ಯಾವ ಯಾವ ರಾಶಿಯವರು ಉತ್ತಮ ಜೋಡಿಗಳಾಗಬಹುದು? ನಿಮ್ಮ ಜೊತೆಗೆ ಸರಿಹೊಂದುವ ರಾಶಿ ಯಾವುದು?
ಯಾವ ರಾಶಿಯವರು ಉತ್ತಮ ಜೋಡಿಗಳಾದರೆ ಜೀವನದಲ್ಲಿ ಒಳ್ಳೆಯ ಜೋಡಿಗಳಾಗಬಹುದು ಎಂಬುದನ್ನು ತಿಳಿದುಕೊಳ್ಳೋಣ.
ನವ ಜೋಡಿಗಳ ನಡುವಿನ ಪ್ರೀತಿ, ನಂಬಿಕೆ ಮತ್ತು ವಿಶ್ವಾಸದ ಮೂಲಕ ಸಂಬಂಧವನ್ನು ಕಾಪಾಡಿಕೊಂಡು ಹೋಗಲು. ಜೊತೆಗೆ ಒಳ್ಳೆಯ ರೀತಿಯಲ್ಲಿ ಜೀವನದುದ್ದಕ್ಕೂ ಸಾಗಲು ರಾಶಿ ಹೊಂದಾಣಿಕೆ ಉತ್ತಮ ಮಾರ್ಗ. ಪ್ರೀತಿಯನ್ನು ದೀರ್ಘಕಾಲದವರೆಗೆ ಉಳಿಸಿಕೊಂಡು ಹೋಗಲು ಇಬ್ಬರು ಪ್ರೇಮಿಗಳ ನಡುವೆ ಒಂದು ನಿರ್ದಿಷ್ಟ ಹೋಲಿಕೆ ಮತ್ತು ತಿಳುವಳಿಕೆ ಬೇಕೆಬೇಕು. ಒಳ್ಳೆಯ ಪ್ರೇಮ ಜೋಡಿಗಳು ಎಂದೆನಿಕೊಳ್ಳಲು ಯಾವ ರಾಶಿಯವರು ಒಂದಾದರೆ ದೀರ್ಘಕಾಲದವರೆಗೆ ಉತ್ತಮ ಜೋಡಿಯಾಗಿರಬಹುದು ಎಂದು ನೋಡೋಣ.
ಕುಂಭರಾಶಿ ಮತ್ತು ಮಿಥುನ ರಾಶಿ ಕುಂಭ ಮತ್ತು ಮಿಥುನ ರಾಶಿಯವರು ಹೆಚ್ಚು ಕ್ರಿಯಾಶೀಲತೆ ಮತ್ತು ಸೃಜನಶೀಲತೆಯನ್ನು ಹೊಂದಿರುವವರಾಗಿರುತ್ತಾರೆ. ಆದ್ದರಿಂದ ಈ ರಾಶಿ ಹೊಂದಿರುವವರು ಒಂದಾದರೆ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ಹೆಚ್ಚು ಬೌದ್ಧಿಕ ಸಾಮರ್ಥ್ಯವನ್ನು ಈ ಎರಡೂ ರಾಶಿಯವರು ಹೊಂದಿರುವುದರಿಂದ ಜೀವನದಲ್ಲಿ ಅಂದುಕೊಂಡ ಗುರಿಯನ್ನು ಇಬ್ಬರೂ ಸೇರಿ ತಲುಪಲು ಸಾಧ್ಯವಾಗುತ್ತದೆ. ಈ ಜೋಡಿಗಳು ಬದುಕಿನಲ್ಲಿ ನಗುತ್ತಾ ಜೀವನ ನಡೆಸಬಹುದು. ಜತೆಗೆ ಈ ರಾಶಿಗಳ ಜೋಡಿಗಳು ಒಬ್ಬರಿಗೊಬ್ಬರು ಗೌರವದಿಂದ ನೋಡುವುದು, ಪ್ರತ್ಯೇಕವಾಗಿ ತಮ್ಮ ಪಾಡಿಗೆ ತಾವು ಇರಲು ಹೆಚ್ಚು ಇಷ್ಟಪಡುತ್ತಾರೆ.
