AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Best Husbands: ಜ್ಯೋತಿಷ್ಯ ರೀತಿ ಈ 3 ರಾಶಿಯವರು ಅತ್ಯುತ್ತಮ ಪತಿರಾಯರು

Best Husbands: ಈ ಮೂರು ರಾಶಿಯವರ ಪೈಕಿ ಯಾರಾದರೂ ಗಂಡನಾಗಿ ಸಿಕ್ಕಲ್ಲಿ ತುಂಬ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎನ್ನುತ್ತದೆ ಜ್ಯೋತಿಷ ಶಾಸ್ತ್ರ. ಯಾವುದು ಆ ಮೂರು ರಾಶಿ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.

Best Husbands: ಜ್ಯೋತಿಷ್ಯ ರೀತಿ ಈ 3 ರಾಶಿಯವರು ಅತ್ಯುತ್ತಮ ಪತಿರಾಯರು
ಪ್ರಾತಿನಿಧಿಕ ಚಿತ್ರ
Srinivas Mata
| Edited By: |

Updated on:Apr 27, 2021 | 10:27 PM

Share

ಮದುವೆ ಅನ್ನೋದು ಲಾಟರಿ ಇದ್ದ ಹಾಗೆ. ಆದರೆ ಒಂದು ವ್ಯತ್ಯಾಸ ಏನೆಂದರೆ, ಅದೃಷ್ಟ ಪರೀಕ್ಷೆಯ ಲಾಟರಿ ಟಿಕೆಟ್​ನಲ್ಲಿ ಅದನ್ನು ಮಾರಿದವರ ಜೀವನವಾದರೂ ಉದ್ಧಾರವಾಗುತ್ತದೆ. ಆದರೆ ಮದುವೆಯಲ್ಲಿ ಇಬ್ಬರ ಜೀವನ ಹಾಳಾಗುತ್ತದೆ. ಆದ್ದರಿಂದ ಜೀವನ ಸಂಗಾತಿಯ ಆಯ್ಕೆ ಬಹಳ ಮುಖ್ಯವಾಗುತ್ತದೆ. ಒಂದು ವೇಳೆ ಗಂಡ ಮತ್ತು ಹೆಂಡತಿ ಮಧ್ಯದ ಸಂಬಂಧವು ಎತ್ತು ಏರಿಗೆ ಹಾಗೂ ಕೋಣ ನೀರಿಗೆ ಎಂಬ ಸ್ಥಿತಿಯಾದರೆ ಜೀವನ ಬಲು ಕಷ್ಟವಾಗುತ್ತದೆ.

ಇಂದಿನ ಈ ಜ್ಯೋತಿಷ ಲೇಖನದಲ್ಲಿ ಬಹು ಮುಖ್ಯವಾದ ಸಂಗತಿಯನ್ನು ತಿಳಿಸಲಾಗುತ್ತಿದೆ. ಹೆಣ್ಣುಮಕ್ಕಳು ಯಾವ ರಾಶಿಯ ಹುಡುಗರನ್ನು ಪತಿಯಾಗಿ ಆರಿಸಿಕೊಂಡಲ್ಲಿ ಉತ್ತಮ, ಆ ವ್ಯಕ್ತಿಯ ಸಂಸ್ಕಾರ, ವ್ಯಕ್ತಿತ್ವ, ಸ್ವಭಾವದಿಂದ ಮಾನಸಿಕವಾಗಿ ನೆಮ್ಮದಿಯಾಗಿರಬಹುದು ಎಂದು ಜ್ಯೋತಿಷ ಹೇಳುತ್ತದೆ ಎಂಬುದನ್ನು ನೋಡೋಣ. ಈ ಮೂರು ರಾಶಿಯ ಹುಡುಗರ ಬಗ್ಗೆ ಜ್ಯೋತಿಷದಲ್ಲಿ ಏನು ಹೇಳಿದೆ ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಸಿಂಹ ರಾಶಿ ಜ್ಯೋತಿಷ ಶಾಸ್ತ್ರದ ಪ್ರಕಾರ, ಸಿಂಹ ರಾಶಿಯ ಹುಡುಗರು ತಮ್ಮ ಸಂಗಾತಿಯ ಬಗ್ಗೆ ಸಮರ್ಪಣಾ ಭಾವವನ್ನು ಹೊಂದಿರುತ್ತಾರೆ. ತಮ್ಮ ಸಂಬಂಧವನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಾರೆ. ಹೆಂಡತಿಯ ಭಾವನೆಗಳನ್ನು ತುಂಬ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಜೀವನದಲ್ಲಿ ಅದೆಂಥ ಸಂಕಷ್ಟದ ಸ್ಥಿತಿಯೇ ಬಂದರೂ ಎದೆದುಂದದೆ ಎದುರಿಸುತ್ತಾರೆ. ಬಹಳ ಸುಂದರವಾದ ವಸ್ತುಗಳೆಂದರೆ ಬಲು ಇಷ್ಟಪಡುವ ಜನರಿವರು. ತಮ್ಮ ಹೆಂಡತಿ ಆಯ್ಕೆಯಲ್ಲೂ ಅದನ್ನೇ ಅನುಸರಿಸುವ ಇವರು, ಪತ್ನಿ ಸಹ ಸುಂದರವಾಗಿರಬೇಕು ಎಂದು ಬಯಸಿ, ಅಂಥವರನ್ನೇ ಹುಡುಕಿಕೊಳ್ಳುತ್ತಾರೆ.

