ಯಾವುದೇ ಸಂಬಂಧದ ಬುನಾದಿ ಭರವಸೆ, ವಿಶ್ವಾಸಾರ್ಹತೆ ಆಗಿರುತ್ತದೆ. ಈ ಮಾತನ್ನೇ ಆಧಾರವಾಗಿಟ್ಟುಕೊಂಡು ನಾವೆಲ್ಲಾ ದ್ವಂದ್ವದಲ್ಲಿ ಸಿಲುಕುತ್ತೇವೆ. ಯಾರನ್ನು ನಂಬುವುದು, ಯಾರ ಮೇಲೆ ಭರವಸೆ ಇಡುವುದು ಬೇಡ ಎಂಬುದೇ ನಮ್ಮನ್ನು ಬಹಳಷ್ಟ ಬಾರಿ ಕಾಡುವ ದ್ವಂದ್ವದ ವಿಷಯವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದಕ್ಕೆ ಪರಿಹಾರವಿದೆ. ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬುದರ ಬಗ್ಗೆ ಸೂಕ್ಷ್ಮವಾಗಿ, ಸರಳವಾಗಿ ಜ್ಯೋತಿಷ್ಯ ಶಾಸ್ತ್ರ ಹೇಳಿಕೊಡುತ್ತದೆ. ಇದು ಜ್ಯೋತಿಷ್ಯ ಶಾಸ್ತ್ರದ ಚಮತ್ಕಾರವೇ ಸರಿ.
ಯಾವುದೇ ಸಂಬಂಧವು ಸತ್ಯ, ಭರವಸೆ ಮತ್ತು ಪ್ರಾಮಾಣಿಕತೆಯ ಅಡಿಪಾಯದ ಮೇಲೆ ನಿಂತಿರುತ್ತದೆ. ಆರಂಭದಲ್ಲಿ ಅದರ ಬಗ್ಗೆ ಒಲವು ಇಲ್ಲದಿರಬಹುದು. ಯಾರ ಮೇಲಾದರೂ ವಿಶ್ವಾಸವಿಟ್ಟು ಮುಂದಡಿಯಿಟ್ಟರೆ ಅವರು ನಮಗೆ ಹತ್ತಿರದವರು ಅನಿಸಿಬಿಡುತ್ತದೆ. ಹಾಗೆ ನೀವು ಯಾರ ಮೇಲಾದರೂ ಭರವಸೆಯಿಟ್ಟು ನಡೆದುಕೊಂಡರೆ ಅವರ ಮೇಲೆ ಪ್ರೀತಿ ಬೆಳೆಯುತ್ತದೆ. ಆಗ ನಾವು ಸುರಕ್ಷವಾಗಿದ್ದೇವೆ ಅನ್ನಿಸಿಬಿಡುತ್ತದೆ. ಆಗಲೇ ನಮ್ಮ ಸಂಬಂಧ ಸದೃಢಗೊಳ್ಳುವುದು.
ಯಾವುದೇ ವ್ಯಕ್ತಿಯನ್ನು ನಾವು ನಂಭುವುದೋ, ಬೇಡವೋ ಎಂಬ ಜಿಜ್ಞಾಸೆ ಮೂಡಿದಾಗ ಗೊಂದಲದಗೂಡಾಗುವುದು ಸಹಜ. ಈ ಸಮಯದಲ್ಲಿ ಜ್ಯೋತಿಷ್ಯ ನಿಮ್ಮ ಕೈಹಿಡಿಯುತ್ತದೆ. ನಿಮ್ಮ ಕೈಹಿಡಿದು ಮುಂದಿನ ದಾರಿ ಸುಗಮಗೊಳಿಸುತ್ತದೆ. ರಾಶಿ ಚಕ್ರ ಪ್ರಕಾರ ನೀವು ಐದು ರಾಶಿಯ ಜನರ ಮೇಲೆ ರಾಶಿ ರಾಶಿ ಭರವಸೆ ಇಡಬಹುದು. ಬನ್ನೀ ಹಾಗಾದರೆ ಆ ಐದು ರಾಶಿಯ ಜನರು ಯಾರು ಎಂದು ತಿಳಿದುಕೊಳ್ಳೋಣ.
