AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಿಲ್ಲಿ ಬಳಿ ಕ್ಷಮೆ ಕೇಳಿದ ಧ್ರುವಂತ್; ಆ ಒಂದು ಘಟನೆ ಎಲ್ಲವನ್ನೂ ಬದಲಿಸಿತು?

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಧ್ರುವಂತ್ ಗಿಲ್ಲಿಗೆ ಕ್ಷಮೆ ಕೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸದಾ ಗಿಲ್ಲಿ ಜೊತೆ ಕಿತ್ತಾಡುತ್ತಿದ್ದ ಧ್ರುವಂತ್, ಹೊಸ ವರ್ಷದಂದು ಗಿಲ್ಲಿಯ ರ್ಯಾಪ್ ಹಾಡು ಕೇಳಿ ಮನಸೋತರು. ತಮ್ಮ ಬಗ್ಗೆ ಹಾಡಿನಲ್ಲಿದ್ದ ಸಕಾರಾತ್ಮಕ ಸಾಲುಗಳಿಂದ ಪ್ರಭಾವಿತರಾಗಿ, ತಮ್ಮ ಹಿಂದಿನ ನಡವಳಿಕೆಗಾಗಿ ಗಿಲ್ಲಿ ಬಳಿ ಕ್ಷಮೆ ಯಾಚಿಸಿದರು ಎನ್ನಲಾಗಿದೆ.

ಗಿಲ್ಲಿ ಬಳಿ ಕ್ಷಮೆ ಕೇಳಿದ ಧ್ರುವಂತ್; ಆ ಒಂದು ಘಟನೆ ಎಲ್ಲವನ್ನೂ ಬದಲಿಸಿತು?
ಧ್ರುವಂತ್-ಗಿಲ್ಲಿ
ರಾಜೇಶ್ ದುಗ್ಗುಮನೆ
|

Updated on: Jan 02, 2026 | 1:17 PM

Share

‘ಬಿಗ್ ಬಾಸ್’ ಮನೆಯಲ್ಲಿ ಯಾರು ಯಾವಾಗ ಬದಲಾಗುತ್ತಾರೆ ಎಂದು ಊಹಿಸೋದು ಕಷ್ಟ. ಈಗ ಧ್ರುವಂತ್ ವಿಷಯದಲ್ಲೂ ಹೀಗೆಯೇ ಆಗಿದೆ. ಗಿಲ್ಲಿ (Gilli) ಜೊತೆ ಸದಾ ಕಿತ್ತಾಡುತ್ತಿದ್ದ ಅವರು ಏಕಾಏಕಿ ಬದಲಾಗಿದ್ದಾರೆ. ಈ ಹಿಂದೆ ಮಾಡಿದ ಬೇಸರಕ್ಕೆ ಗಿಲ್ಲಿ ಬಳಿ ಧ್ರುವಂತ್ ಕ್ಷಮೆ ಕೇಳಿದ್ದಾರೆ. ಹೊಸ ವರ್ಷದ ಸಂದರ್ಭದಲ್ಲಿ ನಡೆದ ಈ ಬೆಳವಣಿಗೆ ಅಚ್ಚರಿ ತಂದಿದೆ.

ಬಿಗ್ ಬಾಸ್ ಕನ್ನಡದಲ್ಲಿ ಧ್ರುವಂತ್ ಅವರು ಸಾಕಷ್ಟು ಗಮನ ಸೆಳೆದಿದ್ದಾರೆ. ಅವರು ಯಾವ ಕ್ಷಣದಲ್ಲಿ ಹೇಗಿರುತ್ತಾರೆ ಎಂಬುದನ್ನು ಊಹಿಸೋದು ಕಷ್ಟ. ಅವರು ಬಹುತೇಕ ಸಂದರ್ಭಗಳಲ್ಲಿ ಗಿಲ್ಲಿ ಜೊತೆ ಕಿತ್ತಾಡಿಕೊಳ್ಳುತ್ತಾ ಕಾಣಿಸುತ್ತಿದ್ದರು. ಗಿಲ್ಲಿ ಏನೇ ಹೇಳಿದರೂ ಅದನ್ನು ವಿರೋಧಿಸುತ್ತಿದ್ದರು. ಜನವರಿ 1ರ ಎಪಿಸೋಡ್​​ನಲ್ಲೂ ಹಾಗೆಯೇ ಆಗಿದೆ.

ಗಿಲ್ಲಿಗೆ ರ್ಯಾಪ್ ಸಾಂಗ್ ಬರೆಯುವಂತೆ ಬಿಗ್ ಬಾಸ್ ಸೂಚಿಸಿದರು. ಮನೆಯ ಸದಸ್ಯರು ಹಾಗೂ ಇಷ್ಟು ದಿನಗಳ ಜರ್ನಿ ಬಗ್ಗೆ ಇದರಲ್ಲಿ ವಿವರಣೆ ಇರಬೇಕು ಎಂಬ ಸೂಚನೆ ಇತ್ತು. ಈ ಹಾಡು ಬರೆಯುವಾಗ ಗಿಲ್ಲಿ ಬಳಿ ಬಂದ ಧ್ರುವಂತ್ ಕಿರಿಕ್ ಮಾಡಿಕೊಂಡರು. ‘ನನ್ನ ಹೆಸರನ್ನು ಹಾಡಿನಿಂದ ತೆಗಿ’ ಎಂದು ಪದೇ ಪದೇ ಹೇಳಿದರು.

