Astrology: ರಾಹು ದಶಾ ಕಾಲದಲ್ಲಿ ಎದುರಾಗುವ 10 ಸಂಗತಿಗಳಿವು; ಇವಿಷ್ಟು ಅಂಶಗಳು ನಿಮ್ಮ ಗಮನದಲ್ಲಿರಲಿ

ಚಿಕ್ಕ ವಯಸ್ಸಿಗೇ ರಾಹು ದಶೆ ಬಂದಲ್ಲಿ ನಾನಾ ಬಗೆಯ ಕಷ್ಟಗಳನ್ನು, ದುಃಖ- ದುಮ್ಮಾನಗಳನ್ನು ಎದುರಿಸಬೇಕಾಗುತ್ತದೆ. ಜನ್ಮ ಜಾತಕದಲ್ಲಿ ದಶಾ- ಭುಕ್ತಿಯ ಬಗ್ಗೆ ಮಾಹಿತಿ ಇರುತ್ತದೆ. ನಿಮ್ಮ ನಿಮ್ಮ ಜನ್ಮ ಜಾತಕವನ್ನು ನೋಡಿಕೊಳ್ಳಿ. ಅದರಲ್ಲಿ ರಾಹು ದಶೆ ನಡೆಯುವುದು ಯಾವಾಗ ಎಂಬುದನ್ನು ಗಮನಿಸಿ.

Astrology: ರಾಹು ದಶಾ ಕಾಲದಲ್ಲಿ ಎದುರಾಗುವ 10 ಸಂಗತಿಗಳಿವು; ಇವಿಷ್ಟು ಅಂಶಗಳು ನಿಮ್ಮ ಗಮನದಲ್ಲಿರಲಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Skanda

Updated on: Jul 09, 2021 | 6:50 AM

ಯಾವುದೇ ವ್ಯಕ್ತಿಯ ಜೀವನದಲ್ಲಿ ರಾಹು ದಶೆ ಬಹಳ ಪ್ರಮುಖ ಆದದ್ದು. ಚಿಕ್ಕ ವಯಸ್ಸಿಗೇ ರಾಹು ದಶೆ ಬಂದಲ್ಲಿ ನಾನಾ ಬಗೆಯ ಕಷ್ಟಗಳನ್ನು, ದುಃಖ- ದುಮ್ಮಾನಗಳನ್ನು ಎದುರಿಸಬೇಕಾಗುತ್ತದೆ. ಹಾಗಿದ್ದಲ್ಲಿ ವಯಸ್ಸಾದ ಮೇಲೆ ಬಂದರೆ ಪರವಾಗಿಲ್ಲವಾ ಅಂದುಕೊಳ್ಳುವಂತೆಯೂ ಇಲ್ಲ. ಜನ್ಮ ಜಾತಕದಲ್ಲಿ ದಶಾ- ಭುಕ್ತಿಯ ಬಗ್ಗೆ ಮಾಹಿತಿ ಇರುತ್ತದೆ. ನಿಮ್ಮ ನಿಮ್ಮ ಜನ್ಮ ಜಾತಕವನ್ನು ನೋಡಿಕೊಳ್ಳಿ. ಅದರಲ್ಲಿ ರಾಹು ದಶೆ ನಡೆಯುವುದು ಯಾವಾಗ ಎಂಬುದನ್ನು ಗಮನಿಸಿ. ಆ ನಂತರ ಇಲ್ಲಿ ನೀಡಲಾಗುವ 10 ಅಂಶಗಳ ಕಡೆಗೆ ಕಡ್ಡಾಯವಾಗಿ ಗಮನ ನೀಡಿ.

