
ವೈಶಾಖ ಮಾಸದ ಹುಣ್ಣಿಮೆಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಈ ಹುಣ್ಣಿಮೆಯನ್ನು ಅರಳಿ ಹುಣ್ಣಿಮೆ ಮತ್ತು ಬುದ್ಧ ಪೂರ್ಣಿಮೆ ಎಂದೂ ಕರೆಯಲಾಗುತ್ತದೆ. ಈ ವರ್ಷ ವೈಶಾಖ ಹುಣ್ಣಿಮೆಯನ್ನು ಮೇ 23 ರ ಗುರುವಾರದಂದು ಆಚರಣೆ ಮಾಡಲಾಗುತ್ತದೆ. ಈ ಪೂರ್ಣಿಮೆಯಂದು ದಾನ ಮಾಡುವುದು ಮಾತ್ರವಲ್ಲ ಅರಳಿ ಮರವನ್ನು ಪೂಜಿಸುವುದಕ್ಕೂ ಕೂಡ ವಿಶೇಷ ಮಹತ್ವವನ್ನು ನೀಡಲಾಗಿದೆ. ಧರ್ಮಗ್ರಂಥಗಳ ಪ್ರಕಾರ, ಈ ದಿನ ಅರಳಿ ಮರವನ್ನು ಪೂಜಿಸುವ ಮೂಲಕ, ಜನರು ವಿಷ್ಣುವಿನ ಆಶೀರ್ವಾದವನ್ನು ಪಡೆಯುತ್ತಾರೆ. ಅಲ್ಲದೆ ಗುರು ಗ್ರಹಕ್ಕೆ ಸಂಬಂಧ ಪಟ್ಟ ದೋಷಗಳಿದ್ದರೆ ಈ ದಿನ ಗಿಡಗಳನ್ನು ನೆಡುವ ಮೂಲಕ ಅದನ್ನು ಬಗೆಹರಿಸಿಕೊಳ್ಳಬಹುದು. ವರ್ಷದ ಎಲ್ಲಾ ಹನ್ನೆರಡು ಹುಣ್ಣಿಮೆಗಳು ವಿಶೇಷ ಮಹತ್ವವನ್ನು ಹೊಂದಿದೆ. ಆದರೆ ವೈಶಾಖ ತಿಂಗಳಲ್ಲಿ ಮಾತ್ರ ಶ್ರೀ ಹರಿಯೊಂದಿಗೆ ಅರಳಿ ಮರವನ್ನು ಸಹ ಪೂಜಿಸಲಾಗುತ್ತದೆ, ಆದ್ದರಿಂದ ವೈಶಾಖ ಹುಣ್ಣಿಮೆಯನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:46 pm, Mon, 20 May 24