AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology: ಈ ದಿನಾಂಕ ನಿಮ್ಮ ಬದುಕಿನ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ಸಂಖ್ಯಾಶಾಸ್ತ್ರ ಹೇಳುವುದೇನು?

ಯಾವ ನಂಬಿಕೆಯೆಂದ ಒಬ್ಬರಿಗೆ ಮನಃಶಾಂತಿ, ನೆಮ್ಮದಿ ಸಿಗುತ್ತದೋ ಅದನ್ನು ನೆಚ್ಚಿಕೊಳ್ಳುವುದು ಮಾನವನ ಸಹಜ ಗುಣ. ಈ ಪೈಕಿ ಇತ್ತೀಚಿನ ದಿನಗಳಲ್ಲಿ ಸಂಖ್ಯಾಶಾಸ್ತ್ರಕ್ಕೆ ತುಸುಹೆಚ್ಚೇ ಮಹತ್ವ ಇದೆ.

Numerology: ಈ ದಿನಾಂಕ ನಿಮ್ಮ ಬದುಕಿನ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ಸಂಖ್ಯಾಶಾಸ್ತ್ರ ಹೇಳುವುದೇನು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Skanda

Updated on: Aug 14, 2021 | 6:48 AM

ಭಾರತ ಬೇರೆಲ್ಲಾ ವಿಚಾರಗಳ ಜತೆಗೆ ವಿಶಿಷ್ಟವಾಗಿ ಗುರುತಿಸಿಕೊಳ್ಳಲು ಕಾರಣ ಇಲ್ಲಿನ ಜನರ ನಂಬಿಕೆ. ಇಲ್ಲಿ ಹಲವು ಧರ್ಮಗಳನ್ನು ಪರಿಪಾಲಿಸುವ ಜನರಿದ್ದರೂ ಅವರೆಲ್ಲರ ನಂಬಿಕೆಗಳನ್ನೂ ಈ ನೆಲ ಸಮನಾಗಿ ಹೊತ್ತುಕೊಂಡು ಸಾಗುತ್ತಾ ಬಂದಿದೆ. ಕೆಲವೊಂದಷ್ಟು ವಿಚಾರಗಳು ನಂಬಿಕೆಯ ಆಧಾರದ ಮೇಲೆಯೇ ನಿಂತಿರುತ್ತವೆ. ಹೀಗಾಗಿಯೇ ಜ್ಯೋತಿಷ್ಯ, ಭವಿಷ್ಯ, ದೇವರು, ಸಂಖ್ಯಾಶಾಸ್ತ್ರ ಇವೆಲ್ಲವನ್ನೂ ಹಲವರು ಬಲವಾಗಿ ನಂಬುತ್ತಾರೆ. ಯಾವ ನಂಬಿಕೆಯೆಂದ ಒಬ್ಬರಿಗೆ ಮನಃಶಾಂತಿ, ನೆಮ್ಮದಿ ಸಿಗುತ್ತದೋ ಅದನ್ನು ನೆಚ್ಚಿಕೊಳ್ಳುವುದು ಮಾನವನ ಸಹಜ ಗುಣ. ಈ ಪೈಕಿ ಇತ್ತೀಚಿನ ದಿನಗಳಲ್ಲಿ ಸಂಖ್ಯಾಶಾಸ್ತ್ರಕ್ಕೆ ತುಸುಹೆಚ್ಚೇ ಮಹತ್ವ ಇದೆ. ಆಯಾ ದಿನದ ದಿನಾಂಕ ಮತ್ತು ಜನ್ಮದಿನವನ್ನು ತಾಳೆ ಹಾಕುವ ಮೂಲಕ ಅದೃಷ್ಟ ಸಂಖ್ಯೆಯನ್ನು ಕಂಡು ಹಿಡಿಯಲಾಗುತ್ತದೆ. ಈ ತೆರನಾಗಿ ಇಂದು ನಿಮ್ಮ ಅದೃಷ್ಟ ಸಂಖ್ಯೆ ಯಾವುದು ಎಂದು ಇಲ್ಲಿ ತಿಳಿದುಕೊಳ್ಳಿ.

ಇಂದು ಆಗಸ್ಟ್​ 14, 2021, ಸಂಖ್ಯಾಶಾಸ್ತ್ರದ ಪ್ರಕಾರ 14 ಸಂಖ್ಯೆಯನ್ನು ಬಿಡಿಸಿ ಕೂಡಿಸಿದರೆ (1+4=5) ಸಿಗುವ ಮೊತ್ತ 5 ಆಗಿರುವುದರಿಂದ ಇದನ್ನು ಅದೃಷ್ಟದ ಸಂಖ್ಯೆ ಎನ್ನಲಾಗುತ್ತದೆ. ಅಂತೆಯೇ ಈ ದಿನ ಒಟ್ಟು ಮೊತ್ತ 9 (1+4+0+8+2+0+2+1=18; 1+8=9) ಆಗಿದ್ದು, ಇದು ಮಂಗಳನನ್ನು ಪ್ರತಿನಿಧಿಸುತ್ತದೆ. ಒಟ್ಟಾರೆಯಾಗಿ ಇದು ಒಳ್ಳೆಯ ದಿನವಾಗಿದ್ದು, ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಇಂದು ನಿಮ್ಮ ಪಾಲಿಗೆ ಯಾವುದು ಶುಭ ಸಂಖ್ಯೆ ಎನ್ನುವುದನ್ನು ಹೀಗೆ ತಿಳಿದುಕೊಳ್ಳಿ.

