AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗರುಡ ಪುರಾಣದಲ್ಲಿ ಹೇಳುವಂತೆ ಬೆಳಗಿನ ವೇಳೆ ಈ 5 ಕೆಲಸ ಮಾಡಿದರೆ ಇಡೀ ದಿನ ಶುಭವಾಗುತ್ತದೆ; ದಿನನಿತ್ಯ ಅಭ್ಯಾಸ ಮಾಡಿಕೊಳ್ಳಿ

garuda purana: ಭಗವಂತ ವಿಷ್ಣು ತನ್ನ ವಾಹನವಾದ ಗರುಡನಿಗೆ ಎದುರಾಗುವ ಎಲ್ಲ ಸವಾಲುಗಳು, ಜಿಜ್ಞಾಸೆಗಳನ್ನು ಪರಿಹರಿಸುತ್ತಾ, ಸವಿಸ್ತಾರ ರೂಪದಲ್ಲಿ ಉತ್ತರಗಳನ್ನು ನೀಡುವುದೇ ಗರುಡ ಪುರಾಣ. ಗರುಡ ಪುರಾಣ ಎಂತಹ ಮಹಾಪುರಾಣ ಅಂದರೆ ಅದರಲ್ಲಿ ಬರುವ ಎಲ್ಲ ಪ್ರಸಂಗಗಳು ಮನುಷ್ಯನ ಉನ್ನತಿಗಾಗಿ ಪ್ರೇರಣದಾಯಕವಾಗಿದೆ.

ಗರುಡ ಪುರಾಣದಲ್ಲಿ ಹೇಳುವಂತೆ ಬೆಳಗಿನ ವೇಳೆ ಈ 5 ಕೆಲಸ ಮಾಡಿದರೆ ಇಡೀ ದಿನ ಶುಭವಾಗುತ್ತದೆ; ದಿನನಿತ್ಯ ಅಭ್ಯಾಸ ಮಾಡಿಕೊಳ್ಳಿ
ಗರುಡ ಪುರಾಣದಲ್ಲಿ ಹೇಳುವಂತೆ ಬೆಳಗಿನ ವೇಳೆ ಈ 5 ಕೆಲಸ ಮಾಡಿದರೆ ಇಡೀ ದಿನ ಶುಭವಾಗುತ್ತದೆ; ದಿನನಿತ್ಯ ಅಭ್ಯಾಸ ಮಾಡಿಕೊಳ್ಳಿ
TV9 Web
| Updated By: preethi shettigar|

Updated on: Aug 14, 2021 | 7:19 AM

Share

ಗರುಡ ಪುರಾಣವನ್ನು 16 ಮಹಾಪುರಾಣಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಗರುಡ ಪುರಾಣದಲ್ಲಿ ಬರುವ ಅಧಿದೇವ ವಿಷ್ಣು ಭಗವಾನ್​​. ಭಗವಂತ ವಿಷ್ಣು ತನ್ನ ವಾಹನವಾದ ಗರುಡನಿಗೆ ಎದುರಾಗುವ ಎಲ್ಲ ಸವಾಲುಗಳು, ಜಿಜ್ಞಾಸೆಗಳನ್ನು ಪರಿಹರಿಸುತ್ತಾ, ಸವಿಸ್ತಾರ ರೂಪದಲ್ಲಿ ಉತ್ತರಗಳನ್ನು ನೀಡುವುದೇ ಗರುಡ ಪುರಾಣ. ಗರುಡ ಪುರಾಣ ಎಂತಹ ಮಹಾಪುರಾಣ ಅಂದರೆ ಅದರಲ್ಲಿ ಬರುವ ಎಲ್ಲ ಪ್ರಸಂಗಗಳು ಮನುಷ್ಯನ ಉನ್ನತಿಗಾಗಿ ಪ್ರೇರಣದಾಯಕವಾಗಿದೆ. ಗರುಡ ಪುರಾಣದಲ್ಲಿ ವ್ಯಕ್ತಿಯ ದಿನಚರ್ಯೆ ಹೇಗಿರಬೇಕು ಎಂಬುದನ್ನೆಲ್ಲಾ ಬಿಂಬಿಸಲಾಗಿದೆ.

ಇದೆಲ್ಲ ಮನುಷ್ಯನ ಜೀವನವನ್ನು ಉದಾತ್ತಗೊಳಿಸುವ ನಿಟ್ಟಿನಲ್ಲಿ ಸಾಗುತ್ತವೆ. ಗರುಡ ಪುರಾಣದಲ್ಲಿನ ಎಲ್ಲ ನೀತಿಗಳನ್ನು ಚಾಚೂತಪ್ಪದೆ ಪಾಲಿಸಿದರೆ ಮನುಷ್ಯರ ಜೀವನ ಉತ್ತುಂಗದತ್ತ ಸಾಗುತ್ತದೆ. ಇದರಲ್ಲಿ ಕೇವಲ ಮುನುಷ್ಯನ ಜೀವಿತಾವಧಿಯಲ್ಲಿನ ಔನ್ನತ್ಯ ಪ್ರಾಪ್ತಿಯಷ್ಟೇ ಅಲ್ಲ; ಬದುಕಿನ ನಂತರವೂ ಅಂದರೆ ಮರಣ ಪ್ರಾಪ್ತಿಯಾದಾಗ ಸದ್ಗತಿ ದೊರೆಯಲೂ ಸಹ ಈ ಗರುಡ ಪುರಾಣದ ನೀತಿಗಳು ಅಕ್ಷರಶಃ ಮಾರ್ಗದರ್ಶಕವಾಗುತ್ತವೆ.

