AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಗ್ನಿ ದುರಂತಗಳ ಬೆನ್ನಲ್ಲೇ ಎಚ್ಚೆತ್ತುಕೊಂಡ KSRTC: ಬಸ್ಸಿನಲ್ಲಿ ಸೇಫ್ಟಿ ಅಳವಡಿಕೆ ಪ್ಲಾನ್

ಇತ್ತೀಚಿಗೆ ಖಾಸಗಿ ನೈಟ್ ಸರ್ವಿಸ್ ಬಸ್​​ಗಳಲ್ಲಿ ಅಗ್ನಿ ಅವಘಡಗಳು ಸಂಭವಿಸಿ ಅಮಾಯಕ ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಕೆಎಸ್ಆರ್​ಟಿಸಿ ಅತ್ಯಾಧುನಿಕ ಸೇಫ್ಟಿ ಮೆಜರ್ಮೆಂಟ್ ಅಳವಡಿಸಲು ಮುಂದಾಗಿದೆ. ಅಂಬಾರಿ ಉತ್ಸವ ಮತ್ತು ಅಂಬಾರಿ 2.0 ಬಸ್​ಗಳಲ್ಲಿ ಅತ್ಯಾಧುನಿಕ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರುತ್ತಿದೆ.

ಅಗ್ನಿ ದುರಂತಗಳ ಬೆನ್ನಲ್ಲೇ ಎಚ್ಚೆತ್ತುಕೊಂಡ KSRTC: ಬಸ್ಸಿನಲ್ಲಿ ಸೇಫ್ಟಿ ಅಳವಡಿಕೆ ಪ್ಲಾನ್
Ksrtc Bus
Kiran Surya
| Edited By: |

Updated on:Jan 02, 2026 | 10:59 PM

Share

ಬೆಂಗಳೂರು, ಜನವರಿ 02: ಇತ್ತೀಚೆಗೆ ನೈಟ್ ಸರ್ವಿಸ್ ಖಾಸಗಿ ಬಸ್​ಗಳಲ್ಲಿ ಅಗ್ನಿ ದುರಂತಗಳು ಸಂಭವಿಸಿ ಅಮಾಯಕ ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಫುಲ್ ಅಲರ್ಟ್ ಆಗಿರುವ ಕೆಎಸ್ಆರ್​​ಟಿಸಿ (KSRTC) ನಿಗಮ ಅತ್ಯಾಧುನಿಕ ಅಡಾಸ್ ಸಿಸ್ಟಮ್ ಅಳವಡಿಕೆ ಮಾಡಿಕೊಂಡಿದೆ. ಮೊದಲ ಹಂತದಲ್ಲಿ ಕೆಎಸ್ಆರ್​ಟಿಸಿ ಅಂಬಾರಿ ಉತ್ಸವ ಮತ್ತು ಅಂಬಾರಿ 2.0 ಬಸ್​ಗಳಲ್ಲಿ ಅತ್ಯಾಧುನಿಕ ಮುಂಜಾಗ್ರತಾ ಕ್ರಮಗಳನ್ನು (Safety) ತೆಗೆದುಕೊಳ್ಳಲು ಮುಂದಾಗಿದೆ.

