Numerology: ಸಂಖ್ಯಾಶಾಸ್ತ್ರದ ಪ್ರಕಾರ 11, 22 ಹಾಗೂ 33 ಮಾಸ್ಟರ್ ನಂಬರ್; ಏನಿದರ ವಿಶೇಷ ಎಂಬುದು ನಿಮಗೆ ಗೊತ್ತಾ?
ಮಾಸ್ಟರ್ ನಂಬರ್ ಎಂದು ಕರೆಸಿಕೊಳ್ಳುವ 11, 22 ಹಾಗೂ 33 ಈ ಮೂರೂ ಸಂಖ್ಯೆಯ ವಿಶೇಷತೆ ಬಗ್ಗೆ ತಿಳಿದುಕೊಳ್ಳೋಣ. ಅದಕ್ಕೂ ಮೊದಲು ನಿಮ್ಮ ಲೈಫ್ ಪಾಥ್ ಎಷ್ಟು ಬರುತ್ತದೆ ಎಂದು ನೋಡಿಕೊಳ್ಳಿ. ಅದಕ್ಕೆ ಮಾಡಬೇಕಾದದ್ದು ಇಷ್ಟೇ: ಜನ್ಮ ದಿನಾಂಕ, ತಿಂಗಳು ಹಾಗೂ ಇಸವಿ ಮೂರನ್ನೂ ಕೂಡಬೇಕು.
ನೀವು ಹುಟ್ಟಿದ ದಿನಾಂಕ, ತಿಂಗಳು, ಇಸವಿ ಈ ಮೂರನ್ನೂ ಕೂಡಿದರೆ ಬರುವ ಮೊತ್ತವನ್ನು ಲೈಫ್ ಪಾಥ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಒಂದು ಅಂಕಿಗೆ ಇಳಿಸಲಾಗುತ್ತದೆ. ಉದಾಹರಣೆಗೆ ಮಾರ್ಚ್ 31, 2021ಕ್ಕೆ ಹುಟ್ಟಿದ ಮಗುವಿನ ಲೈಫ್ ಪಾಥ್ ನಂಬರ್ 3+1+0+3+2+0+2+1=12 ಬರುತ್ತದೆ. ಆ ನಂತರ 1+2= 3 ಆಗುತ್ತದೆ. ಅದೇ ಮಾರ್ಚ್ 30ರಂದು ಹುಟ್ಟಿದ ಮಗುವಿನ ಸಂಖ್ಯೆ 3+0+0+3+2+0+2+1= 11 ಆಗುತ್ತದೆ. ಇದನ್ನು ಒಂದಂಕಿಗೆ ಇಳಿಸಬಾರದು. ಹೀಗೆ ಸಂಖ್ಯಾ ಶಾಸ್ತ್ರದ ಪ್ರಕಾರ, 11, 22 ಹಾಗೂ 33 ಈ ಸಂಖ್ಯೆ ಬಂದಾಗ ಒಂದಂಕಿಗೆ ಇಳಿಸುವುದಿಲ್ಲ. ಅವುಗಳನ್ನು ಮಾಸ್ಟರ್ ನಂಬರ್ ಎಂದು ಕರೆಯಲಾಗುತ್ತದೆ. 11 ಬಂದಲ್ಲಿ ರವಿ ಗ್ರಹದ ಪ್ರಭಾವ ಎರಡು ಪಟ್ಟು ಇರುತ್ತದೆ. ಇನ್ನು 22 ಅಂದರೆ, ಚಂದ್ರ ಗ್ರಹದ ಪ್ರಭಾವ ದುಪ್ಪಟ್ಟು, ಅದೇ ರೀತಿ 33 ಅಂದರೆ, ಗುರುವಿನ ಪ್ರಭಾವ ಎರಡರಷ್ಟಿರುತ್ತದೆ. ಹೀಗೆ ಮಾಸ್ಟರ್ ನಂಬರ್ ಬರುವುದರಿಂದ ಅಂಥ ವ್ಯಕ್ತಿಗಳಿಗೆ ಆ ಪ್ರಭಾವವನ್ನು ನಿರ್ವಹಿಸುವ ಸಾಮರ್ಥ್ಯ ಬರುವುದಿಲ್ಲ. ಯಾವಾಗಲೂ ಒತ್ತಡದಲ್ಲಿ ಇರುವಂತೆ ಕಂಡುಬರುತ್ತಾರೆ. ಅದೇ ವೇಳೆ ಇವರ ಸಾಮರ್ಥ್ಯ ಕೂಡ ಹೆಚ್ಚಿರುತ್ತದೆ.
