ಈ 4 ರಾಶಿಯ ಮಕ್ಕಳು ಚತುರರು, ಇವರಿಗೆ ಉತ್ತಮ ಮಾರ್ಗದರ್ಶನ ದೊರೆತರೆ ಇವರ ಭವಿಷ್ಯ ಉತ್ತಮವಾಗಿ ಇರುತ್ತದೆ!
ಮಿಥುನ ರಾಶಿಯವರು ಜ್ಯೋತಿಷ್ಯದ ಪ್ರಕಾರ ಬಹಳ ಚತರರು. ಚಿಕ್ಕಂದಿನಲ್ಲಿಯೇ ಇವರ ಹೆಚ್ಚು ಬುದ್ಧಿವಂತರಾಗಿದ್ದು ಯಾವುದೇ ವಿಷಯವನ್ನು ತಕ್ಷಣ ಅರಗಿಸಿಕೊಳ್ಳುತ್ತಾರೆ. ಇವರಲ್ಲಿ ಅಸಾಧಾರಣ ಆತ್ಮವಿಶ್ವಾಸ ಇರುತ್ತದೆ. ಇವರಿಗೆ ಸಕಾಲದಲ್ಲಿ ಉತ್ತಮ ಮಾರ್ಗದರ್ಶನ ಸಿಕ್ಕಿದರೆ ಅವರಲ್ಲಿನ ಕ್ಷಮತೆ ಹೆಚ್ಚಿ, ಜೀವನದಲ್ಲಿ ತುಂಬಾ ಮುಂದೆ ಮುಂದೆ ಬರುತ್ತಾರೆ.
ಜ್ಯೋತಿಷ್ಯದ ಪ್ರಕಾರ 12 ರಾಶಿಗಳು ಇರುತ್ತವೆ. ಅದರಲ್ಲಿ ನಾಲ್ಕು ರಾಶಿಯ ಮಕ್ಕಳು ತುಂಬಾ ಬುದ್ಧಿವಂತರಾಗಿರುತ್ತಾರೆ. ಅವರಿಗೆ ಸಕಾಲದಲ್ಲಿ ಸರಿಯಾದ ಮಾರ್ಗದರ್ಶನ ಸಿಕ್ಕಿದರೆ ದೊಡ್ಡವರಾದ ಮೇಲೆ ಭವಿಷ್ಯದಲ್ಲಿ ಉನ್ನತ ಸ್ಥಾನಮಾನಕ್ಕೆ ಅರ್ಹರಾಗಿರುತ್ತಾರೆ. ಇದರಿಂದ ಪರಿವಾರದ ಹೆಸರನ್ನು ಉಜ್ವಲಗೊಳಿಸುತ್ತಾರೆ.
ನಿಮಗೂ ಇದು ಅನುಭವಕ್ಕೆ ಬಂದಿರಬಹುದು. ಕೆಲವು ಮಕ್ಕಳು ಚಿಕ್ಕಂದಿನಿಂದಲೇ ಚುರುಕು ಬುದ್ಧಿ ತೋರುತ್ತಾರೆ. ಅನೇಕ ಬಾರಿ ಬೆಳೆಯುವ ಬೆಳೆಯುವ ಸರಿ ಮೊಳಕೆಯಲ್ಲೇ ಅನ್ನುವಂತೆ ಕೆಲವು ಮಕ್ಕಳು ಚಿಕ್ಕಂದಿನಲ್ಲಿಯೇ ಅಗಾಧವಾದುದನ್ನು ಸಾಧಿಸುತ್ತಾರೆ. ಇದನ್ನು ನೋಡಿ ಹಿರಿಯರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತಾರೆ. ಜ್ಯೋತಿಷ್ಯದ ಪ್ರಕಾರ ಇಂತಹ ಬಾಲ ಪ್ರತಿಭೆಗಳ ಹುಟ್ಟಿನ ವೇಳೆ ಗ್ರಹಗತಿಗಳು, ನಕ್ಷತ್ರಗಳ ಸ್ಥಿತಿಗತಿ ಮತ್ತು ರಾಶಿ ಕಾರಣವಾಗುತ್ತದೆ. ಅದು ಜೀವನ ಪರ್ಯಂತ ಆ ಮಕ್ಕಳ ಮೇಲೆ ಪ್ರಭಾವ ಹೊಂದಿರುತ್ತದೆ.
ಹಾಗಾಗಿಯೇ ವ್ಯಕ್ತಿಗಳ ಸ್ವಭಾವ, ಅದೃಷ್ಟಗಳು ಜನ್ಮತಹ ಬಂದಿರುತ್ತದೆ. ಜ್ಯೋತಿಷ್ಯದ ಪ್ರಕಾರ ಈ ನಾಲ್ಕು ರಾಶಿಯ ಮಕ್ಕಳ ಬುದ್ಧಿಮತ್ತೆ ತುಂಬಾ ಹೆಚ್ಚಾಗಿರುತ್ತದೆ. ಆದರೆ ಅವರಿಗೆ ಸರಿಯಾದ ಮಾರ್ಗದರ್ಶನ ದೊರೆಯದಿದ್ದರೆ ಅವರ ಬುದ್ಧಿವಂತಿಕೆ ದುರುಪಯೋಗ ಆಗುತ್ತದೆ. ಅದಕ್ಕೆ ಕುಟುಂಬಸ್ಥರು ವಿಶೇಷ ಗಮನಹರಿಸಿ, ಅಂತಹ ಮಕ್ಕಳನ್ನು ಸರಿ ದಾರಿಗೆ ತರಬೇಕು. ಬನ್ನೀ ಹಾಗಾದರೆ ಆ 4 ರಾಶಿಯ ಮಕ್ಕಳು ಯಾರು ಎಂಬುದನ್ನು ನೋಡೋಣ.
