Personality on the basis of birthday: ನೀವು ಹುಟ್ಟಿದ ವಾರ ಯಾವುದು? ಅದರ ಆಧಾರದಲ್ಲಿ ನಿಮ್ಮ ಸ್ವಭಾವ ಹೀಗಿರುತ್ತದೆ

ನೀವು ಯಾವ ವಾರ ಹುಟ್ಟಿದ್ದು? ನೀವು ಹುಟ್ಟಿದ ವಾರದ ಆಧಾರದಲ್ಲಿ ಗುಣ- ಸ್ವಭಾವವನ್ನು ತಿಳಿಸುವಂಥ ಲೇಖನ ನಿಮ್ಮೆದುರು ಇದೆ.

Personality on the basis of birthday: ನೀವು ಹುಟ್ಟಿದ ವಾರ ಯಾವುದು? ಅದರ ಆಧಾರದಲ್ಲಿ ನಿಮ್ಮ ಸ್ವಭಾವ ಹೀಗಿರುತ್ತದೆ
ರಾಶಿ ಚಕ್ರ
Follow us
Srinivas Mata
|

Updated on: May 03, 2021 | 8:57 PM

ಒಂದು ವಾರದಲ್ಲಿ ಏಳು ದಿನ. ಸೋಮ, ಮಂಗಳ, ಬುಧ, ಗುರು, ಶುಕ್ರ, ಶನಿ, ಭಾನು. ನಿಮಗೆ ಗೊತ್ತಾ ರಾಹು- ಕೇತು ಇವೆರಡಕ್ಕೆ ಹೊರತುಪಡಿಸಿದಂತೆ ಉಳಿದ ಏಳು ಗ್ರಹಗಳ ಹೆಸರು ಈ ವಾರಗಳಿಗೆ ಇದೆ. ಮತ್ತು ಈ ದಿನಗಳ ಮೇಲೆ ವಿವಿಧ ಗ್ರಹದ ಪ್ರಭಾವವೂ ಇದೆ. ಜ್ಯೋತಿಷ ಶಾಸ್ತ್ರದ ಪ್ರಕಾರವಾಗಿ ಆಯಾ ದಿನ ಹುಟ್ಟಿದ ವ್ಯಕ್ತಿಗಳಿಗೆ ಕೆಲವು ವಿಶಿಷ್ಟ ಗುಣ- ಸ್ವಭಾವಗಳು ಬಂದಿರುತ್ತವೆ. ಅಷ್ಟೇ ಅಲ್ಲ, ಕೆಲವು ಮಿತಿಗಳು ಕೂಡ ಇರುತ್ತವೆ. ಈ ಲೇಖನವನ್ನು ನೀವೀಗ ಓದುತ್ತಿರುವ ಕಾರಣವೂ ಹುಟ್ಟಿದ ವಾರದಂದು ನಿಮಗೆ ಬಂದ ಸ್ವಭಾವವೇ ಆಗಿರುತ್ತದೆ. ನಿಮ್ಮಲ್ಲಿ ಕೆಲವರು. ಅದೇನು ಇದೆಯೋ ಎಂಬ ಕುತೂಹಲ ಹಾಗೂ ನಂಬಿಕೆಯಿಂದಲೂ, ಇನ್ನೂ ಕೆಲವರು ಇನ್ನು ಬರೆದು ಬಿಡೋಕೆ ಸಾಧ್ಯ ಎಂಬ ಸವಾಲಿನ ಮನಸ್ಥಿತಿಯಲ್ಲೂ ಇದನ್ನು ಓದಲು ಶುರು ಮಾಡ್ತೀರಿ. ಈ ಎರಡೂ ಬಗೆಯ ಸ್ವಭಾವದ ಹಿಂದೆ ನೀವು ಯಾವ ವಾರ ಹುಟ್ಟಿದ್ದೀರಿ ಎಂಬ ಸಂಗತಿ ಅಡಗಿದೆ ಎಂಬುದನ್ನು ಮರೆಯದಿರಿ.

ಈ ಲೇಖದಲ್ಲಿ ಜ್ಯೋತಿಷ, ಮನಶ್ಶಾಸ್ತ್ರ ಎರಡೂ ಇದೆ. ಅದೆಷ್ಟು ಪ್ರಮಾಣದಲ್ಲಿ ಎಂಬುದನ್ನು ನೀವೇ ನಿರ್ಧರಿಸಿ. ಇನ್ನು ತಡ ಮಾಡವುದು ಬೇಡ, ಯಾವ ವಾರ ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಅನ್ನೋದನ್ನ ನೋಡೋಣ.