ಬಸ್​​ಗಳಲ್ಲಿ ಏನೆಲ್ಲಾ ವ್ಯವಸ್ಥೆ ಇರಲಿದೆ

ಮೊದಲಿಗೆ ಅಂಬಾರಿ ಉತ್ಸವ ಎಸಿ ಸ್ಲೀಪರ್ ಬಸ್​ಗಳಲ್ಲಿ ಅಳವಡಿಸಿರುವ ಮುಂಜಾಗ್ರತಾ ಕ್ರಮಗಳನ್ನು ನೋಡುವುದಾದರೆ, ಡ್ರೈವರ್ ಸೀಟ್ ಬಳಿ ಡ್ಯಾಶ್ ಕ್ಯಾಮ್ ಅಳವಡಿಸಲಾಗಿದೆ. ಈ ಕ್ಯಾಮೆರಾದಿಂದ ಬಸ್ ಆಕ್ಸಿಡೆಂಟ್​ಗೆ ಕಾರಣ ಗೊತ್ತಾಗಲಿದೆ. ಏನಾದರೂ ಬಸ್​​ನಲ್ಲಿ ಅಗ್ನಿ ಅವಘಡಗಳು ಸಂಭವಿದರೆ, ಪ್ರಯಾಣಿಕರನ್ನು ಅಲರ್ಟ್ ಮಾಡಲು ಡ್ರೈವರ್ ಮುಂಭಾಗದಲ್ಲಿ ಅನೌಸ್ಸರ್ ಇಡಲಾಗಿದೆ. ಅಂದರೆ ಫೈರ್ ಡಿಟೆಕ್ಷನ್ ಆ್ಯಂಡ್​ ಸಪ್ರೇಷನ್ ಸಿಸ್ಟಮ್ (FDSS) ಇದು ಇಂಜಿನ್ ಕಂಪಾರ್ಟ್ಮೆಂಟ್​​ನಲ್ಲಿ ಏನಾದರೂ ಬೆಂಕಿ ಕಾಣಿಸಿಕೊಂಡರೇ ಇಂಜಿನ್​ ಕಂಪಾರ್ಟ್ಮೆಂಟ್​ನಲ್ಲಿ ಆಟೋಮ್ಯಾಟಿಕ್ ಆಗಿ 15 ನಾಜಲ್​ಗಳಿಂದ ಫೋಮ್ ಸ್ಪೈ ಆಗುತ್ತದೆ.

ಇದನ್ನೂ ಓದಿ: ಬೆಂಗಳೂರಿನ ವಾಹನ ಸವಾರರಿಗೆ ಗುಡ್ ನ್ಯೂಸ್: 6 ವರ್ಷದ ಬಳಿಕ ರಸ್ತೆ ಪುನರಾರಂಭ, ತಗ್ಗಲಿದೆ ಟ್ರಾಫಿಕ್‌

ಒಂದು ವೇಳೆ ಸ್ಪ್ರೈ ಆಗಲಿಲ್ಲ ಅಂದರೆ ಡ್ರೈವರ್ ಮುಂಭಾಗದ ಡಿಸ್ಪೈಯಲ್ಲಿರುವ ಬಟನ್ ಪ್ರೆಸ್ ಮಾಡಿದರೆ, ನಾಜಲ್​ಗಳ ಮೂಲಕ ಅಗ್ನಿ ಅವಘಡ ತಪ್ಪಲಿದೆ. ಇದಕ್ಕಾಗಿ ಬಸ್ ಹಿಂಭಾಗದಲ್ಲಿ 4 ಕೆಜಿಯ ಫೋಮ್ ಸಿಲಿಂಡರ್ ಅಳವಡಿಸಲಾಗಿದೆ. ಇತ್ತ ಬಸ್​ನಲ್ಲಿ ಏನಾದರೂ ಬೆಂಕಿ ಕಾಣಿಸಿಕೊಂಡರೇ ಫ್ರಂಟ್ ಗ್ಲಾಸ್ ಒಡೆದು ತಪ್ಪಿಸಿಕೊಳ್ಳಲು ಡ್ರೈವರ್ ಸೀಟ್ ಹಿಂಭಾಗದಲ್ಲಿ ದೊಡ್ಡದಾದ ಹ್ಯಾಮರ್ ಇಡಲಾಗಿದೆ. ಇತ್ತ ಏನಾದರೂ ಸಮಸ್ಯೆ ಎದುರಾದರೆ ತಪ್ಪಿಸಿಕೊಳ್ಳಲು ಪ್ರತಿ ಬರ್ತ್ ಸೀಟ್​ನಲ್ಲೂ ಕಿಟಕಿ ಗ್ಲಾಸ್ ಒಡೆಯಲು ಹ್ಯಾಮರ್ ಇಡಲಾಗಿದೆ. ಬಸ್​ನಲ್ಲಿ ಏನಾದರೂ ಸಮಸ್ಯೆ ಕಾಣಿಸಿಕೊಂಡಾಗ ಡ್ರೈವರ್ ಮುಂಭಾಗದಲ್ಲಿ ಪ್ಯಾನಿಕ್ ಬಟನ್ ಅನ್ನು ಕೂಡ ಅಳವಡಿಸಿದ್ದು, ಅದನ್ನು ಡ್ರೈವರ್ ಪ್ರೆಸ್ ಮಾಡಿದಾಗ ಇದರಿಂದ ಶಬ್ದ ಉಂಟಾಗಿ ಪ್ರಯಾಣಿಕರಿಗೆ ಎಚ್ಚರಿಕೆ ಸಂದೇಶ ರವಾನೆ ಆಗುತ್ತದೆ. ಬಸ್ ಒಳಗೆ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ 4 ಕೆಜಿಯ ಎರಡು ಫೈರ್ ಎಸ್ಟಿಂಗ್ ವಿಷರ್ ಅಳವಡಿಸಲಾಗಿದೆ.

