ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ -TTD) ಹಿರಿಯ ನಾಗರಿಕರು (Senior Citizens) ಮತ್ತು ವಿಶೇಷ ಚೇತನರಿಗೆ (Physically challenged quota) ಸಿಹಿಸುದ್ದಿ ನೀಡಿದೆ. ಅವರ ಕೋಟಾದ ಅಡಿಯಲ್ಲಿ, ನವೆಂಬರ್ ತಿಂಗಳ ಆನ್‌ಲೈನ್ ದರ್ಶನ ಟಿಕೆಟ್‌ಗಳನ್ನು ಅಕ್ಟೋಬರ್ 26 ರಂದು ಮಧ್ಯಾಹ್ನ 3 ಗಂಟೆಗೆ (26th October 3pm) ಬಿಡುಗಡೆ ಮಾಡಲಾಗುತ್ತದೆ. ಶ್ರೀ ವೇಂಕಟೇಶ್ವರನ ಭಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಟಿಟಿಡಿ ತಿಳಿಸಿದೆ. ಮತ್ತೊಂದೆಡೆ ಆಡಳಿತಾತ್ಮಕ ಕಾರಣಗಳಿಂದ ವಿಶೇಷ ದರ್ಶನ ಟಿಕೆಟ್ (ರೂ. 300), ತಿರುಮಲ ವಸತಿ ಡಿಸೆಂಬರ್ ಕೋಟಾವನ್ನು ಈ ತಿಂಗಳ 26 ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಮೂಲತಃ ಈ ಟಿಕೆಟ್‌ಗಳನ್ನು ಅಕ್ಟೋಬರ್ 27 ರಂದು ಬಿಡುಗಡೆ ಮಾಡಬೇಕಿತ್ತು. ಆದರೆ ಭಕ್ತರ ಅನುಕೂಲಕ್ಕಾಗಿ ಒಂದು ದಿನ ಮುಂಚಿತವಾಗಿ ಬಿಡುಗಡೆ ಮಾಡಲಾಗುತ್ತಿದೆ.
ಹಿರಿಯ ನಾಗರಿಕರು ಮತ್ತು ಅಂಗವಿಕಲರು ತಿಮ್ಮಪ್ಪನ ದರ್ಶನಕ್ಕೆ ಬುಕ್ ಮಾಡುವುದು ಹೇಗೆ..?
* ಟಿಕೆಟ್ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬೇಕು.
* ವಯೋಮಿತಿ 65 ವರ್ಷಕ್ಕಿಂತ ಹೆಚ್ಚಿಗೆ ಇರಬೇಕು.
* ಗುರುತಿನ ಪುರಾವೆಗಾಗಿ ಆಧಾರ್ ಕಾರ್ಡ್ ಕಾಪಿ ಒದಗಿಸಬೇಕು.
* ಉಚಿತ ದರ್ಶನ ಟಿಕೆಟ್
* ಹಿರಿಯ ನಾಗರಿಕರ ಜೊತೆಗಿರಲು ಒಬ್ಬ ವ್ಯಕ್ತಿಗೆ ಅನುಮತಿಯಿದೆ.
* ಜೊತೆಗಾರರಾಗಿ ಸಂಗಾತಿಗೆ ಮಾತ್ರವೇ ಅನುಮತಿ ಇದೆ
* 80 ವರ್ಷ ಮೇಲ್ಪಟ್ಟವರ ಸಹಾಯಕರಿಗೂ (ಜೊತೆಗಾರ) ಅನುಮತಿ ನೀಡಲಾಗುತ್ತದೆ
Announcement:
Senior Citizens / Physically challenged quota for the month of November 2022 will be available for booking w.e.f. 26-10-2022 03:00 PM.
— Tirumala Tirupati Devasthanams (@TTDevasthanams) October 24, 2022