ಇದನ್ನೂ ಓದಿ: ಗೆಲ್ಲೋ ಮೊದಲೇ ಅಶ್ವಿನಿ ಎದುರು ಬೀಗಿದ ಗಿಲ್ಲಿ ನಟ; ಕೊನೆಗೆ ಸಿಕ್ಕಿದ್ದು ಸೋಲು

ಅಲ್ಲೇ ಇದ್ದ ರಘು ಅವರು ಇದನ್ನು ಅಲ್ಲಗಳೆದಿದ್ದಾರೆ. ‘ಪಾಸಿಟಿವ್ ಆಗಿ ಮಾತ್ರ ಹಾಡನ್ನು ಬರೆಯಲು ಹೇಳಿದ್ದೇನೆ. ಹೀಗಾಗಿ, ನಿನ್ನ ಬಗ್ಗೆ ಕೆಟ್ಟದಾಗಿ ಇರೋದಿಲ್ಲ’ ಎಂದು ರಘು ಗಿಣಿಗೆ ಹೇಳಿದಂತೆ ಹೇಳಿದರೂ ಕಿವಿಗೆ ಹಾಕಿಕೊಂಡಿಲ್ಲ ಧ್ರುವಂತ್. ನಂತರ ಹಾಡಿನಲ್ಲಿ ಧ್ರುವಂತ್ ಬಗ್ಗೆ ಇದ್ದ ಸಾಲುಗಳು ಕೇಳಿ ಅವರೇ ಖುಷಿಪಟ್ಟರು.

‘ಧ್ರುವಂತ್​​ ಅಂದ್ರೆ ಭಕ್ತಿ, ಅದೇ ಅವರಿಗೆ ಶಕ್ತಿ’ ಎಂದು ಹಾಡಿನಲ್ಲಿ ಬರೆದಿದ್ದರು ಗಿಲ್ಲಿ. ಈ ಸಾಲು ಧ್ರುವಂತ್​​ಗೆ ಖುಷಿ ಕೊಟ್ಟಿದೆ. ಇದಾದ ಬಳಿಕ ಅವರು ಕ್ಷಮೆ ಕೇಳಿದರೇ ಎಂಬ ಪ್ರಶ್ನೆ ಮೂಡಿದೆ. ‘ಹ್ಯಾಪಿ ನ್ಯೂ ಇಯರ್’ ಎಂದು ಇಬ್ಬರೂ ವಿಶ್ ಮಾಡಿಕೊಂಡರು. ಆ ಬಳಿಕ ಗಿಲ್ಲಿಗೆ ಫ್ಲೈಯಿಂಗ್ ಕಿಸ್ ಕೊಟ್ಟರು. ಕ್ಷಮೆ ಕೇಳಿದರು. ಇದನ್ನು ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಗಿಲ್ಲಿ ನಟ ಬರೆದು ಹಾಡಿದ ರ್ಯಾಪ್ ಸಾಂಗ್ ಪೂರ್ಣ ವಿಡಿಯೋ ಇಲ್ಲಿದೆ
ಗಿಲ್ಲಿ ನಟ ಬರೆದು ಹಾಡಿದ ರ್ಯಾಪ್ ಸಾಂಗ್ ಪೂರ್ಣ ವಿಡಿಯೋ ಇಲ್ಲಿದೆ
2026ರಲ್ಲಿ ಎದುರಾಗುವ ಆಕಸ್ಮಿಕ ಕಷ್ಟಗಳಿಂದ ಪಾರಾಗುವ ವಿಧಾನ
2026ರಲ್ಲಿ ಎದುರಾಗುವ ಆಕಸ್ಮಿಕ ಕಷ್ಟಗಳಿಂದ ಪಾರಾಗುವ ವಿಧಾನ
ಇಂದು ಈ ರಾಶಿಯವರ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು
ಇಂದು ಈ ರಾಶಿಯವರ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು
ನನ್ನನ್ನು ಮುಗಿಸಲೆಂದೇ ಗುಂಡಿನ ದಾಳಿ; ಜನಾರ್ದನ ರೆಡ್ಡಿ ಆರೋಪ
ನನ್ನನ್ನು ಮುಗಿಸಲೆಂದೇ ಗುಂಡಿನ ದಾಳಿ; ಜನಾರ್ದನ ರೆಡ್ಡಿ ಆರೋಪ
ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್; ಕಾಂಗ್ರೆಸ್​​ ಕಾರ್ಯಕರ್ತ ಸಾವು
ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್; ಕಾಂಗ್ರೆಸ್​​ ಕಾರ್ಯಕರ್ತ ಸಾವು