1. ರಾಹು ದಶಾ ಕಾಲದಲ್ಲಿ ತಮ್ಮನ್ನು ತಾವು ಎಲ್ಲ ರೀತಿಯಲ್ಲೂ ಸರಿಯಾಗಿದ್ದೇವೆ ಅಂತಲೇ ಭಾವಿಸುತ್ತಾರೆ. ಟೀಕೆಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಮತ್ತು ಯಾವುದೇ ದಾರಿಯಲ್ಲಾದರೂ ಸರಿ ಅಧಿಕಾರವನ್ನು ಹೊಂದಲು ಬಯಸುತ್ತಾರೆ. 2 ತಮ್ಮದೇ ತಪ್ಪಿನಿಂದಾಗಿ ಜೀವನದ ಕತ್ತಲೆಯ ಭಾಗದ ಕಡೆಗೆ ಆಕರ್ಷಿತರಾಗುತ್ತಾರೆ ಮತ್ತು ತಮ್ಮ ತಪ್ಪಿನಿಂದಾಗಿಯೇ ಶಕ್ತಿಶಾಲಿಯಾದ ಶತ್ರುವನ್ನು ಹುಟ್ಟಿಹಾಕುತ್ತಾರೆ. 3. ಬಲಶಾಲಿಯಾದ ಶತ್ರುವಿನ ಕೈಗೆ ಸಿಕ್ಕು ನರುಳುವಂತಾಗುತ್ತದೆ. ಸೋಲು ಕಾಣುವಂತಾಗುತ್ತದೆ ಮತ್ತು ಅವಮಾನ ಪಡುವಂತಾಗುತ್ತದೆ. ಸ್ವಂತ ಸಮಸ್ಯೆಗಳಿಂದ ಹೊರಬರಲಾಗದೆ ತಲೆ ತಪ್ಪಿಸಿಕೊಂಡು ತಿರುಗುವಂತಾಗುತ್ತದೆ. 4. ತನ್ನ ತಪ್ಪುಗಳು ಸಮಸ್ಯೆ ತರುವುದು ಮಾತ್ರವಲ್ಲ, ಕುಟುಂಬಕ್ಕೂ ಅಥವಾ ಕೆಲಸಕ್ಕೂ ಸಮಸ್ಯೆಗಳಾಗುತ್ತವೆ. 5. ಜ್ಞಾನವುಳ್ಳ ವ್ಯಕ್ತಿಗಳನ್ನು ಅಥವಾ ಬುದ್ಧಿವಂತಿಕೆ ಇರುವವರನ್ನು ಹುಡುಕಿಕೊಂಡು ಹೋಗಿ ಅಂಥವರ ಮೂಲಕ ಸರಿಯಾದ ಮಾರ್ಗದರ್ಶನ ತೆಗೆದುಕೊಳ್ಳಬೇಕು. 6. ರತ್ನಗಳ ಧಾರಣೆ ಅಥವಾ ಶಾರ್ಟ್‌ಕಟ್‌ಗಳನ್ನು ಅನುಸರಿಸುವ ಬದಲಿಗೆ ವೇದ ಪಾರಾಯಣ, ಮಂತ್ರ ಪಠಣ, ಇತರರಿಗೆ ಸಹಾಯ ಮಾಡುವುದು ಹಾಗೂ ಆಧ್ಯಾತ್ಮಿಕ ಶಕ್ತಿ ಸಂಚಯನ ಮಾಡಬೇಕು. ಸ್ವಯಂ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. 7. ತನ್ನ ತಪ್ಪುಗಳನ್ನು ಕಂಡು ಹಿಡಿದುಕೊಂಡು, ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕು. 8. ತನ್ನಿಂದ ಆಗಲಿ ಅಥವಾ ಆಗದಿರಲಿ ಧೈರ್ಯದಿಂದ ತನ್ನ ಸವಾಲುಗಳಲ್ಲಿ ಅಥವಾ ಯುದ್ಧಗಳಲ್ಲಿ ಭಾಗವಹಿಸಬೇಕಾಗುತ್ತದೆ. ಅದು ಮದ್ಯ ವ್ಯಸನ, ವೃತ್ತಿ ಸವಾಲು ಅಥವಾ ಮದುವೆಯ ಸಮಸ್ಯೆಗಳ ರೂಪದಲ್ಲಿ ಬರುತ್ತದೆ. 9. ರಾಹು ದಶೆ ನಡೆಯುವಾಗ ತನ್ನ ಒಳಗಿನ ಅತಿ ದೊಡ್ಡ ಸಮಸ್ಯೆಯನ್ನು ಕಂಡುಕೊಳ್ಳಬೇಕು. ಅದನ್ನು ಎದುರಿಸಿ, ಆಧ್ಯಾತ್ಮಿಕ ಶಕ್ತಿ ಅಥವಾ ಬುದ್ಧಿವಂತಿಕೆಯ ಮೂಲಕ ಹೊರಬರಬೇಕು. 10. ಈ ದಶೆ ನಡೆಯುವಾಗ ಆ ವ್ಯಕ್ತಿಯ ಶೌರ್ಯಕ್ಕಾಗಿ ಬಹುಮಾನ ದೊರೆಯುತ್ತದೆ. ಮುಖ್ಯವಾಗಿ ಆ ವ್ಯಕ್ತಿಯು ಜೀವನದ ಶ್ರೇಷ್ಠ ಪಾಠಗಳನ್ನು ಕಲಿಯುತ್ತಾರೆ.

ಇದನ್ನೂ ಓದಿ: Gemstones: ರಾಶಿಗೆ ಅನುಗುಣವಾಗಿ ಅದೃಷ್ಟರತ್ನ; ಜನ್ಮರಾಶಿಗೆ ಅನುಗುಣವಾಗಿ ಯಾವ ರತ್ನ ದಾರಣೆ ಉತ್ತಮ?

ಇದನ್ನೂ ಓದಿ: Car number astrology: ವಾಹನ ಖರೀದಿಸಬೇಕು ಅಂತಿದ್ದೀರಾ? ನಿಮ್ಮ ಅದೃಷ್ಟ ಸಂಖ್ಯೆ ಯಾವುದೆಂದು ತಿಳಿದುಕೊಳ್ಳಿ

(Here are the 10 points to remember during Rahu mahardasha according to Astrology)

ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