ತಿರುಪತಿಯಲ್ಲಿ ಏಜೆಂಟ್​​​​​ಗಳಿಗೆ ಕಡಿವಾಣ ಹಾಕಲು ಟಿಟಿಡಿ ಸೂಪರ್ ಪ್ಲಾನ್.. ಭಕ್ತರಿಗೆ ಬಿಗ್ ರಿಲೀಫ್

|

Updated on: Jul 01, 2024 | 10:35 AM

TTD Plans Aadhaar Link: ತಿರುಮಲ ಸೇವೆಗಳಿಗೆ ಆಧಾರ್ ಲಿಂಕ್ ಮಾಡುವ ಸಾಧ್ಯತೆಗಳನ್ನು ಪರಿಶೀಲಿಸಿ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ TTD) ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ. ಶ್ಯಾಮಲಾ ರಾವ್ ಅವರು ಐಟಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಯುಐಡಿಐ ಅಧಿಕಾರಿಗಳ ಸಹಕಾರ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ತಿರುಪತಿಯಲ್ಲಿ ಏಜೆಂಟ್​​​​​ಗಳಿಗೆ ಕಡಿವಾಣ ಹಾಕಲು ಟಿಟಿಡಿ ಸೂಪರ್ ಪ್ಲಾನ್.. ಭಕ್ತರಿಗೆ ಬಿಗ್ ರಿಲೀಫ್
ತಿಮ್ಮಪ್ಪನ ಲಡ್ಡು ಪ್ರಸಾದ ಗುಣಮಟ್ಟ ಮತ್ತು ರುಚಿ ಬಗ್ಗೆ ಮತ್ತೆ ಸಭೆ
Follow us on

ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿ (ಟಿಟಿಡಿ -The Tirumala Tirupati Devasthanams -TTD) ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಇಒ) ಜೆ. ಶ್ಯಾಮಲಾ ರಾವ್ ಅವರು ಶ್ರೀವಾರಿ ಭಕ್ತರಿಗೆ ಟಿಟಿಡಿ ಒದಗಿಸುವ ಆನ್‌ಲೈನ್ ಅರ್ಜಿ ಸೇವೆಗಳಿಗೆ ಆಧಾರ್ ಲಿಂಕ್ (Aadhaar Link) ಮಾಡಲು ಮುಂದಾಗಿದ್ದು, ಇದರಿಂದ ಪಾರದರ್ಶಕತೆಯ ಜತೆಗೆ ದಲ್ಲಾಳಿ ವ್ಯವಸ್ಥೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ತಿರುಪತಿಯ ಟಿಟಿಡಿ ಆಡಳಿತ ಭವನದ ಕಾನ್ಫರೆನ್ಸ್ ಹಾಲ್‌ನಲ್ಲಿ ಯುಐಡಿಎಐ (ಆಧಾರ್ ಸಂಸ್ಥೆ), ಟಿಸಿಎಸ್, ಜಿಐಒ ಮತ್ತು ಟಿಟಿಡಿಯ ಐಟಿ ವಿಭಾಗದ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಇಒ, ಇಲ್ಲಿಯವರೆಗೆ ಟಿಟಿಡಿ ಭಕ್ತರಿಗೆ ದರ್ಶನ, ವಸತಿ, ಆರ್ಜಿತ ಸೇವೆಗಳು, ಶ್ರೀವಾರಿ ಸೇವೆ ಮತ್ತಿತರ ಸೇವೆಗಳನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಲು ಅನುವು ಮಾಡಿಕೊಡಲಾಗುತ್ತಿದೆ.

ಆದರೆ, ಇನ್ನು ಮುಂದೆ ಆಧಾರ್ ಲಿಂಕ್ ಮಾಡುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಮತ್ತು ಈ ಅರ್ಜಿಗಳನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಇಒ ಐಟಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಯುಐಡಿಐ ಅಧಿಕಾರಿಗಳ ಸಹಕಾರ ತೆಗೆದುಕೊಳ್ಳಬೇಕು. ಆಧಾರ್ ಮೂಲಕ ಯಾತ್ರಾರ್ಥಿಗಳ ಗುರುತಿಸುವಿಕೆ, ತಪಾಸಣೆ, ಬಯೋಮೆಟ್ರಿಕ್ ಪರಿಶೀಲನೆ, ಆಧಾರ್ ನಕಲು ತಡೆಯುವುದು ಹೇಗೆ ಇತ್ಯಾದಿ ವಿಷಯಗಳ ಕುರಿತು ಚರ್ಚಿಸಿದರು. ಯುಐಡಿಎಐ ಅಧಿಕಾರಿಗಳು ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ಅರ್ಜಿಗಳಿಗೆ ಆಧಾರ್ ಅನ್ನು ಹೇಗೆ ಲಿಂಕ್ ಮಾಡುವುದು ಎಂಬ ಬಗ್ಗೆ ವಿವರಿಸಿದರು. ಶೀಘ್ರದಲ್ಲೇ ಈ ಬಗ್ಗೆ ಆಡಳಿತ ಮಂಡಳಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

Also read: ನಮ್ಮ ದೇಶದಲ್ಲಿ ಈ ನಗರಗಳು ಸಂಪೂರ್ಣ ಸಸ್ಯಾಹಾರಿ ನಗರಗಳು, ವಿಶ್ವದ ಮೊದಲ ಸಸ್ಯಾಹಾರಿ ನಗರವೂ ಭಾರತದಲ್ಲೇ ಇರುವುದು!

