Vastu for Office Bag: ಆಫೀಸ್ ಬ್ಯಾಗ್​​ನಲ್ಲಿ ಈ ವಸ್ತು ಇಡಲೇಬೇಡಿ; ವೃತ್ತಿಜೀವನದ ಅಡೆತಡೆಗೆ ಇದೇ ಮುಖ್ಯ ಕಾರಣ!

ನಿಮ್ಮ ಆಪೀಸ್​​​ ಬ್ಯಾಗ್ ಕೇವಲ ವಸ್ತುಗಳನ್ನು ಸಾಗಿಸುವ ಸಾಧನವಲ್ಲ, ಅದು ನಿಮ್ಮ ವೃತ್ತಿಪರ ಶಕ್ತಿಯ ಪ್ರತಿಬಿಂಬ. ವಾಸ್ತು ಶಾಸ್ತ್ರದ ಪ್ರಕಾರ, ಬ್ಯಾಗ್‌ನಲ್ಲಿ ಇಡುವ ವಸ್ತುಗಳು ನಿಮ್ಮ ಕೆಲಸದ ಮೇಲೆ ನೇರ ಪರಿಣಾಮ ಬೀರುತ್ತವೆ. ಹಳೆಯ ಬಿಲ್‌ಗಳು, ಚೂಪಾದ ವಸ್ತುಗಳು, ಹಾಳಾದ ಪೆನ್ನುಗಳು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ, ವೃತ್ತಿಜೀವನಕ್ಕೆ ಅಡೆತಡೆ ಉಂಟುಮಾಡಬಹುದು. ಸಕಾರಾತ್ಮಕತೆ ಮತ್ತು ಯಶಸ್ಸಿಗಾಗಿ ಬ್ಯಾಗನ್ನು ಶುಚಿಯಾಗಿ, ಅನಗತ್ಯ ವಸ್ತುಗಳಿಂದ ಮುಕ್ತವಾಗಿಡಿ. ಇದು ನಿಮ್ಮ ಪ್ರಗತಿಗೆ ಸಹಕಾರಿ.

Vastu for Office Bag: ಆಫೀಸ್ ಬ್ಯಾಗ್​​ನಲ್ಲಿ ಈ ವಸ್ತು ಇಡಲೇಬೇಡಿ; ವೃತ್ತಿಜೀವನದ ಅಡೆತಡೆಗೆ ಇದೇ ಮುಖ್ಯ ಕಾರಣ!
ವಾಸ್ತು ಶಾಸ್ತ್ರ

Updated on: Jan 28, 2026 | 12:17 PM

ಪ್ರತಿದಿನ ಮನೆಯಿಂದ ಕಚೇರಿಗೆ ಹೋಗುವಾಗ ತೆಗೆದುಕೊಂಡು ಹೋಗುವ ಬ್ಯಾಗ್​ ಕೇವಲ ವಸ್ತುಗಳನ್ನು ಸಾಗಿಸುವ ಸಾಧನವಲ್ಲ, ಅದು ನಿಮ್ಮ ವೃತ್ತಿಪರ ಶಕ್ತಿ, ಮನೋಭಾವ ಮತ್ತು ಕಾರ್ಯಶೈಲಿಯ ಪ್ರತಿಬಿಂಬವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ದಿಕ್ಕುಗಳು ಎಷ್ಟು ಮುಖ್ಯವೋ, ಅಷ್ಟೇ ಮಹತ್ವವು ನಾವು ದಿನನಿತ್ಯ ಬಳಸುವ ವಸ್ತುಗಳ ಸ್ಥಿತಿಗೂ ಇದೆ. ವಿಶೇಷವಾಗಿ ಕಚೇರಿಗೆ ತೆಗೆದುಕೊಂಡು ಹೋಗುವ ಬ್ಯಾಗ್​ನಲ್ಲಿ ಇಡುವ ವಸ್ತುಗಳು ನಮ್ಮ ಕೆಲಸದ ಮೇಲೆ ನೇರ ಪರಿಣಾಮ ಬೀರುತ್ತವೆ. ಅನೇಕ ಬಾರಿ ಅದರಲ್ಲಿ ತಿಳಿಯದೆ ಇಡುವ ಕೆಲವು ವಸ್ತುಗಳು ನಮ್ಮ ಮನಸ್ಸಿನಲ್ಲಿ ಗೊಂದಲವನ್ನು ಉಂಟುಮಾಡಿ, ಕೆಲಸದಲ್ಲಿ ಅಡೆತಡೆಗಳಿಗೆ ಕಾರಣವಾಗುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಅನೇಕ ಜನರು ಶಾಪಿಂಗ್ ಬಿಲ್‌, ಹಳೆಯ ರಶೀದಿ ಅಥವಾ ಬಳಕೆಯಿಲ್ಲದ ಕಾಗದಗಳನ್ನು ತಮ್ಮ ಬ್ಯಾಗ್​ನಲ್ಲೇ ಇಟ್ಟುಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ. ವಾಸ್ತು ಪ್ರಕಾರ, ಹಳೆಯ ಬಿಲ್‌ಗಳು ಮತ್ತು ರಶೀದಿಗಳು ನಕಾರಾತ್ಮಕ ಶಕ್ತಿಯನ್ನು ಹೊತ್ತುಕೊಂಡಿರುತ್ತವೆ. ಅವು ಮನಸ್ಸಿನಲ್ಲಿ ಅನಗತ್ಯ ಚಿಂತೆ ಮತ್ತು ಗೊಂದಲವನ್ನು ಉಂಟುಮಾಡುತ್ತವೆ. ಇದರಿಂದ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಕಷ್ಟವಾಗುತ್ತದೆ ಮತ್ತು ಕ್ರಮೇಣ ಮಾನಸಿಕ ಒತ್ತಡವೂ ಹೆಚ್ಚಾಗಬಹುದು.

