ಗೆಲ್ಲೋ ಮೊದಲೇ ಅಶ್ವಿನಿ ಎದುರು ಬೀಗಿದ ಗಿಲ್ಲಿ ನಟ; ಕೊನೆಗೆ ಸಿಕ್ಕಿದ್ದು ಸೋಲು
ಗಿಲ್ಲಿ ನಟ ಬಿಗ್ ಬಾಸ್ ಟಾಸ್ಕ್‌ನಲ್ಲಿ ಗೆಲುವಿಗೂ ಮೊದಲೇ ಸಂಭ್ರಮಿಸಿ ವಿವಾದಕ್ಕೆ ಸಿಲುಕಿದ್ದಾರೆ. ಅಶ್ವಿನಿ ಎದುರು ಸುಲಭ ಗೆಲುವು ಎಂದು ಬೀಗಿದ ಗಿಲ್ಲಿ ಕೊನೆಗೆ ಸೋಲನುಭವಿಸಿದರು. ತಮ್ಮ ಸೋಲನ್ನು ಒಪ್ಪಿಕೊಳ್ಳದ ಗಿಲ್ಲಿ, ಅಶ್ವಿನಿ ಗೆಲುವಿಗೆ ಧನುಷ್ ಕಾರಣ ಎಂದು ವಾದಿಸಿದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬಿಗ್ ಬಾಸ್ (Bigg Boss) ಮನೆಯಲ್ಲಿರೋ ಗಿಲ್ಲಿ ನಟ ಅವರಿಗೆ ಟಾಸ್ಕ್ ಆಡೋಕೆ ಬರೋದಿಲ್ಲ ಎಂದು ಅನೇಕರು ಅಪಸ್ವರ ತೆಗೆದಿದ್ದು ಇದೆ. ಆದರೆ. ಇದನ್ನು ಗಿಲ್ಲಿ ಒಪ್ಪಿಕೊಳ್ಳೋದಿಲ್ಲ. ತಾವು ಒಳ್ಳೆಯ ರೀತಿಯಲ್ಲಿ ಟಾಸ್ಕ್ ಆಡುತ್ತೇವೆ ಎಂದು ಅವರು ವಾದಿಸುತ್ತಲೇ ಬಂದಿದ್ದಾರೆ. ಈಗ ಗಿಲ್ಲಿ ನಟ ಅವರು ಟಾಸ್ಕ್ ಆಡುವಾಗ ಗೆಲ್ಲುವ ಮೊದಲೇ ಸಂಭ್ರಮಿಸಿದ್ದಾರೆ. ಕೊನೆಗೆ ಅವರಿಗೆ ಸಿಕ್ಕಿದ್ದು ಸೋಲು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದೆ.
ಫಿನಾಲೆ ಕಂಟೆಂಡರ್ ಟಾಸ್ಕ್ಗೆ ಆಯ್ಕೆ ಆಗಲು ಟಾಸ್ಕ್ ಒಂದನ್ನು ನೀಡಲಾಯಿತು. ಗಿಲ್ಲಿ ರಾಶಿಕಾ ಒಂದು ತಂಡವಾದರೆ, ಧನುಷ್ ಹಾಗೂ ಅಶ್ವಿನಿ ಒಂದು ತಂಡದಲ್ಲಿ ಇದ್ದರು. ಆಟ ಆಡುವಾಗ ಗಿಲ್ಲಿ ಒಂದು ಮಾತನ್ನು ಹೇಳಿದರು. ‘ಆಡ್ತಾ ಇರೋದು ತಪ್ಪಲ್ಲ. ಆದರೆ, ಸರಿಯಾದ ವ್ಯಕ್ತಿ ಜೊತೆ ಆಡದೇ ಇರೋದು ತಪ್ಪು’ ಎಂದು ಗಿಲ್ಲಿ ನಟ ಹೇಳಿದ್ದಾರೆ. ಅಶ್ವಿನಿ ಬಲವಾದ ಎದುರಾಳಿ ಅಲ್ಲ ಎಂಬುದು ಇದರ ಅರ್ಥವಾಗಿತ್ತು. ಇದು ರಘು ಕೋಪಕ್ಕೆ ಕಾರಣ ಆಗಿದೆ.
‘ಇದೆಲ್ಲವನ್ನೂ ಗೆದ್ಮೇಲೆ ಇಟ್ಕೋ. ಗೆಲ್ಲುವ ಮೊದಲೇ ಸಂಭ್ರಮಿಸಬಾರದು’ ಎಂದು ರಘು ಕಿವಿಮಾತು ಹೇಳಿದರು. ಆದರೆ, ಗಿಲ್ಲಿ ಕೇಳಲೇ ಇಲ್ಲ. ಅವರು ತಾವೇ ಗೆಲ್ಲುತ್ತೇವೆ ಎಂದುಕೊಂಡು ಸಂಭ್ರಮಿಸಲು ಆರಂಭಿಸಿದರು. ಕೊನೆಗೆ ಅಲ್ಲಾಗಿದ್ದೇ ಬೇರೆ. ಗಿಲ್ಲಿ ತಂಡ ಸೋತಿದೆ. ಧನುಷ್ ಹಾಗೂ ಅಶ್ವಿನಿ ತಂಡ ಗೆದ್ದಿದೆ.
ಇದನ್ನೂ ಓದಿ: ಇಲ್ಲಿದ್ರೆ ಆನಂದ, ಮನೆಗೋದ್ರೆ ಗೋವಿಂದ: ಗಿಲ್ಲಿಯ ಬಿಗ್ಬಾಸ್ ರ್ಯಾಪ್ ಸಾಂಗ್
ತಾನು ಸೋತಿದ್ದನ್ನು ಒಪ್ಪಿಕೊಳ್ಳಲು ಗಿಲ್ಲಿ ರೆಡಿ ಇರಲೇ ಇಲ್ಲ. ಅವರು ಅಶ್ವಿನಿ ಗೌಡ ಅವರ ವೀಕ್ನೆಸ್ ಪಾಯಿಂಟ್ ತೋರಿಸೋಕೆ ಹೋದರು. ‘ಅಶ್ವಿನಿಗೆ ಗೆಲ್ಲೋಕೆ ಮತ್ತೊಬ್ಬರು ಇರಲೇಬೇಕು. ಧನುಷ್ ಬೆಂಬಲದಿಂದ ಅವರು ಗೆದ್ದಿದ್ದಾರೆ ಅಷ್ಟೇ. ಇಲ್ಲಿಯವರೆಗೆ ನಾನು ಅವರನ್ನು ಕರೆದುಕೊಂಡು ಬಂದಿದ್ದೇನೆ. ಮುಂದೆ ಅವರನ್ನು ಕರೆದುಕೊಂಡು ಹೋಗುವ ಜವಾಬ್ದಾರಿ ನಿಮ್ಮದು’ ಎಂದು ಧನುಷ್ಗೆ ಹೇಳಿದರು ಗಿಲ್ಲಿ. ಗಿಲ್ಲಿ ಗೆದ್ದು ತೋರಿಸಬೇಕಿತ್ತು ಎಂದು ಅನೇಕರು ಹೇಳಿದ್ದಾರೆ. ಗಿಲ್ಲಿ ಹಾಗೂ ರಾಶಿಕಾಗೆ ಫಿನಾಲೆ ವಾರಕ್ಕೆ ನೇರವಾಗಿ ತಲುಪುವ ಅವಕಾಶ ಮಿಸ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:00 am, Fri, 2 January 26




