Daily Devotional: ಸಣ್ಣ ವಿಷಯಗಳಿಗೆ ಕೋಪ ಬರೋದು ಯಾಕೆ ಗೊತ್ತಾ?
ಮಾನವನಲ್ಲಿ ತಾಮಸ, ರಜೋ, ಸತ್ವ ಗುಣಗಳಿದ್ದರೂ, ಪರಿಸ್ಥಿತಿಗಳು ಕೆಲವೊಮ್ಮೆ ವ್ಯಕ್ತಿಗಳನ್ನು ಕೋಪಿಷ್ಟರನ್ನಾಗಿ ಮಾಡಬಹುದು. ಅತಿಯಾದ ಕೋಪವು ದುಃಖಕ್ಕೆ ಮೂಲವಾಗಿದ್ದು, "ಅತಿ ಸರ್ವತ್ರ ವರ್ಜಯೇತ್" ಎಂಬ ತತ್ವದಂತೆ ಎಲ್ಲವೂ ಮಿತಿಯಲ್ಲಿರಬೇಕು. ಅನಗತ್ಯ ಕೋಪವು ಮನುಷ್ಯನ ಸರ್ವನಾಶಕ್ಕೆ ಕಾರಣವಾಗುತ್ತದೆ. ಅಧಿಕಾರದ ದರ್ಪ, ದುಡ್ಡಿನ ವ್ಯಾಮೋಹ, ಶ್ರೀಮಂತಿಕೆಯ ದರ್ಪ ಮತ್ತು ಅಹಂಕಾರದಿಂದ ಉಂಟಾಗುವ ಕೋಪ ವ್ಯಕ್ತಿಯ ಅವನತಿಗೆ ದಾರಿ ಮಾಡುತ್ತದೆ. ಜ್ಯೋತಿಷ್ಯದ ಪ್ರಕಾರ, ಬುದ್ಧಿಕಾರಕನಾದ ಬುಧ ಗ್ರಹ ದುರ್ಬಲವಾಗಿದ್ದಾಗ, ಪಾಪಗ್ರಹಗಳ ದೃಷ್ಟಿ ಇದ್ದಾಗ ಅಥವಾ ನೀಚನಾಗಿದ್ದಾಗ ವ್ಯಕ್ತಿಗಳಲ್ಲಿ ತಕ್ಷಣದ ಕೋಪ ಕಾಣಿಸಿಕೊಳ್ಳುತ್ತದೆ. ಇಂತಹವರಿಗೆ ಬುಧವಾರ ಮತ್ತು ಸೋಮವಾರದಂತಹ ಕೆಲವು ನಿರ್ದಿಷ್ಟ ದಿನಗಳಲ್ಲಿ ಕೋಪ ಹೆಚ್ಚಾಗುವ ಸಾಧ್ಯತೆ ಹೆಚ್ಚು ಎಂದು ಗುರೂಜಿ ಹೇಳಿದ್ದಾರೆ.
ಬೆಂಗಳೂರು, ಜನವರಿ 28: ಮಾನವನಲ್ಲಿ ತಾಮಸ, ರಜೋ, ಸತ್ವ ಗುಣಗಳಿದ್ದರೂ, ಪರಿಸ್ಥಿತಿಗಳು ಕೆಲವೊಮ್ಮೆ ವ್ಯಕ್ತಿಗಳನ್ನು ಕೋಪಿಷ್ಟರನ್ನಾಗಿ ಮಾಡಬಹುದು. ಅತಿಯಾದ ಕೋಪವು ದುಃಖಕ್ಕೆ ಮೂಲವಾಗಿದ್ದು, “ಅತಿ ಸರ್ವತ್ರ ವರ್ಜಯೇತ್” ಎಂಬ ತತ್ವದಂತೆ ಎಲ್ಲವೂ ಮಿತಿಯಲ್ಲಿರಬೇಕು. ಅನಗತ್ಯ ಕೋಪವು ಮನುಷ್ಯನ ಸರ್ವನಾಶಕ್ಕೆ ಕಾರಣವಾಗುತ್ತದೆ. ಅಧಿಕಾರದ ದರ್ಪ, ದುಡ್ಡಿನ ವ್ಯಾಮೋಹ, ಶ್ರೀಮಂತಿಕೆಯ ದರ್ಪ ಮತ್ತು ಅಹಂಕಾರದಿಂದ ಉಂಟಾಗುವ ಕೋಪ ವ್ಯಕ್ತಿಯ ಅವನತಿಗೆ ದಾರಿ ಮಾಡುತ್ತದೆ. ಜ್ಯೋತಿಷ್ಯದ ಪ್ರಕಾರ, ಬುದ್ಧಿಕಾರಕನಾದ ಬುಧ ಗ್ರಹ ದುರ್ಬಲವಾಗಿದ್ದಾಗ, ಪಾಪಗ್ರಹಗಳ ದೃಷ್ಟಿ ಇದ್ದಾಗ ಅಥವಾ ನೀಚನಾಗಿದ್ದಾಗ ವ್ಯಕ್ತಿಗಳಲ್ಲಿ ತಕ್ಷಣದ ಕೋಪ ಕಾಣಿಸಿಕೊಳ್ಳುತ್ತದೆ. ಇಂತಹವರಿಗೆ ಬುಧವಾರ ಮತ್ತು ಸೋಮವಾರದಂತಹ ಕೆಲವು ನಿರ್ದಿಷ್ಟ ದಿನಗಳಲ್ಲಿ ಕೋಪ ಹೆಚ್ಚಾಗುವ ಸಾಧ್ಯತೆ ಹೆಚ್ಚು ಎಂದು ಗುರೂಜಿ ಹೇಳಿದ್ದಾರೆ.

