ಜ್ಯೋತಿಷ್ಯ ಪ್ರಕಾರ ಈ 3 ರಾಶಿಯವರು ಅತ್ಯುತ್ತಮ ನಾಯಕರಾಗ್ತಾರೆ; ಯಾರು ಈ ಮೂರು ರಾಶಿಯವರು?

Best leaders On zodiac signs: ಈ ಮೂರು ರಾಶಿಯವರಲ್ಲಿ ಹುಟ್ಟಿನಿಂದಲೇ ನಾಯಕತ್ವ ಗುಣ ಇರುತ್ತದೆ. ಯಾರು ಮೂರು ರಾಶಿಯವರು ತಿಳಿಯಲು ಮುಂದೆ ಓದಿ.

ಜ್ಯೋತಿಷ್ಯ ಪ್ರಕಾರ ಈ 3 ರಾಶಿಯವರು ಅತ್ಯುತ್ತಮ ನಾಯಕರಾಗ್ತಾರೆ; ಯಾರು ಈ ಮೂರು ರಾಶಿಯವರು?
ಪ್ರಾತಿನಿಧಿಕ ಚಿತ್ರ
Follow us
Srinivas Mata
| Updated By: Digi Tech Desk

Updated on:Apr 29, 2021 | 3:27 PM

ಜ್ಯೋತಿಷ ಎಂಬುದು ಶುದ್ಧಾನುಶುದ್ಧ ನಂಬಿಕೆ. ಕೆಲವರಿಗೆ ನಂಬಿಕೆ ಇರುತ್ತದೆ, ಕೆಲವರಿಗೆ ಇರಲ್ಲ. ಮತ್ತೆ ಕೆಲವರಿಗೆ ಆಗಾಗ ನಂಬಿಕೆ ಬಂದು- ಹೋಗಿ ಆಗುತ್ತಿರುತ್ತದೆ. ಅಥವಾ ತಮಗೆ ಬೇಕಾದಾಗ ನಂಬ್ತಾರೆ, ಇಲ್ಲದಿದ್ದಲ್ಲಿ ಇಲ್ಲ. ಈ ಕೆಟಗಿರಿಗಳ ಪೈಕಿ ನೀವ್ಯಾವುದು ಅಂತ ಗೊತ್ತಿಲ್ಲ. ಆದರೆ ಈ ಲೇಖನದ ಬಗ್ಗೆ ತಿಳಿದರೆ ನಿಮಗೊಂದು ಕುತೂಹಲವಂತೂ ಮೂಡುತ್ತದೆ. ಏನು ಈ ಲೇಖನದ ವಿಶೇಷ ಅಂತೀರಾ? ರಾಶಿಗಳ ಆಧಾರದಲ್ಲಿ ವ್ಯಕ್ತಿಗಳ ಸ್ವಭಾವಗಳ ಬಗ್ಗೆ ಕೇಳಿರ್ತೀರಿ. ಅದರ ಬಗ್ಗೆಯೇ ಇಂದು ಈ ಲೇಖನದಲ್ಲಿ ತಿಳಿಸಲಾಗುತ್ತಿದೆ. ಆದರೆ ಎಲ್ಲ ರಾಶಿಗಳ ಬಗ್ಗೆ ಅಲ್ಲ. ಬರೀ ಆ ಮೂರು ರಾಶಿಗಳ ಬಗ್ಗೆ ಮಾತ್ರ.

ಈ ಮೂರು ರಾಶಿಯವರನ್ನು ಚಾಂಪಿಯನ್​ಗಳು ಎಂದು ಪರಿಗಣಿಸಲಾಗುತ್ತದೆ. ಇವರಿಗೆ ಹುಟ್ಟಿನಿಂದಲೇ ನಾಯಕತ್ವದ ಗುಣ ಬಂದಿರುತ್ತದೆ. ಇವರು ಭವಿಷ್ಯವು ದೊರೆಯುವ ಬಂಧುಗಳು, ಸಂಸ್ಕಾರ ಮತ್ತು ವಾತಾವರಣದ ಮೇಲೆ ರೂಪುಗೊಳ್ಳುತ್ತಾ ಹೋಗುತ್ತದೆ. ಅಂದ ಹಾಗೆ ಇವರು ಯಾವುದೇ ಕ್ಷೇತ್ರದಲ್ಲಿ ಪ್ರವೇಶ ಪಡೆದರೂ ಅಲ್ಲಿ ತಮ್ಮ ಛಾಪನ್ನು ಮೂಡಿಸುತ್ತಾರೆ. ಜನರ ಮಧ್ಯೆ ಇವರದೊಂದು ಪ್ರಭಾವಳಿ ಸೃಷ್ಟಿ ಆಗುತ್ತದೆ. ಯಾರು ಆ ಮೂರು ರಾಶಿಯವರು ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಮೇಷ ರಾಶಿ ಮೇಷ ರಾಶಿಯವರ ಅಧಿಪತಿ ಕುಜ. ತುಂಬ ಶಕ್ತಿಯುತರಾದ ಇವರು, ಯಾವುದೇ ನಿರ್ಧಾರ ಕೈಗೊಂಡಾಗ ದೃಢನಿಶ್ಚಯದಿಂದ ಮಾಡುತ್ತಾರೆ. ಆಕ್ರಮಣಕಾರಿ ಧೋರಣೆ ಹೊಂದಿರುತ್ತಾರೆ. ಇವರು ಎಲ್ಲೇ ಹೋದರೂ ಜನರ ಮಧ್ಯೆ ತಮ್ಮದೊಂದು ಹೆಜ್ಜೆ ಮೂಡಿಸಿ, ಸ್ಥಾನ ಭದ್ರ ಮಾಡಿಕೊಳ್ಳುತ್ತಾರೆ. ನಾಯಕತ್ವ ಗುಣಗಳು ಇವರಲ್ಲಿ ನೋಡಲು ದೊರೆಯುತ್ತವೆ. ಈ ಗುಣದ ಕಾರಣಕ್ಕಾಗಿಯೇ ಇವರು ಯಾವುದೇ ಕ್ಷೇತ್ರಕ್ಕೆ ಹೋದರೂ ಉಚ್ಚ ಸ್ಥಾನವನ್ನು ತಲುಪಿಕೊಳ್ಳುತ್ತಾರೆ. ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಅದು ಪೂರ್ಣ ಆಗದ ಹೊರತು ವಿರಮಿಸುವವರಲ್ಲ. ಇವರ ಆಕ್ರಮಣಕಾರಿ ಸ್ವಭಾವವು ಎಷ್ಟೋ ಬಾರಿ ಸಮಸ್ಯೆಗಳನ್ನು ತರುವುದುಂಟು. ಆದರೆ ಹೇಗಾದರೂ ಆ ಸ್ಥಿತಿಯಿಂದ ಆಚೆ ಬರುವಲ್ಲಿ ಸಫಲರಾಗುತ್ತಾರೆ.