ಈಗ ಮಾಸ್ಟರ್ ನಂಬರ್ ಎಂದು ಕರೆಸಿಕೊಳ್ಳುವ 11, 22 ಹಾಗೂ 33 ಈ ಮೂರೂ ಸಂಖ್ಯೆಯ ವಿಶೇಷತೆ ಬಗ್ಗೆ ತಿಳಿದುಕೊಳ್ಳೋಣ. ಅದಕ್ಕೂ ಮೊದಲು ನಿಮ್ಮ ಲೈಫ್ ಪಾಥ್ ಎಷ್ಟು ಬರುತ್ತದೆ ಎಂದು ನೋಡಿಕೊಳ್ಳಿ. ಅದಕ್ಕೆ ಮಾಡಬೇಕಾದದ್ದು ಇಷ್ಟೇ: ಜನ್ಮ ದಿನಾಂಕ, ತಿಂಗಳು ಹಾಗೂ ಇಸವಿ ಮೂರನ್ನೂ ಕೂಡಬೇಕು. ಈಗಾಗಲೇ ಮೇಲಿನ ಉದಾಹರಣೆಯಲ್ಲಿ ಅದನ್ನು ತೋರಿಸಲಾಗಿದೆ. ಹಾಗೆ ಕೂಡಿದಾಗ 11, 22 ಅಥವಾ 33 ಬರುತ್ತದೆಯೋ ನೋಡಿಕೊಳ್ಳಿ. ಒಂದು ವೇಳೆ ಬಂದಲ್ಲಿ ಯಾವ ಸಂಖ್ಯೆಗೆ ಏನು ಫಲ ಎಂಬುದನ್ನು ಮುಂದೆ ಓದಿಕೊಳ್ಳಿ.
ಮಾಸ್ಟರ್ ಸಂಖ್ಯೆ 11 ಈ ಮಾಸ್ಟರ್ ಸಂಖ್ಯೆಯಲ್ಲಿ ಬರುವವರಿಗೆ ಸುಪ್ತಪ್ರಜ್ಞೆ ಜಾಗರೂಕವಾಗಿರುತ್ತದೆ. ಇದು ಪ್ರಕಾಶವನ್ನು ಪ್ರತಿನಿಧಿಸುತ್ತದೆ; ತರ್ಕಬದ್ಧ ಚಿಂತನೆಯಿಲ್ಲದೆ ಒಳನೋಟವನ್ನು ಪ್ರತಿನಿಧಿಸುತ್ತದೆ; ಮತ್ತು ಸೂಕ್ಷ್ಮತೆ, ನರ ಶಕ್ತಿ, ಸಂಕೋಚ ಮತ್ತು ಪ್ರಾಯೋಗಿಕ ಆಲೋಚನೆ ಇಲ್ಲದಿರುವುದು ಹಾಗೂ ಕನಸು ಕಾಣುವುದನ್ನು ಸೂಚಿಸುತ್ತದೆ. ಸಂಖ್ಯಾಶಾಸ್ತ್ರದ ಮಾಸ್ಟರ್ ಸಂಖ್ಯೆ 11 ಇದೆಯಲ್ಲಾ, ಇದು 2ರ ಎಲ್ಲ ಅಂಶಗಳನ್ನೂ ಹೊಂದಿದೆ. ಆದರೆ ಗಣನೀಯವಾಗಿ ಹೆಚ್ಚಾಗಿದೆ ಮತ್ತು ವರ್ಚಸ್ಸು, ನಾಯಕತ್ವ ಮತ್ತು ಸ್ಫೂರ್ತಿ ಹೊಂದಿದೆ. ಇವರಿಗೆ ಜನ್ಮತಃ ದ್ವಂದ್ವ ಇರುತ್ತದೆ. ಇದರಿಂದಾಗಿ ಚಲನಶೀಲತೆ, ಆಂತರಿಕ ಸಂಘರ್ಷ ಮತ್ತು ವೇಗದ ಸ್ವಭಾವವನ್ನು ತುಂಬುತ್ತದೆ. ತನ್ನನ್ನು ಮೀರಿದ ಗುರಿಯತ್ತ ಗಮನಹರಿಸದಿದ್ದಾಗ ಭಯ ಮತ್ತು ಆತಂಕಗಳನ್ನು ಸೃಷ್ಟಿಸಲು ಅದು ಒಳಕ್ಕೆ ತಿರುಗಬಹುದು. ಫೋಬಿಯಾಗಳನ್ನು ಸೃಷ್ಟಿಸಬಹುದು. ಈ ಸಂಖ್ಯೆಯವರ ಬೆಳವಣಿಗೆ, ಸ್ಥಿರತೆ ಮತ್ತು ವೈಯಕ್ತಿಕ ಶಕ್ತಿಯು ಅದರ ಅರ್ಥಗರ್ಭಿತ ತಿಳಿವಳಿಕೆ ಮತ್ತು ಆಧ್ಯಾತ್ಮಿಕ ಸತ್ಯಗಳನ್ನು ಸ್ವೀಕರಿಸುವುದರಲ್ಲಿ ಅಡಗಿದೆ. ಸಂಖ್ಯೆ 11ಕ್ಕೆ ಶಾಂತಿಯ ಮೂಲಕ ಸಿಗುವ ತರ್ಕಕ್ಕಿಂತ ತಮ್ಮ ನಂಬಿಕೆ ಬಗ್ಗೆಯೇ ವಿಶ್ವಾಸ ಹೆಚ್ಚು.
