ಜ್ಯೋತಿಷ್ಯ ಶಾಸ್ತ್ರದಲ್ಲಿ ಬರುವ 12 ರಾಶಿಗಳಲ್ಲಿಯೂ ಒಂದು ಮತ್ತೊಂದಕ್ಕಿಂತ ಭಿನ್ನವಾಗಿರುತ್ತದೆ. ತನ್ನದೇ ಆದ ವೈಶಿಷ್ಯತೆ ಹೊಂದಿರುತ್ತದೆ. ಜಾತಕದ ಪ್ರಕಾರ ಬಂದಿರುವ ರಾಶಿಗೆ ಅನುಗುಣವಾಗಿ ಅವರವರ ಗುಣ ಸ್ವಭಾವಗಳು ರೂಪುಗೊಂಡಿರುತ್ತವೆ. ಭಾವನಾ ಜೀವಿಗಳು ದುರ್ಬಲರು ಅಥವಾ ನ್ಯೂನತೆಯುಳ್ಳವರು ಅಲ್ಲ. ಅವರ ಹೃದಯ ಸ್ವಚ್ಛವಾಗಿರುತ್ತದೆ. ಭಾನವಾತ್ಮಕವಾಗಿ ಅಳುವುದು ಅವರು ಅನುಸರಿಸುವ ಒಂದು ವಿಧಾನ. ಅದರಿಂದ ಎದುರಿಗಿರುವ ವ್ಯಕ್ತಿಗೆ ಬಾಧೆ ಕಲ್ಪಿಸುವುದಲ್ಲ.
ನೀವು ಯಾವಾಗಲಾದರೂ ಕೋಪದಿಂದ ಕಣ್ಣೀರು ಹಾಕಿದ್ದೀರಾ? ಬಳಿಕ ಆ ಅಳುವಿನ ಬಗ್ಗೆ ನಿಮ್ಮಲ್ಲಿ ತಪ್ಪು ಭಾವನೆ ಮೂಡಿತಾ? ಜನರಿಂದ ನೀವು ಸಹಾನುಭೂತಿ ಗಿಟ್ಟಿಸಲು ಹಾಗೆ ಕಣ್ಣೀರು ಹಾಕಿದಿರೀ ಅಂತ ಅನ್ನಿಸಿತಾ? ಇದಕ್ಕೆಲ್ಲ ಉತ್ತರ ಹೌದು ಅಂತಾದರೆ ನೀವು ಭಾವುಕ ಜೀವಿಯೇ ಸರಿ. ವಾಸ್ತವವಾಗಿ ಭಾವನಾಜೀವಿಯೂ ಧೈರ್ಯಶಾಲಿಯೇ. ಆದರೆ ತಮ್ಮ ಧೈರ್ಯಶಾಲಿ ಅಂತಾ ತೋರಿಸಿಕೊಳ್ಳುವುದಕ್ಕಾಗಿ ತಮ್ಮ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಮೂರು ರಾಶಿಯವರು (zodiac sign) ತುಂಬಾ ಭಾವುಕ ಜೀವಿಗಳು. ಅವರು ಯಾರು, ತಿಳಿಯೋಣ ಬನ್ನೀ
ಸಿಂಹ ರಾಶಿ (Leo):
ಸಿಂಹ ರಾಶಿಯವರು ಹೆಮ್ಮೆಯ, ಕಟ್ಟುನಿಟ್ಟಾದ, ಪರಿಪೂರ್ಣತಾವಾದಿಗಳಂತೆ ಕಾಣುತ್ತಾರೆ. ಆದರೆ ಅವರಲ್ಲಿ ಮತ್ತೊಂದು ಸ್ವಭಾವವೂ ಇರುತ್ತದೆ. ಅವರು ಜಗತ್ತಿನಲ್ಲೇ ಅತ್ಯಂತ ಭಾವುಕರಾಗಿರುತ್ತಾರೆ. ಅವರು ಬೇರೊಬ್ಬರ ಭಾವನೆಗಳೊಂದಿಗೆ ಚೆಲ್ಲಾಟವಾಡುವುದಿಲ್ಲ. ಆದರೆ ಅವರ ಭಾವನೆಗಳಿಗೆ ಸ್ಪಂದಿಸುವುದು ಹಾಗಿರಲಿ, ಅದರ ಬದಲಿಗೆ ವ್ಯಂಗ್ಯವಾಡುವುದಾಗಲಿ, ಕಟಕಿಯಾಡುವುದಾಗಲಿ ಮಾಡಿದಾಗ ಅವರು ನಿಜಕ್ಕೂ ಘಾಸಿಗೊಳ್ಳುತ್ತಾರೆ.
