Ramadan: ರಂಜಾನ್ ಆಚರಣೆಗೆ ರಾಜ್ಯ ಸರ್ಕಾರದಿಂದ ಗೈಡ್​ಲೈನ್ಸ್ ಬಿಡುಗಡೆ

ದೈಹಿಕ ಅಂತರ ಪಾಲಿಸುವುದಕ್ಕಾಗಿ 3 ಪಾಳಿಯಲ್ಲಿ ಸಮಯವನ್ನು ರಾಜ್ಯ ಸರ್ಕಾರ ನಿಗದಿ ಮಾಡಿದೆ. ಮಧ್ಯಾಹ್ನ 12.45 ರಿಂದ 1.45ರ ವರೆಗೆ ನಮಾಜ್ ಮಾಡಲು ಅವಕಾಶವಿರುತ್ತದೆ. ನಂತರ ಮಧ್ಯಾಹ್ನ 1.30 ರಿಂದ 2 ಗಂಟೆಯವರೆಗೆ ಮತ್ತು 2.30 ರಿಂದ 3 ಗಂಟೆಯವರೆಗೆ ನಮಾಜ್ ಮಾಡುವುದಕ್ಕೆ ರಾಜ್ಯ ಸರ್ಕಾರ ಅವಕಾಶವನ್ನು ನೀಡಿದೆ.

Ramadan: ರಂಜಾನ್ ಆಚರಣೆಗೆ ರಾಜ್ಯ ಸರ್ಕಾರದಿಂದ ಗೈಡ್​ಲೈನ್ಸ್ ಬಿಡುಗಡೆ
ಪ್ರಾರ್ಥನೆ (ಸಾಂದರ್ಭಿಕ ಚಿತ್ರ)
Follow us
sandhya thejappa
| Updated By: guruganesh bhat

Updated on: Apr 13, 2021 | 4:23 PM

ಬೆಂಗಳೂರು: ಮುಸ್ಲಿಂ ಧರ್ಮದ ಪವಿತ್ರ ಹಬ್ಬಗಳಲ್ಲಿ ರಂಜಾನ್ ಕೂಡಾ ಒಂದು. ಈ ಹಬ್ಬದಲ್ಲಿ ಉಪವಾಸ ಇರುವುದೇ ವಿಶೇಷತೆ. ರಾಜ್ಯದ ಮುಸ್ಲಿಂಮರು ಕೆಲವು ಕಡೆ ಇಂದಿನಿಂದ ಉಪವಾಸವಿದ್ದರೆ, ಇನ್ನು ಕೆಲವು ಕಡೆ ನಾಳೆಯಿಂದ ಉಪವಾಸವಿರುತ್ತಾರೆ. ಮಹಾಮಾರಿ ಕೊರೊನಾ ನಡುವೆಯೂ ರಾಜ್ಯದಲ್ಲಿ ಉಪವಾಸವನ್ನು ಆಚರಿಸುವ ಮುಸ್ಲಿಂಮರಿಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.

