AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology: ಯಾವುದೇ ತಿಂಗಳ 1, 10, 19 ಹಾಗೂ 28ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಗೊತ್ತಾ?

ಯಾವುದೇ ತಿಂಗಳಿನ 1, 10, 19 ಹಾಗೂ 28ನೇ ತಾರೀಕಿನಂದು ಜನಿಸಿದವರ ಜನ್ಮಸಂಖ್ಯೆಯು 1 ಆಗುತ್ತದೆ. ಇವರ ಸ್ವಭಾವ ಹೇಗಿರುತ್ತದೆ ಎಂಬುದರ ಬಗ್ಗೆ ಆಸಕ್ತಿಕರವಾದ ಮಾಹಿತಿ ಇಲ್ಲಿದೆ.

Numerology: ಯಾವುದೇ ತಿಂಗಳ 1, 10, 19 ಹಾಗೂ 28ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಗೊತ್ತಾ?
ಪ್ರಾತಿನಿಧಿಕ ಚಿತ್ರ
TV9 Web
| Updated By: Skanda|

Updated on: Jun 19, 2021 | 7:59 AM

Share

ಇಂದಿನ ಲೇಖನದಲ್ಲಿ ಜನ್ಮಸಂಖ್ಯೆ 1ರ ಬಗ್ಗೆ ತಿಳಿಸಲಾಗುವುದು. ಯಾವುದೇ ತಿಂಗಳಿನ 1, 10, 19 ಹಾಗೂ 28ನೇ ತಾರೀಕಿನಂದು ಹುಟ್ಟಿದರೆ ಅಂಥವರ ಜನ್ಮಸಂಖ್ಯೆ 1 ಆಗುತ್ತದೆ. ಇವರ ಅಧಿಪತಿ ರವಿ. ನ್ಯೂಮರಾಲಜಿಯ ಪ್ರಕಾರ ಬಹಳ ಮುಖ್ಯವಾದ ಸಂಖ್ಯೆ ಇದು. ಈ ಸಂಖ್ಯೆಯವರು ಪ್ರಾಮಾಣಿಕರು. ಆತ್ಮಗೌರವ ಬಹಳ ಜಾಸ್ತಿ ಇರುತ್ತದೆ. ತಮಗೆ ಸರಿ ಅನಿಸಿದ್ದನ್ನು ಶತಾಯಗತಾಯ ಮಾಡುತ್ತಾರೆ. ತಾವು ಮಾಡುವ ಕೆಲಸಕ್ಕೆ ಬಹಳ ನಿಷ್ಠರಾಗಿಯೂ ಬದ್ಧರಾಗಿಯೂ ಇರುತ್ತಾರೆ. ಯಾರ ಮುಂದೆಯೂ ಮಂಡಿಯೂರುವುದಕ್ಕೆ ಇವರ ಮನಸ್ಸು ಒಪ್ಪುವುದಿಲ್ಲ. ಯಾರಿಗೂ ಅವಲಂಬಿತರೂ ಆಗುವುದಿಲ್ಲ. ತಮ್ಮದೇ ನಿರ್ಧಾರಗಳನ್ನು ಮಾಡಲು ಬಯಸುತ್ತಾರೆ. ಈ ಜನರ ಅಧಿಪತಿ ರವಿಯಾದ್ದರಿಂದ ಇತರರು ತಮ್ಮನ್ನು ಅವಲಂಬಿಸಲಿ ಅಂದುಕೊಳ್ಳುತ್ತಾರೆ. ಅಂದಹಾಗೆ ಇವರು ಸುಮ್ಮನೆ ಹಾಗಂದುಕೊಳ್ಳುವುದಿಲ್ಲ. ಅದಕ್ಕೆ ಬೇಕಾದಷ್ಟು ಪ್ರತಿಭೆ ಇವರಲ್ಲಿ ಇರುತ್ತದೆ. ಜತೆಗೆ ಆಕರ್ಷಕ ವ್ಯಕ್ತಿತ್ವವೂ ಸೇರಿಕೊಳ್ಳುತ್ತದೆ.

ಅಷ್ಟೇನೂ ಭಾವುಕರಲ್ಲದ ಇವರು, ಬಹುತೇಕ ವಿಷಯಗಳನ್ನು ತರ್ಕಬದ್ಧವಾಗಿಯೇ ಆಲೋಚನೆ ಮಾಡುತ್ತಾರೆ. ಉದಾರವಾದ ಸ್ವಭಾವ ಇರುತ್ತದೆ. ವಿನಯಶೀಲತೆ ಕೂಡ ಮೈಗೂಡಿಸಿಕೊಂಡಿರುತ್ತಾರೆ. ಆತ್ಮವಿಶ್ವಾಸ ತುಳುಕುತ್ತಿರುತ್ತದೆ. ಎಲ್ಲ ಕೆಲಸವನ್ನೂ ತಾವೇ ಮಾಡುವುದಕ್ಕೆ ಹೊರಟುಬಿಡುತ್ತಾರೆ. ತುಂಬ ಕಡಿಮೆ ಅವಧಿಯಲ್ಲೇ ಅತ್ಯುತ್ತಮ ಆಡಳಿತಗಾರ ಎಂದೆನಿಸಿಕೊಳ್ಳುತ್ತಾರೆ. ಇವರಲ್ಲಿ ಮೊಂಡುತನ ಇರುತ್ತದೆ. ತಮಗೆ ಅನಿಸಿದ್ದೇ ಸರಿ ಎಂಬ ಕಾರಣಕ್ಕೆ ನಿರ್ಧಾರ ಬದಲಿಸಿಕೊಳ್ಳದೆ ಕೆಲವು ಸಮಸ್ಯೆಗಳಾಗುತ್ತವೆ. ಯಾರು ಇವರ ಈಗೋ ಸಹ ಒಪ್ಪಕೊಳ್ಳುತ್ತಾರೋ ಅಂಥವರು ಉತ್ತಮ ಸ್ನೇಹಿತರಾಗುತ್ತಾರೆ. ಯಾರು ಒಪ್ಪಿಕೊಳ್ಳುವುದಿಲ್ಲವೋ ಅಂಥವರು ಶತ್ರುಗಳಾಗುತ್ತಾರೆ.