ಸೋಮವಾರ ಈ ವಾರದಲ್ಲಿ ಹುಟ್ಟಿದವರು ಬಲೇ ಕ್ರಿಯೇಟಿವ್ ಆಗಿರುತ್ತಾರೆ. ಆದರೆ ತಮ್ಮ ಐಡಿಯಾಗಳನ್ನು ಹೇಳಿದರೆ ಎದುರಿನವರು ಆಡಿಕೊಂಡು ಬಿಡ್ತಾರೇನೋ, ಹಂಗಿಸುತ್ತಾರೇನೋ ಎಂಬ ಅಳುಕು ಇವರನ್ನು ಒಳಗೊಳಗೇ ಕಾಡುತ್ತಿರುತ್ತದೆ. ಇತರರ ಬಗ್ಗೆ ಸಹಾನುಭೂತಿ ಇರುತ್ತದೆ. ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರು ನಿಮ್ಮ ಆದ್ಯತೆಯಾಗಿರುತ್ತಾರೆ. ಚೌಕಾಶಿ ಮಾಡುವುದರಲ್ಲಿ ನೀವು ಎತ್ತಿದ ಕೈ. ಯಾರಿಗೆ ಏನೆಲ್ಲ ದೊರೆಯಬೇಕೋ ಅವೆಲ್ಲ ಸಿಗಲು ಪ್ರಯತ್ನಿಸುತ್ತೀರಿ. ಉದ್ಯಮಗಳಲ್ಲಿ ಲೀಡರ್​ಷಿಪ್ ಹುದ್ದೆಯಲ್ಲಿ ಯಶಸ್ಸು ಗಳಿಸುವ ಸಾಧ್ಯತೆ ಹೆಚ್ಚು.

ಮಂಗಳವಾರ ನಿಮ್ಮ ಸಾಮರ್ಥ್ಯ, ಆಲೋಚನೆ ಬಲವಾಗಿರುತ್ತದೆ. ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ ಮತ್ತು ನಿಮಗೆ ಸಹಾಯ ಮಾಡುತ್ತಾರೆ. ಉದ್ಯೋಗ- ವೃತ್ತಿ ಬದುಕಿನಲ್ಲಿ ಅದ್ಭುತ ಯಶಸ್ಸು ಪಡೆಯುತ್ತೀರಿ. ನಿಮ್ಮ ಹತೋಟಿ ಮೀರಿದ ಸಂಗತಿಗಳು ಬಹಳ ಒತ್ತಡವನ್ನು ನೀಡುತ್ತದೆ. ಬದುಕಿನ ಉತ್ತಮ ಸಂಗತಿಗಳನ್ನು ಇಷ್ಟಪಡುತ್ತೀರಿ ಮತ್ತು ಹಣ ಉಳಿತಾಯ ಮಾಡುವುದು ಸವಾಲಾಗಿರುತ್ತದೆ. ನಿಮಗೆ ಸರಿ ಎನಿಸುವ ಸಂಗತಿಯನ್ನು ಯಾರ ಅಭಿಪ್ರಾಯಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ನಿಮ್ಮ ಮನಸಿಗೆ ಬಂದ ಸಂಗತಿಯನ್ನು ನೇರಾನೇರ ಮಾತನಾಡುತ್ತೀರಿ. ಬಣ್ಣದ ಮಾತುಗಳನ್ನಾಡುವವರಿಗೆ ಇದನ್ನು ಸಹಿಸುವುದು ಕಷ್ಟ. ವಿಮರ್ಶೆಗಳನ್ನು ಸಹಿಸುವುದು ನಿಮಗೆ ಕಷ್ಟ.

ಬುಧವಾರ ಯಾವುದೇ ವಿಷಯಗಳನ್ನು ಬಹಳ ಬೇಗ ಕಲಿಯುತ್ತೀರಿ. ಕೆಲಸದ ಜಾಗದಲ್ಲಿ ತುಂಬ ಒಳ್ಳೆಯ ಹೆಸರು ಮಾಡುತ್ತೀರಿ. ಆದರೆ ನಿಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ಮಾಡಲು ನಿರ್ವಹಿಸುವುದು ಕಷ್ಟ. ಅಡಸಾಬಡಸಾ ಎಂಬಂತೆ ಇರುತ್ತದೆ ನಿಮ್ಮ ಕೆಲವು ಕೆಲಸಗಳು. ಬಟ್ಟೆ-ಬರೆ, ಒಡವೆ- ವಸ್ತುಗಳು ಹೆಚ್ಚು ಖರ್ಚು ಮಾಡವಂಥ ಸ್ವಭಾವ ನಿಮ್ಮದಲ್ಲ. ಸದಾ ಆರಾಮವಾಗಿ ಕಂಡುಬರುತ್ತೀರಿ. ಇತರರಿಂದ ಹೊಸದನ್ನು ಕಲಿಯುವುದಕ್ಕೆ ಇಷ್ಟಪಡುತ್ತೀರಿ ಮತ್ತು ಹೊಸ ಜನರ ಜತೆಗೆ ವಿಷಯ ಹಂಚಿಕೊಳ್ಳುವುದು ಸಂತೋಷ ನೀಡುತ್ತದೆ. ನೀವು ಮಾಡುವ ಕೆಲಸ ಹಾಗೂ ಸಹೋದ್ಯೋಗಿಗಳ ಜತಗೆ ಒಡನಾಟ ಸಮಾಧಾನ ನೀಡುತ್ತದೆ.

