‘ಐ ಲವ್ ಯುವರ್..’ ಎಂದು ಗಿಲ್ಲಿಗೆ ಹೇಳಿದ ರಕ್ಷಿತಾ; ಶಾಕ್ ಆದ ಕಾವ್ಯಾ
ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿಗೆ ಗಿಲ್ಲಿ ಮೇಲೆ ವಿಶೇಷ ಒಲವಿದೆ. ‘ಗಿಲ್ಲಿಯಂತಹ ಹುಡುಗ ಬೇಕು’ ಎಂದಿದ್ದ ರಕ್ಷಿತಾ, ಈಗ ‘ಐ ಲವ್ ಯುವರ್ ಲೈಫ್’ ಎಂದು ಹಾಡಿದ್ದಾರೆ. ಅವರ ಕೀಟಲೆ ಸ್ವಭಾವ ರಕ್ಷಿತಾಗೆ ಇಷ್ಟವಾಗಿದೆ. ಕಾವ್ಯಾ ಘಟನೆಯಿಂದ ಶಾಕ್ ಆದರ. ರಕ್ಷಿತಾ ಹಾಗೂ ಗಿಲ್ಲಿ ಫಿನಾಲೆ ತಲುಪುವ ಕನಸು ಕಾಣುತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟನ (Gilli Nata) ಮೇಲೆ ರಕ್ಷಿತಾ ಶೆಟ್ಟಿಗೆ ವಿಶೇಷ ಒಲವು ಇದೆ. ಗಿಲ್ಲಿ ನಟ ಅವರಂತಹ ಹುಡುಗ ಬೇಕು ಎಂದು ಈ ಮೊದಲು ರಕ್ಷಿತಾ ಹೇಳಿಕೊಂಡಿದ್ದರು. ಈಗ ಗಿಲ್ಲಿ ನಟ ಅವರು ‘ಐ ಲವ್ ಯುವರ್ ಲೈಫ್’ ಎಂದು ಹಾಡು ಹೇಳಿದ್ದಾರೆ. ಇದನ್ನು ಕೇಳಿ ಕಾವ್ಯಾ ಶಾಕ್ ಆಗಿದ್ದಾರೆ. ರಕ್ಷಿತಾ ಏನು ಹೇಳುತ್ತಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳಲು ಅವರಿಗೆ ಸ್ವಲ್ಪ ಸಮುಯವೇ ಬೇಕಾಯಿತು.
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರಕ್ಷಿತಾ ಹಾಗೂ ಗಿಲ್ಲಿ ಇಬ್ಬರೂ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ. ರಕ್ಷಿತಾ ಶೆಟ್ಟಿ ಆರಂಭದಲ್ಲಿ ಒಂದು ರೀತಿ ಇದ್ದರು. ಆದರೆ, ಈಗ ಅವರ ಆಟ ಸಂಪೂರ್ಣ ಬದಲಾಗಿದೆ. ಇತ್ತೀಚೆಗೆ ಮಾತನಾಡುವಾಗ ರಕ್ಷಿತಾ ಶೆಟ್ಟಿ ಅವರು, ‘ನನಗೆ ಗಿಲ್ಲಿ ರೀತಿಯ ಹುಡುಗ ಬೇಕು’ ಎಂದು ಹೇಳಿದ್ದರು. ಇದು ಚರ್ಚೆಗೆ ಕಾರಣ ಆಗಿತ್ತು.
ಗಿಲ್ಲಿ ರೀತಿಯ ಹುಡುಗನೇ ಬೇಕು ಎಂದು ರಕ್ಷಿತಾ ಶೆಟ್ಟಿ ಹೇಳಲು ಒಂದು ಕಾರಣವೂ ಇತ್ತು. ರಕ್ಷಿತಾ ಶೆಟ್ಟಿ ಅವರಿಗೆ ಕೀಟಲೆ ಮಾಡೋ ಹುಡುಗ ಎಂದರೆ ತುಂಬಾನೇ ಇಷ್ಟವಂತೆ. ಗಿಲ್ಲಿ ಇಡೀ ದಿನ ಮನೆಯಲ್ಲಿ ಕೀಟಲೆ ಮಾಡುತ್ತಾ ಇರುತ್ತಾರೆ. ಇದು ಅವರಿಗೆ ಸಖತ್ ಇಷ್ಟ ಆಗಿದೆ. ಈಗ ಗಿಲ್ಲಿ ಜೀವನವನ್ನು ಇಷ್ಟಪಡುತ್ತೇನೆ ಎಂದು ರಕ್ಷಿತಾ ಹೇಳಿಕೊಂಡಿದ್ದಾರೆ.
Most awaited video:😂
Rakshita to Gilli:-
“I love your life.”
Rashika and Kavya’s expressions. 😉#Gilli | #GilliNata pic.twitter.com/49KYb0y1A8
— Cinema Premi✍🏻 (@karansharmain) January 1, 2026
ಹೊಸ ವರ್ಷದ ಸಂದರ್ಭದಲ್ಲಿ ಎಲ್ಲರೂ ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ರಕ್ಷಿತಾ ಶೆಟ್ಟಿ ಅವರು, ‘ಐ ಲವ್ ಯುವರ್ ಲೈಫ್’ ಎಂದು ಗಿಲ್ಲಿ ಬಳಿ ಹಾಡು ಹೇಳಿದ್ದಾರೆ. ಇದನ್ನು ಕೇಳಿ ಕಾವ್ಯಾ ಶಾಕ್ ಆದರು. ರಾಶಿಕಾ ಎಕ್ಸ್ಪ್ರೆಷನ್ ಬದಲಾಗಿದೆ.
ಇದನ್ನೂ ಓದಿ: ಗೆಲ್ಲೋ ಮೊದಲೇ ಬೀಗಿದ ಗಿಲ್ಲಿ ನಟ; ಕೊನೆಗೆ ಸಿಕ್ಕಿದ್ದು ಸೋಲು ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ಇಬ್ಬರೂ ಫಿನಾಲೆ ತಲುಪೋ ಕನಸು ಕಾಣುತ್ತಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 9 ಮಂದಿ ಇದ್ದಾರೆ. ಈ ವಾರ, ಮುಂದಿನ ವಾರ ಹಾಗೂ ಫಿನಾಲೆ ವಾರದ ಮಧ್ಯದಲ್ಲಿ ಒಬ್ಬರು ಎಲಿಮಿನೇಟ್ ಆಗುವ ಸಾಧ್ಯತೆ ಇದೆ. ಫಿನಾಲೆಯಲ್ಲಿ ಆರು ಮಂದಿ ಇದ್ದರೂ ಅಚ್ಚರಿ ಏನಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