1.ಜನ್ಮದಿನಾಂಕ: 1, 10, 19, 28 ಅದೃಷ್ಟ ಸಂಖ್ಯೆ: 2 ಅದೃಷ್ಟದ ಬಣ್ಣ: ಕೆಂಪು ಆರೋಗ್ಯ: ಕೊಂಚ ಏರುಪೇರಾಗಬಹುದು ಪರಿಣಾಮ: ಸೂರ್ಯ ಮತ್ತು ಮಂಗಳ ನಿಮ್ಮ ಕೆಲಸದ ಒತ್ತಡಗಳನ್ನು ಹೆಚ್ಚಿಸಬಹುದು. ಆದರೆ, ಅದು ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಫಲವನ್ನಂತೂ ತಂದುಕೊಡಲಿದೆ. ಅಂಕೆ 9 ನಿಮಗೆ ಕಛೇರಿಯಲ್ಲಿ ಉತ್ತಮ ಸ್ಥಾನವನ್ನಂತೂ ತಂದುಕೊಡಲಿದೆ.

2.ಜನ್ಮದಿನಾಂಕ: 2, 11, 20, 29 ಅದೃಷ್ಟ ಸಂಖ್ಯೆ: 3 ಅದೃಷ್ಟದ ಬಣ್ಣ: ಬಿಳಿ ಪರಿಣಾಮ: ಅಂಕೆ 9 ನಿಮ್ಮ ಮೇಲೆ ಗಾಢ ಪರಿಣಾಮ ಬೀರಲಿದೆ. ಇಂದು ನಿಮಗೆ ಉದ್ಯೋಗದಲ್ಲಿ ಉತ್ತಮ ಲಾಭ ದೊರೆಯಲಿದೆ. ನಿಮಗಿಂತ ಮೇಲಿನ ಹುದ್ದೆಯಲ್ಲಿರುವವರು ನಿಮ್ಮ ಕೆಲಸವನ್ನು ಗುರುತಿಸಿ ಪ್ರಶಂಸಿಸಲಿದ್ದಾರೆ.

3.ಜನ್ಮದಿನಾಂಕ: 3, 12, 21, 30 ಅದೃಷ್ಟ ಸಂಖ್ಯೆ: 1 ಅದೃಷ್ಟದ ಬಣ್ಣ: ಹಳದಿ ಆರೋಗ್ಯ: ಉತ್ತಮವಾಗಿರಲಿದೆ ಪರಿಣಾಮ: ಗುರು ನಿಮಗೆ ಕಾರ್ಯಕ್ಷೇತ್ರದಲ್ಲಿ ಉತ್ತಮ ಫಲ ತಂದುಕೊಡುವುದು ಖಚಿತ.

4.ಜನ್ಮದಿನಾಂಕ: 4, 13, 22, 31 ಅದೃಷ್ಟ ಸಂಖ್ಯೆ: 6 ಅದೃಷ್ಟದ ಬಣ್ಣ: ಆಕಾಶ ನೀಲಿ ಆರೋಗ್ಯ: ಈ ಮೊದಲಿಗಿಂತಲೂ ಚೆನ್ನಾಗಿರಲಿದೆ ಪರಿಣಾಮ: ಅಂಕೆ 1 ಮತ್ತು 9 ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯಲಿವೆ. ಸೂರ್ಯನ ಪ್ರಭಾವದಿಂದಾಗಿ ನಿಮ್ಮ ಗುರಿಯಲ್ಲಿ ಮಹತ್ತರ ಬದಲಾವಣೆ ಆಗಲಿದೆ.

5.ಜನ್ಮದಿನಾಂಕ: 5, 14, 23 ಅದೃಷ್ಟ ಸಂಖ್ಯೆ: 6 ಅದೃಷ್ಟದ ಬಣ್ಣ: ಹಸಿರು ಆರೋಗ್ಯ: ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಿ ಪರಿಣಾಮ: ಈ ದಿನ ನಿಮಗೆ ಉತ್ತಮ ಲಾಭಗಳಿಸಲು ಸಹಕಾರಿಯಾಗಿ ಇರಲಿದೆ. ಉದ್ಯೋಗದಲ್ಲಿ ಹೊಸತನ ಮೂಡಲಿದೆ.