ಗುರುವಾರ ನೀವು ಬಹಳ ಆಶಾವಾದಿಗಳು. ಇತರರಿಂದ ನಿಮಗೆ ಉತ್ತಮ ಗೌರವ ಸಿಗುತ್ತದೆ ಹಾಗೂ ಅದೇ ರೀತಿ ಇತರರಿಗೆ ನೀವು ಗೌರವ ನೀಡುತ್ತೀರಿ. ಕೆಲಸ- ಕಾರ್ಯಗಳು ಅಂತ ಬಂದಾಗ ಸ್ವತಂತ್ರವಾಗಿ ಇರಲು ಬಯಸುತ್ತೀರಿ. ನಿಮ್ಮಲ್ಲಿ ಸ್ವಭಾವತಃ ನಾಯಕತ್ವ ಗುಣಗಳು ಇರುತ್ತವೆ. ಇನ್ನು ನಿಮ್ಮ ಉದ್ಯೋಗ ಅಥವಾ ವೃತ್ತಿಯನ್ನು ಯಾವುದೇ ಹಂತದಿಂದ ಶುರು ಮಾಡಿದರೂ ಕಷ್ಟಪಟ್ಟು ಮೇಲ್ಮಟ್ಟಕ್ಕೆ ತಲುಪಿಕೊಳ್ಳುತ್ತೀರಿ. ಯಾರಾದೂ ನಿಮ್ಮನ್ನು ಟೀಕೆ ಮಾಡಿದರೆ ಅಲ್ಲಿಗೆ ಅವರಿಗೆ ಕಥೆ ಮುಗಿಯಿತು. ಪದೇಪದೇ ನಿಮ್ಮಿಂದ ಅಂಥದ್ದೇ ಎದುರು ಜವಾಬು ಪಡೆಯುತ್ತಲೇ ಇರುತ್ತಾರೆ. ಎಲ್ಲ ವಿಚಾರದಲ್ಲಿ ವೈವಿಧ್ಯ ಬಯಸುವ ನಿಮಗೆ ಕೆಲವು ಸಂಗತಿಗಳು ಬಹಳ ಬೇಗ ಬೋರ್ ಆಗಿಬಿಡುತ್ತದೆ. ಇನ್ನು ಸಹಜವಾಗಿ ನಿಮ್ಮ ಚರಿಷ್ಮಾದಿಂದ ಇತರರನ್ನು ಸೆಳೆಯುತ್ತೀರಿ.

ಶುಕ್ರವಾರ ಸೌಂದರ್ಯ ಮತ್ತು ಸೌಹಾರ್ದವನ್ನು ಮೆಚ್ಚುವಂಥ ಜನರು ಇವರು. ಅದನ್ನು ಸೃಷ್ಟಿಸಲು ಪ್ರಯತ್ನಿಸುತ್ತಲೇ ಇರುತ್ತೀರಿ. ನಿಮ್ಮ ಇತರ ಸ್ನೇಹಿತರಿಗಿಂತ ಹೆಚ್ಚು ಕ್ರಿಯೇಟಿವ್ ಆಗಿರುತ್ತೀರಿ. ಸಂಬಂಧಗಳ ವಿಚಾರಕ್ಕೆ ಬಂದರೆ ಭಾವನಾತ್ಮಕವಾಗಿ ಸಂವೇದನಾಶೀಲರಾಗಿರುತ್ತೀರಿ. ನಿಮ್ಮ ಹಿನ್ನಡೆಯನ್ನು ಚೆನ್ನಾಗಿ ನಿಭಾಯಿಸುವುದು ಬಹಳ ಕಷ್ಟ ನಿಮಗೆ. ಈ ಹಿಂದಿನ ನಿರಾಶೆಯನ್ನು ಪದೇಪದೇ ನೆನಪಿಸಿಕೊಂಡು ಬೇಸರದಿಂದ ಇರುತ್ತೀರಿ. ಮುಂದೆ ಏನಾಗುತ್ತದೆ ಎಂದು ತಿಳಿದುಕೊಳ್ಳುವ ಅದ್ಭುತ ಶಕ್ತಿ ನಿಮಗಿರುತ್ತದೆ. ಜತೆಗೆ ನೀವು ಧಾರ್ಮಿಕ ವ್ಯಕ್ತಿಗಳು. ಲೋಕಜ್ಞಾನ ಹೆಚ್ಚಿರುವ ನೀವು, ನಿಮ್ಮ ವಯಸ್ಸಿಗೆ ಮೀರಿದ ಗಾಂಭೀರ್ಯ ಹೊಂದಿರುತ್ತೀರಿ.