ಮಕರ ಮತ್ತು ವೃಷಭ ರಾಶಿ ಈ ರಾಶಿ ಹೊಂದಿದವರು ಒಂದಾದರೆ ಇಬ್ಬರೂ ಕೂಡಾ ತಮ್ಮ ಪ್ರತ್ಯೇಕ ಕೆಲಸಕ್ಕೆ ಹೆಚ್ಚು ಬದ್ಧರಾಗಿರುತ್ತಾರೆ. ಮತ್ತು ಒಬ್ಬರಿಗೊಬ್ಬರು ಹೆಚ್ಚು ಕಾಳಜಿ ವಹಿಸುತ್ತಾರೆ. ತಮ್ಮ ಜೀವನವನ್ನು ಆರಾಮವಾಗಿ ಕಳೆಯಲು ತಮ್ಮ ಗುರಿಯತ್ತ ಹೆಚ್ಚು ಯೋಚಿಸುತ್ತಾರೆ. ಈ ಎರಡು ರಾಶಿಗಳು ನಿಸ್ಸಂದೇಹವಾಗಿ ಉತ್ತಮ ಜೋಡಿಯನ್ನಾಗಿ ಮಾಡುತ್ತದೆ. ಇವರು ಸಮಾಜದಲ್ಲಿ ಹೆಚ್ಚು ಪ್ರೀತಿಯುಳ್ಳ ಜೋಡಿಗಳಾಗಿ ಕಾಣಿಸಿಕೊಳ್ಳುತ್ತಾರೆ.
ಮೇಷ ಮತ್ತು ಧನು ರಾಶಿ ಮೇಷ ಮತ್ತು ಧನು ರಾಶಿಯವರು ಒಂದಾದರೆ ಸಮಾಜದಲ್ಲಿ ಉತ್ತಮ ಜೋಡಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಅವರಲ್ಲಿರುವ ಒಬ್ಬರಿಗೊಬ್ಬರ ನಡುವಿನ ಪ್ರೀತಿ ಮತ್ತು ಇಬ್ಬರ ಸ್ವಭಾವ ಸಮಾಜದಲ್ಲಿ ಒಳ್ಳೆಯ ಹೆಸರು ನೀಡುವಂತೆ ಮಾಡುತ್ತದೆ. ಈ ಎರಡು ರಾಶಿಯುಳ್ಳ ಜೋಡಿಗಳು ಎಲ್ಲಾ ಕಾರ್ಯವನ್ನು ಸಂಪೂರ್ಣವಾಗಿ ಸಾಧಿಸಲು ಸಾಧ್ಯವಾಗದೇ ಹೋದರೂ ತಮ್ಮ ಗುರಿಯನ್ನು ತಲುಪಲು ಯಶಸ್ವಿಯಾಗುತ್ತಾರೆ. ಇವರ ನಡುವಿನ ಪ್ರೀತಿ, ನಂಬಿಕೆ ಉತ್ತಮ ಜೀವನ ನಡೆಸಲು ಸಹಾಯ ಮಾಡಿಕೊಡುತ್ತದೆ.
ಕಟಕ ಮತ್ತು ಸಿಂಹ ಈ ರಾಶಿ ಹೊಂದಿರುವ ಜೋಡಿಗಳು ಪಟ್ಟು ಹಿಡಿದು ತಮ್ಮ ಕಾರ್ಯ ಸಿದ್ಧಿಗೆ ಮುಂದಾಗುತ್ತಾರೆ. ತಮ್ಮ ಛಲವನ್ನು ಸಾಧಿಸಲು ಇವರಿಬ್ಬರ ಭಾವನೆಗಳು ಸರಿ ಹೊಂದುತ್ತದೆ. ಮತ್ತು ಜೀವನದಲ್ಲಿ ದೀರ್ಘಕಾಲದವರೆಗೆ ಇದು ಸ್ಪೂರ್ತಿದಾಯಕವಾಗಿರುತ್ತದೆ.