1. ಕರ್ಕಾಟಕ ರಾಶಿ Cancer:
ತಮ್ಮ ಮೇಲೆ ಯಾರು ಭರವಸೆಯಿಡುತ್ತಾರೋ ಅವರ ಬಗ್ಗೆ ಕರ್ಕಾಟಕ ರಾಶಿಯ ಜನರು ಸಂಪೂರ್ಣವಾಗಿ ಕೇರ್ ತಗೋತಾರೆ. ಕಾಳಜಿ ವಹಿಸುತ್ತಾರೆ. ಕರ್ಕಾಟಕ ರಾಶಿಯ ಜನರಿಗೆ ಯಾವುದು ಸರಿ, ಯಾವುದು ತಪ್ಪು ಎಂಬುದರ ಬಗ್ಗೆ ಆಳವಾದ ತಿಳಿವಳಿಕೆ ಇರುತ್ತದೆ. ಹಾಗಾಗಿ ಇವರು ತಮ್ಮ ಜೀವನದುದ್ದಕ್ಕೂ ನೈತಿಕತೆ ಮತ್ತು ಪ್ರಾಮಾಣಿಕತೆಯಿಂದ ಜೀವಿಸಲು ಬಯಸುತ್ತಾರೆ. ಹಾಗಾಗಿಯೆ ಇವರು ಸೋದರತೆಯ ಭರವಸೆ ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ಎದುರಿನ ವ್ಯಕ್ತಿಯ ಬಗ್ಗೆ ಕಾಳಜಿ ವಹಿಸುತ್ತಾರೆ. ಅವರನ್ನು ತಮ್ಮ ಪರಿವಾರದವರ ಹಾಗೆ, ಸೋದರ ಭಾವದಲ್ಲಿ ಕಾಣುತ್ತಾರೆ. ಹಾಗಾಗಿ ಕರ್ಕಾಟಕ ರಾಶಿಯ ಜನರನ್ನು ನೆಚ್ಚಿಕೊಳ್ಳಬಹುದು.
2. ವೃಷಭ ರಾಶಿ Taurus:
ವೃಷಭ ರಾಶಿಯ ಜನ ಸ್ಥಿರವಾಗಿರುತ್ತಾರೆ. ನೆಲೆಯೂರಿ ದೃಢವಾಗಿ ನಿಲ್ಲುತ್ತಾರೆ. ಇವರು ಸಂಬಂಧಿಕರು ಮತ್ತು ಸ್ನೇಹಿತರಿಗಾಗಿ ಏನೂ ಬೇಕಾದರೂ ಮಾಡಲು ಸಿದ್ಧವಾಗಿ ನಿಂತುಬಿಡುತ್ತಾರೆ. ವೃಷಭ ರಾಶಿಯ ಜನಕ್ಕೆ ಯಾವುದು ಭರವಸೆಯ ಸಂಕೇತವಾಗಿ ಕಾಣುತ್ತದೋ ಅವರಿಗೆ ತಮ್ಮ ನಿಷ್ಠೆ ಧಾರೆಯೆರೆಯುತ್ತಾರೆ. ಅವರಿಗೆ ತಮ್ಮ ಬದ್ಧತೆ ತೋರುತ್ತಾರೆ. ಇವರ ಹೃದಯ ನಿಷ್ಕಲ್ಮಷವಾಗಿರುತ್ತದೆ. ಇವರು ಯಾರನ್ನು ಇಚ್ಛಿಸುತ್ತಾರೋ ಅವರಿಗಾಗಿ ಏನು ಬೇಕಾದರೂ ಮಾಡಲು ದೃಢವಾಗಿ ನಿಂತುಬಿಡುತ್ತಾರೆ. ಅವರು ಯಾವುದೇ ರಾಶಿವರಾಗಿದ್ದರೂ ಒಮ್ಮೆ ಅವರು ತಮಗೆ ಇಷ್ಟವಾದರೆ ಅವರೊಂದಿಗೆ ಸದಾ ಸಮಯ ತನು ಮನ ಧನ ಕಳೆಯಲು ಸಿದ್ಧವಾಗಿಬಿಡುತ್ತಾರೆ.
