AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿಚ್ಚ ಸುದೀಪ್ ಕಾಲೆಳೆದ ರೀತಿಗೆ ನಾಚಿ ನೀರಾದ ಹಾಸ್ಯ ನಟ ಯೋಗಿ ಬಾಬು

ಕಿಚ್ಚ ಸುದೀಪ್ ಅವರು 'ಮಾರ್ಕ್' ಸಿನಿಮಾದ ಶೂಟಿಂಗ್ ವೇಳೆ ನಟ ಯೋಗಿ ಬಾಬು ಅವರ ಬ್ಯುಸಿ ವೇಳಾಪಟ್ಟಿಯನ್ನು ಹಾಸ್ಯಮಯವಾಗಿ ಕಾಲೆಳೆದರು. ಯೋಗಿ ಬಾಬು 'ಇನ್ಸ್ಟಾಲ್ಮೆಂಟ್'ನಲ್ಲಿ ಚಿತ್ರೀಕರಣಕ್ಕೆ ಬರುತ್ತಿದ್ದರು ಎಂದು ಸುದೀಪ್ ಹೇಳಿದ್ದು ನಗೆ ತರಿಸಿದೆ. ಪ್ರಸ್ತುತ ತಮಿಳಿನಲ್ಲಿ ಅತ್ಯಂತ ಬೇಡಿಕೆಯ ನಟನಾಗಿರುವ ಯೋಗಿ ಬಾಬು ಅವರ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂಬುದನ್ನು ಸುದೀಪ್ ಅವರ ಮಾತುಗಳು ಸೂಚಿಸುತ್ತವೆ.

ಕಿಚ್ಚ ಸುದೀಪ್ ಕಾಲೆಳೆದ ರೀತಿಗೆ ನಾಚಿ ನೀರಾದ ಹಾಸ್ಯ ನಟ ಯೋಗಿ ಬಾಬು
ಸುದೀಪ್-ಯೋಗಿ ಬಾಬು
 ಶ್ರೀಲಕ್ಷ್ಮೀ ಎಚ್
| Edited By: |

Updated on:Jan 09, 2026 | 7:45 PM

Share

ಕಿಚ್ಚ ಸುದೀಪ್ (Kichcha Sudeep) ಅವರು ‘ಮಾರ್ಕ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಯಶಸ್ಸು ಕಂಡಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಈ ನಿರೀಕ್ಷೆಯನ್ನು ಮೀರಿ ಸಿನಿಮಾ ಯಶಸ್ಸು ಕಂಡಿದೆ ಎಂದರೂ ತಪ್ಪಾಗಲಾರದು. ಈ ಸಿನಿಮಾದಲ್ಲಿ ತಮಿಳು ನಟ ಯೋಗಿ ಬಾಬು ಕೂಡ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಸುದೀಪ್ ಮಾತನಾಡುವಾಗ ಯೋಗಿ ಬಾಬು ಅವರನ್ನು ಹೊಗಳಿದರು.

ಯೋಗಿ ಬಾಬು ಅವರು ಸ್ಟಾರ್ ಹೀರೋಗಳಿಗಿಂತ ಬ್ಯುಸಿ ಎಂದರೂ ತಪ್ಪಾಗಲಾರದು. ಅವರು ಹಲವು ಸ್ಟಾರ್ ಹೀರೋಗಳ ಸಿನಿಮಾದಲ್ಲಿ ನಟಿಸುತ್ತಿರುತ್ತಾರೆ. ‘ಮಾರ್ಕ್’ ಚಿತ್ರದಲ್ಲಿ ಅವರು ಬಣ್ಣ ಹಚ್ಚಿದ್ದರು. ಅವರು ಹಂತ ಹಂತವಾಗಿ ಸಿನಿಮಾ ಶೂಟ್​ಗೆ ಬಂದಿದ್ದರಂತೆ. ಈ ಬಗ್ಗೆ ಸುದೀಪ್ ಮಾತನಾಡಿದ್ದರು.