ಮಕರ ರಾಶಿ ಮಕರ ರಾಶಿಯವರು ಸಹ ಉತ್ತಮ ಗಂಡ ಎನಿಸಿಕೊಳ್ಳುತ್ತಾರೆ. ನೋಡುವುದಿಕ್ಕೆ ಸ್ಮಾರ್ಟ್ ಆಗಿರುವ ಇವರು, ಜನರನ್ನು ತಮ್ಮ ಮಾತುಗಳಿಂದ ಸೆಳೆಯುತ್ತಾರೆ. ಇದೇ ಕಾರಣಕ್ಕೆ ಹೆಂಡತಿ ಜತೆಗಿನ ಸಂಬಂಧವೂ ಉತ್ತಮವಾಗಿರುತ್ತದೆ. ಇವರು ತಮ್ಮ ಸಂಬಂಧವನ್ನು ಬಹಳ ಜವಾಬ್ದಾರಿಯಿಂದ ನಿಭಾಯಿಸುತ್ತಾರೆ. ಜೀವನದ ಪ್ರತಿ ಸಕಾರಾತ್ಮಕ ಕ್ಷಣವನ್ನೂ ಕಾಪಾಡಿಕೊಳ್ಳುತ್ತಾರೆ. ಇವರು ತೋರಿಸುವ ಕಾಳಜಿ ಮತ್ತು ಆಗಾಗ ನೀಡುವ ಅಚ್ಚರಿಗಳ ಕಾರಣಕ್ಕೆ ಹೆಂಡತಿಯನ್ನು ಖುಷಿಯಾಗಿ ಇರಿಸಿಕೊಳ್ಳುತ್ತಾರೆ.

ಕನ್ಯಾ ರಾಶಿ ಕನ್ಯಾ ರಾಶಿಯ ಗಂಡಸರು ಸಹ ಅತ್ಯುತ್ತಮ ಪತಿ ಎನಿಸಿಕೊಳ್ಳುತ್ತಾರೆ. ನೋಡಲು ಆಕರ್ಷಕ ಮತ್ತು ಸ್ಮಾರ್ಟ್ ಆಗಿರುತ್ತಾರೆ. ಅಷ್ಟೇ ಅಲ್ಲ, ಮಾತಿನಲ್ಲೂ ನಿಸ್ಸೀಮರಾಗಿರುತ್ತಾರೆ. ಯಾರ ಹೃದಯವನ್ನಾದರೂ ಸುಲಭವಾಗಿ ಗೆಲ್ಲಬಲ್ಲಂಥವರು ಇವರು. ತಮ್ಮ ಸಂಗಾತಿಯನ್ನು ಬಹಳವಾಗಿ ಇಷ್ಟಪಡುವ ಇವರು, ಅವರ ಸಂಕಷ್ಟವನ್ನು ದೂರ ಮಾಡುವುದಕ್ಕೆ ಏನು ಮಾಡುವುದಕ್ಕೂ ಸಿದ್ಧರಿರುತ್ತಾರೆ. ಯಾವುದೇ ಹುಡುಗಿ ಪಾಲಿನ ಕನಸಿನ ಗಂಡ ಹೇಗಿರುತ್ತಾರೋ ಹಾಗಿರುತ್ತಾರೆ ಈ ಕನ್ಯಾ ರಾಶಿಯವರು.

ಇದನ್ನೂ ಓದಿ: These 4 zodiac signs become rich: ಈ ನಾಲ್ಕು ರಾಶಿಯವರು ಚಿಕ್ಕ ವಯಸ್ಸಿನಲ್ಲೇ ಶ್ರೀಮಂತರಾಗ್ತಾರೆ

ಇದನ್ನೂ ಓದಿ: ಯಾವ ಯಾವ ರಾಶಿಯವರು ಉತ್ತಮ ಜೋಡಿಗಳಾಗಬಹುದು? ನಿಮ್ಮ ಜೊತೆಗೆ ಸರಿಹೊಂದುವ ರಾಶಿ ಯಾವುದು?

(Leo, Virgo and Capricorn zodiac natives will become best husbands according to astrology)

Published On - 8:37 pm, Tue, 27 April 21