ತುಲಾ ಮತ್ತು ಮಿಥುನ ರಾಶಿ ತುಲಾ ಮತ್ತು ಮಿಥುನ ರಾಶಿಯವರಿಬ್ಬರೂ ಪರಸ್ಪರರ ಪ್ರೀತಿಯ ಜೋಡಿಗಳಾಗಿರಲು ಇಚ್ಛಿಸುತ್ತಾರೆ. ಇವರಿಬ್ಬರು ಪರಸ್ಪರ ಒಟ್ಟಿಗೆ ಜೀವನದಲ್ಲಿ ಮುನ್ನುಗ್ಗಲು ಸಹಾಯಕವಾಗುತ್ತದೆ. ಅವರು ಪರಸ್ಪರ ಪ್ರಯಾಣ ಆರಾಮದಾಯಕವಾಗಿರುತ್ತದೆ. ಬುದ್ಧಿವಂತಿಕೆಯಿಂದ ಹೆಚ್ಚು ಮುನ್ನುಗ್ಗುತ್ತಾರೆ.
ಕಟಕ ಮತ್ತು ಮೀನ ಜೋಡಿಯ ವಿಷಯಕ್ಕೆ ಬಂದಾಗ ಮೀನ ರಾಶಿ ಮತ್ತು ಕಟಕ ರಾಶಿಯವರು ಹೆಚ್ಚು ಪಯಣ ಪಕ್ಷಿಗಳಂತೆ ಜೀವನ ನಡೆಸುತ್ತಾರೆ. ಪ್ರೀತಿಯಿಂದ ಜೀವನ ನಡೆಸುತ್ತಿರುವುದರಿಂದ ಜೀವನದಲ್ಲಿ ಹೆಚ್ಚು ಉತ್ಸಾಹವಿರುತ್ತದೆ. ಇವರಿಬ್ಬರ ಹೊಂದಾಣಿಕೆ ಬದುಕಿನಲ್ಲಿ ಏಳಿಗೆಯನ್ನು ತಂದುಕೊಡುತ್ತದೆ.
ಕನ್ಯಾರಾಶಿ ಮತ್ತು ವೃಷಭ ರಾಶಿ ಕನ್ಯಾ ರಾಶಿ ಮತ್ತು ವೃಷಭ ರಾಶಿಯವರು ಒಂದಾದರೆ ಹೆಚ್ಚು ಆರಾಮವಾಗಿ ಜೀವನ ನಡೆಸುತ್ತಾರೆ. ನಿಷ್ಠೆಯಿಂದ ಜೀವನ ನಡೆಸುವುದರ ಜೊತೆಗೆ ಪ್ರತಿಯೊಂದು ಹೆಜ್ಜೆಯಲ್ಲೂ ಹೆಚ್ಚು ಸುರಕ್ಷರಾಗಿರುತ್ತಾರೆ. ಕನ್ಯಾರಾಶಿಯವರು ಹೆಚ್ಚು ತಮ್ಮ ಸಂಗಾತಿಗಾಗಿ ಸಮಯವನ್ನು ಕಳೆಯುತ್ತಾರೆ.
ಸಿಂಹ ಮತ್ತು ಧನು ರಾಶಿ ಸಿಂಹ ಮತ್ತು ಧನು ರಾಶಿಯವರ ವಿಷಯಕ್ಕೆ ಬಂದರೆ, ಒಬ್ಬರಿಗೊಬ್ಬರು ಹೆಚ್ಚು ತೊಡಗಿಕೊಂಡು ಇರುತ್ತಾರೆ. ಯಾವಾಗಲೂ ಪರಸ್ಪರ ಒಟ್ಟಿಗೆ ಇರಲು ಹೆಚ್ಚು ಬಯಸುತ್ತಾರೆ. ಈ ಎರಡು ರಾಶಿಯವರು ಒಂದಾದರೆ ಅದ್ಭುತ ಪ್ರೇಮಜೋಡಿಯಾಗಿರಲು ಸಾಧ್ಯ.
ಇದನ್ನೂ ಓದಿ: ಯುಗಾದಿ ಭವಿಷ್ಯ 2021: ಜ್ಯೋತಿಷಿ ಡಾ ಬಸವರಾಜ ಗುರೂಜಿ ದ್ವಾದಶ ರಾಶಿ ಭವಿಷ್ಯ