‘ನಮ್ಮ ಸೆಟ್​​​ನಲ್ಲಿ ಬ್ಯುಸಿ ಹೀರೋ ಎಂದರೆ ಅದು ಯೋಗಿ ಬಾಬು. ನಮ್ಮ ಸೆಟ್​​ನಲ್ಲಿ ಒಂದು ಕಾಲು, ಮತ್ತೊಂದು ಸೆಟ್​​​ನಲ್ಲಿ ಮತ್ತೊಂದು ಕಾಲಿತ್ತು. ಅವರು ಇನ್​​ಸ್ಟಾಲ್​​ಮೆಂಟ್ ಅಲ್ಲಿ ನಟಿಸಿದ್ದಾರೆ. ವಾಹನ ಖರೀದಿ ಮಾಡ್ತೀರಾ. ಹಣವನ್ನು ಮಾತ್ರ ಇನ್​​ಸ್ಟಾಲ್​ಮೆಂಟ್​​ನಲ್ಲಿ ಕಟ್ಟೋದು ತಾನೆ? ವಾಹನ ಇನ್​​ಸ್ಟಾಲ್​​ಮೆಂಟ್​​ನಲ್ಲಿ ಬರುತ್ತಾ’ ಎಂದು ಪ್ರಶ್ನೆ ಮಾಡಿದ್ದಾರೆ ಸುದೀಪ್.

‘ಪ್ಯಾಕಪ್ ಎಂದು ಹೇಳುತ್ತಿದ್ದರು. ಇನ್ನೇನು ಸೆಟ್​​ನಿಂದ ಹೋಗಬೇಕು, ಯೋಗಿ ಅವರು ಬಂದಿದ್ದಾರೆ ಶೂಟ್ ಮಾಡಬೇಕು ಎಂದು ನಿರ್ದೇಶಕರು ಹೇಳುತ್ತಿದ್ದರು. ಅವರು ನಮ್ಮ ಆಸ್ತಿ. ಇಡೀ ತಂಡ ಚೆನ್ನಾಗಿ ಕೆಲಸ ಮಾಡಿದೆ’ ಎಂದು ಸುದೀಪ್ ಅವರು ಹೇಳಿದ್ದರು.

ಇದನ್ನೂ ಓದಿ:  ‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್

ಯೋಗಿ ಬಾಬು ತಮಿಳಿನ ಖ್ಯಾತ ನಾಮರಲ್ಲಿ ಒಬ್ಬರು. ಅವರು ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತಮಿಳಿನ ಬಹುತೇಕ ಸ್ಟಾರ್​ ಗಳ ಜೊತೆ ನಟಿಸಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ.

ಸಿನಿಮಾ ತಮಿಳುನಾಡಿನ ಪ್ರೇಕ್ಷಕರು ಪಾಸಿಟಿವ್ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ. ಹೀಗಾಗಿ, ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. ‘ಮಾರ್ಕ್’ ಸಿನಿಮಾ ತಮಿಳಿಗರಿಗೆ ಹೆಚ್ಚು ಇಷ್ಟ ಆಗೋಕೆ ಕಾರಣವೂ ಇದೆ. ಅನೇಕ ತಮಿಳು ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ನವೀನ್ ಚಂದ್ರ, ಯೋಗಿ ಬಾಬು ಸೇರಿದಂತೆ ಬಹುತೇಕರು ತಮಿಳಿಗರು. ನಿರ್ದೇಶಕ ವಿಜಯ್ ಕಾರ್ತಿಕೇಯ ಕೂಡ ತಮಿಳಿನವರೇ. ಸುದೀಪ್ ಕೂಡ ತಮ್ಮ ಪಾತ್ರ ತಮಿಳಿನಲ್ಲಿ ಡಬ್ ಮಾಡಿದ್ದಾರೆ. ಈ ಎಲ್ಲಾ ಕಾರಣದಿಂದ ಸಿನಿಮಾ ಅಲ್ಲಿನವರಿಗೆ ಇಷ್ಟ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:40 am, Sat, 3 January 26

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
ಬೆಂಗಳೂರಿನ ಅಂಚೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷ
Live: ಹೆಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ ನೇರಪ್ರಸಾರ
Live: ಹೆಚ್.ಡಿ. ಕುಮಾರಸ್ವಾಮಿ ಸುದ್ದಿಗೋಷ್ಠಿ ನೇರಪ್ರಸಾರ