ತಲ್ ಕುರಿತಾದ ಸುದ್ದಿ. ತಮ್ಮ ಬಗ್ಗೆ ಹಬ್ಬಿರುವ ಅಂತೆ-ಕಂತೆಗಳ ಬಗ್ಗೆ ತಾನ್ಯಾ ಮಾತಾಡಿದ್ದಾರೆ.

ಉದ್ಯಮಿ ತಾನ್ಯಾ ಮಿತ್ತಲ್ ಅವರು ‘ಬಿಗ್ ಬಾಸ್ ಹಿಂದಿ 19’ (Bigg Boss 19) ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದರು. ಕಳೆದ ಡಿಸೆಂಬರ್ 7ರಂದು ಫಿನಾಲೆ ನಡೆದಿತ್ತು. ತಾನ್ಯಾ ಮಿತ್ತಲ್ ಅವರು ಫಿನಾಲೆ ತನಕ ಕಠಿಣ ಪೈಪೋಟಿ ನೀಡಿದ್ದರು. 3ನೇ ರನ್ನರ್ ಅಪ್ ಸ್ಥಾನ ಅವರಿಗೆ ಸಿಕ್ಕಿತು. ಬಿಗ್ ಬಾಸ್ ಮನೆಯೊಳಗೆ ಇದ್ದಾಗ ತಾನ್ಯಾ ಮಿತ್ತಲ್ (Tanya Mittal) ಅವರು ತಮ್ಮ ಶ್ರೀಮಂತಿಕೆ ಬಗ್ಗೆ ಹೇಳಿಕೊಂಡಿದ್ದರು. ನಿಜಕ್ಕೂ ತಾನ್ಯಾ ಬಳಿ ಅಷ್ಟೆಲ್ಲ ದುಡ್ಡು ಇದೆಯಾ ಎಂಬ ಅನುಮಾನ ಕೆಲವರಿಗೆ ಮೂಡಿತ್ತು. ತಾನ್ಯಾ ಅವರು 150 ಬಾಡಿಗಾರ್ಡ್ಸ್ (Bodyguards) ಇಟ್ಟುಕೊಂಡಿದ್ದಾರೆ ಎಂಬ ಸುದ್ದಿ ಎಲ್ಲ ಕಡೆ ಹರಡಿತ್ತು. ಅದಕ್ಕೆ ಈಗ ಸ್ವತಃ ತಾನ್ಯಾ ಅವರು ಉತ್ತರ ನೀಡಿದ್ದಾರೆ.
ತಾನ್ಯಾ ಮಿತ್ತಲ್ ಅವರು ಸಖತ್ ಶ್ರೀಮಂತೆ ಎಂಬುದು ನಿಜ. ಅದಕ್ಕೆ ಸಾಕ್ಷಿಯಾಗಿ ಅವರು ತಮ್ಮ ಫ್ಯಾಕ್ಟರಿಯನ್ನು ತೋರಿಸಿದ್ದಾರೆ. ‘ನ್ಯೂಸ್ ಪಿಂಚ್’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಅವರು ಇದನ್ನು ತೋರಿಸಿದ್ದಾರೆ. ಈ ವೇಳೆ ಅವರು ಹಲವು ಅಂತೆ-ಕಂತೆಗಳಿಗೆ ಸ್ಪಷ್ಟನೆ ನೀಡಿದ್ದಾರೆ. ತಮಗೆ 150 ಬಾಡಿಗಾರ್ಡ್ಸ್ ಇರುವುದು ನಿಜವಲ್ಲ ಎಂದು ತಾನ್ಯಾ ಮಿತ್ತಲ್ ಹೇಳಿದ್ದಾರೆ.
‘ಆ ರೀತಿ ನಾನು ಹೇಳಿಯೇ ಇಲ್ಲ. 150 ಬಾಡಿಗಾರ್ಡ್ಸ್ ಇದ್ದಾರೆ ಅಂತ ನಾನು ಹೇಳಿರುವ ಒಂದೇ ಒಂದು ವಿಡಿಯೋ ಕೂಡ ಇಲ್ಲ. ಇವೆಲ್ಲ ತಂತಾನೆ ಹುಟ್ಟಿಕೊಂಡ ಗಾಸಿಪ್. ಜೀಶಾನ್ ತಮಾಷೆ ಮಾಡುತ್ತಿದ್ದ. ನನಗೆ 150 ಮಂದಿ ಕೆಲಸದವರು ಇದ್ದಾರೆ ಅಂತ ನಾನು ಹೇಳಿದ್ದೆ. ಆದರೆ ಅವನು 150 ಬಾಡಿಗಾರ್ಡ್ಸ್ ಅಂತ ತಿರುಚಿ ಹೇಳಿರಬಹುದು’ ಎಂದಿದ್ದಾರೆ ತಾನ್ಯಾ ಮಿತ್ತಲ್.
ತಾನ್ಯಾ ಮಿತ್ತಲ್ ಅವರು ಶ್ರೀಮಂತ ಉದ್ಯಮಿ ಆದ ಕಾರಣ ಅವರು ಬಾಡಿಗಾರ್ಡ್ಸ್ ಇಟ್ಟುಕೊಂಡಿರುವುದು ನಿಜ. ಅನೇಕ ವರ್ಷಗಳಿಂದ ಅವರಿಗಾಗಿ ಬಾಡಿಗಾರ್ಡ್ಸ್ ಕೆಲಸ ಮಾಡುತ್ತಾ ಬಂದಿದ್ದಾರೆ. ಆದರೆ ನಿಖರವಾಗಿ ಎಷ್ಟು ಮಂದಿ ಬಾಡಿಗಾರ್ಡ್ಸ್ ಇದ್ದಾರೆ ಎಂಬುದನ್ನು ಅವರು ಹೇಳಿಲ್ಲ. ಇಷ್ಟು ದಿನ ಹರಿದಾಡಿದ್ದ ಗಾಸಿಪ್ಗಳಿಗೆ ಅವರು ತೆರೆ ಎಳೆದಿದ್ದಾರೆ.
ಇದನ್ನೂ ಓದಿ: ಹಿಂದಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಸಿಗೋದು ಇಷ್ಟೊಂದು ದೊಡ್ಡ ಸಂಭಾವನೆಯೇ?
‘ನನ್ನದು ಟೆಕ್ಸ್ಟೈಲ್ ಫ್ಯಾಕ್ಟರಿ ಇದೆ. ಒಂದು ಔಷಧಿ ಫ್ಯಾಕ್ಟರಿ ಮತ್ತು ಗಿಫ್ಟ್ ಫ್ಯಾಕ್ಟರಿ ಕೂಡ ಇದೆ. ಆದರೆ, ನಾನು ಎಲ್ಲವನ್ನೂ ತೋರಿಸಲು ಸಾಧ್ಯವಿಲ್ಲ. ನನ್ನ ಬೆಂಬಲಿಗರು ಸುಳ್ಳು ಹೇಳಲ್ಲ. ನಾನು ಕೂಡ ಸುಳ್ಳು ಹೇಳಲ್ಲ ಎಂಬುದನ್ನು ಸಾಬೀತು ಮಾಡುವ ಸಲುವಾಗಿಯೇ ನಾನು ನಿಮಗೆ ಮನೆ ಮತ್ತು ಒಂದು ಫ್ಯಾಕ್ಟರಿ ತೋರಿಸಲು ಒಪ್ಪಿಕೊಂಡೆ’ ಎಂದು ತಾನ್ಯಾ ಮಿತ್ತಲ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