ಶನಿವಾರ ನೀವು ನಂಬಿಕಸ್ತರು ಮತ್ತು ಬಹಳ ಜವಾಬ್ದಾರಿ ನಿಮ್ಮ ಮೇಲಿರುತ್ತದೆ. ಒಂದೋ ನೀವು ಭೂತ ಕಾಲದಲ್ಲಿ ಅಥವಾ ಭವಿಷ್ಯದಲ್ಲಿ ಬದುಕುತ್ತಿರುತ್ತೀರಿ. ವಾಸ್ತವದಲ್ಲಿ ಹಾಗೂ ಆ ಕ್ಷಣದಲ್ಲಿ ಜೀವಿಸುವುದನ್ನು ಕಲಿಯಬೇಕು. ಬಹಳ ಸ್ಮಾರ್ಟ್ ಆದ ನೀವು, ಎಲ್ಲದರಲ್ಲೂ ಪರ್ಫೆಕ್ಷನಿಸ್ಟ್. ನಿಮ್ಮ ನಡೆ. ನುಡಿ, ಮಾತು- ಕತೆಯಲ್ಲಿ ಒಂದು ಗಾಂಭೀರ್ಯ ಇರುತ್ತದೆ. ಯಾವುದಾದರ ಬಗ್ಗೆ ನಿಮ್ಮ ಅಭಿಪ್ರಾಯ ಕೇಳಿದಾಗ ನೆಗೆಟಿವ್ ಅಭಿಪ್ರಾಯ ಹೇಳುವುದೇ ಹೆಚ್ಚಾಗಿರುತ್ತದೆ. ಸಹಜವಾಗಿಯೇ ನಿಮ್ಮಲ್ಲೊಂದು ವಿಶ್ವಾಸ ಇರುತ್ತದೆ. ಇತರರು ಅದೆಷ್ಟೇ ನಿಮ್ಮನ್ನು ಕುಗ್ಗಿಸಲು ಪ್ರಯತ್ನಿಸಿದರೂ ಅದು ಸಾಧ್ಯವಿಲ್ಲ.

ಭಾನುವಾರ ನಿಮ್ಮನ್ನು ನೋಡುತ್ತಿದ್ದಂತೆ ಸಕಾರಾತ್ಮಕ ಭಾವವೊಂದು ಮೂಡುತ್ತದೆ. ಬೇರೆಯವರಿಗೆ ಏನಾದರೂ ಕೊಡುವುದನ್ನು ಸಂತೋಷಿಸುತ್ತಾರೆ. ಹೊಸಬರ ಜತೆಗೆ ಬೇಗ ಹೊಂದಿಕೊಳ್ಳುವುದು ನಿಮಗೆ ಕಷ್ಟ. ಸದಾ ಅನುಮಾನದ ಸ್ವಭಾವ ಸುಳಿದಾಡುತ್ತಲೇ ಇರುತ್ತದೆ. ಭಾವನಾತ್ಮಕವಾಗಿ ಬಹಳ ಸೂಕ್ಷ್ಮ ಸ್ವಭಾವದ ನೀವು, ಇತರರು ನಿಮ್ಮ ಬಗ್ಗೆ ಏನು ಆಲೋಚಿಸುತ್ತಾರೆ ಎಂದು ತುಂಬಾ ಆಲೋಚಿಸುತ್ತೀರಿ. ಸಣ್ಣ- ಸಣ್ಣ ಸಂಗತಿಗಳಿಗೂ ಸಿಟ್ಟಾಗುವ ನೀವು, ಕೈಗೆತ್ತಿಕೊಂಡ ಯೋಜನೆಗಳನ್ನು ಪೂರ್ತಿ ಮಾಡದೆ ನಿಲ್ಲಿಸಿ ಬಿಡುತ್ತೀರಿ. ಏಕಾಂತವಾದ ಸಮಯವನ್ನು ಖುಷಿಯಿಂದ ಕಳೆಯುತ್ತೀರಿ.

ಇದನ್ನೂ ಓದಿ: Astrology tips: ಈ ನಾಲ್ಕು ರಾಶಿಯವರು ಆಮೆ ಆಕಾರದ ಉಂಗುರ ಧರಿಸಬಾರದು

ಇದನ್ನೂ ಓದಿ: ಜ್ಯೋತಿಷ್ಯ ಪ್ರಕಾರ ಈ 3 ರಾಶಿಯವರು ಅತ್ಯುತ್ತಮ ನಾಯಕರಾಗ್ತಾರೆ; ಯಾರು ಈ ಮೂರು ರಾಶಿಯವರು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