ಮಿಥುನ ರಾಶಿ (Gemini): ಮಿಥುನ ರಾಶಿಯವರು ವೈದಿಕ ಜ್ಯೋತಿಷ್ಯದ ಪ್ರಕಾರ ಬಹಳ ಚತರರು. ಚಿಕ್ಕಂದಿನಲ್ಲಿಯೇ ಇವರ ಹೆಚ್ಚು ಬುದ್ಧಿವಂತರಾಗಿದ್ದು ಯಾವುದೇ ವಿಷಯವನ್ನು ತಕ್ಷಣ ಅರಗಿಸಿಕೊಳ್ಳುತ್ತಾರೆ. ಇವರಲ್ಲಿ ಅಸಾಧಾರಣ ಆತ್ಮವಿಶ್ವಾಸ ಇರುತ್ತದೆ. ಇವರಿಗೆ ಸಕಾಲದಲ್ಲಿ ಉತ್ತಮ ಮಾರ್ಗದರ್ಶನ ಸಿಕ್ಕಿದರೆ ಅವರಲ್ಲಿನ ಕ್ಷಮತೆ ಹೆಚ್ಚಿ, ಜೀವನದಲ್ಲಿ ತುಂಬಾ ಮುಂದೆ ಮುಂದೆ ಬರುತ್ತಾರೆ. ಇದರಿಂದ ಜನ ಇಂತಹ ಮಕ್ಕಳತ್ತ ಬೇಗನೆ ಆಕರ್ಷಿತರಾಗುತ್ತಾರೆ.
ಕನ್ಯಾ ರಾಶಿ (Virgo): ಕನ್ಯಾ ರಾಶಿಯ ಮಕ್ಕಳು ತಮ್ಮ ಶಿಕ್ಷಣವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ವ್ಯಾಸಂಗದಲ್ಲಿ ಆನಂದ ಕಾಣುತ್ತಾರೆ. ಇಂತಹವರು ಹೆಚ್ಚಾಗಿ ಉನ್ನತ ಪದವಿ ಗಳಿಸಿ, ವೃತ್ತಿಯಲ್ಲಿ ಮೇಲಕ್ಕೆ ಬರುತ್ತಾರೆ. ಆದರೆ ಇವರಿಗೆ ಸಕಾಲದಲ್ಲಿ ಮಾರ್ಗದರ್ಶನ ದೊರೆಯದಿದ್ದಲ್ಲಿ ಪಾತಾಳ ಕಚ್ಚುವ ಸಾಧ್ಯತೆಯೂ ಇರುತ್ತದೆ. ಇಂತಹ ಮಕ್ಕಳು ಹೆಚ್ಚು ಅಂತರ್ಮುಖಿಗಳಾಗಿರುತ್ತಾರೆ. ಇವರ ಮೆದುಳಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥೈಸುವುದು ಕಷ್ಟಸಾಧ್ಯವಾಗುತ್ತದೆ. ಇವರ ಪಾಲನೆಯನ್ನು ಹೆಚ್ಚು ಮುತುವರ್ಜಿ ವಹಿಸಿ, ಕಾಳಜಿಯಿಂದ ನೋಡಿಕೊಳ್ಳುವ ಜರೂರತ್ತು ಇರುತ್ತದೆ.
ಧನು ರಾಶಿ (Sagittarius): ಧನು ರಾಶಿಯ ಮಕ್ಕಳಿಗೆ ತುಂಬಾ ಜಿಜ್ಞಾಸೆ ಇರುತ್ತದೆ. ಇದರಿಂದಲೇ ಅವರು ಹೆಚ್ಚಾಗಿ ಶಿಕ್ಷಣದತ್ತ ಸೆಳೆಯಲ್ಪಡುತ್ತಾರೆ. ಈ ಮಕ್ಕಳು ಪೂರ್ಣ ಮನಸ್ಸನಿಂದ ವ್ಯಾಸಂಗದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇವರ ಮೆದುಳಿನಲ್ಲಿ ಸದಾ ಪ್ರಶ್ನೆಗಳ ಮೆರವಣಿಗೆ ಹಾದುಹೋಗುತ್ತಿರುತ್ತದೆ. ಇವರು ಎಂಥಹುದೇ ಕ್ಲಿಷ್ಟಕರ ವಿಷಯವನ್ನು ಬೇಗನೇ ಸಲೀಸಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಹಾಗಾಗಿ ಉಜ್ವಲ ಭವಿಷ್ಯ ಹೊಂದಿರುತ್ತಾರೆ.
ಮಕರ ರಾಶಿ (Capricorn): ಮಕರ ರಾಶಿಯವರು ಓದು ಬರಹದಲ್ಲಿ ತುಂಬಾ ಚತುರರಾಗಿರುತ್ತಾರೆ. ಬಾಲ್ಯದಲ್ಲಿಯೇ ಇವರಲ್ಲಿ ಪ್ರತಿಭೆ ಅನಾವರಣಗೊಳ್ಳುತ್ತದೆ. ಓದಿನಲ್ಲಿ ಇವರ ಶ್ರದ್ಧೆಯನ್ನು ಕಂಡು ಯಾರೇ ಆದರೂ ಪ್ರಭಾವಿತರಾಗುತ್ತಾರೆ. ಹಾಗಾಗಿ ಇವರ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಕಾಳಜಿ ವಹಿಸಿ ಅವರನ್ನು ಪ್ರೋತ್ಸಾಹಿಸಬೇಕು.
(child prodigy children with these zodiac signs are very sharp minded should be given proper guidance)