ತಮ್ಮ ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಗೌರವಿಸುವ ಜನ ಇವರು. ಜತೆಗೆ ದೇಶಪ್ರೇಮ ಸಹ ಹೆಚ್ಚಿರುತ್ತದೆ. ಪ್ರತಿ ಸಲವೂ ಹೊಸದು ಏನನ್ನಾದರೂ ಮಾಡುವುದಕ್ಕೆ ತುಡಿಯುವಂಥ ಜನರು ಇವರು. ಮತ್ತು ಸದಾ ಗುರಿಯ ಕಡೆಗೆ ಕಣ್ಣೋಟ ನೆಟ್ಟಿರುತ್ತದೆ. ತಮ್ಮ ಕ್ರಿಯೇಟಿವಿಟಿಯನ್ನು ಕೆಲಸದಲ್ಲೂ ತೋರಿಸುತ್ತಾರೆ. ಆದರೆ ಇವರು ಕೆಲಸ ಮಾಡುವಾಗ ಬೇರೆಯವರು ಮೂಗು ತೂರಿಸಿದರೆ ಅಸಾಧ್ಯವಾದ ಸಿಟ್ಟು ಬರುತ್ತದೆ. ಅಂದಹಾಗೆ ಸೌಂದರ್ಯಕ್ಕೆ ಬಹಳ ಬೇಗ ಮರುಳಾಗುತ್ತಾರೆ. ಜತೆಗೆ ಯಾರಾದರೂ ಕ್ರಿಯೇಟಿವ್ ಆಗಿಲ್ಲ ಅಂದರೆ ಆ ಬಗ್ಗೆ ಇವರಲ್ಲೊಂದು ತಿರಸ್ಕಾರ ಮೂಡುತ್ತದೆ.

ಆದರೆ, ಇವರ ಅಹಂಕಾರವು ಕೆಲವು ಸಹ ತಡೆಯುವುದಕ್ಕೆ ಸಾಧ್ಯವೇ ಇಲ್ಲ ಅನ್ನೋಷ್ಟು ಆಗಿ ಬಿಡುತ್ತದೆ. ಈ ಗುಣ ಒಂದಲ್ಲಾ ಒಂದು ಬಗೆಯಲ್ಲಿ ಇವರನ್ನು ಬಿಡದೆ ಕಾಡುತ್ತದೆ. ಯಶಸ್ಸು ಇವರ ಪಾಲಿಗೆ ಸುಲಭವಾಗಿ ದೊರೆಯುವುದಿಲ್ಲ. ಹಲವು ಅಡ್ಡಿ- ಆತಂಕ ಎದುರಿಸಿದ ನಂತರವಷ್ಟೇ ಎತ್ತರವನ್ನು ತಲುಪಿಕೊಳ್ಳುತ್ತಾರೆ. ತಮ್ಮ ಶತ್ರು ಯಾರು ಎಂಬುದನ್ನು ಗುರುತಿಸಲು ಸಾಧ್ಯವಾಗದೆ ಅದರಿಂದ ನೋವು ಪಡುವಂತಾಗುತ್ತದೆ. ತಮ್ಮ ಸಿಡುಕಿನ ಸ್ವಭಾವ ಹದ್ದು ಮೀರಿ ಹೋಗಿ, ಇದು ಅವರ ಪಾಲಿನ ದೌರ್ಬಲ್ಯ ಆಗಿ ಪರಿಣಮಿಸುತ್ತದೆ. ಬಹಳ ಸುಲಭವಾಗಿ ಇತರರನ್ನು ನಂಬುವ ಇವರು, ಜೀವನದಲ್ಲಿ ಹಲವು ಬಾರಿ ವಂಚನೆಗೆ ಗುರಿ ಆಗುತ್ತಾರೆ. ಅಂದಹಾಗೆ ಇವರು ಅನಗತ್ಯವಾಗಿ ವಸ್ತುಗಳನ್ನು ಖರೀದಿಸುವ ಸ್ವಭಾವವನ್ನು ಬಿಡಬೇಕು.

ಇದನ್ನೂ ಓದಿ: Numerology: ಯಾವುದೇ ತಿಂಗಳಿನ 8, 17, 26ನೇ ತಾರೀಕಿನಂದು ಹುಟ್ಟಿದವರು ಬಹಳ ವಿಶೇಷ ಏಕೆ ಗೊತ್ತಾ? ಇಲ್ಲಿದೆ ಮಾಹಿತಿ

ಇದನ್ನೂ ಓದಿ: Personality on the basis of birthday: ನೀವು ಹುಟ್ಟಿದ ವಾರ ಯಾವುದು? ಅದರ ಆಧಾರದಲ್ಲಿ ನಿಮ್ಮ ಸ್ವಭಾವ ಹೀಗಿರುತ್ತದೆ

(Birth number 1 people nature, characteristics according to numerology explained here)

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!