ಮಾಸ್ಟರ್ ಸಂಖ್ಯೆ 22 ಸಂಖ್ಯಾಶಾಸ್ತ್ರದಲ್ಲಿನ ಎಲ್ಲಾ ಸಂಖ್ಯೆಗಳಲ್ಲೂ ಮಾಸ್ಟರ್ ಸಂಖ್ಯೆ 22 ಅತ್ಯಂತ ಯಶಸ್ವಿಯಾದದ್ದು. ಇದು ಎಲ್ಲ ಸಂಖ್ಯೆಗಳಲ್ಲೂ ಅತ್ಯಂತ ಶಕ್ತಿಶಾಲಿಯಾದದ್ದು ಮತ್ತು ಇದನ್ನು ಮಾಸ್ಟರ್ ಬಿಲ್ಡರ್ ಎಂದು ಕರೆಯಲಾಗುತ್ತದೆ. ಮಾಸ್ಟರ್ ಸಂಖ್ಯೆ 22 ಮಹತ್ವಾಕಾಂಕ್ಷೆಯನ್ನು ವಾಸ್ತವವಾಗಿ ಮಾಡಬಹುದು, ಆದರೆ ಚಾರ್ಟ್‌ನಲ್ಲಿರುವ ಇತರ ಸಂಖ್ಯೆಗಳು ಅದನ್ನು ಸರಿಯಾಗಿ ಬೆಂಬಲಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ಮಾಸ್ಟರ್ ಸಂಖ್ಯೆ 22ಕ್ಕೆ ಮಾಸ್ಟರ್ ಸಂಖ್ಯೆ 11ರ ಸ್ಫೂರ್ತಿದಾಯಕ ಒಳನೋಟಗಳಿವೆ. ಇದು 4ರ ಪ್ರಾಯೋಗಿಕತೆ ಮತ್ತು ಕ್ರಮಬದ್ಧ ಆಲೋಚನೆಯ ಕಾಂಬಿನೇಷನ್ ಆಗಿದೆ. ಇದು ಅನಿಯಮಿತ ಮತ್ತು ಶಿಸ್ತುಬದ್ಧವಾಗಿದೆ; ಅದು ಮೂಲರೂಪವನ್ನು ನೋಡುತ್ತದೆ ಮತ್ತು ಅದನ್ನು ವಸ್ತು ರೂಪದಲ್ಲಿ ಭೂಮಿಗೆ ತರುತ್ತದೆ. ಇದು ದೊಡ್ಡ ಆಲೋಚನೆಗಳು, ವಿಸ್ತಾರವಾದ ಯೋಜನೆಗಳು, ಆದರ್ಶವಾದ, ನಾಯಕತ್ವ ಮತ್ತು ಆತ್ಮ ವಿಶ್ವಾಸವನ್ನು ಹೊಂದಿದೆ. ಮಾಸ್ಟರ್ ಸಂಖ್ಯೆ 11ರಂತೆ, 22ಕ್ಕೆ ಕೂಡ ತನ್ನದೇ ಆದ ಮಹತ್ವಾಕಾಂಕ್ಷೆಯಿಂದ ಸುಲಭವಾಗಿ ಕುಗ್ಗಬಹುದು. ಇದು ಆಂತರಿಕ ಒತ್ತಡಗಳಿಗೆ ಕಾರಣವಾಗುತ್ತದೆ. ಮಾಸ್ಟರ್ ಸಂಖ್ಯೆಗಳು, 11 ಮತ್ತು 22 ವಿಶೇಷವಾಗಿ ಚಿಕ್ಕ ವಯಸ್ಸಿನಲ್ಲಿಯೇ ಒತ್ತಡವನ್ನು ಎದುರಿಸಬೇಕಾಗುತ್ತದೆ. ಮಾಸ್ಟರ್ ಸಂಖ್ಯೆ 22 ವೈಯಕ್ತಿಕ ಮಹತ್ವಾಕಾಂಕ್ಷೆಗಿಂತ ದೊಡ್ಡದಾದ ಗುರಿಗಳ ಸಾಕ್ಷಾತ್ಕಾರದ ಕಡೆಗೆ ಕೆಲಸ ಮಾಡಬೇಕು. ಪ್ರಾಯೋಗಿಕ ರೀತಿಯಲ್ಲಿ ಜಗತ್ತಿಗೆ ಸೇವೆ ಸಲ್ಲಿಸುತ್ತದೆ.