ಕುಂಭ ರಾಶಿ (Aquarius):
ಕುಂಭ ರಾಶಿಯ ಜನ ಕೋಮಲ ಮನಸಿನವರು. ಭಾವನಾಜೀವಿಗಳು. ಹಾಗಾಗಿ ಸ್ವಲ್ಪಮಟ್ಟಿಗೆ ದುರ್ಬಲರಾಗಿರುತ್ತಾರೆ. ಆದರೆ ಇವರನ್ನು ಮಧುರ ಮಾತುಗಳಿಂದ ಮತ್ತು ಮಧುರ ಕೆಲಸಗಳಿಂದ ಗೆಲ್ಲಬಹುದು. ಇವರು ಸುಲಭವಾಗಿ ಜನರನ್ನುನಂಬಿ ಬಿಡುತ್ತಾರೆ. ಇದೆಲ್ಲದರ ಪರಿಣಾಮ ನಿರಾಶೆಗೊಳಗಾಗುತ್ತಾರೆ. ಈ ರಾಶಿಯವರು ಮನಃಪೂರ್ಣವಾಗಿ, ಏಕಾಂತದಲ್ಲಿ ಅಳುತ್ತಾರೆ. ಇವರ ಆಕರ್ಷಕ ವ್ಯಕ್ತಿತ್ವ ಮತ್ತು ಸೂಜಿಗಲ್ಲಿನಂತಹ ಸೆಳವನ್ನು ಹೊಂದಿರುತ್ತಾರೆ.
ಮೀನ ರಾಶಿ (Pisces):
ಮೀನ ರಾಶಿಯವರು ಬಾಹ್ಯವಾಗಿ ತುಂಬಾ ಬಲಾಢ್ಯರು ಎಂಬಂತೆ ತೋರ್ಪಡಿಸಿಕೊಳ್ಳುತ್ತಾರೆ. ಇವರು ತಮ್ಮ ಸುತ್ತಮುತ್ತಲ ಆಗುಹೋಗುಗಳ ಬಗ್ಗೆ ಅಸಡ್ಡೆ ಹೊಂದಿರುತ್ತಾರೆ. ಆದರೆ ಆಳದಲ್ಲಿ ಭಾವುಕ ಲೋಕದಲ್ಲಿ ಎಚ್ಚರವಾಗಿರುತ್ತಾರೆ. ಇವರು ಚಿಕ್ಕ ಚಿಕ್ಕ ವಿಷಯಗಳಿಂದ ಪ್ರಭಾವಿತರಾಗುತ್ತಾರೆ. ಆದರೆ ಆಳದಲ್ಲಿ ಅವರು ತಮಗಾಗಿರುವ ಯಾವುದೇ ಗಾಯವನ್ನು ಹೊರಹಾಕುವುದಿಲ್ಲ. ಅವರ ಬುದ್ಧಿಶಕ್ತಿಯೇ ಅವರ ಬಲಾಢ್ಯ ಶಸ್ತ್ರ. ತಮ್ಮ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳುವುದರಲ್ಲಿ ನಿಷ್ಣಾತರು. ಒಂದು ವೇಳೆ ಮೀನ ರಾಶಿಯ ಜಾತಕದವರ ಭಾವನಾತ್ಮಕತೆಯನ್ನು ನೋಡಬೇಕು ಅಂತಾದರೆ ಮೊದಲು ನೀವು ಅದಕ್ಕಾಗಿ ಸಾಕಷ್ಟು ಶ್ರಮಪಡಬೇಕಾಗುತ್ತದೆ. ಏಕೆಂದರೆ ಅವರು ಅಷ್ಟು ಸುಲಭವಾಗಿ ಯಾರ ಬಳಿಯೂ ತಮ್ಮ ಭಾವನೆಗಳನ್ನು ಹೊರಹಾಕುವುದಿಲ್ಲ.
(these three zodiac signs people are emotional know how in kannada)