Numerology: ಯಾವುದೇ ತಿಂಗಳಿನ 8, 17, 26ನೇ ತಾರೀಕಿನಂದು ಹುಟ್ಟಿದವರು ಬಹಳ ವಿಶೇಷ ಏಕೆ ಗೊತ್ತಾ? ಇಲ್ಲಿದೆ ಮಾಹಿತಿ

ಯಾವುದೇ ತಿಂಗಳಿನ 8, 17, 26ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ? ಈ ಲೇಖನದಲ್ಲಿ ಆ ಬಗ್ಗೆ ವಿವರಣೆಗಳಿವೆ.

Numerology: ಯಾವುದೇ ತಿಂಗಳಿನ 8, 17, 26ನೇ ತಾರೀಕಿನಂದು ಹುಟ್ಟಿದವರು ಬಹಳ ವಿಶೇಷ ಏಕೆ ಗೊತ್ತಾ? ಇಲ್ಲಿದೆ ಮಾಹಿತಿ
ಶನಿ ಗ್ರಹ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Srinivas Mata

Updated on: Jun 17, 2021 | 1:25 AM

ನವಗ್ರಹಗಳು ಅಂತ ಕರೆಯಲಾಗುತ್ತದೆ. ಆ ಪೈಕಿ ಶನೈಶ್ಚರ ಬಹಳ ಪವರ್​ಫುಲ್ ಹಾಗೂ ವಿಶಿಷ್ಟ. ಆ ಗ್ರಹವನ್ನು ಪ್ರತಿನಿಧಿಸುವ ಸಂಖ್ಯೆ 8. ಯಾವುದೇ ತಿಂಗಳಿನ 8, 17, 26 ಈ ದಿನಾಂಕಗಳಲ್ಲಿ ಹುಟ್ಟಿದವರ ಜನ್ಮಸಂಖ್ಯೆ 8 ಆಗುತ್ತದೆ. ಇನ್ನು 8ನೇ ತಾರೀಕಿನಂದು ಹುಟ್ಟಿದವರ ಮೇಲೆ ಸಂಪೂರ್ಣವಾಗಿ ಶನೈಶ್ಚರನ ಪ್ರಭಾವ ಇದ್ದರೆ, 17ನೇ ತಾರೀಕಿನಂದು ಹುಟ್ಟಿದವರ ಮೇಲೆ ರವಿ, ಕೇತು ಹಾಗೂ ಶನಿ ಮೂರೂ ಗ್ರಹದ ಪ್ರಭಾವ ಇರುತ್ತದೆ. ಇನ್ನು 26ನೇ ತಾರೀಕಿನಂದು ಹುಟ್ಟಿದವರಲ್ಲಿ ಚಂದ್ರ, ಶುಕ್ರ ಮತ್ತು ಶನೈಶ್ಚರ ಹೀಗೆ ಮೂರೂ ಗ್ರಹದ ಪ್ರಭಾವ ಇರುತ್ತದೆ. ಇವರ ಗುರಿ, ಆಕಾಂಕ್ಷೆ, ಆಸೆ ಎಲ್ಲವೂ ದೊಡ್ಡದಾಗಿಯೇ ಇರುತ್ತದೆ. ಕಡೆಗೆ ಇವರು ಎದುರು ಹಾಕಿಕೊಳ್ಳುವ ವ್ಯಕ್ತಿಗಳೂ ಅಷ್ಟೇ ಪ್ರಭಾವಿಗಳಾಗಿರುತ್ತಾರೆ. ಮಾನಸಿಕವಾಗಿ ಬಲು ಗಟ್ಟಿಗರಾದ ಇವರು, ಅದ್ಯಾವುದೇ ಕೆಲಸ ಕೈಗೆತ್ತಿಕೊಂಡರೂ ಶೇ 200ರಷ್ಟು ಶ್ರಮ ಹಾಕುತ್ತಾರೆ. ತುಂಬ ಅಚ್ಚುಕಟ್ಟಾಗಿ ಮಾಡಲೇಬೇಕು ಎಂಬ ಪ್ರಯತ್ನದಲ್ಲಿ ಡೆಡ್​ಲೈನ್​ಗಳನ್ನು ಮೀರುತ್ತಾರೆ. ಇವರು ಉಳಿದೆಲ್ಲರಿಗಿಂತಲೂ ವಿಶಿಷ್ಟ. ಏಕೆಂದರೆ, ಬೇರೆಯವರು ಈಗಾಗಲೇ ಸಿದ್ಧವಾಗಿರುವ ದಾರಿಯಲ್ಲೇ ಸಲೀಸಾದದ್ದು ಯಾವುದು ಅಂತ ಯೋಚಿಸುತ್ತಿರುವಾಗಲೇ ಈ 8ರ ಸಂಖ್ಯೆಯವರು ತಾವೇ ದಾರಿಯನ್ನು ನಿರ್ಮಿಸಿಬಿಡುತ್ತಾರೆ.