3. ಕನ್ಯಾ ರಾಶಿ Virgo:
ಕನ್ಯಾ ರಾಶಿಯ ಜನ ನೈಜತೆಯಿಂದ, ಪ್ರಾಮಾಣಿಕತೆಯಿಂದ ಮತ್ತು ನಂಬಲರ್ಹವಾಗಿ ಇರುತ್ತಾರೆ. ಇವರು ಸಮಯಪಾಲನೆಯಲ್ಲಿ ತನ್ಮಯವಾಗಿರುತ್ತಾರೆ. ತಮ್ಮ ಸಮೀಪದ ಜನರ ಮಾತುಗಳನ್ನು ಸದಾ ನೆನಪಲ್ಲಿಡುತ್ತಾರೆ. ಇವರ ಹೃದಯ ಬೇರೆಯವರಿಗಾಗಿ ಮಿಡಿಯುತ್ತದೆ. ಯಾವಾಗಲೂ ಸತ್ಯವನ್ನೇ ಹೇಳಬಯಸುತ್ತಾರೆ. ಆದರೆ ಅವರು ಹೇಳುವ ಸತ್ಯ ಕಹಿಯಾಗಿಯೇ ಇದ್ದರೂ ಸತ್ಯದೊಂದಿಗೆ ರಾಜಿ ಮಾಡಿಕೊಳ್ಳವುದಿಲ್ಲ. ಆದರೆ ಒಮ್ಮೆ ಯಾರಿಗಾದರೂ ಊರುಗೋಲು ಆಗಬೇಕು ಎಂದು ಬಯಸಿದರೆ ಶತಾಯಗತಾಯ ತಮ್ಮ ಮಾತನ್ನು ಉಳಿಸಿಕೊಂಡು ಅವರ ನೆರವಿಗೆ ನಿಂತುಬಿಡುತ್ತಾರೆ.
4. ವೃಶ್ಚಿಕ ರಾಶಿ Scorpio:
ವೃಶ್ಚಿಕ ರಾಶಿಯ ಅತ್ಯಂತ ಪ್ರಾಮಾಣಿಕರು ಮತ್ತು ಭರವಸೆಯ ಜನರಾಗಿರುತ್ತಾರೆ. ಈ ರಾಶಿಯ ಜನ ತಮ್ಮ ಪಾಲುದಾರರ ವಿಷಯದಲ್ಲಿ ಪ್ರತಿಬದ್ಧತೆ ತೋರುತ್ತಾರೆ. ತಮ್ಮ ಸಮೀಪದವರು ಮತ್ತು ಪರಿಚಿತರ ಜೊತೆ ಸದಾ ಪ್ರೇಮ ಪ್ರೀತಿಯೊಂದಿಗೆ ಅನ್ಯೋನ್ಯವಾಗಿರುತ್ತಾರೆ.
5. ಮಕರ ರಾಶಿ Capricorn:
ಮಕರ ರಾಶಿಯ ಜನ ತಮ್ಮ ಮಾತನ್ನು ತಮ್ಮಲ್ಲೇ ಇಟ್ಟುಕೊಳ್ಳುತ್ತಾರೆ. ಎದಿಗೂ ತಮ್ಮ ಮನದ ಮಾತನ್ನು ಬೇರೆಯವರೊಂದಿಗೆ ಜಗಜ್ಜಾಹೀರುಗೊಳಿಸುವುದಿಲ್ಲ. ಇವರು ತಮ್ಮ ಮಾತಿನ ಮೇಲೆ ಸದೃಢವಾಗಿರುತ್ತಾರೆ. ಅದನ್ನು ಉಳಿಸಿಕೊಳ್ಳುವುದಕ್ಕೆ ಸರ್ವಪ್ರಯತ್ನ ಮಾಡುತ್ತಾರೆ. ಈ ರಾಶಿಯ ಜನರಿಗೆ ಸರಿ ಯಾವುದು, ತಪ್ಪು ಯಾವುದು ಎಂಬುದು ಪಕ್ಕಾ ಗೊತ್ತಾಗಿಬಿಡುತ್ತದೆ.
(ಇಲ್ಲಿ ನೀಡಿರುವ ಮಾಹಿತಿಯು ಧಾರ್ಮಿಕ ಶ್ರದ್ಧಾಭಕ್ತಿಗೆ ಅನುಗುಣವಾಗಿ ಲೋಕಮಾನ್ಯ ರೀತಿಯಲ್ಲಿ ನೀಡಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇರುವುದಿಲ್ಲ. ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಸ್ತುತ ಪಡಿಸಲಾಗಿದೆ)
ಇದನ್ನೂ ಓದಿ:
ಗರುಡ ಪುರಾಣದಲ್ಲಿ ಹೇಳುವಂತೆ ಬೆಳಗಿನ ವೇಳೆ ಈ 5 ಕೆಲಸ ಮಾಡಿದರೆ ಇಡೀ ದಿನ ಶುಭವಾಗುತ್ತದೆ; ದಿನನಿತ್ಯ ಅಭ್ಯಾಸ ಮಾಡಿಕೊಳ್ಳಿ
Garuda Purana: ಶವಸಂಸ್ಕಾರ ಮುಗಿಸಿ ಹೊರಟ ನಂತರ ಚಿತೆಯತ್ತ ತಿರುಗಿ ನೋಡಬಾರದು ಎನ್ನುವುದೇಕೆ? ಗರುಡ ಪುರಾಣ ಹೇಳುವುದೇನು?
(these 5 zodiac sign people are trustworthy with others to the core)