ಸಿಂಹ ರಾಶಿ ಈ ರಾಶಿಯ ಅಧಿಪತಿ ರವಿ. ಇವರು ಹುಟ್ಟಿನಿಂದಲೇ ಪ್ರಭಾವಳಿಯೊಂದನ್ನು ಪಡೆದುಕೊಂಡಿರುತ್ತಾರೆ. ಸ್ವತಂತ್ರ ಸ್ವಭಾವ ಹೊಂದಿರುತ್ತಾರೆ. ಒಬ್ಬ ರಾಜನಿಗೆ ಹೋಲಿಸಿ, ಇವರ ಗುಣಾವಳಿಗಳನ್ನು ಅಳೆದರೂ ಅದು ತಪ್ಪಾಗಲಿಕ್ಕಿಲ್ಲ. ಇವರು ಎಲ್ಲೇ ಹೋದರೂ ಅಲ್ಲಿ ಜನರ ಭರವಸೆಯನ್ನು ಗಳಿಸುವಲ್ಲಿ ಯಶಸ್ವಿ ಆಗುತ್ತಾರೆ ಮತ್ತು ತಮ್ಮ ಪ್ರಭುತ್ವ ಸ್ಥಾಪಿಸುತ್ತಾರೆ. ಇವರಿಗೆ ವಿರೋಧಿಗಳ ಸಂಖ್ಯೆ ಹೆಚ್ಚಿರುತ್ತದೆ. ಆದರೆ ಇವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವವರಲ್ಲ. ಸಮಾಜದಲ್ಲಿ ಸಾಕಷ್ಟು ಮಾನ-ಸಮ್ಮಾನ ದೊರೆಯುತ್ತದೆ.

ವೃಶ್ಚಿಕ ರಾಶಿ ಈ ರಾಶಿಯವರ ಅಧಿಪತಿ ಕೂಡ ಕುಜ. ಇವರ ಸ್ವಭಾವದಲ್ಲಿ ಸ್ವಲ್ಪ ಮಟ್ಟಿಗೆ ಉಗ್ರತೆ ಇರುತ್ತದೆ. ಈ ರಾಶಿಯವರು ಕಠಿಣ ಪರಿಶ್ರಮಿಗಳು. ತಮ್ಮ ಶ್ರಮದಿಂದಲೇ ಮೇಲೆ ಬರುತ್ತಾರೆ. ತಮ್ಮ ಗುಣದ ಮೂಲಕ ಜನರ ಭರವಸೆ, ಗಳಿಸಿ ಪ್ರಭಾವ ಬೀರುತ್ತಾರೆ. ಇವರು ಯಾವುದೇ ಕ್ಷೇತ್ರವನ್ನು ಆರಿಸಿಕೊಂಡರೂ ಕೆಲವೇ ಸಮಯದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡುತ್ತಾರೆ. ಇವರಲ್ಲಿ ಹುಟ್ಟಿನಿಂದಲೇ ನಾಯಕತ್ವ ಗುಣ ಇರುತ್ತದೆ. ಸಂದಿಗ್ಧ ಪರಿಸ್ಥಿತಿಯಲ್ಲೂ ಅತ್ಯುತ್ತಮ ನಿರ್ಣಯ ಕೈಗೊಳ್ಳುತ್ತಾರೆ. ಇನ್ನು ಯಾರೊಂದಿಗಾದರೂ ಶತ್ರುತ್ವ ಸಾಧಿಸಿದರೆ ಅದನ್ನು ತೀರಿಸುವ ತನಕ ವಿರಮಿಸುವುದಿಲ್ಲ.

ಇದನ್ನೂ ಓದಿ: Relations Breakup Astrology: ಯಾವ ರಾಶಿಯವರು ಯಾವಾಗ ಪ್ರೀತಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ ಗೊತ್ತಾ?

ಇದನ್ನೂ ಓದಿ: Best Husbands: ಜ್ಯೋತಿಷ್ಯ ರೀತಿ ಈ 3 ರಾಶಿಯವರು ಅತ್ಯುತ್ತಮ ಪತಿರಾಯರು

(Aries, Leo and Scorpio natives are born leaders with good leadership qualities according to astrology)

Published On - 3:22 pm, Thu, 29 April 21

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್