ತಿಮ್ಮಪ್ಪನ ಲಡ್ಡು ಪ್ರಸಾದ ಗುಣಮಟ್ಟ ಮತ್ತು ರುಚಿ ಬಗ್ಗೆ ಮತ್ತೆ ಸಭೆ

ಇನ್ನು ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದಗಳ ಗುಣಮಟ್ಟ ಮತ್ತು ರುಚಿ ಹೆಚ್ಚಿಸಲು ಕ್ರಮಕೈಗೊಳ್ಳಲು ಟಿಟಿಡಿ ಇಒ ಶ್ರೀ ಜೆ. ಶ್ಯಾಮರಾವ್ ಅಧಿಕಾರಿಗಳಿಗೆ ಇತ್ತೀಚೆಗಷ್ಟೇ ಆದೇಶಿಸಿದ್ದಾರೆ. ಈ ಸಂಬಂಧ ಕಳೆದ ವಾರವೂ ತಿರುಪತಿಯ ಟಿಟಿಡಿ ಆಡಳಿತ ಭವನದಲ್ಲಿರುವ ಇಒ ಕಚೇರಿಯಲ್ಲಿ ಟಿಟಿಡಿ ಅಧಿಕಾರಿಗಳು ಮತ್ತು ಡೈರಿ ತಜ್ಞರೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಇಒ, ಪ್ರಸ್ತುತ ಪರೀಕ್ಷೆ ನಡೆಸುತ್ತಿರುವ ವಿಧಾನಕ್ಕಿಂತ ಉತ್ತಮ ಗುಣಮಟ್ಟದ ತುಪ್ಪ ಖರೀದಿಸುವುದು ಹೇಗೆ, ಖರೀದಿಸಿದ ತುಪ್ಪವನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ಪರೀಕ್ಷಿಸುವುದು ಹೇಗೆ ಎಂಬುದರ ಬಗ್ಗೆ ಬದಲಾವಣೆಗಳನ್ನು ಮಾಡುವಂತೆ ತಜ್ಞರಿಗೆ ತಿಳಿಸಿದರು.

Also Read: ಇದು ಚಂದ್ರಬಾಬು ನಾಯ್ಡು ಎಂಟ್ರಿ- ಜಗನ್​​ ಎಕ್ಸಿಟ್​ ಎಫೆಕ್ಟ್​! ತಿರುಪತಿ ಲಡ್ಡು ಮೊದಲಿನಂತಿಲ್ಲ ಅನ್ನುತ್ತಿದ್ದ ಭಕ್ತರಿಗೆ ಗುಡ್​ ನ್ಯೂಸ್ ಕೊಟ್ಟ ​TTD

ನಂತರ ಖ್ಯಾತ ಡೈರಿ ತಜ್ಞರಾದ ಶ್ರೀ ವಿಜಯಭಾಸ್ಕರ್ ರೆಡ್ಡಿ ಮತ್ತು ಶ್ರೀ ಸುರೇಂದ್ರನಾಥ್ ಅವರು ಲಡ್ಡು ಗುಣಮಟ್ಟವನ್ನು ಸುಧಾರಿಸಲು ಎಸ್‌ಎಸ್‌ಐ ನಿಯಮಗಳ ಪ್ರಕಾರ ಗುಣಮಟ್ಟದ ತುಪ್ಪವನ್ನು ಹೇಗೆ ತಯಾರಿಸುವುದು, ಭಾರತೀಯ ಆಹಾರ ಸುರಕ್ಷತಾ ಪ್ರಾಧಿಕಾರ, ಆಗ್ ಮಾರ್ಕ್, ಟಿಟಿಡಿ ನಿಯಮಗಳ ಪ್ರಕಾರ ತುಪ್ಪದ ಗುಣಮಟ್ಟವನ್ನು ಹೇಗೆ ನಿರ್ವಹಿಸುವುದು ಎಂದು ವಿವರಿಸಿದರು. ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ. ಗುಣಮಟ್ಟದ ತುಪ್ಪದ ಪ್ರಮಾಣಿತ ಮೌಲ್ಯಗಳ ಬಗ್ಗೆ ಅವರು ತಮ್ಮ ಪಿಪಿಟಿಯಲ್ಲಿ ಉಲ್ಲೇಖಿಸಿದ್ದಾರೆ. ಲಡ್ಡು ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಲು ಅಗತ್ಯವಿರುವ ತುಪ್ಪವನ್ನು ಸಂಗ್ರಹಿಸಲು ಶೀಘ್ರವೇ ಸಮಗ್ರ ವರದಿ ಸಿದ್ದಪಡಿಸುವಂತೆ ಸೂಚಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:28 am, Mon, 1 July 24