ಗರುಡ ಪುರಾಣದಲ್ಲಿನ ಐದು ಮಾರ್ಗದರ್ಶಕ ನೀತಿಗಳು ಹೀಗಿವೆ: ಗರುಡ ಪುರಾಣದಲ್ಲಿನ ಐದು ಮಾರ್ಗದರ್ಶಕ ನೀತಿಗಳ ಬಗ್ಗೆ ತಿಳಿದುಕೊಳ್ಳುವುದಾದರೆ ಐದು ದೈನಂದಿನ ಚಟುವಟಿಕೆಗಳನ್ನು ಪ್ರಸ್ತಾಪಿಸಬಹುದು. ಈ ಐದು ನೀತಿಗಳನ್ನು ದೈನಂದಿನ ಜೀವನದಲ್ಲಿ ತನು-ಮನವಿಟ್ಟು ಶ್ರದ್ಧೆಯಿಂದ ಪಾಲಿಸಿದಾಗ ಅಂತಹ ಮನುಷ್ಯನಲ್ಲಿ ಧನಾತ್ಮಕ ಬಲ ಮೂಡುತ್ತದೆ. ಇದರಿಂದ ಇಡೀ ಉಲ್ಲಾಸಮಯವಾಗಿರುತ್ತದೆ. ಹಾಗಾದರೆ ಆ ಐದು ಶ್ರದ್ಧಾ ನೀತಿಗಳು ಯಾವುವು ಅಂದರೆ…

ಸ್ನಾನಂ ದಾನಂ ಹೋಮಮ್ ಸ್ವಾಧ್ಯಾಯೋ ದೇವತಾರ್ತನಮಃ| ಯಸ್ಮಿನ್ ದಿನೆ ನ ಸೇವ್ಯಂತೆ ಸ ವೃಥಾ ದಿವಸೋ ನೃಣಾಮ್​|

1. ಸ್ನಾನ ಶಾಸ್ತ್ರಗಳಲ್ಲಿ ಮನಸ್ಸಿನ ಶುದ್ಧತೆಯ ಜೊತೆಗೆ ದೇಹ ಶುದ್ಧಿಯೂ ಪ್ರಧಾನವಾಗುತ್ತದೆ. ಶಾರೀರಿಕ ಶುದ್ಧಿ ಸಾಧನೆಗಾಗಿ ಮನುಷ್ಯರಿಗೆ ನಿಯಮಿತವಾಗಿ ಸ್ನಾನ ಮಾಡುತ್ತಿರಬೇಕು. ಯಾವ ಮನುಷ್ಯರು ಪ್ರತಿದಿನ ಬೆಳಗ್ಗೆ ಸ್ನಾನ ಮಾಡುತ್ತಾರೋ ಅಂತಹವರು ಇಡೀ ದಿನ ಅಭಿವೃದ್ಧಿ ಪಥದಲ್ಲಿ ಹೆಜ್ಜೆ ಹಾಕುತ್ತಾನೆ. ಅಂತಹ ಮನುಷ್ಯರ ಅಷ್ಟೂ ರೋಗರುಜಿನಗಳು ದೂರವಾಗುತ್ತವೆ. ಮತ್ತು ಅಂತಹ ಮನುಷ್ಯರು ಮನಸ್ಸಿಟ್ಟು ಶ್ರದ್ಧೆಯಿಂದ ಏನೇ ಕೆಲಸ ಮಾಡಿದರೂ ಅದರಿಂದ ಶುಭಕಾರಕ ಪರಿಣಾಮಗಳು ಪ್ರಾಪ್ತಿಯಾಗುತವೆ.

2. ದಾನ ದಾನ ಎಂಬುದು ಸರ್ವಶ್ರೇಷ್ಠವಾದುದು. ದಾನದ ಬಗ್ಗೆ ಕೇವಲ ಗರುಡ ಪುರಾಣದಲ್ಲಿಯಷ್ಟೇ ಹೇಳಿಲ್ಲ; ಇತರೆ ಶಾಸ್ತ್ರಗಳಲ್ಲೂ ಹೇಳಲಾಗಿದೆ. ಮನುಷ್ಯರು ತಮ್ಮ ಕೈಯಿಂದ ದಿನಂಪ್ರತಿ ಏನೋ ಒಂದು ದಾನ ಮಾಡುತ್ತಿರಬೇಕು. ಅದು ಆಹಾರವೂ ಆಗಿರಬಹುದು ಅಥವಾ ಮತ್ತಿನ್ನೇನೋ ಆಗಬಹುದು. ಇದರಿಂದ ಅಂತಹ ಮನುಷ್ಯರ ಇಡೀ ಪರಿವಾರ ಖುಷಿಖುಷಿಯಾಗಿರುತ್ತದೆ. ಅವರಲ್ಲಿ ಯಾವುದೇ ಕೊರತೆ ಎಂಬುದು ಎದುರಾಗುವುದಿಲ್ಲ.