ಮಾರ್ಗಸೂಚಿಗಳು ಹೀಗಿವೆ * ಕಂಟೇನ್ಮೆಂಟ್ ಜೋನ್ಗಳಲ್ಲಿರುವ ಮಸೀದಿಗಳು ಬಂದ್ ಮಾಡಿರಬೇಕು. ಮುಂದಿನ ಆದೇಶದವರೆಗೆ ಬಂದ್ ಮಾಡಿರಬೇಕು. ಉಳಿದ ಮಸೀದಿಗಳಲ್ಲಿ ನಮಾಜ್  ಮಾಡಲು ಅವಕಾಶ ನೀಡಲಾಗಿದೆ. * ಉಪವಾಸ ಬಿಡುವಾಗ ಮಸೀದಿಗೆ ಆಹಾರ ತರಬಾರದು. * ಉಪವಾಸವನ್ನು ಮನೆಯಲ್ಲಿಯೇ ಬಿಡಬೇಕು. * ಸಾಮೂಹಿಕ ಪ್ರಾರ್ಥನೆಯಲ್ಲಿ ದೈಹಿಕ ಅಂತರ ಕಡ್ಡಾಯ * ಪ್ರಾರ್ಥನೆಗೂ ಮೊದಲು ಮಾಡುವ ಸ್ವಚ್ಛತೆಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. * ಮನೆಯಲ್ಲಿಯೇ ವುಲೂಹ್ ಮಾಡಿಕೊಂಡು ಬರಬೇಕು. * ನಮಾಜ್ ವೇಳೆ ಒಂದೇ ಕಾರ್ಪೆಟ್ ಬಳಸುವಂತಿಲ್ಲ. ವೈಯಕ್ತಿಕವಾಗಿ ಕಾರ್ಪೆಟ್ ಬಳಸಬೇಕು. * ಪ್ರಾರ್ಥನೆಗೆ 5 ನಿಮಿಷ ಮುಂಚಿತವಾಗಿ ಮಸೀದಿ ತೆರೆಯಬೇಕೆಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಮಸೀದಿಗಳಲ್ಲಿ ನಮಾಜ್ ಮಾಡುವುದಕ್ಕೆ ಸಮಯ ನಿಗದಿ ದೈಹಿಕ ಅಂತರ ಪಾಲಿಸುವುದಕ್ಕಾಗಿ 3 ಪಾಳಿಯ ಸಮಯವನ್ನು ರಾಜ್ಯ ಸರ್ಕಾರ ನಿಗದಿ ಮಾಡಿದೆ. ಮಧ್ಯಾಹ್ನ 12.45 ರಿಂದ 1.45ರ ವರೆಗೆ ನಮಾಜ್ ಮಾಡಲು ಅವಕಾಶವಿರುತ್ತದೆ. ನಂತರ ಮಧ್ಯಾಹ್ನ 1.30 ರಿಂದ 2 ಗಂಟೆಯವರೆಗೆ ಮತ್ತು 2.30 ರಿಂದ 3 ಗಂಟೆಯವರೆಗೆ ನಮಾಜ್ ಮಾಡುವುದಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದೆ.

ದಾವಣಗೆರೆಯಲ್ಲಿ ಸಂಜೆ 7 ಗಂಟೆ ನಂತರ ಕೊವಿಡ್ ಲಸಿಕೆ ನೀಡಿಕೆ ದಾವಣಗೆರೆ: ರಂಜಾನ್ ಉಪವಾಸ ಹಿನ್ನೆಲೆ ನಾಳೆಯಿಂದ ಮುಸ್ಲಿಂಮರಿಗೆ ಸಂಜೆ 7 ಗಂಟೆ ನಂತರ ಕೊವಿಡ್ ಲಸಿಕೆ ನೀಡಲು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನಿರ್ಧರಿಸಿದ್ದಾರೆ. ಮುಸ್ಲಿಂ ಧರ್ಮಗುರುಗಳ ಸಭೆಯಲ್ಲಿ ವೈದ್ಯಾಧಿಕಾರಿಗಳ ಜೊತೆ ಚರ್ಚಿಸಿ ಜಿಲ್ಲಾಧಿಕಾರಿ ಅಂತಿಮ ತೀರ್ಮಾನ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ

Ramadan Time Table 2021: ಪವಿತ್ರ ಕುರಾನ್ ಸ್ವರ್ಗದಿಂದ ಭೂಮಿಗೆ ಬಂದಿದ್ದು ಇದೇ ರಂಜಾನ್ ತಿಂಗಳಲ್ಲಿ.. ರಂಜಾನ್ ಉಪವಾಸದ ವಿವರ ಇಲ್ಲಿದೆ

Ramadan 2021: ರಂಜಾನ್ ಹಬ್ಬದ ಪ್ರಾಮುಖ್ಯತೆ, ಉಪವಾಸದ ಆರಂಭ.. ಇವೆಲ್ಲದರ ಡಿಟೇಲ್ಸ್ ಇಲ್ಲಿದೆ

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