ಭಾಷಾ ವಿಜ್ಞಾನದ ಬಗ್ಗೆ ಇವರಿಗೆ ಆಸಕ್ತಿ ಹೆಚ್ಚಿರುತ್ತದೆ. ಇವರಿಗೆ ಬೇರೆಯವರನ್ನು ಅನುಸರಿಸುವುದಕ್ಕಿಂತ ತಮ್ಮದೇ ದಾರಿಯನ್ನು ಸೃಷ್ಟಿ ಮಾಡಿಕೊಳ್ಳುವುದರಲ್ಲಿ ಆಸಕ್ತಿ ಹೆಚ್ಚಿರುತ್ತದೆ. ಈ ಸಂಖ್ಯೆಯವರ ಪ್ರೀತಿ ಎಷ್ಟು ಅಪರಿಮಿತವೋ ದ್ವೇಷ ಅಷ್ಟೇ ಅತಿರೇಕ. ಈ ಕಾರಣಕ್ಕೆ ಎಷ್ಟೋ ಸಲ ತಾವು ಸಮಸ್ಯೆಗೆ ಸಿಲುಕಿಕೊಂಡು, ಇತರರಿಗೂ ತೊಂದರೆ ಆಗುವಂತೆ ಮಾಡುತ್ತಾರೆ. ಗ್ಯಾನ ಬಂದ ಗಿರಾಕಿ ಅಂತೀವಲ್ಲ ಹಾಗೆ ಇವರು. ಸಂಭಾಳಿಸುವುದು ಬಹಳ ಕಷ್ಟದ ಕೆಲಸ. ಈಗ ಇರುವಂತೆ ಇನ್ನೊಂದು ಕ್ಷಣಕ್ಕೆ ಇವರ ಸ್ವಭಾವ ಇರುವುದಿಲ್ಲ. ಹೀಗೆ ಅಂತ ನಿರ್ಧರಿಸುವುದಕ್ಕೆ ಸಾಧ್ಯವಿಲ್ಲದ ವ್ಯಕ್ತಿತ್ವದವರು. ಬಹಳ ಬೇಗ ನಿರಾಶ ಭಾವ ಇವರನ್ನು ಕಾಡಿ, ಎಷ್ಟೋ ಸಲ ತಮಗೆ ತಾವೇ ಹಾನಿ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತದೆ.

ಈ ದಿನಾಂಕದಲ್ಲಿ ಜನಿಸಿದವರ ಅತಿ ದೊಡ್ಡ ಶಕ್ತಿ ಅಂದರೆ ಸ್ನೇಹ ಸ್ವಭಾವ. ಮೇಲ್ನೋಟಕ್ಕೆ ಎಷ್ಟೇ ಒರಟರಂತೆ ಕಂಡರೂ ಸೂಕ್ಷ್ಮತೆ ಇಲ್ಲ ಎನಿಸಿದರೂ ಇವರ ಕಷ್ಟಕ್ಕೆ ಯಾರಾದೂ ಆಗಿ ಬರುತ್ತಾರೆ. ಯಾವಾಗಲೂ ತಮ್ಮ ಬಗ್ಗೆ ಆಲೋಚನೆ ಮಾಡುವಂಥವರು ಎಂದೆನಿಸಿದರೂ ಇವರು ಸ್ವಾರ್ಥಿಗಳಲ್ಲ. ಜ್ಯೋತಿಷ, ನ್ಯೂಮರಾಲಜಿ, ಟಾರೋ ಕಾರ್ಡ್ ರೀಡಿಂಗ್, ಹಸ್ತ ಸಾಮುದ್ರಿಕಾ ಶಾಸ್ತ್ರ ಇಂತಹದ್ದರಲ್ಲಿ ಆಸಕ್ತಿಯೂ ಇರುತ್ತದೆ ಮತ್ತು ಕಲಿಯುವ ಸಾಧ್ಯತೆಯೂ ಇದೆ. ಎದುರಿಗಿರುವ ವ್ಯಕ್ತಿಯ ಮನಸ್ಸಿನಲ್ಲಿ ಓಡುವ ಭಾವನೆಗಳನ್ನು ಸುಲಭವಾಗಿ ಗ್ರಹಿಸಬಲ್ಲಂಥ ಶಕ್ತಿ ಇವರಿಗೆ ಇರುತ್ತದೆ.

ಆದರೆ, ಇವರು ಪಡುವಷ್ಟು ಪರಿಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆಯುವುದಿಲ್ಲ. ಅದು ಉದ್ಯೋಗ, ವೃತ್ತಿ, ಸೇವೆ ಹೀಗೆ ಯಾವುದರಲ್ಲೇ ಇರಬಹುದು. ಬಹಳ ನಿಧಾನವಾಗಿಯೇ ಸಿಗುತ್ತದೆ. ಇನ್ನೇನು ಸಿಕ್ಕೇಬಿಟ್ಟಿತು ಅನ್ನೋವಾಗ ತಮ್ಮ ಮಾತಿನ ಮೂಲಕವಾಗಿ ಕೆಲವು ಅವಕಾಶಗಳನ್ನು ಇವರು ಕಳೆದುಕೊಳ್ಳುತ್ತಾರೆ. ಆದ್ದರಿಂದ ಮಾತಿನ ಮೇಲೆ ಇವರಿಗೆ ಹಿಡಿತ ಇರಬೇಕು.

ಇದನ್ನೂ ಓದಿ: Numerology: ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಸ್ವಭಾವ ಹೇಗಿರುತ್ತದೆ?

ಇದನ್ನೂ ಓದಿ: Numerology Number 7: ಯಾವುದೇ ತಿಂಗಳ 7, 16, 25ರಂದು ಹುಟ್ಟಿದವರ ಬಗ್ಗೆ ಸಂಖ್ಯಾಶಾಸ್ತ್ರದಲ್ಲಿ ಏನು ಹೇಳಲಾಗಿದೆ ಗೊತ್ತೆ?

(People born on any month 8, 17 and 26 ruled by Saturn. Here is an explainer about Numerology number 8 people)

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?