ಮಾಸ್ಟರ್ ಸಂಖ್ಯೆ 33 ಮಾಸ್ಟರ್ ಸಂಖ್ಯೆ 33 ಶಿಕ್ಷಕ ಎಂದು ಪರಿಗಣಿಸಲಾಗುತ್ತದೆ ಮತ್ತು ಎಲ್ಲಾ ಸಂಖ್ಯೆಗಳಿಗಿಂತ ಹೆಚ್ಚು ಆಧ್ಯಾತ್ಮಿಕವಾಗಿ ವಿಕಸನಗೊಂಡಿರುತ್ತದೆ. ಎಲ್ಲಾ ಸಂಖ್ಯೆಗಳ ಪೈಕಿ 33 ಹೆಚ್ಚು ಪ್ರಭಾವಶಾಲಿಯಾಗಿದೆ; ಇದು 11 ಮತ್ತು 22 ಈ ಎರಡರ ಕಾಂಬಿನೇಷನ್ ಆಗಿದೆ. ಅಂದರೆ ಆ ಎರಡೂ ಸಂಖ್ಯೆಯನ್ನು ಕೂಡಿದರೆ 33 ಆಗುತ್ತದೆ. ಅವುಗಳ ಸಾಮರ್ಥ್ಯವನ್ನು ಮತ್ತೊಂದು ಹಂತಕ್ಕೆ ಹೆಚ್ಚಿಸುತ್ತದೆ. ಸಂಖ್ಯೆ 33 ವೈಯಕ್ತಿಕ ಮಹತ್ವಾಕಾಂಕ್ಷೆಯನ್ನು ಹೊಂದಿರುವುದಿಲ್ಲ ಮತ್ತು ಬದಲಾಗಿ ಮಾನವೀಯತೆಯ, ಆಧ್ಯಾತ್ಮಿಕ ಉನ್ನತಿಯ ಮೇಲೆ ಅದರ ಗಣನೀಯ ಸಾಮರ್ಥ್ಯವನ್ನು ಕೇಂದ್ರೀಕರಿಸುತ್ತದೆ. 33 ವಿಶೇಷವಾಗಿ ಪ್ರಭಾವಶಾಲಿಯಾಗಿರುವುದು ಅದರ ಉನ್ನತ ಮಟ್ಟದ ಪ್ರಾಮಾಣಿಕ ಭಕ್ತಿಯಲ್ಲಿ. ಚಾರ್ಟ್ನ ಪ್ರಮುಖ ಸಂಖ್ಯೆಗಳಲ್ಲಿ ಕಂಡುಬಂದರೆ ಮಾತ್ರ ಸಂಖ್ಯಾಶಾಸ್ತ್ರದ ಮಾಸ್ಟರ್ ಸಂಖ್ಯೆ 33 ಅನ್ನು ಪರಿಗಣಿಸಲಾಗುತ್ತದೆ ಮತ್ತು ಆಕ್ಟಿವೇಟ್ ಮಾಡಲಾಗುತ್ತದೆ: ಜೀವನ ಮಾರ್ಗ, ಹೃದಯದ ಆಸೆ, ಅಭಿವ್ಯಕ್ತಿ, ವ್ಯಕ್ತಿತ್ವ ಮತ್ತು ಮುಕ್ತಾಯ ಸಂಖ್ಯೆ, ಅಥವಾ ಎಸೆನ್ಸ್ ಚಕ್ರ ಅಥವಾ ಪಿನಾಕಲ್ ಚಕ್ರ. ಎಲ್ಲಾ ಇತರ ಸಂದರ್ಭಗಳಲ್ಲಿ 33 ಅನ್ನು 6ಕ್ಕೆ ಇಳಿಸಬೇಕು.
ಇದನ್ನೂ ಓದಿ: Numerology: ಯಾವುದೇ ತಿಂಗಳ 1, 10, 19 ಹಾಗೂ 28ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಗೊತ್ತಾ?
ಇದನ್ನೂ ಓದಿ: Car number astrology: ವಾಹನ ಖರೀದಿಸಬೇಕು ಅಂತಿದ್ದೀರಾ? ನಿಮ್ಮ ಅದೃಷ್ಟ ಸಂಖ್ಯೆ ಯಾವುದೆಂದು ತಿಳಿದುಕೊಳ್ಳಿ
(Must know information about master number 11, 22 and 33 according to numerology)