3. ಹವನ ಅಥವಾ ದೀಪಾರಾಧನೆ ಶಾಸ್ತ್ರಗಳಲ್ಲಿ ಹವನಕ್ಕೆ ಭಾರೀ ಮಹತ್ವ ನೀಡಲಾಗಿದೆ. ಹೋಮ ಹವನ ಮಾಡುವುದರಿಂದ ಸುತ್ತಮುತ್ತಲ ಇಡೀ ವಾತಾವರಣ ಶುದ್ಧವಾಗುತ್ತದೆ. ಮನೆಯ ವಾತಾವರಣದಲ್ಲಿ ನಕಾರಾತ್ಮಕತೆ ದೂರವಾಗುತ್ತದೆ. ಒಂದು ವೇಳೆ ಮನುಷ್ಯನಿಗೆ ದಿನನಿತ್ಯ ಹೋಮ ಹವನ ಮಾಡಲು ಸಾಧ್ಯವಾಗದೇ ಇದ್ದರೆ ಕನಿಷ್ಠ ಪ್ರತಿನಿತ್ಯ ದೀಪವನ್ನು ಬೆಳಗುವ ಅಭ್ಯಾಸ ಮಾಡಿಕೊಳ್ಳಬೇಕು. ದೇವರ ಕೋಣೆಯಲ್ಲಿ ದೀಪವನ್ನು ಸದಾ ಬೆಳಗುವಂತೆ ಹಚ್ಚಬೇಕು. ಅದು ತುಳಸಿಕಟ್ಟೆಯ ಬಳಿ ಹಚ್ಚಿಟ್ಟರೆ ಇನ್ನೂ ಫಲಪ್ರದವಾಗುತ್ತದೆ. ಇದರಿಂದ ಮಾಡುವ ಎಲ್ಲಾ ಕೆಲಸಗಳಲ್ಲೂ ಸಾಫಲ್ಯತೆ ಸಾಧಿಸಬಹುದು. ಇದರಿಂದ ವಾಸ್ತುದೋಷವೂ ನಿವಾರಣೆಯಾಗುತ್ತದೆ.

4. ಜಪ ದಿನದಲ್ಲಿ ಸ್ವಲ್ಪ ಹೊತ್ತಾದರೂ ಭಗವಂತನ ನಾಮಸ್ಮರಣೆ ಮಾಡಬೇಕು. ಯಾವುದೇ ಮಂತ್ರವನ್ನಾಗಲಿ ಪಠಿಸಬೇಕು. ಅದರಲ್ಲೂ ಮಹಾದೇವ ಈಶ್ವರನ ನಾಮ ಸ್ಮರಣೆ ಮಾಡುವುದು ಉತ್ತಮ. ಇದರಿಂದ ಮನೆಯಲ್ಲಿ ಎದುರಾಗುವ ಯಾವುದೇ ಕಷ್ಟಕಾರ್ಪಣ್ಯಗಳು ನಿವಾರಣೆಯಾಗುತ್ತವೆ. ಶುಭಫಲ ಪ್ರಾಪ್ತಿಯಾಗುತ್ತದೆ.

5. ದೇವರ ಪೂಜೆ ಪ್ರತಿನಿತ್ಯ ಸ್ನಾನದ ಬಳಿಕ ಭಗವಂತನ ಪೂಜೆ ಮಾಡಬೇಕು. ನೈವೇದ್ಯ ತೆಗೆದಿಡಬೇಕು. ಇದರಿಂದ ಮನೆಯಲ್ಲಿ ಧನ ಧಾನ್ಯದ ಕೊರತೆ ಎದುರಾಗದು. ಭಗವಂತನ ಕೃಪಡೆ ಸದಾ ಆ ಕುಟುಂಬದ ಮೇಲೆ ಇರುತ್ತದೆ.

(ಇಲ್ಲಿ ನೀಡಿರುವ ಮಾಹಿತಿಯು ಧಾರ್ಮಿಕ ಶ್ರದ್ಧಾಭಕ್ತಿಗೆ ಅನುಗುಣವಾಗಿ ಲೋಕಮಾನ್ಯ ರೀತಿಯಲ್ಲಿ ನೀಡಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇರುವುದಿಲ್ಲ. ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಸ್ತುತ ಪಡಿಸಲಾಗಿದೆ)

(garuda purana doing five rituals daily early morning gives auspicious results)

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