6.ಜನ್ಮದಿನಾಂಕ: 6, 15, 24 ಅದೃಷ್ಟ ಸಂಖ್ಯೆ: 4 ಅದೃಷ್ಟದ ಬಣ್ಣ: ಆಕಾಶ ನೀಲಿ ಆರೋಗ್ಯ: ಆರೋಗ್ಯಕರವಾಗಿ ಇರಲಿದ್ದೀರಿ ಪರಿಣಾಮ: ಅಂಕೆ 3 ಮತ್ತು 9 ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯಲಿವೆ. ಮಂಗಳ ಹಾಗೂ ಸೂರ್ಯನ ಪ್ರಭಾವದಿಂದಾಗಿ ಕಚೇರಿಯಲ್ಲಿ ನಿಮ್ಮ ಕಾರ್ಯಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.

7.ಜನ್ಮದಿನಾಂಕ: 7, 16, 25 ಅದೃಷ್ಟ ಸಂಖ್ಯೆ: 5 ಅದೃಷ್ಟದ ಬಣ್ಣ: ಹಳದಿ ಮತ್ತು ಹಸಿರು ಆರೋಗ್ಯ: ಉತ್ತಮವಾಗಿರಲಿದೆ ಪರಿಣಾಮ: ಅಂಕೆ 9 ನಿಮಗೆ ಅದೃಷ್ಟವನ್ನು ತಂದುಕೊಡಲಿದೆ. ಉದ್ಯೋಗದಲ್ಲಿ ಹಿರಿಯರಿಂದ ಪ್ರೋತ್ಸಾಹ ದೊರೆಯಲಿದೆ. ಬಡ್ತಿ ಸಿಗುವ ಸಾಧ್ಯತೆ ದಟ್ಟವಾಗಿದೆ.

8.ಜನ್ಮದಿನಾಂಕ: 8, 17, 26 ಅದೃಷ್ಟ ಸಂಖ್ಯೆ: 6 ಅದೃಷ್ಟದ ಬಣ್ಣ: ಆಕಾಶ ನೀಲಿ ಆರೋಗ್ಯ: ಉತ್ತಮವಾಗಿರಲಿದೆ ಪರಿಣಾಮ: ಸೂರ್ಯ ಮತ್ತು ಮಂಗಳ ನಿಮ್ಮ ವೃತ್ತಿ ಬದುಕಿನ ಮೇಲೆ ಋಣಾತ್ಮಕ ಪ್ರಭಾವ ಬೀರಬಹುದು. ಆದರೆ, 6 ಮತ್ತು 9ರ ಸಹಾಯದೊಂದಿಗೆ ಏಳ್ಗೆಯತ್ತ ಹೆಜ್ಜೆ ಹಾಕುವ ಸಾಧ್ಯತೆ ಇದೆ.

9.ಜನ್ಮದಿನಾಂಕ: 9, 18, 27 ಅದೃಷ್ಟ ಸಂಖ್ಯೆ: 3 ಅದೃಷ್ಟದ ಬಣ್ಣ: ಹಳದಿ ಆರೋಗ್ಯ: ಹೊಟ್ಟೆಯ ಆರೋಗ್ಯದ ಬಗ್ಗೆ ಗಮನ ಹರಿಸಿ ಪರಿಣಾಮ: ಈ ದಿನ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯಲಿದೆ. ಸೂರ್ಯನ ಪ್ರಭಾವದಿಂದಾಗಿ ನಿಮ್ಮ ವ್ಯಾಪಾರ ವಹಿವಾಟು ವೃದ್ಧಿಸಲಿದೆ.

ಇದನ್ನೂ ಓದಿ: Numerology: ಸಂಖ್ಯಾಶಾಸ್ತ್ರದ ಪ್ರಕಾರ 11, 22 ಹಾಗೂ 33 ಮಾಸ್ಟರ್ ನಂಬರ್; ಏನಿದರ ವಿಶೇಷ ಎಂಬುದು ನಿಮಗೆ ಗೊತ್ತಾ? 

Numerology Number 7: ಯಾವುದೇ ತಿಂಗಳ 7, 16, 25ರಂದು ಹುಟ್ಟಿದವರ ಬಗ್ಗೆ ಸಂಖ್ಯಾಶಾಸ್ತ್ರದಲ್ಲಿ ಏನು ಹೇಳಲಾಗಿದೆ ಗೊತ್ತೆ?

(ವಿ.ಸೂ: ಇದು ನಂಬಿಕೆಯನ್ನು ಆಧರಿಸಿದ ಲೇಖನವಾಗಿದ್ದು, ಇದಕ್ಕೆ ಯಾವುದೇ ವೈಜ್ಞಾನಿಕ ಹಿನ್ನೆಲೆ ಇರುವುದಿಲ್ಲ.)

(Numerology prediction for August 14 2021 how does it affects your life know here)

‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್