ಇನ್ನು ಎಮರ್ಜೆನ್ಸಿ ಎಕ್ಸಿಟ್ ಡೋರ್ ಅನ್ನ ವಾಹನದ ಬಲಭಾಗದ ಮೂರನೇ ಬರ್ತ್​​ನಲ್ಲಿ ಅಳವಡಿಸಿದ್ದು, ತುರ್ತು ಸಂದರ್ಭದಲ್ಲಿ ಅಗ್ನಿ ಅವಘಡದ ವೇಳೆ ಪ್ರಯಾಣಿಕರು ಈ ಡೋರ್ ಮೂಲಕ ಎಕ್ಸಿಟ್ ಆಗಬಹುದು. ಈ ಬರ್ತ್ ಅನ್ನು ಯಾರಿಗೂ ಬುಕ್ ಮಾಡೋದಿಲ್ವಂತೆ. ಇದು ಯಾವಾಗಲೂ ಖಾಲಿಯಾಗಿರಲಿದೆ. ಬಸ್ ಒಳಭಾಗದಲ್ಲಿ ಎರಡು ಸೆಲೂನ್ ಕ್ಯಾಮೆರಾ ಅಳವಡಿಸಲಾಗಿದೆ.

ಕುಡಿದು ಬಂದರೆ ಬಸ್​​​ ಸ್ಟಾರ್ಟ್ ಆಗುವುದಿಲ್ಲ

ದೇಶದಲ್ಲಿ ಇದೆ ಮೊದಲ ಬಾರಿಗೆ ಕೆಎಸ್ಆರ್​​ಟಿಸಿ ನಿಗಮದ ಬಸ್​ಗಳಲ್ಲಿ ಅತ್ಯಾಧುನಿಕ ಅಡಾಸ್ ಸಿಸ್ಟಮ್ ಅನ್ನು ಕೆಎಸ್ಆರ್​ಟಿಸಿ ಬಸ್​ಗಳಲ್ಲಿ ಅಳವಡಿಸಲು ಮುಂದಾಗಿದ್ದು, ಈ ಅಡಾಸ್ ಸಿಸ್ಟಮ್ ಡ್ರೈವಿಂಗ್ ವೇಳೆ, ಫೋನ್ ಬಳಕೆ ಮಾಡಿದರೆ, ನಿದ್ರೆಗೆ ಜಾರಿದರೆ, ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡರೇ ಕೋಲಿಜಿಯನ್ ವಾರ್ನಿಂಗ್ ನೀಡಲಾಗುತ್ತದೆ. ಈ ವೇಳೆ ಮೊದಲಿಗೆ ಬೀಪ್ ಸೌಂಡ್ ನೀಡುತ್ತದೆ. ನಂತರ ಕ್ರಿಟಿಕಲ್ ವಾರ್ನಿಂಗ್ ನೀಡಿ, ವಾಹನದ ವೇಗ ಮಿತಿ ಕಡಿಮೆ ಮಾಡಿ ಆಕ್ಸಿಡೆಂಟ್ ತಡೆಗಟ್ಟಲು ಸಹಾಯ ಮಾಡುತ್ತದೆ. ಡ್ರೈವರ್ ಡ್ರೈವಿಂಗ್ ಮಾಡುವ ವೇಳೆ ಕುಡಿದು ಬಂದಿದರೆ ವಾಹನ ಸ್ಟಾರ್ಟ್ ಆಗುವುದಿಲ್ಲವಂತೆ.