ಇದೇ ರೀತಿ, ಕತ್ತರಿ, ಬ್ಲೇಡ್‌ಗಳು ಅಥವಾ ಇತರ ಚೂಪಾದ ವಸ್ತುಗಳನ್ನು ನೇರವಾಗಿ ಕಚೇರಿ ಬ್ಯಾಗ್​​ನಲ್ಲಿ ಇಡುವುದು ವಾಸ್ತು ಪ್ರಕಾರ ಅಶುಭವೆಂದು ಪರಿಗಣಿಸಲಾಗುತ್ತದೆ. ಇಂತಹ ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ವೃತ್ತಿಪರ ಬೆಳವಣಿಗೆಗೆ ಅಡ್ಡಿಯಾಗುತ್ತವೆ ಎಂಬ ನಂಬಿಕೆ ಇದೆ. ಅವುಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕಾದ ಸಂದರ್ಭಗಳಲ್ಲಿ, ಪ್ರತ್ಯೇಕ ಕವರ್ ಅಥವಾ ಪೌಚ್‌ನಲ್ಲಿ ಸುರಕ್ಷಿತವಾಗಿ ಇಡುವುದು ಉತ್ತಮ.

ಮುರಿದ ಪೆನ್ನುಗಳು, ಕೆಲಸ ಮಾಡದ ಚಾರ್ಜರ್‌ಗಳು ಅಥವಾ ಹಾನಿಗೊಂಡ ಹೆಡ್‌ಫೋನ್‌ಗಳು ಅನಾವಶ್ಯಕವಾಗಿ ಉಳಿಯುವುದು ಸಾಮಾನ್ಯ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಇಂತಹ ಹಾನಿಗೊಂಡ ವಸ್ತುಗಳು ಶಕ್ತಿಯ ಹರಿವನ್ನು ತಡೆಹಿಡಿಯುತ್ತವೆ. ಮುರಿದ ಪೆನ್ನುಗಳು ನಿಲ್ಲಿಸಿದ ಕೆಲಸಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇವುಗಳನ್ನು ಚೀಲದಲ್ಲಿ ಇಟ್ಟುಕೊಳ್ಳುವುದರಿಂದ ಕೆಲಸಗಳು ವಿಳಂಬವಾಗುವ ಅಥವಾ ಅಡೆತಡೆಗಳು ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಹವಳವನ್ನು ಯಾರು ಧರಿಸಬಹುದು? ಇದರ ಪ್ರಯೋಜನ ಮತ್ತು ಧರಿಸುವ ವಿಧಾನ ತಿಳಿಯಿರಿ

ವೈಯಕ್ತಿಕ ನೈರ್ಮಲ್ಯ ವಸ್ತುಗಳ ವಿಷಯದಲ್ಲೂ ಜಾಗ್ರತೆ ಅಗತ್ಯ. ಬಾಚಣಿಗೆ, ಸುಗಂಧ ದ್ರವ್ಯಗಳು ಅಥವಾ ಇತರ ವೈಯಕ್ತಿಕ ವಸ್ತುಗಳನ್ನು ಅಡ್ಡಾದಿಡ್ಡಿಯಾಗಿ ಚೀಲದೊಳಗೆ ಎಸೆಯುವುದು ಸರಿಯಲ್ಲ. ಅವುಗಳನ್ನು ಪ್ರತ್ಯೇಕ ಚೀಲದಲ್ಲಿ ವ್ಯವಸ್ಥಿತವಾಗಿ ಇಡುವುದು ಉತ್ತಮ. ಸಾಧ್ಯವಾದರೆ, ಇಂತಹ ವಸ್ತುಗಳನ್ನು ಕಚೇರಿಯ ಡ್ರಾಯರ್‌ನಲ್ಲಿ ಇಡುವುದು ಇನ್ನೂ ಸೂಕ್ತವಾಗಿದೆ.

ವಾರಕ್ಕೊಮ್ಮೆ ನಿಮ್ಮ ಆಪೀಸ್​ ಬ್ಯಾಗ್​​ನನ್ನು ಸಂಪೂರ್ಣವಾಗಿ ಖಾಲಿ ಮಾಡಿ, ಅನಗತ್ಯ ಕಾಗದಗಳು, ಕಸ ಮತ್ತು ಬಳಕೆಯಿಲ್ಲದ ವಸ್ತುಗಳನ್ನು ತೆಗೆದುಹಾಕುವುದು ಒಳ್ಳೆಯ ಅಭ್ಯಾಸ. ನೀವು ಬ್ಯಾಗನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದು ನಿಮ್ಮ ವ್ಯಕ್ತಿತ್ವ ಮತ್ತು ಕೆಲಸದ ಮೇಲಿನ ಕಾಳಜಿಯನ್ನು ತೋರಿಸುತ್ತದೆ. ಈ ಸಣ್ಣ ಬದಲಾವಣೆಗಳನ್ನು ಅನುಸರಿಸುವುದರಿಂದ ನಿಮ್ಮ ಕೆಲಸದ ವಾತಾವರಣದಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ. ವೃತ್ತಿಜೀವನವು ವೇಗವಾಗಿ ಮುಂದುವರಿಯಲು ಸಹಾಯ ಮಾಡುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:16 pm, Wed, 28 January 26