ಇತ್ತ ಐರಾವತ ಬಸ್​ಗಳಲ್ಲಿ ಯಾವೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಅಂತ ನೋಡುವುದಾದರೆ, ಪ್ರಯಾಣಿಕರ ಸೀಟ್ ಬಳಿ 30 ಸ್ಪ್ರಿಂಕ್ಲರ್ ನಾಜಲ್ ಅಳವಡಿಸಿದ್ದು, ಅಗ್ನಿ ಅವಘಡ ಸಂಭವಿಸಿದರೆ ಸ್ವಯಂಚಾಲಿತವಾಗಿ ನೀರು ಸರಬರಾಜು ಆಗುತ್ತದೆ. ಇದಕ್ಕಾಗಿ ಬಸ್ ಲಗೇಜ್​​ ಕಂಪಾರ್ಟ್‌ಮೆಂಟ್ ಬಳಿ 170 ಲೀಟರ್ ಕೆಪಾಸಿಟಿಯ ಎರಡು ಸ್ಟೈನ್ಲೆಸ್ ಸ್ಟೀಲ್ ಟ್ಯಾಂಕರ್​ಗಳನ್ನು ಅಳವಡಿಸಲಾಗಿದೆ.

ಕೆಎಸ್​​ಆರ್​​ಟಿಸಿ ಡಿ.ಸಿ ನಾಗರಾಜ್ ಮೂರ್ತಿ ಹೇಳಿದ್ದಿಷ್ಟು

ಬಸ್ ಬಲಭಾಗದ ಹಿಂಬದಿಯಲ್ಲಿ ಎಮರ್ಜೆನ್ಸಿ ಎಕ್ಸಿಟ್ ಡೋರ್ ಅಳವಡಿಸಿದ್ದು, ತುರ್ತು ಸಂದರ್ಭದಲ್ಲಿ ಸ್ಟೀಲ್ ಲ್ಯಾಡರ್ ಅಳವಡಿಸಲಾಗಿದೆ. ಇದರಿಂದ ಪ್ರಯಾಣಿಕರು ಸೇಫ್ ಆಗಿ ಬಸ್​ನಿಂದ ಕೆಳಗೆ ಇಳಿಯಬಹುದು ಎಂದು ಕೆಎಸ್​​ಆರ್​​ಟಿಸಿ ಡಿ.ಸಿ ನಾಗರಾಜ್ ಮೂರ್ತಿ ಹೇಳುತ್ತಾರೆ.

ಇದನ್ನೂ ಓದಿ: ದೇವನಹಳ್ಳಿ: ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

ಒಟ್ಟನಿಲ್ಲಿ ಇತ್ತೀಚೆಗೆ ನೈಟ್ ಸರ್ವಿಸ್ ಖಾಸಗಿ ಬಸ್​ಗಳಲ್ಲಿ ಅಗ್ನಿ ಅವಘಡಗಳು ಸಂಭವಿಸಿ ನೂರಾರು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ಕೆಎಸ್ಆರ್​​ಟಿಸಿ ಫುಲ್ ಅಲರ್ಟ್ ಆಗಿರುವುದಂತು  ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:57 pm, Fri, 2 January 26